ಬೆಂಗಳೂರು: ಪ್ರೇಮಿಗಳ ದಿನಕ್ಕೋಸ್ಕರ ತಮ್ಮ ಸಂಗಾತಿಗೆ ವಿಶೇಷ ಉಡುಗೊರೆಯನ್ನು ಕೊಡುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಫೆ.5 ರಿಂದ 14ರವರೆಗೆ 'ಸೋಕ್ ಮಾರ್ಕೆಟ್-ಆರ್ಟ್ ಆ್ಯಂಡ್ ಕ್ರಾಫ್ಟ್' ಮೇಳವನ್ನು ಆಯೋಜಿಸಲಾಗಿದೆ. ಚಿತ್ತಾರ ಗ್ರಾಂಡ್ ಫ್ಲಿಯಾ ಮಾರ್ಕೆಟ್ ಸಹಯೋಗದಲ್ಲಿ ಆಯೋಜಿಸಿರುವ ಈ ಕರಕುಶಲ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ನೂರಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ದೇಶದ ನಾನಾ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ. ಮನೆಯ ಗಾರ್ಡನ್ ಅಲಂಕರಿಸಲು, ಇಷ್ಟದ ಹ್ಯಾಂಡ್ ಲೂಮ್ ಸೀರೆಯ ಆಯ್ಕೆಗೆ, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿದೆ. ಈ ಮೇಳದಲ್ಲಿ ದೇಶದ ನಾನಾ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳೂ ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯಲಿವೆ. ಫೆ.5 ರಿಂದ 14ವರೆಗೆ ಈ ಪ್ರದರ್ಶನವು ನಡೆಯಲಿದ್ದು, ಪ್ರತಿ ದಿನ 11 ರಿಂದ ಸಂಜೆ 7 ಗಂಟೆವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳವು ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆಯಲಿದೆ.
from India & World News in Kannada | VK Polls https://ift.tt/2LnyxKw