ಮುಖ್ಯಮಂತ್ರಿಗಳೇ ನಿಮ್ಮ ನಾಟಕ ಕಂಪನಿ ಬಂದ್‌ ಮಾಡಿ: ಬಿಎಸ್‌ವೈ ವಿರುದ್ಧ ಯತ್ನಾಳ್‌ ಆಕ್ರೋಶ

ಪಂಚಮಸಾಲಿಗಳನ್ನು '2ಎ'ಗೆ ಸೇರಿಸುವ ಬಗ್ಗೆ ನಿರ್ಣಯ ಕೈಗೊಳ್ಳದೇ ಇದ್ದರೆ, ರಾಜ್ಯದ ವೀರಶೈವ ಲಿಂಗಾಯತರು ಯಡಿಯೂರಪ್ಪ ಅವರ ನಾಟಕ ಕಂಪನಿಯನ್ನು ಬಂದ್‌ ಮಾಡಲಿದ್ದಾರೆ ಎಂದು ಶಾಸಕ ಎಚ್ಚರಿಕೆ ನೀಡಿದರು. ಮಾ.4ರಿಂದ ಆರಂಭವಾಗುವ ಅಧಿವೇಶನದಲ್ಲಿ ಮೀಸಲಾತಿ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳದೇ ಇದ್ದರೆ, ಸಚಿವರಾದ ಸಿ.ಸಿ.ಪಾಟೀಲ್‌ ಮತ್ತು ನಿರಾಣಿ ಅವರು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದರು. ಪಂಚಮಸಾಲಿಗಳನ್ನು '3ಬಿ' ಪಟ್ಟಿಗೆ ಸೇರಿಸಿದ್ದು ತಾವು ಎಂದು ಯಡಿಯೂರಪ್ಪ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ, '3ಬಿ' ಮೀಸಲಾತಿಯನ್ನು ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಲಾಗಿದೆಯೇ ಹೊರತು ಕೇವಲ ಪಂಚಮಸಾಲಿಗಳಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗೆ ನಡೆದ ವಿಧಾಸಭಾ ಅಧಿವೇಶನದಲ್ಲಿ ಪಂಚಮಸಾಲಿಗಳಿಗೆ ಮೀಸಲಾತಿ ವಿಚಾರ ಪ್ರಸ್ತಾಪಿಸಿದಾಗ, ರಾಜ್ಯದ ಎಲ್ಲಾ ಸಂಸದರನ್ನು ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಿ ಒತ್ತಾಯ ಮಾಡುವಂತೆ ಮುಖ್ಯಮಂತ್ರಿ ಅವರು ನನಗೆ ಹೇಳುತ್ತಾರೆ. ನಾನೇಕೆ ಸಂಸದರನ್ನು ದಿಲ್ಲಿಗೆ ಕರೆದೊಯ್ಯಲಿ? ಎಂದು ಯತ್ನಾಳ್‌ ಪ್ರಶ್ನಿಸಿದರು. ಸಿಎಂ ತಮ್ಮ ಬಳಿ ಛಾವಿ (ಕೀಲಿ ಕೈ) ಇಟ್ಟುಕೊಂಡು, ಬೇರೊಂದು ಮನೆಯಲ್ಲಿ ಛಾವಿಯಿದೆ ಎಂದು ನಾಟಕ ಮಾಡುತ್ತಿದ್ದಾರೆ. ಕೂಡಲೇ ಅವರು ತಮ್ಮ ನಾಟಕದ ಕಂಪನಿ ಬಂದ್‌ ಮಾಡಬೇಕು ಎಂದು ವ್ಯಂಗ್ಯವಾಡಿದರು. ಸಮುದಾಯಕ್ಕೆ ಆಗಿರುವ ಅನ್ಯಾಯ ಪ್ರಶ್ನಿಸಿದರೆ ನೋಟಿಸ್‌ ನೀಡುತ್ತಾರೆ. ಇದರಿಂದ ನನ್ನ ಬಾಯಿ ಬಂದ್‌ ಮಾಡಲಾಗುವುದಿಲ್ಲ. ನಾನು ಬೋಗಸ್‌ ಮಾತನಾಡುವ ರಾಜಕಾರಣಿ ಅಲ್ಲ. ಯಾರಿಗೂ ಪಂಪ್‌ ಹೊಡೆಯುವ ರಾಜಕಾರಣಿಯಲ್ಲ. ಮಂತ್ರಿ ಮಾಡಿ ಎಂದು ಯಡಿಯೂರಪ್ಪನ ಮನೆಗೆ ಹೋಗಿಲ್ಲ. ನೋಟಿಸ್‌ಗೆ ಅಂಜುವುದಿಲ್ಲ ಎಂದರು.


from India & World News in Kannada | VK Polls https://ift.tt/3scUTOw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...