
ಚೆನ್ನೈ: ಕಳೆದ ಪ್ರತ್ಯೇಕ ಸರಣಿಗಳನ್ನು ಗೆದ್ದು ಆತ್ಮ ವಿಶ್ವಾಸದಲ್ಲಿ ಬೀಗುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಫೆ. 5 ರಿಂದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಕಟ್ಟಲು ಉಭಯ ತಂಡಗಳು ಸಿದ್ದತೆ ನಡೆಸುತ್ತಿವೆ. ಕೊನೆಯ ಬಾರಿ ಭಾರತದ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದ ಇಂಗ್ಲೆಂಡ್, ಈ ಬಾರಿ ಸೇಡು ತೀರಿಸಿಕೊಳ್ಳುವ ಯೋಜನೆಯೊಂದಿಗೆ ಕಣಕ್ಕೆ ಇಳಿಯಲಿದೆ. ನಿಮಿತ್ತ ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ , ಪ್ರವಾಸಿ ತಂಡದ ಪ್ಲೇಯಿಂಗ್ ಇಲೆವೆನ್‌ಗೆ ಬದಲು ಅವರನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಕೋವಿಡ್-19 ಪಾಸಿಟಿವ್ ಬಂದಿದ್ದರಿಂದ ಮೊಯಿನ್ ಅಲಿ, ಕಳೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಹಿರಿಯ ಆಫ್ ಸ್ಪಿನ್ನರ್ ಅನುಪಸ್ಥಿತಿಯಲ್ಲಿ ಡಾಮ್ ಬೆಸ್ ಹಾಗೂ ಝ್ಯಾಕ್ ಲೀಚ್ ಕಣಕ್ಕೆ ಇಳಿದಿದ್ದರು. ಅಂತೆಯೇ ಇಂಗ್ಲೆಂಡ್ 2-0 ಅಂತರದಲ್ಲಿ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮಾಂಟಿ ಪನೇಸರ್, ಮೊಯಿನ್ ಅಲಿ ಬಲಿಷ್ಠ ಟೀಮ್ ಇಂಡಿಯಾಗೆ ನಡುಕ ಹುಟ್ಟಿಸುತ್ತಾರೆ. ಇದೀಗ ಹೊಸ ಮೈಂಡ್ ಸೆಟ್‌ನಿಂದ ಇಲ್ಲಿಗೆ ಬಂದಿರುವ ಹಿನ್ನೆಲೆಯಲ್ಲಿ ಅವರನ್ನೇ ಪ್ಲೇಯಿಂಗ್ ಇಲೆವೆನ್‌ಗೆ ಪರಿಗಣಿಸಬೇಕು ಎಂದು ಹೆಳಿದ್ದಾರೆ. "ಭಾರತ ತಂಡದಲ್ಲಿ ಬಹುತೇಕ ಬಲಗೈ ಬ್ಯಾಟ್ಸ್‌ಮನ್‌ಗಳಿರುವುದರಿಂದ ಜ್ಯಾಕ್ ಲೀಚ್ ಅವರನ್ನು ಬೆಂಬಲಿಸುತ್ತೇನೆ. ಆದರೆ, ಡಾಮ್ ಬೆಸ್ ಬದಲು ಮೊಯಿನ್ ಅಲಿ ಅವರನ್ನು ಅಂತಿಮ 11ರಲ್ಲಿ ಆಡಿಸಲು ನಾನು ಬಯಸುತ್ತೇನೆ. ಏಕೆಂದರೆ ಹಿರಿಯ ಆಫ್ ಸ್ಪಿನ್ನರ್ ಈ ಹಿಂದೆ ಭಾರತದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಹಾಗೂ ಇಲ್ಲಿ ಆಡಿರುವ ಅನುಭವ ತುಂಬಾ ಇದೆ. ಜತೆಗೆ ಅವರು ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ನೆರವಾಗಬಲ್ಲರು," ಎಂದು ತಿಳಿಸಿದರು. "ಶ್ರೀಲಂಕಾ ಟೆಸ್ಟ್ ಸರಣಿ ಆಡದ ಮೊಯಿನ್ ಅಲಿ ಇದೀಗ ತಾಜಾತನ ಹಾಗೂ ಹಸಿವಿನಿಂದ ಕೂಡಿದ್ದಾರೆ. ಹಿರಿಯ ಸ್ಪಿನ್ನರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇಲ್ಲದೇ ಇದ್ದರೆ, ಡಾಮ್ ಬೆಸ್ ಹಾಗೂ ಜ್ಯಾಕ್ ಲೀಚ್ ಅವರನ್ನು ಟೀಮ್ ಇಂಡಿಯಾ ಆಟಗಾರರು ಸುಲಭವಾಗಿ ಎದುರಿಸಲಿದ್ದಾರೆ," ಎಂದು ಎಚ್ಚರಿಸಿದರು. 2014ರ ಪ್ರವಾಸದಲ್ಲಿ ಮೊಯಿನ್ ಅಲಿ ಭಾರತದ ವಿರುದ್ಧ ಆರು ವಿಕೆಟ್ ಸಾಧನೆ ಮಾಡಿದ್ದರು. ಇದಾದ ಬಳಿಕ ಅವರು ಟೆಸ್ಟ್ ತಂಡದಲ್ಲಿ ನಿಯಮಿತವಾಗಿ ಆಡಲು ಸಾಧ್ಯವಾಗಿರಲಿಲ್ಲ. 18 ತಿಂಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಆಶಸ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕೊನೆಯ ಬಾರಿ ಇಂಗ್ಲೆಂಡ್ ತಂಡದಲ್ಲಿ ಕಾಣಿಸಿಕೊಂಡಿದ್ದರು. 2012ರಲ್ಲಿ ಭಾರತದ ವಿರುದ್ಧ ಟೆಸ್ಟ್ ಸರಣಿ ಗೆದ್ದಿದ್ದ ಇಂಗ್ಲೆಂಡ್ ತಂಡದಲ್ಲಿದ್ದ ಪನೇಸರ್, ಇಲ್ಲಿನ ವಿಕೆಟ್‌ಗಳಲ್ಲಿ ಪ್ಲಾಟರ್ ಲೈನ್‌ಗಳಲ್ಲಿ ಬೌಲಿಂಗ್ ಮಾಡುವುದು ಬಿಟ್ಟು ಸ್ಥಿರವಾಗಿ ಫ್ಲೈಟ್ ಆಗಿ ಬೌಲಿಂಗ್ ಮಾಡಬೇಕೆಂದು ತಮ್ಮ ರಾಷ್ಟ್ರದ ಸ್ಪಿನ್ನರ್‌ಗಳಿಗೆ ಸಲಹೆ ನೀಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YCticI