ಹಬ್ಬದ ವೇಳೆ ದೇಶ ಕಾಯುವ ಯೋಧರ ಬಗ್ಗೆ ಯೋಚನೆ ಇರಲಿ, ಅವರಿಗಾಗಿ ದೀಪ ಬೆಳಗಿ: ಪಿಎಂ ಮೋದಿ

ಹೊಸದಿಲ್ಲಿ: ಲಡಾಕ್‌ ಗಡಿಯಲ್ಲಿ ಚೀನಾ-ಭಾರತದ ನಡುವೆ ಬಿಕ್ಕಟ್ಟು ಏರ್ಪಟ್ಟಿರುವಂತಹ ಸಮಯದಲ್ಲೇ ಭಾರತೀಯ ಗಡಿಯಗಳನ್ನು ಕಾಪಾಡುವ ಭದ್ರತಾ ಪಡೆಗಳ ಬೆಂಬಲವಾಗಿ ತಮ್ಮ ತಮ್ಮ ಮನೆಗಳಲ್ಲಿ ದೀಪ ಬೆಳಗಿಸುವಂತೆ ಕರೆ ನೀಡಿದರು. ತಿಂಗಳ ಮನ್‌ ಕೀ ಬಾತ್‌ನಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ಮೋದಿ, ಕಾಯುತ್ತಿರುವ ವೀರ ಯೋಧರ ಬಗ್ಗೆ ನಾವು ಯೋಚನೆ ಮಾಡಬೇಕಿದೆ. ಹಬ್ಬದ ಸಮಯದಲ್ಲೂ ಭಾರತ ಮಾತೆಯ ಸುರಕ್ಷತೆಗಾಗಿ ಅವರು ಗಡಿ ಕಾಯುತ್ತಿರುತ್ತಾರೆ. ಹೀಗಾಗಿ ಭಾರತ ಮಾತೆಯ ಇಂತಹ ವೀರ ಪುತ್ರ ಹಾಗೂ ಪುತ್ರಿಯರಿಗೆ ನಾವು ದೀಪ ಬೆಳಗುವ ಮೂಲಕ ಗೌರವ ಸಲ್ಲಿಸಬೇಕಿದೆ ಎಂದು ತಿಳಿಸಿದರು. ಅಲ್ಲದೇ ಏಕತೆಯ ಬಗ್ಗೆ ಜನರಿಗೆ ತಿಳಿಸಿದ ಪ್ರಧಾನಿ ಮೋದಿ, "ಏಕತೆ ಶಕ್ತಿ, ಏಕತೆ ಪ್ರಗತಿ, ಏಕತೆ ಸಬಲೀಕರಣ, ಒಗ್ಗಟ್ಟಿನಿಂದ ನಾವು ಹೊಸ ಎತ್ತರವನ್ನು ಏರುತ್ತೇವೆ" ಎಂದು ಅವರು ಹೇಳಿದರು. ಅಲ್ಲದೇ ದೇಶವನ್ನು ಇಬ್ಬಾಗ ಮಾಡುವ ಕಾರ್ಯಗಳನ್ನು ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಇದೆ ವೇಳೆ ವಿಪಕ್ಷಗಳಿಗೆ ಟಾಂಗ್‌ ನೀಡಿದರು. ಇನ್ನು ಇದೆ ವೇಳೆ ಹಬ್ಬದ ಖರೀದಿ ವೇಳೆ ವೋಕಲ್‌ ಫಾರ್‌ ಲೋಕಲ್‌ ಎಂಬುವುದನ್ನು ನೆನಪಿಟ್ಟುಕೊಳ್ಳಿ ಎಂದಿರುವ ಪ್ರಧಾನಿ ಮೋದಿ ನಿಮ್ಮ ಆಚರಣೆಯಲ್ಲಿ ನೈರ್ಮಲ್ಯ ಕಾರ್ಮಿಕರು, ಭದ್ರತಾ ಸಿಬ್ಬಂದಿ, ಗೃಹ ಸಹಾಯಕರನ್ನು ಸೇರಿಸಿಕೊಳ್ಳುವ ಮೂಲಕ ಅವರ ಸೇವೆ ಮೌಲ್ಯಯುತವಾದುದು ಎನ್ನುವುದನ್ನು ತೋರಿಸಿಕೊಡಿ ಎಂದು ಕರೆ ನೀಡಿದ್ದಾರೆ. ಇನ್ನು ಸ್ಥಳೀಯ ಪಾಕಪದ್ಧತಿಗಳು, ಮಸಾಲೆಗಳು ಮತ್ತು ಸ್ಥಳೀಯ ಪದಾರ್ಥಗಳ ಭಾರತದ ಶ್ರೀಮಂತ ಸಂಪ್ರದಾಯದ ಬಗ್ಗೆ ಇತರರಿಗೆ ಮಾಹಿತಿ ನೀಡುವ ಮೂಲಕ ಏಕ್ ಭಾರತ್-ಶ್ರೇಷ್ಠ ಭಾರತ್ ಎನ್ನುವುದನ್ನು ಸಾರಿ ಹೇಳೋಣಾ ಎಂದು ಕೂಡ ಪ್ರಧಾನಿ ಮೋದಿ ಹೇಳಿದರು.


from India & World News in Kannada | VK Polls https://ift.tt/31CUpq7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...