- ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರುಕೆ.ಆರ್. ಪುರದಲ್ಲಿ ಪಾತ್ರಗಳೆಲ್ಲವೂ ಅದಲು ಬದಲು. 2018ರಲ್ಲಿಬೈರತಿ ಬಸವರಾಜ್ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ನಂದೀಶ್ ರೆಡ್ಡಿ ಈ ಬಾರಿ ಬೈರತಿಯನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ. ಕಳೆದ ಬಾರಿ ಕುರುಬ ಸಮುದಾಯದ ಈ ನಾಯಕನ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಸೋಲಿಸಿಯೇ ತೀರುವ ಹಠದಲ್ಲಿದ್ದಾರೆ. ಇದಕ್ಕೆಲ್ಲ ಕಾರಣ, ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದದ್ದು. ಜಿಗಿತದಿಂದ ಅವರು ಅನುಭವಿಸಿದ ಅನರ್ಹತೆ ಕಾಂಗ್ರೆಸ್‌ಗೆ ಪ್ರಧಾನ ಅಸ್ತ್ರವಾಗಿದೆ. ಬೈರತಿ ಬಸವರಾಜ್ ಇಲ್ಲಿಹಳೆ ಹುಲಿ. 2013 ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದವರು. ಬಿಬಿಎಂಪಿ ಸದಸ್ಯನಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಬೈರತಿ ಎರಡು ಬಾರಿ ಶಾಸಕನಾಗಲು ಕಾರಣ ‘ಕೈ’ ಪ್ರಭಾವಳಿ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅತ್ಯಾಪ್ತ ಬಂಟರಲ್ಲಿ ಒಬ್ಬರಾಗಿದ್ದ ಇವರು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಮ್ಮದೇ ಸಮುದಾಯದ ನಾಯಕನ ವಿರುದ್ಧ ಸಿಡಿದೆದ್ದು, ಬಿಜೆಪಿಯಿಂದ ಕಣಕ್ಕಿಳಿದು ಹ್ಯಾಟ್ರಿಕ್‌ಗೆ ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಹಳೆಯ ಬಂಟನ ವಿರುದಟಛಿ ಪಕ್ಷಕ್ಕೆ ನಿಷ್ಠರಾಗಿರುವ ಮೇಲ್ಮನೆ ಸದಸ್ಯ ಎಂ.ನಾರಾಯಣಸ್ವಾಮಿ ಅವರನ್ನು ಅಖಾಡಕ್ಕಿಳಿಸಿದ್ದಾರೆ. ಹೀಗಾಗಿ, ಉಪ ಸಮರದಲ್ಲಿ ಸಿದ್ದರಾಮಯ್ಯ ಅವರ ಮಾಜಿ ಮತ್ತು ಹಾಲಿ ಬಂಟರ ನಡುವಿನ ಕಾದಾಟ ಹವಾ ಸೃಷ್ಟಿಸಿದೆ. ಸಮ್ಮಿಶ್ರ ಸರಕಾರ ಪತನಗೊಳಿಸಿ, ಬಿಜೆಪಿಯು ಅಧಿಕಾರದ ಗದ್ದುಗೆ ಹಿಡಿಯಲು ನೆರವಾದ ಬೈರತಿ ಅವರನ್ನು ಗೆಲ್ಲಿಸಲು ಕಮಲ ಪಾಳಯದ ದೊಡ್ಡ ದಂಡೇ ಕ್ಷೇತ್ರದಲ್ಲಿಬೀಡು ಬಿಟ್ಟಿದೆ. ಹ್ಯಾಟ್ರಿಕ್ ಗೆಲುವಿನ ಅಶ್ವಮೇಧ ಯಾಗ ಮುಂದುವರಿಸುವ ಉಮೇದಿನಲ್ಲಿರುವ ಬೈರತಿಗೆ ಸೋಲಿನ ರುಚಿ ತೋರಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಜೆಡಿಎಸ್ ಒಕ್ಕಲಿಗ ಸಮುದಾಯದ ಸಿ.ಕೃಷ್ಣಮೂರ್ತಿ ಅವರನ್ನು ಕಣಕ್ಕಿಳಿಸಿದೆ. ಬೈರತಿ ಅವರು ಅಭಿವೃದಿಟಛಿ ಮಂತ್ರ ಜಪಿಸುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯು ಬೈರತಿ ವಿರುದ್ಧ ಪಕ್ಷ ದ್ರೋಹ, ಅನರ್ಹತೆಯ ಅಸ್ತ್ರವನ್ನು ಝಳಪಿಸುತ್ತಿದ್ದಾರೆ. ಹಿಂದುಳಿದವರೇ ಇಲ್ಲಿನಿರ್ಣಾಯಕರಾಜಧಾನಿಯ ಪೂರ್ವ ದಿಕ್ಕಿಗಿರುವ ಕ್ಷೇತ್ರದಲ್ಲಿಶ್ರಮಿಕರು ಮತ್ತು ಮಧ್ಯಮ ವರ್ಗದವರೇ ಹೆಚ್ಚು. ಇಲ್ಲಿ71,000 ಒಕ್ಕಲಿದ್ದರೆ, ಪರಿಶಿಷ್ಟ ಜಾತಿ ಮತ್ತು ವರ್ಗದವರು 63,000, ಕುರುಬರು 47,000, ಮುಸ್ಲಿಮರು 38,000, ಕ್ರೈಸ್ತರು 24,000 ಇದ್ದಾರೆ. 