
ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕ ಕಾಯಿಲೆ ದಿನದಿಂದ ದಿನಕ್ಕೆ ತನ್ನ ಕಬಂಧಬಾಹುವನ್ನು ವ್ಯಾಪಿಸುತ್ತಿದ್ದು, ಜಗತ್ತಿನಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಅಮೆರಿಕಾ ಅಧ್ಯಕ್ಷ ಅವರಿಗೂ ಕೊರೊನಾ ಸೋಂಕು ವಕ್ಕರಿಸಿದ್ದು, ಇಂದು ಟ್ರಂಪ್ಮತ್ತು ಅವರ ಪತ್ನಿ ಮೆಲಾನಿಯ ಟ್ರಂಪ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಆತಂಕಕ್ಕೆ ಒಳಗಾಗಿರೋ ಡೊನಾಲ್ಡ್ ಟ್ರಂಪ್ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಟ್ರಂಪ್ ಟ್ವೀಟ್ ಮಾಡಿದ್ದು, ನನಗೆ ಮತ್ತು ಮೆಲಾನಿಯಾಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಸದ್ಯ ನಾವು ಕ್ವಾರೆಂಟೈನ್‌ನಲ್ಲಿದ್ದು, ತಕ್ಷಣ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಿದ್ದು ಶೀಘ್ರದಲ್ಲೇ ಇಬ್ಬರೂ ಗುಣಮುಖರಾಗಿ ಹೊರಬರುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಡೊನಾಲ್ಡ್ ಟ್ರಪ್ ಅವರ ಉನ್ನತ ಸಲಹೆಗಾರರಾದ ಹೋಪ್ ಹಿಕ್ಸ್ ಅವರಿಗೆ ಕೊರೊನಾ ಗುಣಲಕ್ಷಣಗಳು ಕಾಣಿಸಿಕೊಂಡು ಸೋಂಕು ದೃಢಪಟ್ಟಿತ್ತು. ಹೋಪ್ ಹಿಕ್ಸ್ ಅವರು ಟ್ರಂಪ್ ಜೊತೆಗೆ ಅಗತ್ಯ ಸಂದರ್ಭಗಳಲ್ಲಿ ಜೊತೆಗೆ ಪ್ರಯಾಣಿಸುತ್ತಾರೆ. ಮೂರು ದಿನಗಳ ಹಿಂದೆ ಹಿರಿಯ ಸಹಾಯಕರೊಂದಿಗೆ ಅಧ್ಯಕ್ಷೀಯ ಚುನಾವಣಾ ವಿಚಾರವಾಗಿ ಚರ್ಚಿಸಲು ಹೋಪ್ ಹಿಕ್ಸ್ ಕ್ಲೀವ್‌ಲ್ಯಾಂಡ್‌ಗೆ ತೆರಳಿದ್ದರು. ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಡೊನಾಲ್ಡ್ ಟ್ರಂಪ್, ತಮ್ಮ ಆಪ್ತ ಸಲಹೆಗಾರರೊಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದರಿಂದ ತಾನು ಕ್ವಾರೆಂಟೈನ್ ಆಗುವುದಾಗಿ ಹೇಳಿದ್ದರು. ಇದೀಗ ಸ್ವತಃ ಅಮೆರಿಕಾ ಅಧ್ಯಕ್ಷರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
from India & World News in Kannada | VK Polls https://ift.tt/3ivmkOt