
ಮಕ್ಕಳೇ ಹಾಗೆ. ಸದಾ ತುಂಟತನದಲ್ಲೇ ಮುಳುಗಿರುತ್ತಾರೆ. ನಿಂತಲ್ಲಿ ನಿಲ್ಲುವುದಿಲ್ಲ. ಊಟ ಮಾಡುತ್ತಿರಲಿ, ನಿದ್ದೆಯಲ್ಲಿರಲಿ, ತಾಯಿಯಾದವಳು ಅವರ ಮೇಲೆ ಗಮನ ಕೊಟ್ಟಿರುತ್ತಾರೆ. ಮಲಗಿದ್ದ ಮಗು ಸ್ವಲ್ಪ ಅಲ್ಲಾಡಿದರೂ ಸಾಕು ತಾಯಿ ಎಚ್ಚರವಾಗಿ ಬಿಡುತ್ತಾಳೆ. ಅಷ್ಟು ಮುತುವರ್ಜಿಯಿಂದ ಆಕೆ ಮಗುವನ್ನು ಬೆಳೆಸುತ್ತಾಳೆ. ಇದು ಅಂತಹದ್ದೇ ಒಂದು ತಾಯಿಯ ವೀಡಿಯೋ. ಕೊಲಂಬಿಯಾದನ್ನೆಲ್ಲಲಾದ ಈ ವೀಡಿಯೋದಲ್ಲಿ ತಾಯಿಯೊಬ್ಬಳು ಮಗುವಿನ ಜತೆ ಲಿಫ್ಟ್‌ನಿಂದ ಹೊರಬಂದು ಕಚೇರಿಯೊಂದರ ಮುಂದೆ ನಿಂತಿರುತ್ತಾಳೆ. ಜತೆಗಿದ್ದ ಮಗು ತಾಯಿ ಹಿಡಿತ ತಪ್ಪಿಸಿಕೊಂಡು ಬಾಲ್ಕನಿಯತ್ತ ಓಡುತ್ತದೆ. ಅದರ ಸಂಧಿಯಲ್ಲಿ ತೂರಿ ಹೋಗುವ ಮಗು ಇನ್ನೇನು ನಾಲ್ಕು ಅಡಿ ಅಂತಸ್ತಿನಿಂದ ಕೆಳಕ್ಕೆ ಬೀಳುತ್ತದೆ ಎನ್ನುವಾಗ ತಾಯಿ ಮಿಂಚಿನಂತೆ ಓಡಿ ಮಗುವಿನ ಕಾಲನ್ನು ಹಿಡಿದುಕೊಂಡು ನಡೆಯಲಿದ್ದ ಅನಾಹುತವನ್ನು ತಪ್ಪಿಸುತ್ತಾಳೆ. ಬಳಿಕ ಅಲ್ಲಿದ್ದವರೆಲ್ಲ ಓಡಿ ಬಂದು ಮಗುವನ್ನು ರಕ್ಷಿಸಲು ಆಕೆಗೆ ಸಹಾಯ ಮಾಡುತ್ತಾರೆ. ಈ ವೀಡಿಯೋ ನೋಡಿದ ಕೆಲವರು ಮಗುವಿನ ಕಡೆಗೆ ಗಮನ ನೀಡದೆ ಮೊಬೈಲ್‌ನಲ್ಲಿ ಮುಳುಗಿದ್ದಳೆಂದು ತಾಯಿಗೆ ಬೈದರೆ, ಮತ್ತೆ ಕೆಲವರು ಆಕೆಯ ಸಮಯಪ್ರಜ್ಞೆಯನ್ನು ಹೊಗಳಿದ್ದಾರೆ. ಮತ್ತೆ ಕೆಲವರು ಬಾಲ್ಕನಿಗೆ ಗ್ಲಾಸ್ ಅಳವಡಿಸಿಲ್ಲವೆಂದು ಕಟ್ಟಡದ ಮಾಲೀಕನಿಗೆ ಜರಿದಿದ್ದಾರೆ.
from India & World News in Kannada | VK Polls https://ift.tt/2LhTdAZ