25,000 ಯಾದವ ಮತದಾರರು, 12,000 ಬ್ರಾಹ್ಮಣರೂ ಇಲ್ಲಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳಿಬ್ಬರೂ ಒಕ್ಕಲಿಗರು. ಕುರುಬ ಜನಾಂಗದ ಬೈರತಿ ಅವರು ಕ್ಷೇತ್ರದಲ್ಲಿತಮ್ಮದೇ ಆದ ಪ್ರಾಬಲ್ಯ ಹೊಂದಿದ್ದಾರೆ. ಬೈರತಿ ಮತ್ತು ಅವರ ಬೆಂಬಲಿಗರು ದಬ್ಬಾಳಿಕೆ, ದೌರ್ಜನ್ಯವೆಸಗುತ್ತಿದ್ದಾರೆ. ಕೆಲಸ ಮಾಡಲು ಬಿಡುತ್ತಿಲ್ಲವೆಂದು ಸದಾ ಹಾವು-ಮುಂಗಸಿಗಳಂತೆ ಕಚ್ಚಾಡುತ್ತಿದ್ದ ಈ ಕ್ಷೇತ್ರದ ಬಿಜೆಪಿಯ ಪಾಲಿಕೆಯ ಸದಸ್ಯರು, ಸ್ಥಳೀಯ ಮುಖಂಡರು ಈಗ ಅವರ ಗೆಲುವಿಗಾಗಿಯೇ ಬೆವರು ಹರಿಸುತ್ತಿದ್ದಾರೆ. ರಾಜಕೀಯ ವೈರಿಯಾಗಿದ್ದ ಶಾಸಕಿ, ಕಾರ್ಪೊರೇಟರ್ ಪೂರ್ಣಿಮಾ ಕೂಡ ಪಕ್ಷದ ಆದೇಶಕ್ಕೆ ಕಟ್ಟು ಬಿದ್ದು ಪ್ರಚಾರ ನಡೆಸುತ್ತಿದ್ದಾರೆ. ಇವರೆಲ್ಲರೂ ಒಳ ಪೆಟ್ಟು ಕೊಡುವ ಆತಂಕ ಬೈರತಿ ಅವರಿಗೆ ಇದ್ದೇ ಇದೆ. ಕೆ.ಆರ್. ಪುರ ವ್ಯಾಪ್ತಿಯ 9 ವಾರ್ಡ್‌ಗಳಲ್ಲಿಅರು ಕಡೆ ಕಾಂಗ್ರೆಸ್ ಗೆದ್ದಿತ್ತು. ಅವರಲ್ಲಿ ನಾಲ್ವರು ಕಾಂಗ್ರೆಸ್‌ಗೆ ನಿಷ್ಠರಾಗಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ಬಹುತೇಕ ಮುಖಂಡರುಗಳು ಬಿಜೆಪಿಗೆ ಜಿಗಿದಿದ್ದಾರೆ. ಕಳೆದ ಸಲ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಎ.ಕೃಷ್ಣಪ್ಪ ಅವರ ಸಹೋದರ ಡಿ.ಎ.ಗೋಪಾಲ್ ಅವರು ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಬೈರತಿ ಬಸವರಾಜ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದವರು ಬಿಜೆಪಿಯ ಎನ್.ಎಸ್.ನಂದೀಶ್ ರೆಡ್ಡಿ. ಬೈರತಿ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಟಿಕೆಟ್ ನೀಡಿರುವುದಕ್ಕೆ ಮುನಿಸಿಕೊಂಡಿದ್ದ ನಂದೀಶ್ ರೆಡ್ಡಿಗೆ ಬಿಎಂಟಿಸಿ ಅಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನಪಡಿಸಲಾಗಿದೆ. ಪ್ರಚಾರದ ಅಬ್ಬರ ಬೈರತಿ ಬಸವರಾಜ್ ಗೆಲುವಿಗೆ ಕಮಲ ಪಡೆ ಬೆವರು ಹರಿಸುತ್ತಿದೆ. ಯಡಿಧಿಯೂರಪ್ಪ, ನಳಿನ್ ಕುಮಾರ್ ಕಟೀಲ್,ಧಿ ಡಿ.ವಿ.ಸದಾನಂದಗೌಡ, ಆರ್.ಅಶೋಕ್, ಅರವಿಂದ ಲಿಂಬಾವಳಿ, ಎಸ್.ಆರ್.ವಿಶ್ವನಾಥ್ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಬೈರತಿ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಲು ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಉಮಾಶ್ರೀ, ರಾಮಲಿಂಗಾರೆಡ್ಡಿ ಅಖಾಡಕ್ಕಿಳಿದಿದ್ದಾರೆ.
from India & World News in Kannada | VK Polls https://ift.tt/33xH4xr