ಕೆಪಿಎಲ್‌ ಮ್ಯಾಚ್ ಫಿಕ್ಸಿಂಗ್ ಕರ್ಮಕಾಂಡ: ಓವರ್ಗೆ 10 ರನ್ ನೀಡುವಂತೆ ಬೌಲರ್ ಗಳಿಗೆ ಬುಕ್ಕಿಗಳಿಂದ ಆಮಿಷ

ಬೆಂಗಳೂರು: ಮ್ಯಾಚ್ ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಭವೇಶ ಭಾಫ್ನಾ ಎಂಬ ಬುಕ್ಕಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬ ಬುಕ್ಕಿ ಸನ್ಯಾಮ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರು ಬುಕ್ಕಿಗಳು ಬಳ್ಳಾರಿ ಟಸ್ಕರ್ಸ್ ತಂಡದ ಬೌಲರ್ ಗಳನ್ನು ಫೋನ್ನಲ್ಲಿ ಸಂಪರ್ಕಿಸಿದ್ದರು. ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರತಿ ಓವರ್ ಗೆ ಹತ್ತಕ್ಕಿಂತ ಹೆಚ್ಚು ರನ್ ನೀಡುವಂತೆ ಕೋರಿದ್ದರು. ಆದರೆ, ಆಟಗಾರರು ಅದಕ್ಕೆ ಒಪ್ಪಿರಲಿಲ್ಲ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಹಗರಣ ಸಂಬಂಧ ಇತ್ತೀಚೆಗೆ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಸ್ಫಾಕ್‌ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿ ಅಂತಾರಾಷ್ಟ್ರೀಯ ಮಟ್ಟದ ಕುರಿತಾಗಿ ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಬೆಂಗಳೂರು, ಬಿಜಾಪುರ, ಬಳ್ಳಾರಿ ಸೇರಿದಂತೆ ವಿವಿಧ ತಂಡಗಳ ಒಟ್ಟು 30ಕ್ಕೂ ಹೆಚ್ಚು ಆಟಗಾರರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ತನಿಖೆ ಮುಂದುವರೆದಿದ್ದು ಎಷ್ಟು ಪ್ರಮಾಣದ ಹಣವನ್ನು ಕೆಪಿಎಲ್ ಬೆಟ್ಟಿಂಗ್ನಲ್ಲಿ‌ ಹೂಡಿಕೆ ಮಾಡಲಾಗಿತ್ತು ಎಂಬ ಬಗ್ಗೆ ಪತ್ತೆ ಮಾಡಲಾಗುತ್ತಿದೆ. ತಮಿಳುನಾಡು ಪ್ರೀಮಿಯರ್‌ ಲೀಗ್‌ನಲ್ಲಿ ಸದ್ದು ಮಾಡಿದ ಬಳಿಕ, ಕೆಪಿಎಲ್‌ನಲ್ಲೂ ಮೋಸದಾಟ ನಡೆದಿರುವುದು ಬೆಳಕಿಗೆ ಬಂದಿತು. ಮಾಜಿ ಚಾಂಪಿಯನ್ಸ್‌ ತಂಡದ ಮಾಲೀಕ ಅಲಿ ಅಸ್ಫಾಕ್‌ ತಾರ ಅವರನ್ನು 2 ವಾರಗಳ ಹಿಂದಷ್ಟೇ ಬೆಟ್ಟಿಂಗ್‌ ಸಂಬಂಧ ಸಿಸಿಬಿ ಪೊಲೀಸರು ಬಂಧಿಸಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕರ್ನಾಟಕ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬೆಟ್ಟಿಂಗ್‌ ನಡೆಸಿರುವ ಹಿನ್ನೆಲೆಯಲ್ಲಿ ಅಲಿ ಟೂರ್ಸ್‌ ಅಂಡ್‌ ಟ್ರಾವಲ್ಸ್‌ ಸಂಸ್ಥೆಯ ಮಾಲೀಕ ಮತ್ತು ಬೆಳಗಾವಿ ಪ್ಯಾಂಥರ್ಸ್‌ ಫ್ರಾಂಚೈಸಿ ಒಡೆಯ ಅಲಿ ಅವರನ್ನು ಸೆಂಟ್ರಲ್‌ ಕ್ರೈಮ್‌ ಬ್ರ್ಯಾಂಚ್‌ (ಕೇಂದ್ರ ಅಪರಾಧ ವಿಭಾಗ, ಸಿಸಿಬಿ) ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಕೆಪಿಎಲ್‌ನ ಭ್ರಷ್ಟಾಚಾರ ನೀತಿ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಫ್ರಾಂಚೈಸಿ ತಂಡ ಆಡುತ್ತಿದ್ದ ಸಂದರ್ಭದಲ್ಲಿ ಬೇರೆ ಫ್ರಾಂಚೈಸಿ ತಂಡದ ಆಟಗಾರರೊಂದಿಗೆ ಮತ್ತು ಬುಕ್ಕಿಗಳ ಜೊತೆಗೂ ಅಲಿ ಅಸ್ಫಾಕ್‌ ಸಂಪರ್ಕದಲ್ಲಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2pc0lWB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...