ಮಕ್ಕಳಿಗೆ ಪೋಲಿಯೋ ಲಿಸಿಕೆ ಬದಲು ಸ್ಯಾನಿಟೈಸರ್: ಮಹಾರಾಷ್ಟ್ರದಲ್ಲೊಂದು ಮಹಾ ಎಡವಟ್ಟು!

ಯಾವತ್ಮಲ್: ಉಡಾಫೆಯ ಕರ್ತವ್ಯ ಅದೆಂತಹ ಭಯಾನಕ ಸನ್ನಿವೇಶವನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ ಮಹಾರಾಷ್ಟ್ರದ ಯಾವತ್ಮಲ್‌ನಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಸಾಕ್ಷಿಯಾಗಿದೆ. ಹೌದು, ಯಾವತ್ಮಲ್‌ನಲ್ಲಿ ನಬಡೆದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ವೇಳೆ, 12 ಪುಟಾಣಿಗಳಿಗೆ ಪೋಲಿಯೋ ಲಸಿಕೆ ಬದಲು ಸ್ಯಾನಿಟೈಸರ್ ನೀಡಿದ ಆಘಾತಕಾರಿ ಘಟನೆ ನಡೆದಿದೆ. ಪೋಲಿಯೋ ಲಸಿಕೆ ಹಾಕಿಸಲು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದ ಪೋಷಕರು ಇದೀಗ ಕಂದಮ್ಮಗಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಪೋಲಿಯೋ ಲಸಿಕಾ ಅಭಿಯಾನದ ವೇಳೆ, ಆರೋಗ್ಯ ಸಿಬ್ಬಂದಿ ಅಚಾತುರ್ಯದಿಂದ ಐದು ವರ್ಷದ ಕೆಳಗಿನ 12 ಮಕ್ಕಳಿಗೆ ಸ್ಯಾನಿಟೈಸರ್ ನೀಡಲಾಗಿದೆ. ಎಲ್ಲಾ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಈ ಪುಟಾಣಿಗಳು ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕೃಷ್ಣ ಪಂಚಲ್ ಮಾಹಿತಿ ನೀಡಿದ್ದಾರೆ. ಇನ್ನು ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಓರ್ವ ಆರೋಗ್ಯ ಸಿಬ್ಬಂದಿ, ಓರ್ವ ವೈದ್ಯ ಹಾಗೂ ಆಶಾ ಕಾರ್ಯಕರ್ತೆಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದೂ ಶ್ರೀಕೃಷ್ಣ ಪಂಚಲ್ ಸ್ಷಷ್ಟಪಡಿಸಿದ್ದಾರೆ. ಕಳೆದ ಜ.30(ಶನಿವಾರ)ರಿಂದ ದೇಶಾದ್ಯಂತ ಪಲ್ಸ್ಗ ಪೋಲಿಯೋ ಲಸಿಕಾ ಅಭಿಯಾನ ಆರಂಭವಾಗಿದ್ದು, ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಐದು ವರ್ಷದ ಕೆಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುತ್ತಿದೆ.


from India & World News in Kannada | VK Polls https://ift.tt/3tlciFU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...