ವಿಕ ಫಲಶೃತಿ: ವೀರಾಪುರಕ್ಕೆ ಶಾಸಕ ವೀರಭದ್ರಯ್ಯ ಭೇಟಿ, ರಸ್ತೆ ಅಭಿವೃದ್ಧಿಗೆ ಸೂಚನೆ!

ಕೊಡಿಗೇನಹಳ್ಳಿ : ಸತತವಾಗಿ ಹತ್ತು ವರ್ಷ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ಉತ್ತಮ ಮಳೆಯಾಗಿದ್ದು ಮೇವಿಗೆ ಕೊರತೆ ಎದುರಾಗುವುದಿಲ್ಲಾ ಎಂದು ಶಾಸಕ ಎಂ.ವಿ ವೀರಭದ್ರಯ್ಯ ತಿಳಿಸಿದರು. ಹೋಬಳಿಯ ಗ್ರಾಮದ ಮೂಲ ಸೌಕರ್ಯ ಹಾಗೂ ರಸ್ತೆ ವಂಚಿತವಾಗಿರುವ ಬಗ್ಗೆ ಸೆ 27 ರಂದು ವಿಕದಲ್ಲಿ ಡಾಂಬರು ಕಾಣದ ರಸ್ತೆ, ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ ಎಂಬ ಶೀರ್ಷಿಕೆಯಡಿ ವಿಸ್ಕೃತ ವರದಿ ಪ್ರಕಟವಾಗಿತ್ತು. ವಿಕ ವರದಿಯನ್ನು ಗಮನಿಸಿದ ಶಾಸಕರು ವೀರಾಪುರಕ್ಕೆ ಭೇಟಿ ನೀಡಿ ರಸ್ತೆ ವೀಕ್ಷಣೆ ಮಾಡಿ ಮಾತನಾಡಿದರು, ಮಳೆ ಬಂದ ಕಾರಣ ಕಾಮಗಾರಿ ತಡವಾಗಿದೆ. ಮಳೆ ನಿಂತ ತಕ್ಷಣ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಚಿಕ್ಕಮಾಲೂರು ಗ್ರಾಮದಿಂದ ವೀರಾಪುರ ಹಾಗೂ ಕಾಳೇನಹಳ್ಳಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಪಡಸಿಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವೆಂಕಟಾಪುರದಿಂದ ತಿಗಳರಹಳ್ಳಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಪಡಿಸಿಲಾಗುವುದು ಎಂದರು. ಸ್ಥಳದಲ್ಲಿದ್ದ ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆ ಹಾಗೂ ಮೂಲ ಸೌಕರ್ಯ ಕೊರತೆ ಬಗೆಹರಿಸುವಂತೆ ಶಾಸಕರಲ್ಲಿ ಒತ್ತಾಯಿಸಿದಾಗ ಅನುದಾನದ ಕೊರತೆ ಇದ್ದು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದರು. ವಿಕ ವರದಿಯ ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ತಾಪಂ ಸದಸ್ಯ ಕೆ.ಸಿ ನರಸರೆಡ್ಡಿ, ಜಿಪಂ ಎಇಇ ಸುರೇಶ್ ರೆಡ್ಡಿ, ಇಂಜಿನಿಯರ್ ಕೃಷ್ಣಪ್ಪ, ಮುಖಂಡರಾದ ಲೋಕೇಶ್, ಸಿದ್ಧರೆಡ್ಡಿ, ಜಬೀಉಲ್ಲಾ, ದಯಾನಂದ ರೆಡ್ಡಿ, ಟಿ ರಾಮಕೃಷ್ಣಪ್ಪ, ರಮೇಶ್, ಕಾಳೇನಹಳ್ಳಿ ಹರೀಶ್, ಪಿ ರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.


from India & World News in Kannada | VK Polls https://ift.tt/3n9D8Od

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...