ಬೆಂಗಳೂರು: ನಿಮ್ಮ ಆಡಳಿತವು ರೈತರಿಗೆ ಟಿಪ್ಪು ಆಡಳಿತದಂತಿತ್ತು, ಹೀಗಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ವಾಗ್ದಾಳಿ ನಡೆಸಿದೆ. ಟ್ವಿಟ್ಟರ್‌ನಲ್ಲಿ ಸಿದ್ದುಗೆ ಕುಟುಕಿದ ಬಿಜೆಪಿ ಸರ್ಕಾರ ರೈತ ವಿರೋಧಿಯಾಗಿತ್ತು ಎಂದು ಕಿಡಿಕಾರಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ನಡೆಸಿದ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ಬಿಜೆಪಿ, ನಿಮ್ಮ ಆಡಳಿತವು ರೈತರಿಗೆ ಟಿಪ್ಪು ಆಡಳಿತದಂತಿತ್ತು.ರೈತರ ಪಾಲಿಗೆ ಮರಣಕೂಪದಂತಿದ್ದ ನಿಮ್ಮ ಅವಧಿಯಲ್ಲಿ 3000 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡದ್ದು ದುರ್ದೈವ ಎಂದು ಕಿಡಿಕಾರಿದೆ. ಅಷ್ಟೇ ಅಲ್ಲದೆ ಅನ್ನದಾತರು ಸಾವಿಗೆ ಶರಣಾಗುತ್ತಿದ್ದರೆ ನೀವು ಮಾತ್ರ ನೆಮ್ಮದಿಯಾಗಿ ನಿದ್ರಿಸುತ್ತಿದ್ದಿರಿ, ಅಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಉತ್ತರ ಕರ್ನಾಟಕ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದು ಆಕ್ರೋಶದ ಬೆನ್ನಲ್ಲೇ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
from India & World News in Kannada | VK Polls https://ift.tt/3dS4bJS