ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಒಂಟಿ ಮನೆಗಳಿಗೆ ಅಟೆನ್ಷನ್ ಅನಿವಾರ್ಯ ಎನ್ನುವಂತಾಗಿದೆ. ಕೊರೊನಾ ಆರ್ಥಿಕ ಹೊಡೆತಕ್ಕೆ ಸಿಲುಕಿರುವ ಅನೇಕರು ಕಳ್ಳತನದ ಮಾರ್ಗ ಹಿಡಿಯುತ್ತಿದ್ದು, ಒಂಟಿ ಮನೆಗಳು, ನಿರ್ಜನ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್‌ಗಳನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ನಲ್ಲೂ ಕಳ್ಳರ ಕೈಚಳಕ ದೇಶಾದ್ಯಂತ ಲಾಕ್‌ಡೌನ್‌ನಿಂದ ಮನೆಗಳಲ್ಲಿ ಸೀಮಿತವಾಗಿದ್ದರು, ಹಲೆವಡೆ ಊರಿಗೆ ಹೋದವರು ಬರಲಾಗದೆ ಕೆಲ ಮನೆಗಳು ಬೀಗ ಹಾಕಿದ್ದವು. ಮನೆ ಬಾಗಿಲಿನಲ್ಲಿ ತುಂಬಾ ದಿನಗಳಿಂದ ನ್ಯೂಸ್‌ಪೇಪರ್, ಹಾಲಿನ ಪ್ಯಾಕೆಟ್ ಬಿದ್ದಿದ್ದರೆ ಆ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡ ಕಳ್ಳರು ಕೈಚಳಕ ತೋರಿದ್ದಾರೆ. 2020ರಲ್ಲಿ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ 2018ರಲ್ಲಿ 1190 ಕಳ್ಳತನಗಳು ನಡೆದಿದ್ದು, ಇಲಾಖೆಯ ತನಿಖೆಯಿಂದ 7.57ಕೋಟಿ ರಿಕವರಿಯಾಗಿದೆ. 2019ರಲ್ಲಿ 1271 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ತನಿಖೆಯಿಂದ 9.04ಕೋಟಿ ರಿಕವರಿಯಾಗಿದೆ. 2020ರಲ್ಲಿ1090 ಪ್ರಕರಣಗಳು ದಾಖಲಾಗಿದ್ದು, 8.26ಕೋಟಿ ರಿಕವರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ. ವರ್ಷ- ಕಳ್ಳತನ -ಕೊಲೆ
- 2018- 1190 -73
- 2019 -1271- 69
- 2020- 1090- 71
- ಒಂಟಿ ಮನೆ, ನಿರ್ಜನ ಪ್ರದೇಶದ ಪೆಟ್ರೋಲ್ ಬಂಕ್
- ಬಾರ್, ರೆಸ್ಟೋರೆಂಟ್‌ಗಳು
- ತುಂಬಾ ದಿನಗಳಿಂದ ದಿನಪತ್ರಿಕೆ, ಹಾಲಿನ ಪ್ಯಾಕೆಟ್ ಬಾಗಿಲ ಬಳಿ ಉಳಿದ ಮನೆಗಳು
from India & World News in Kannada | VK Polls https://ift.tt/2YD9MNa