ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಹೊನ್ನಾಳಿಯ ಜಾಮಿಯಾ ಮಸೀದಿ..!

ಹೊನ್ನಾಳಿ: ಸೌರ್ಹಾದತೆ ಹಾಗೂ ಭಾವೈಕ್ಯತೆಗೆ ಸಾಕ್ಷಿಯಾಗಿರುವ ನ್ಯಾಮತಿ ಪಟ್ಟಣದ ಜಾಮಿಯ ಮಸೀದಿಯ ಗುರುಗಳು ಮತ್ತು ಮುಸ್ಲಿಂ ಮುಖಂಡರು ಬುಧವಾರ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಮರ್ಪಿಸಿದರು. ಶ್ರೀರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹ ಅಭಿಯಾನದ ಆರ್‌ಎಸ್‌ಎಸ್‌ ಸ್ವಯಂಸೇವಕರು ಮಸೀದಿಗೆ ಹೋದಾಗ ಗೌರವ ಆದರಗಳಿಂದ ಮುಸ್ಲಿಂ ಗುರುಗಳು ಬರ ಮಾಡಿಕೊಂಡು, ದೇಣಿಗೆ ನೀಡಿದರು. ಇದು ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ. ಮಸೀದಿಯ ಧರ್ಮಗುರುಗಳು ಹಾಗೂ ಎಲ್ಲಾ ಮುಸ್ಲಿಂ ಮುಖಂಡರು ದೇಣಿಗೆ ಸಮರ್ಪಿಸಿ ಮಾತನಾಡಿ, ಇಂತಹ ಸತ್ಕಾರ್ಯಗಳಿಗೆ ದೇಣಿಗೆ ನೀಡಿ ಪರಸ್ಪರ ಸಹಕಾರ ನೀಡಿದರೆ, ಪರಸ್ಪರ ಸಹೋದರತೆ ಭಾವನೆಗೆ ಧಕ್ಕೆ ಉಂಟಾಗುವುದಿಲ್ಲ ಎಂದರು. ಸಂಘದ ಕಾರ್ಯಕರ್ತ ಶ್ರೀನಿವಾಸ್‌ ಮಾತನಾಡಿ, ಶ್ರೀರಾಮ ಜಾತ್ಯಾತೀತ ವ್ಯಕ್ತಿತ್ವದ ಸಂಕೇತ. ಇಡೀ ದೇಶದಲ್ಲಿ ಯಾವುದೇ ಜಾತಿಯ ಸೋಂಕಿಲ್ಲದೆ ಪೂಜಿಸುತ್ತಾರೆ. ಅಂಥ ಶ್ರೀರಾಮನ ಭವ್ಯ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ. ಇಂತಹ ಕಾರ್ಯಕ್ಕೆ ಮುಸ್ಲಿಂ ಮುಖಂಡರು ದೇಣಿಗೆ ಸಮರ್ಪಿಸಿರುವುದು ಭಾರತ ಜಾತ್ಯಾತೀತ ರಾಷ್ಟ್ರ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಎಂದರು. ಅಭಿಯಾನದಲ್ಲಿ ನ್ಯಾಮತಿ ತಾಪಂ ಅಧ್ಯಕ್ಷ ರವಿಕುಮಾರ್‌, ಜಯಣ್ಣ, ಸಿ.ಕೆ.ರವಿಕುಮಾರ್‌, ಕಾರ್ತಿಕ ಸೇರಿ ಜಾಮಿಯ ಮಸೀದಿಯ ಮುಖಂಡರು ಇದ್ದರು.


from India & World News in Kannada | VK Polls https://ift.tt/3pRxf9z

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...