from India & World News in Kannada | VK Polls https://ift.tt/2NKYcu1
ಮತ್ತೊಂದು ರಾಷ್ಟ್ರದಲ್ಲಿ ಹೂಡಿಕೆ ಮಾಡಿ ಆ ರಾಷ್ಟ್ರದ ಆಗುಹೋಗುಗಳಲ್ಲಿ ಮೂಗು ತೂರಿಸಬಹುದು ಎಂದು ಬಗೆದಿದ್ದ ಚೀನಾಗೆ, ಒಂದೊಂದೇ ರಾಷ್ಟ್ರಗಳು ಸೂಕ್ತ ತಿರುಗೇಟು ನೀಡುತ್ತಿವೆ. ಅದರಲ್ಲೂ ಹಾಂಕಾಂಗ್ ವಿವಾದಾತ್ಮಕ ಕಾನೂನು ಜಾರಿ ಹಾಗೂ ಭಾರತದೊಂದಿಗೆ ಹಿಂಸಾತ್ಮಕ ಗಡಿ ಘರ್ಷಣೆ ಬಳಿಕ ಜಾಗತಿಕವಾಗಿ ಚೀನಾ ವಿರೋಧಿ ಭಾವನೆ ಹೆಚ್ವಾಗುತ್ತಿದೆ. ಚೀನಾ ತನ್ನ ಆಕ್ರಮಣಕಾರಿ ನೀತಿಯನ್ನು ಕೈ ಬಿಡಬೇಆಕು ಎಂದು ಒತ್ತಾಯಿಸಿರುವ ಜಗತ್ತಿನ ಬಹುತೇಕ ರಾಷ್ಟ್ರಗಳು, ತನ್ನ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯತ್ತ ಗಮನಹರಿಸಬೇಕು ಎಂದು ಆಗ್ರಹಿಸಿವೆ. ಪ್ರಮುಖವಾಗಿ ಹಾಂಕಾಂಗ್‌ನಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಭದ್ರತಾ ಕಾನೂನು, ಅಲ್ಲಿನ ಜನತೆಯೆ ಮೇಲೆ ಮಾಡುತ್ತಿರುವ ದಬ್ಬಾಳಿಕೆಯಂದೇ ವಿಶ್ವದ ಬಹುತೇಕ ರಾಷ್ಟ್ರಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಇದೇ ಕಾರಣಕ್ಕೆ ವಿಶ್ವದ 27 ಪ್ರಮುಖ ರಾಷ್ಟ್ರಗಳು ಚೀನಾ ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿ ವಿಶ್ವಸಂಸ್ಥೆಗೆ ದೂರು ನೀಡಿವೆ. ಇನ್ನು ಭಾರತದೊಂದಿಗಿನ ಗಡಿ ತಕರಾರಿಗೆ ಸಂಬಂಧಿಸಿದಂತೆಯೂ ವಿಶ್ವದ ಬೆಂಬಲ ಭಾರತಕ್ಕಿದ್ದು, ಗಡಿ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡುವಂತೆ ಚೀನಾಗೆ ಪರೋಕ್ಷ ಸಂದೇಶ ರವಾನೆ ಮಾಡಲಾಗಿದೆ. ಪ್ರಮುಖವಾಗಿ ಅಮೆರಿಕ ಹಾಗೂ ಫ್ರಾನ್ಸ್ ಭಾರತಕ್ಕೆ ರಕ್ಷಣಾ ಬೆಂಬಲ ನೀಡುವುದಾಗಿ ಘೋಷಿಸಿರುವುದು ಗಮನಾರ್ಹವಾಗಿದೆ. ಹಾಗಾದರೆ ಚೀನಾ ವಿರುದ್ಧದ ಈ ಜಾಗತಿಕ ಒಗ್ಗಟ್ಟಿನತ್ತ ಗಮನಹರಿಸುವುದಾದರೆ...ಪ್ರಮುಖವಾಗಿ ಹಾಂಕಾಂಗ್‌ನಲ್ಲಿ ಚೀನಾ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಭದ್ರತಾ ಕಾನೂನಿಗೆ ವಿಶ್ವದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವದ 27 ಪ್ರಮುಖ ರಾಷ್ಟ್ರಗಳು ಚೀನಾ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿ ವಿಶ್ವಸಂಸ್ಥೆಗೆ ದೂರು ಸಲ್ಲಿಸಿವೆ.
ಪ್ರಮುಖವಾಗಿ ಬ್ರಿಟನ್, ಫ್ರಾನ್ಸ್, ಜರ್ಮನಿ ಹಾಗೂ ಜಪಾನ್ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳು ಚೀನಾ ವಿರುದ್ಧ ವಿಶ್ವಸಂಸ್ಥೆಗೆ ದೂರು ಸಲ್ಲಿಸಿದ್ದು, ಹಾಂಕಾಂಗ್ ಕಾನೂನು ಮರು ಪರಿಶೀಲನೆಗೆ ಒತ್ತಾಯಿಸಿವೆ.
