ಕಾರ್ಮಿಕರ ಅಭಾವ; ಮುಳುಗುತ್ತಿರುವ ಹಡಗಿನಂತಾದ ಕಾಫಿ ಉದ್ಯಮ, ಕೈಗೆ ಬಂದ ತುತ್ತು ಬಾಯಿಗಿಲ್ಲ!

ಪ್ರಕಾಶ್‌ ಜಿ.,ಹಾಸನ ಹಾಸನ: ನಾಡಲ್ಲಿ ಬೆಳೆದು ನಿಂತ ಲಕ್ಷ ಹೆಕ್ಟೇರ್‌ ಪ್ರದೇಶದ ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆ ಎದುರಾಗಿದೆ. ಅಷ್ಟೇ ಅಲ್ಲ, ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಪರಿಣಾಮ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಿದೆ. ರಾಜ್ಯದ ಬಳ್ಳಾರಿ, ಹೊರರಾಜ್ಯದ ಅಸ್ಸಾಂ, ಒಡಿಸ್ಸಾ, ಬಿಹಾರ ಮೂಲದಿಂದ 15 ಸಾವಿರಕ್ಕೂ ಹೆಚ್ಚು ಸಕಲೇಶಪುರ, ಆಲೂರು, ಬೇಲೂರು ತಾಲೂಕಿಗೆ ಬಂದು ಬೀಡುಬಿಡುತ್ತಿದ್ದರು. ಆದರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ತಮ್ಮೂರಿಗೆ ಹೋದ ಕಾರ್ಮಿಕರು ಇತ್ತ ಸುಳಿಯುತ್ತಲೇ ಇಲ್ಲ. ಹೊರರಾಜ್ಯದ ಕಾರ್ಮಿಕರನ್ನೇ ನೆಚ್ಚಿ ಕುಳಿತಿದ್ದ ಬೆಳೆಗಾರರಿಗೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅಕಾಲಿಕ ಮಳೆಯ ನಡುವೆಯೂ ಅಷ್ಟಿಷ್ಟು ಕಾಫಿ ಬಂದಿದ್ದು, ಕೊಯ್ಲು ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. 60ರಿಂದ 70 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೊಬಾಸ್ಟಾಪಾರ್ಚ್ಮೆಂಟ್‌, 30ರಿಂದ 40 ಹೆಕ್ಟೇರ್‌ನಲ್ಲಿಅರೇಬಿಕಾ ಬೆಳೆಯಲಾಗಿದೆ. ರೋಬಾಸ್ಟಾಗೆ ವಿದೇಶಿ ಕೆಫೆಗಳಲ್ಲಿ ಮಾತ್ರ ಬಳಸುವ ಕಾರಣ ಲಾಕ್‌ಡೌನ್‌ ತೆರವುಗೊಂಡರೆ ಮಾತ್ರ ಬೇಡಿಕೆ ಎಂಬ ನಿರೀಕ್ಷೆಯಲ್ಲಿ ಬೆಳೆಗಾರರು ಹಾಗೂ ಟ್ರೇಡರ್ಸ್ ಕಾಯ್ದು ಕುಳಿತಿದ್ದಾರೆ. ಕಾರ್ಮಿಕರಿಗೆ ಫುಲ್‌ ಡಿಮ್ಯಾಂಡ್‌ಕಾರ್ಮಿಕರ ಸಮಸ್ಯೆ ನಡುವೆ ಅಲ್ಲಲ್ಲಿ ಇರುವ ಒಂದಿಷ್ಟು ಕಾರ್ಮಿಕರಿಗೆ ಇನ್ನಿಲ್ಲದ ಡಿಮ್ಯಾಂಡ್‌ ಶುರುವಾಗಿದೆ. ಕೆಜಿ ಕಾಫಿ ಕೊಯ್ಲು ಮಾಡಿದರೆ 3ರಿಂದ ನಾಲ್ಕು ರೂ. ಕೊಡಬೇಕು. ದಿನವೊಂದಕ್ಕೆ 80ರಿಂದ 90 ಕೆಜಿ ಕೊಯ್ಲು ಮಾಡುತ್ತಾರೆ. ಇಲ್ಲವೇ ದಿನಕ್ಕೆ 300 ರೂ. ನೀಡಬೇಕು. 