ಅಪ್ರಾಪ್ತೆ ಮೇಲೆ ವಾರಗಟ್ಟಲೆ ಗ್ಯಾಂಗ್ ರೇಪ್ ಎಸಗಿದ ಪಾಪಿಗಳು ಅರೆಸ್ಟ್

ವಿಜಯವಾಡ: ಅಪ್ರಾಪ್ತ ಬಾಲಕಿಯನ್ನು ಕೂಡಿ ಹಾಕಿ ಸತತ ಒಂದು ವಾರ ಎಸಗಿದ 6 ಜನ ಕಾಮುಕರನ್ನು ಪೊಲೀಸರು ಬಂಧಿಸಿರುವ ಘಟನೆ ಆಂಧ್ರ ಪ್ರದೇಶದ ಪ್ರಕಾಸಂ ಜಿಲ್ಲೆಯಲ್ಲಿ ನಡೆದಿದೆ. ಬಂಧಿತರ ಪೈಕಿ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರೆ, ಇಬ್ಬರು ಅಪ್ರಾಪ್ತರು ಎಂದು ತಿಳಿದು ಬಂದಿದೆ. ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು, ಬಾಲಕಿಯನ್ನು ಶನಿವಾರ ರಾತ್ರಿ ಒಂಗೋಲೆ ಬಸ್ ನಿಲ್ದಾಣದಲ್ಲಿ ಎಸೆದು ಹೋಗಿದ್ದಾರೆ. ಬಾಲಕಿಯ ಶೋಚನಿಯ ಸ್ಥಿತಿ ಗಮನಿಸಿದ ಗಾರ್ಡ್‌ವೊಬ್ಬರು, ಪೊಲೀಸರಿಗೆ ಮಾಹಿತಿ ಮುಟ್ಟಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಕಾಮುಕರಲ್ಲೊಬ್ಬ ಸಂತ್ರಸ್ತೆಯ ಸ್ನೇಹಿತನಾಗಿದ್ದು, ಜೂನ್ 16ರಂದು ಬಸ್ ಸ್ಟಾಪ್‌ನಲ್ಲಿ ಸ್ನೇಹಿತೆಗಾಗಿ ಕಾಯುತ್ತಾ ನಿಂತಿದ್ದ ಸಂತ್ರಸ್ತ ಬಾಲಕಿಯನ್ನು ಪುಸಲಾಯಿಸಿ ರೂಮ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಐವರು ಸ್ನೇಹಿತರನ್ನು ಕರೆಯಿಸಿ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ ಅಟ್ಟಹಾಸ ಮೆರಿದಿದ್ದಾನೆ.


from India & World News in Kannada | VK Polls http://bit.ly/2KyPvUc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...