ಚೀನಾ ವಿರುದ್ಧ ವಿಶ್ವಸಂಸ್ಥೆಗೆ 27 ರಾಷ್ಟ್ರಗಳ ದೂರು: ರಚನೆಯಾಗುತ್ತಿದೆ ಚೀನಾ ವಿರೋಧಿ ಜಾಗತಿಕ ಒಕ್ಕೂಟ?
ಚೀನಾ ಜಾರಿಗೆ ತರಲು ಉದ್ದೇಶಿಸಿರುವ ಕಾನೂನು ಹಾಂಕಾಂಗ್ ಜನತೆಯ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ ಎಂದು ಈ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ.
ಇನ್ನು ಲಡಾಖ್ ಗಡಿಯಲ್ಲಿ ಸಂಭವಿಸಿರುವ ಭೀಕರ ಹಿಂಸಾತ್ಮಕ ಘರ್ಷಣೆಯನ್ನು ಖಂಡಿಸಿರುವ ಫ್ರಾನ್ಸ್, ಭಾರತೀಯ ಸೈನಿಕರ ಸಾವಿಗೆ ಕಂಬನಿ ಮಿಡಿದಿದೆ. ಈ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ದೂರವಣಿ ಕರೆ ಮಾಡಿ ಮಾತನಾಡಿರುವ ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ, ಚೀನಾದ ನಡೆಯನ್ನು ಖಂಡಿಸಿದ್ದಾರೆ.
ಭಾರತದ ಬಲಕ್ಕೆ ಫ್ರಾನ್ಸ್ ಸೇನೆ, ಸಶಸ್ತ್ರ ಪಡೆಗಳೊಂದಿಗೆ ನೆರವಿಗೆ ಧಾವಿಸುವ ವಾಗ್ದಾನ
ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಜೊತೆ ಫ್ರಾನ್ಸ್ ಅಚಲವಾಗಿ ನಿಲ್ಲುತ್ತದೆ. ಸ್ನೇಹದ ಬೆಂಬಲ ನೀಡುತ್ತದೆ. ಅಗತ್ಯ ಬಿದ್ದರೆ ನಮ್ಮ ಸಶಸ್ತ್ರ ಪಡೆಗಳು ಭಾರತದ ಬೆಂಬಲಕ್ಕೆ ಧಾವಿಸಲಿವೆ ಎಂದೂ ಪಾರ್ಲೆ ಭರವಸೆ ನೀಡಿದ್ದಾರೆ.
ಇನ್ನು ಭಾರತ-ಚೀನಾ ಗಡಿ ಘರ್ಷಣೆ ವಿಷಯದಲ್ಲಿ ಈಗಾಗಲೇ ಭಾರತಕ್ಕೆ ಬೆಂಬಲ ಸೂಚಿಸಿರುವ ಅಮೆರಿಕ, ಬಾರತಕ್ಕೆ ಯಾವುದೇ ರೀತಿಯ ನೆರವು ನೀಡಲು ಸಿದ್ಧ ಎಂದು ಘೋಷಿಸಿದೆ. ಇದಕ್ಕೂ ಒಂದು ಹೆಜ್ಜೆ ಮುಮದೆ ಹೋಗಿರುವ ಅಮೆರಿಕ, ಚೀನಾ ಸೇನೆಯ ಅಪಾಯ ಎದುರಿಸಲು ಜಾಗತಿಕವಾಗಿ ಸೇನೆ ರವಾನೆ ಮಾಡಲು ಯೋಚಿಸುತ್ತಿರುವುದಾಗಿ ಹೇಳಿದೆ.
ಚೀನಾ ಅಪಾಯ ಎದುರಿಸಲು ಜಾಗತಿಕವಾಗಿ ಸೇನೆ ರವಾನೆಗೆ ಚಿಂತನೆ: ಅಮೆರಿಕ ಘೋಷಣೆ!
ಜರ್ಮನಿಯಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ತಯಾರಿ ನಡೆಸಿರುವ ಅಮೆರಿಕ, ಈ ಪೈಕಿ ಕೆಲವು ತುಕಡಿಗಳನ್ನು ಮಾಜಿ ಸೋವಿಯತ್ ಯೂನಿಯನ್ ರಾಷ್ಟ್ರಗಳಿಗೂ ಹಾಗೂ ದಕ್ಷಿಣ ಏಷ್ಯಾದಲ್ಲಿ ಚೀನಾ ಸೇನೆಯ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ರವಾನಿಸಲು ಗಂಭೀರ ಚಿಂತನೆ ನಡೆಸಿದೆ.
ರಾಷ್ಟ್ರವೊಂದನ್ನು ಹೂಡಿಕೆಯ ಮೂಲಕ ಅಥವಾ ಸೈನ್ಯ ಕಾರ್ಯಾಚರಣೆ ಮೂಲಕ ಮಣಿಸಬಹುದು ಎಂದು ಸೊಕ್ಕಿನಿಂದ ಬೀಗುತ್ತಿರುವ ಚೀನಾಗೆ ಜಾಗತಿಕ ಎಚ್ಚರಿಕೆಯ ಕರೆಗಂಟೆ ಕೇಳಿಸದೇ ಇರದು. ತನ್ನ ವಿರುದ್ಧ ಜಾಗತಿಕ ಒಕ್ಕೂಟ ರಚನೆಯಾಗುತ್ತಿರುವುದನ್ನು ಮನಗಂಡಿರುವ ಚೀನಾಗೆ, ಸೌಮ್ಯ ವರ್ತನೆ ತೋರದೇ ಬೇರೆ ಮಾರ್ಗವಿಲ್ಲ.