80ರಿಂದ 90ಕೆಜಿಗಿಂತ ಹೆಚ್ಚುವರಿ ಕೊಯ್ಲು ಮಾಡಿದರೆ ಹೆಚ್ಚುವರಿ ಕೊಡಬೇಕು. ಕೇಳಿದಷ್ಟು ಹಣ ಕೊಟ್ಟು ಕೊಯ್ಲು ಮಾಡಿಸೋಣ ಎಂದರೆ ಒಂದು ದಿನ ಬಂದವರು ಮಾರನೇ ದಿನ ಅದಕ್ಕಿಂತ ಹೆಚ್ಚು ಕೊಡುತ್ತೇವೆ ಎನ್ನುತ್ತಾರೆ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಕೊಯ್ಲು ಮಾಡಲು ಆಗದೆ ಕೈಚೆಲ್ಲಿ ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಕಾಫಿ ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಕೇಳಿದಷ್ಟು ಕೂಲಿ ಕೊಟ್ಟರೆ ಹಾಕಿದ ಬಂಡವಾಳವೂ ಸಿಗುವುದಿಲ್ಲ ಎಂಬುದು ಬೆಳೆಗಾರರ ಅಳಲು. ವಿದೇಶಿ ಮಾರುಕಟ್ಟೆ ಬಂದ್‌ಕಾಫಿ ಬಳಕೆಯ ಬ್ರಿಟನ್‌, ಇಟಲಿ, ಫ್ರಾನ್ಸ್‌, ನೆದರ್‌ಲ್ಯಾಂಡ್‌ ನಂತರ ಯುರೋಪ್‌ ದೇಶಗಳಲ್ಲಿ ಲಾಕ್‌ಡೌನ್‌ ಪರಿಣಾಮ ಅಲ್ಲಿನ ಕಾಫಿ ಶಾಪ್‌ಗಳು ಬಾಗಿಲು ಮುಚ್ಚಿವೆ. ಹೀಗಾಗಿ ವಿದೇಶಕ್ಕೆ ಕಾಫಿ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್‌ಕುಮಾರ್‌. ಈ ವೇಳೆಗೆ ರೋಬಾಸ್ಟಾ ಕೊಯ್ಲು ಮುಗಿಯಬೇಕಿತ್ತು. ಆದರೆ ಕಾರ್ಮಿಕರ ಸಮಸ್ಯೆ ತೀವ್ರವಾಗಿ ಬಹಳಷ್ಟು ಬೆಳೆಗಾರರು ಕೊಯ್ಲು ಆರಂಭಿಸಿಲ್ಲ. ಫೆ.15ರಿಂದ ಮೆಣಸು ಕೊಯ್ಲು ಮಾಡಬೇಕು. ಅಸ್ಸಾಂ ಮೂಲದ ಕಾರ್ಮಿಕರು ಅಲ್ಲಿನ ಚುನಾವಣೆ ಮುಗಿಯುವವರೆಗೆ ಬರುವ ಸಾಧ್ಯತೆ ಇಲ್ಲ. ದಾವಣಗೆರೆ ಮೂಲದ ಕಾರ್ಮಿಕರು ಬರುತ್ತಿಲ್ಲ. ಕಾಫಿ ಕೊಯ್ಲಿಗೆ ಯಂತ್ರ ಕಂಡು ಹಿಡಿದಿದ್ದರೂ ಎಲೆ ಉದುರುತ್ತದೆ. ಬೀಜ ಹಾರಿ ಹೋಗುತ್ತದೆ. ಈ ಕಾರಣದಿಂದ ಕಾರ್ಮಿಕರನ್ನೇ ನೆಚ್ಚಿಕೊಂಡಿದ್ದಾರೆ ಬೆಳೆಗಾರರು. ಲಾಕ್‌ಡೌನ್‌ ಬಳಿಕ ರೈಲು ಸಂಚಾರವೂ ಪ್ರಾರಂಭಗೊಳ್ಳಲಿಲ್ಲ, ಹೊರ ರಾಜ್ಯದ ಕಾರ್ಮಿಕರು ಬರಲಿಲ್ಲ ಎಂಬಂತಾಗಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಗಾರೆ ಕೆಲಸಕ್ಕೆಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಅಸ್ಸಾಂ, ಒಡಿಸ್ಸಾ, ಬಿಹಾರ ಮೂಲದ ಒಂದಿಷ್ಟು ಕಾರ್ಮಿಕರು ಪುನಃ ರಾಜ್ಯಕ್ಕೆ ಮರಳಿದ್ದರೂ, ಬೆಟ್ಟ, ಗುಡ್ಡ, ಚಳಿ, ಆನೆ, ಪ್ರಾಣಿಗಳ ಕಾಟ, ತೋಟದಲ್ಲಿ ಬುಸ್‌ಗುಟ್ಟುವ ಹಾವಿನ ಬೆದರಿಕೆಯಿಂದ ನಗರ ಪ್ರದೇಶಗಳಲ್ಲಿ ಗಾರೆ ಕೆಲಸ, ಹೊಂ ಸ್ಟೇ, ರೆಸಾರ್ಟ್‌ ಕೆಲಸಗಳತ್ತ ವಾಲಿದ್ದಾರೆ. ಹೀಗಾಗಿಯೂ ಕಾರ್ಮಿಕರ ಸಮಸ್ಯೆ ಎದುರಾಗಿದೆ. ಪ್ರತಿವರ್ಷ ಯುರೋಪ್‌ ದೇಶಕ್ಕೆ 30ರಿಂದ 35 ಸಾವಿರ ಟನ್‌ ರೋಬಸ್ಟಾ ಕಾಫಿ ಬೇಡಿಕೆ ಇತ್ತು. ಅಲ್ಲಿನ ಕೆಫೆಯಲ್ಲಿ ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಲಾಕ್‌ಡೌನ್‌ ಪರಿಣಾಮ ಬೇಡಿಕೆ ಕುಸಿದಿದೆ. ಲಾಕ್‌ಡೌನ್‌ ತೆರವು ಬಳಿಕ ಮಾರುಕಟ್ಟೆ ಚೇತರಿಕೆ ಕಾಣಬಹುದು. ಕಾರ್ಮಿಕರ ಸಮಸ್ಯೆಗೆ ರೈಲು ಸಂಚಾರ ಪ್ರಾರಂಭವಾಗದಿರುವುದು ಕಾರಣವಾಗಿದೆ. ಧರ್ಮರಾಜ್‌ ಕಾಫಿ ಬೆಳೆಗಾರರು, ಹೊಂಕರವಳ್ಳಿ, ಸಕಲೇಶಪುರ ತಾಲೂಕು ಕಾರ್ಮಿಕರ ಸಮಸ್ಯೆ ತೀವ್ರವಾಗಿದೆ. ಎಂಟು ಗಂಟೆ ಕೆಲಸ ಮಾಡುವ ಕಾರ್ಮಿಕರು ನಾಲ್ಕು ಗಂಟೆಗೆ ಬಂದಿದ್ದಾರೆ. ಕೇಳಿದಷ್ಟು ಕೂಲಿ ಕೊಡಬೇಕು. ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ತೀವ್ರ ಸಂಕಷ್ಟದಲ್ಲಿದೆ. ಮೋಹನ್‌ಕುಮಾರ್‌ ಬೆಳೆಗಾರರ ಒಕ್ಕೂಟದ ಅಧ್ಯಕ್ಷ, ಸಕಲೇಶಪುರ


from India & World News in Kannada | VK Polls https://ift.tt/3pSSrvL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...