ಮೈಸೂರು ದಸರಾ ಸೈಕಲ್‌ ರೇಸ್‌ಗೆ ವಿ. ಸೋಮಣ್ಣ ಚಾಲನೆ

ಮೈಸೂರು : ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ರಾಜ್ಯಮಟ್ಟದ ದಸರಾ ಸೈಕ್ಲಿಂಗ್ ಸ್ಪರ್ಧೆಗೆ ಸಚಿವ ಚಾಲನೆ ನೀಡಿದರು. ಮೈಸೂರಿನ ಬನ್ನೂರು ರಿಂಗ್ ರಸ್ತೆ ಜಂಕ್ಷನ್ ನಿಂದ ಆರಂಭವಾದ ಪುರುಷರ ೧೦೦ ಕಿ.ಮೀ. ಸೈಕ್ಲಿಂಗ್ ಸ್ಪರ್ಧೆಗೆ ಹಸಿರು ನಿಶಾನೆ ತೋರುವ ಮುಖಾಂತರ ಚಾಲನೆ ನೀಡಿದರು. ಮುಂಜಾನೆಯೆ ಎಳೆ ಬಿಸಿಲಿನಲ್ಲಿ ಸ್ಪರ್ಧಾ ಹುರಿಯಾಳುಗಳು ಗಂಟೆಗೆ 60 ಕಿ.ಮೀ. ಗೂ ಹೆಚ್ಚು ವೇಗದಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಅತಿ ವೇಗದಲ್ಲಿ ಸಾಗುವ ದೃಶ್ಯ ರಸ್ತೆ ಬದಿಯಲ್ಲಿ ಸಾಗುತ್ತಿದ್ದವರ ಗಮನ ಸೆಳೆಯಿತು. ಕೆಲವರು ಆರಂಭದಲ್ಲಿ ನಿಧಾನವಾಗಿ ಸೈಕ್ಲಿಂಗ್ ಆರಂಭಿಸಿ ಒಂದು ನಿರ್ಧಿಷ್ಟ ಹಂತದ ವರೆಗೆ ಒಂದೇ ಸಮನಾದ ವೇಗದಲ್ಲಿ ಸಾಗಿ ಅಂತಿಮ ಹಂತದಲ್ಲಿ ವೇಗ ಹೆಚ್ಚಿಸಿಕೊಂಡು ಗುರಿ ಮುಟ್ಟಿದರು. ಕೆಲವರು ಅತ್ಯಂತ ಉತ್ಸಾಹದಿಂದ ಆರಂಭದಲ್ಲಿಯೆ ಅತಿಯಾದ ವೇಗವಾಗಿ ಸಾಗಿ ಆಯಾಸಗೊಂಡು ನಂತರ ವೇಗವನ್ನು ನಿರ್ವಹಣೆ ಮಾಡಲು ಸಾಧ್ಯವಾಗದೆ ಎದುರುಸಿರು ಬಿಡುತ್ತಾ ಸಾಗುವ ದೃಶ್ಯ ಸಾಮಾನ್ಯವಾಗಿತ್ತು. ಹಸಿರಿನಿಂದ ಕಂಗೊಳಿಸುತ್ತಿದ್ದ ರಸ್ತೆಯಲ್ಲಿ ತಮ್ಮನ್ನು ಸಂತೈಸುವಂತೆ ಬೀಸುತ್ತಿದ್ದ ತಂಗಾಳಿಯನ್ನು ಸೀಳಿಕೊಂಡು ಸಾಗುತ್ತಿದ್ದ ಸ್ಪರ್ಧಿಗಳು ವಿಶೇಷ ಅನುಭವವನ್ನು ತಮ್ಮದಾಗಿಸಿಕೊಂಡರು. ಇವರು ಬನ್ನೂರು ರಿಂಗ್ ರಸ್ತೆ ಜಂಕ್ಷನ್ ನಿಂದ ಹೊರಟು, ತಿ.ನರಸೀಪುರ ರಸ್ತೆಯಲ್ಲಿ ಸಾಗಿ, ಮೂಗೂರು-ಕೊಳ್ಳೇಗಾಲ ನಡುವಿನ ಕೂಡು ರಸ್ತೆ-ತಿರುವು ಪಡೆದುಕೊಳ್ಳಬೇಕು. ಈ ತಿರುವಿನ ವರೆಗೆ 50 ಕಿ.ಮೀ. ಆಗಲಿದೆ. ಇಲ್ಲಿಂದ ತಿರುವು ಪಡೆದುಕೊಂಡು ವಾಪಸ್ಸು-ಅದೇ ಮಾರ್ಗದಲ್ಲಿ ಸಾಗಿ ಬಂದು 100 ಕಿ.ಮೀ. ಸ್ಪರ್ಧೆ ಯನ್ನು ಚಟಮುಂಡಿಬೆಟ್ಟದ ದೇವಿಕೆರೆ ಬಳಿ ಮುಕ್ತಾಯಗೊಳಿಸಿದರು. ಅದೇ ರೀತಿ ಮಹಿಳಾ ಸ್ಪರ್ಧಿಗಳು ಮೂಗೂರು-ಕೊಳ್ಳೇಗಾಲ ನಡುವಿನ ಕೂಡು ರಸ್ತೆಯಿಂದ ೫೦ಕಿ.ಮೀ. ಸೈಕ್ಲಿಂಗ್ ಆರಂಭಿಸಿ, ಚಾಮುಂಡಿಬೆಟ್ಟದ ದೇವಿಕೆರೆ ಬಳಿ ಸೈಕ್ಲಿಂಗ್ ಪೂರ್ಣಗೊಳಿಸಿದರು.


from India & World News in Kannada | VK Polls https://ift.tt/2p5yXtg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...