ನಾಗರಾಜ ಬೆಣಕಲ್ ಕುಕನೂರು: ಮೈಮೇಲೆ ಸ್ವೆಟರ್, ಕೈಯಲ್ಲಿ ಬ್ಯಾಟರಿ ಮತ್ತೊಂದು ಕೈಯಲ್ಲಿ ಕೋಲು ಹಿಡಿದ ರೈತರು ರಾತ್ರಿ ಪೂರ್ತಿ ಜಮೀನು ಸುತ್ತ ಪಹರೆಯಲ್ಲಿ ತೊಡಗಿದ್ದಾರೆ.! ಇದು ಯರೇಹಂಚಿನಾಳ ಸೇರಿ ಸುತ್ತಲಿನ ಕೆಲವು ಗ್ರಾಮಗಳ ಬೆಳೆಯಿರುವ ಜಮೀನುಗಳಲ್ಲಿ ಕಳೆದ ಹಲವು ರಾತ್ರಿಗಳಿಂದ ಕಂಡು ಬರುತ್ತಿರುವ ಸಾಮಾನ್ಯ ದೃಶ್ಯ. ಒಂದು ಕ್ವಿಂಟಲ್ ಕೆಂಪು ಮೆಣಸಿನಕಾಯಿಗೆ 27 ರಿಂದ 30 ಸಾವಿರ ರೂ. ಬೆಲೆ ಸಿಗುತ್ತಿದೆ. ದುಬಾರಿ ಬೆಲೆ ಹಿನ್ನೆಲೆಯಲ್ಲಿ ಕಳ್ಳರು, ಮೆಣಸಿನಕಾಯಿ ಕಳ್ಳತನಕ್ಕೆ ಮುಂದಾಗಿದ್ದಾರೆ. ತಾಲೂಕಿನ ಎರೆ ಭಾಗದ ಬೆಣಕಲ್, ನಿಟ್ಟಾಲಿ, ಮಸಬಹಂಚಿನಾಳ, ಬನ್ನಿಕೊಪ್ಪ, ತಳಕಲ್, ವೀರಾಪುರ, ರಾಜೂರು, ಆಡೂರು, ದ್ಯಾಂಪುರ, ಕುಕನೂರು, ಮಂಡಲಗೇರಿ, ಭಟಪನಹಳ್ಳಿ, ಇಟಗಿ, ಮನ್ನಾಪುರ ಸಿದ್ನೇಕೊಪ್ಪ, ಚಿಕೇನಕೊಪ್ಪ, ಬಿನ್ನಾಳ, ಯರೇಹಂಚಿನಾಳ, ಸೋಂಪುರ, ಮಾಳೆಕೊಪ್ಪ ಪ್ರದೇಶದಲ್ಲಿ ಹಿಂಗಾರಿನಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಮೊಲ ಹಿಡಿಯುವ, ಬೇಟೆಯಾಡುವ ನೆಪದಲ್ಲಿ ಹೊಲಗಳಿಗೆ ನುಗ್ಗುವ ಕಳ್ಳರು, ಇತ್ತೀಚೆಗೆ ದುಬಾರಿ ಮೆಣಸಿನ ಕಾಯಿ ಕದ್ದು ಪರಾರಿಯಾಗುತ್ತಿದ್ದಾರೆ. ರಾತ್ರೋರಾತ್ರಿ ಕದ್ದ ಮೆಣಸಿನಕಾಯಿ ಫಸಲನ್ನು ಕಳ್ಳರು ಗದಗ, ಹುಬ್ಬಳ್ಳಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ.
from India & World News in Kannada | VK Polls https://ift.tt/3rnemeT