
ಮುಂಬಯಿ: ಬಾಳಾ ಠಾಕ್ರೆ ಪರಂಪರೆಯನ್ನು ಮುಂದುವರಿಸುವ ಬದಲಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಶರಣಾಗಿದ್ದಾರೆ. ಹೀಗಂತ ಮಹಾರಾಷ್ಟ್ರದ ಮುಖ್ಯಮಂತ್ರಿ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಟ್ವಿಟ್ಟರ್‌ನಲ್ಲಿ ಉದ್ಧವ್ ಠಾಕ್ರೆ ಮರಾಠಿಯಲ್ಲಿ ಮಾತನಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿರುವ ಶೋಭಾ ಕರಂದ್ಲಾಜೆ, ಉದ್ಧವ್ ಠಾಕ್ರೆ ಅವರು ಬಾಳಾ ಸಹಾಬ್ ಠಾಕ್ರೆ ಪರಂಪರೆಯನ್ನು ಅನುವಂಶೀಕವಾಗಿ ಮುಂದುವರಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಶರಣಾಗಿದ್ದು ಅವರ ಆಲೋಚನೆಗಳನ್ನು ಎರವಲು ಪಡೆದುಕೊಂಡಿದ್ದಾರೆ ಎಂದು ಕಿರಿಕಾರಿದ್ದಾರೆ. ಇದು ಭಾರತ ದೇಶ ಎಂದಿಗೂ ಸಹಿಸದ ಅಧಪತನ, ಅವರು ಹಿಂದೂ ಭಾವನೆಗಳು ಮತ್ತು ಹಬ್ಬಗಳನ್ನು ಅಪಹಾಸ್ಯ ಮಾಡುವ ಮಟ್ಟಕ್ಕೆ ತಲುಪಿದ್ದಾರೆ! ಎಂದು ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ. ಕೋವಿಡ್ 19 ಲಾಕ್‌ಡೌನ್‌ನಿಂದಾಗಿ ಮುಚ್ಚಲಾಗಿದ್ದ ದೇಗುಲಗಳನ್ನು ಪೂಜೆಗೆ ಮುಕ್ತಗೊಳಿಸುವ ವಿಚಾರವಾಗಿ ಮುಖ್ತಮಂತ್ರಿ ಹಾಗೂ ಮಹಾರಾಷ್ಟ್ರ ರಾಜ್ಯಪಾಲರ ನಡುವೆ ಮಾತಿನ ಚಕಮುಕಿ ನಡೆದಿತ್ತು. ರಾಜ್ಯಪಾಲ ಕೋಶಿಯಾರಿ ಅವರು ಠಾಕ್ರೆ ಇದೀಗ ಜ್ಯಾತ್ಯತೀತರಾಗಿ ಬದಲಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ರಾಜ್ಯದಲ್ಲಿ ಬಾರ್, ರೆಸ್ಟೋರೆಂಟ್, ಬೀಚ್‌ಗಳನ್ನು ತೆರೆಯಲು ಅನುಮತಿನೀಡಲಾಗಿದ್ದರೂ ದೇವಸ್ಥಾನಗಲ್ಲಿ ಇನ್ನೂ ಲಾಕ್‌ಡೌನ್‌ನಲ್ಲಿ ಇಟ್ಟಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಉದ್ಧವ್ ಠಾಕ್ರೆ ನನಗೆ ಯಾರಿಂದಲೂ ಹಿಂದುತ್ವದ ಪ್ರಮಾಣ ಪತ್ರದ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ತೀವ್ರವಾಗಿ ಉದ್ದವ್ ಠಾಣೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
from India & World News in Kannada | VK Polls https://ift.tt/3jpI925