ಉತ್ತರಪ್ರದೇಶದ ಮದರಸಾಗಳ ಅಭಿವೃದ್ಧಿಗೆ ₹479 ಕೋಟಿ ಬಿಡುಗಡೆಗೊಳಿಸಿದ ಆದಿತ್ಯನಾಥ್‌ ಸರ್ಕಾರ..!

ಲಖನೌ: ಉತ್ತರಪ್ರದೇಶದಲ್ಲಿ ಆಡಳಿತ ನಡೆಸ್ತಿರೋ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿನ ಮದರಸಾಗಳ ಅಭಿವೃದ್ಧಿಗೆ ಒಟ್ಟು ₹479 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶ ರಾಜ್ಯದಲ್ಲಿನ ಮದರಸಾಗಳ ಆಧುನೀಕರಣಕ್ಕೆ 479 ಕೋಟಿ ರೂ. ಅನುದಾನವನ್ನು ರಾಜ್ಯದ ಹಣಕಾಸು ಸಚಿವ ಸುರೇಶ್‌ ಖನ್ನಾ ಅವರು ಸೋಮವಾರ ಮಂಡಿಸಿದ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ. ಮದರಸಾಗಳಲ್ಲಿ ಇಂಗ್ಲೀಷ್‌, ಹಿಂದಿ, ಗಣಿತ, ವಿಜ್ಞಾನ, ಗೃಹ ವಿಜ್ಞಾನ ಮೊದಲಾದ ವಿಷಯಗಳನ್ನು ಬೋಧಿಸುವುದು ಸಹ ಆಧುನೀಕರಣದ ಭಾಗವಾಗಿದೆ. ಮದರಸಾ ಶಿಕ್ಷಣ ಮಂಡಳಿಯ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ರಾಜ್ಯದಲ್ಲಿ ನೋಂದಣಿ ಮಾಡಿಸಿಕೊಂಡಿರುವ 16,000 ಮದರಸಾಗಳಿದ್ದು, 20 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯ ಸರಕಾರ ರೂಪಿಸಿರುವ ಆಧುನೀಕರಣ ಯೋಜನೆಯಿಂದ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡಲು ಸಹಾಯವಾಗಲಿದೆ ಎಂದು ಮದರಸಾ ಶಿಕ್ಷಣ ಮಂಡಳಿ ರಿಜಿಸ್ಟ್ರಾರ್‌ ಆರ್‌.ಪಿ.ಸಿಂಗ್‌ ತಿಳಿಸಿದ್ದಾರೆ.


from India & World News in Kannada | VK Polls https://ift.tt/37ElAni

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...