ಹೊಸದಿಲ್ಲಿ: ಬಿಹಾರದ ಮುಜಫರ್‌ಪುರದಲ್ಲಿ ಮಿದುಳು ಜ್ವರದಿಂದ 100ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ 7 ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಮತ್ತು ಬಿಹಾರ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಜಸ್ಟಿಸ್ ಸಂಜೀವ್ ಖನ್ನಾ ಮತ್ತು ಬಿ.ಆರ್ ಗವಾಯ್ ನೇತೃತ್ವದ ವಿಭಾಗೀಯ ಪೀಠ ಬಿಹಾರ ಸರಕಾರಕ್ಕೆ ನೋಟೀಸ್ ನೀಡಿದ್ದು, ರಾಜ್ಯದಲ್ಲಿ ವೈದ್ಯಕೀಯ ಸೌಲಭ್ಯಗಳ ಸಾಕಷ್ಟು ಲಭ್ಯತೆ, ಸ್ವಚ್ಛತಾ ಸ್ಥಿತಿಗತಿ, ಪೌಷ್ಟಿಕತೆ ಮತ್ತು ಶುಚಿತ್ವದ ಪರಿಸ್ಥಿತಿ ಕುರಿತು ಅಫಿದವಿತ್ ಸಲ್ಲಿಸುವಂತೆ ಸೂಚಿಸಿದೆ. ಉತ್ತರ ಪ್ರದೇಶದಲ್ಲಿ ಈ ಹಿಂದೆ ಇಂತಹದೇ ಸಾವುಗಳು ಸಂಭವಿಸಿದ ಬಳಿಕ ಅಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಕೀಲರು ಕೋರ್ಟಿಗೆ ವಿವರಿಸಿದರು.
from India & World News in Kannada | VK Polls http://bit.ly/2Nbd3As