30 ವರ್ಷಗಳಲ್ಲಿ ಇದೇ ಮೊದಲು; ಗೃಹ ಸಚಿವರ ಭೇಟಿಯ ವೇಳೆ ಕಾಶ್ಮೀರದಲ್ಲಿ ಇಲ್ಲ ಬಂದ್‌

ಶ್ರೀನಗರ: ಅಮಿತ್‌ ಶಾ, ಕಣಿವೆ ರಾಜ್ಯದ ಭದ್ರತಾ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಅದಕ್ಕಿಂತಲೂ ಮುಖ್ಯ ವಿಷಯ ಎಂದರೆ ಇದೇ ಮೊದಲ ಬಾರಿಗೆ ಅಂದರೆ 30 ವರ್ಷಗಳಲ್ಲಿ ಗೃಹ ಸಚಿವರ ಭೇಟಿಯ ವೇಳೆ ಯಾವುದೇ ರೀತಿಯ ಬಂದ್‌ ಆಚರಣೆ ಮಾಡಲಾಗಿಲ್ಲ. ಪ್ರತಿ ಬಾರಿಯೂ ಗೃಹ ಸಚಿವರು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಪ್ರತಿಭಟನೆ, ಬಂದ್‌ ಇದ್ದೇ ಇರುತ್ತಿತ್ತು. ಆದರೆ ಅಮಿತ್ ಶಾ ಭೇಟಿಯ ವೇಳೆ ಯಾವುದೇ ರೀತಿಯ ಬಂದ್‌ ಆಚರಿಸಲಾಗಿಲ್ಲ. ಎಲ್ಲ ರೀತಿಯ ಶಿಷ್ಟಾಚಾರಗಳನ್ನು ಬದಿಗೊತ್ತಿದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ತಮ್ಮ ರಾಜಕೀಯ ಸಲಹೆಗಾರ ಮತ್ತು ಹಿರಿಯ ಅಧಿಕಾರಿಗಳ ಜತೆಗೂಡಿ ವಿಮಾನ ನಿಲ್ದಾಣಕ್ಕೆ ತೆರಳಿ ಅಮಿತ್‌ ಶಾ ಅವರನ್ನು ಬರ ಮಾಡಿಕೊಂಡರು. ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಿದರೆ ಮಾತ್ರ ರಾಜ್ಯಪಾಲರು ಹೋಗಿ ಅವರನ್ನು ಬರ ಮಾಡಿಕೊಳ್ಳುವುದು ಇದುವರೆಗಿನ ಸಂಪ್ರದಾಯವಾಗಿತ್ತು. ಆದರೆ ಈ ಬಾರಿ ಆ ಸಂಪ್ರದಾಯ ಮೀರಿ ಮಲಿಕ್‌ ಅವರು ಎರಡು ದಿನಗಳ ರಾಜ್ಯ ಭೇಟಿಗೆ ಆಗಮಿಸಿದ ಗೃಹ ಸಚಿವರನ್ನು ಬರ ಮಾಡಿಕೊಂಡಿದ್ದರು. ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಅಮಿತ್ ಶಾ ಗುರುವಾರ ಉನ್ನತ ಮಟ್ಟದ ಸಭೆ ಕೂಡ ನಡೆಸಲಿದ್ದಾರೆ.


from India & World News in Kannada | VK Polls https://ift.tt/2IOxNd7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...