ಬೆಂಗಳೂರು: ಕೋವಿಡ್ ರೂಪಾಂತರದ ಆತಂಕ ಹೊಸ ವರ್ಷಾಚರಣೆಗೆ ಕಾಡಿದ್ದು ಕಟ್ಟುನಿಟ್ಟಿನ ರೂಲ್ಸ್‌ಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತಿಸಿದೆ. ಈಗಾಗಲೇ ಕೋವಿಡ್ ಕಾರಣದಿಂದಾಗಿ ಹೊಸ ವರ್ಷ ಆಚರಣೆಗೆ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದ್ದು ಅಗತ್ಯವಿದ್ದರೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ. ಕೋವಿಡ್ ರೂಪಾಂತರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಿತ್ತು. ಆದರೆ ಏಕಾಏಕಿ ನೈಟ್ ಕರ್ಪ್ಯೂಗೆ ವಿರೋಧ ಬಂದ ಹಿನ್ನೆಲೆಯಲ್ಲಿ ವಾಪಸ್ ಪಡೆಯಲಾಗಿತ್ತು. ಪರಿಣಾಮ ಹೊಸ ವರ್ಷಾಚರಣೆಗೆ ಕೆಲವೊಂದು ನಿರ್ಬಂಧಗಳನ್ನು ಹೇರುವುದು ಅಗತ್ಯವಾಗಿದೆ. ಸರ್ಕಾರ ಹೊರಡಿಸಿರುವ ನಿಯಮಾವಳಿಗಳ ಪ್ರಕಾರ ಸಾರ್ವಜನಿಕವಾಗಿ ಹೊಸ ವರ್ಷ ಆಚರಣೆಗೆ ಅವಕಾಶ ಇಲ್ಲ. ಇನ್ನು ಬಾರ್ ಪಬ್‌ಗಳನ್ನು ಹೊಸ ವರ್ಷ ಆಚರಣೆಗೆ ಅವಕಾಶ ಇದ್ದರೂ ವಿಶೇಷ ಪಾರ್ಟಿ ಹಾಗೂ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಆದರೆ ಬೆಂಗಳೂರಿಗೆ ಪ್ರತ್ಯೇಕವಾಗಿ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಜೊತೆಗೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ನಿಟ್ಟನಲ್ಲೂ ಕ್ರಮ ಕೈಗೊಳ್ಳಲು ಮುಂದಾಗಿದೆ. ಸಹಜವಾಗಿ ರಾತ್ರಿ 12 ಗಂಟೆಯವರೆಗೂ ಹೊಸ ವರ್ಷದ ಪಾರ್ಟಿ ಮಾಡಲು ಅವಕಾಶವಿತ್ತು. ಬಾರ್ ಪಬ್‌ಗಳಲ್ಲಿ ಈ ಪಾರ್ಟಿಗಳು ತಡರಾತ್ರಿಯವರೆಗೂ ಮುಂದುವರಿಯುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಹೊಸ ವರ್ಷಾಚರಣೆಯ ದಿನ ಬಾರ್ ಪಬ್‌ಗಳಲ್ಲೂ ನಿಗದಿತ ಅವಧಿಯನ್ನು ಫಿಕ್ಸ್ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮುಂದಾಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಗೆ ಕಾನೂನಿನ ಮೂಲಕವೂ ಕಟ್ಟುನಿಟ್ಟಿನ ನಿರ್ಬಂಧ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ.
from India & World News in Kannada | VK Polls https://ift.tt/2WPu3yq