G-7 ಶೃಂಗಸಭೆಗೆ ಮೋದಿ ಅವರನ್ನು ಆಹ್ವಾನಿಸಿದ ಟ್ರಂಪ್!
ಈಗಾಗಲೇ G-7 ಶೃಂಗಸಭೆಗೆ ಭಾರತವೂ ಸೇರಿದಂತೆ ನಾಲ್ಕು ಹೊಸ ರಾಷ್ಟ್ರಗಳಿಗೆ ಆಹ್ವಾನ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ವಿರೋಧಿ ಒಕ್ಕೂಟ ರಚನೆಗೆ ಅಡಿಪಾಯ ಹಾಕಿದ್ದಾರೆ. ಇದೀಗ ಹಾಂಕಾಂಗ್ ಕಾನೂನು ಮತ್ತು ಭಾರತದೊಂದಿಗಿನ ಗಡಿ ತಕರಾರು ಈ ಒಕ್ಕೂಟ ರಚನೆಗೆ ಮತ್ತಷ್ಟು ವೇಗ ನೀಡಿದ್ದು, ಚೀನಾ ಜಾಗತಿಕವಾಗಿ ಒಬ್ಬಂಟಿಯಾಗುವುದರಲ್ಲಿ ಸಂದೇಹವೇ ಇಲ್ಲ.
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗುತ್ತಿದೆ. ಸೋಂಕು ನಿಯಂತ್ರಣ ಮಾಡಲು ಸರ್ಕಾರವೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಸಚಿವರುಗಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಸೋಂಕು ನಿಯಂತ್ರಣ ಮೀರಿ ಹರಡುತ್ತಿದೆ. ಇದೇ ಸಂದರ್ಭದಲ್ಲಿ ಕೋವಿಡ್ ನಿರ್ವಹಣೆ ವಿಚಾರವಾಗಿ ಬಿಎಸ್‌ವೈ ಸಂಪುಟದ ಇಬ್ಬರು ಸಚಿವರ ನಡುವಿನ ಶೀತಲ ಸಮರ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಕೋವಿಡ್‌ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸಚಿವರ ನಡುವಿನ ಮುಸುಕಿನ ಗುದ್ದಾಟ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೂ ತಲೆ ನೋವಾಗಿ ಪರಿಣಮಿಸಿದೆ. ಈ ಕುರಿತಾದ ವಿವರ ಇಲ್ಲಿದೆ. ಮುಖ್ಯಮಂತ್ರಿ ಕಿಂಗ್, ನಾನು ಇಲಾಖೆ ಮಿನಿಸ್ಟರ್: ಸಚಿವ ಸುಧಾಕರ್ರಾಜ್ಯದಲ್ಲಿ ಕೊರೊನಾ ಸೋಂಕು ಆರಂಭಿಕ ಹಂತದಲ್ಲಿ ಇರುವ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಲು ಇಬ್ಬರು ಸಚಿವರಿಗೆ ಸಿಎಂ ಬಿಎಸ್‌ವೈ ಹೊಣೆಗಾರಿಕೆ ನೀಡಿದ್ದರು. ಆದರೆ ಬಹಿರಂಗವಾಗಿ ಇಬ್ಬರು ಸಚಿವರು ನೀಡುತ್ತಿರುವ ಅಂಕಿ ಅಂಶಗಳು ಹಾಗೂ ಮಾಹಿತಿಗಳು ಗೊಂದಲದಿಂದ ಕೂಡಿದ್ದವು. ಒಬ್ಬರು ಒಂದು ಹೇಳಿದರೆ ಮತ್ತೊಬ್ಬರು ಬೇರೆಯದ್ದೇ ಹೇಳುತ್ತಿದ್ದರು. ಈ ಗೊಂದಲ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೊರೊನಾ ನಿರ್ವಹಣೆ ಹೊಣೆಗಾರಿಕೆಯನ್ನು ಸುಧಾಕರ್ ಅವರಿಗೆ ನೀಡಲಾಯಿತು. ಆದರೆ ಇದಕ್ಕೆ ಶ್ರೀರಾಮುಲು ವಿರೋಧ ವ್ಯಕ್ತಪಡಿಸಿದರು. ಮತ್ತೆ ಆದೇಶವನ್ನು ಬದಲಾಯಿಸಿ ಬೆಂಗಳೂರು ಉಸ್ತುವಾರಿ ಸುಧಾಕರ್ ಹೆಗಲಿಗೆ ರಾಜ್ಯ ಉಸ್ತುವಾರಿ ಶ್ರೀರಾಮುಲು ಹೆಗಲಿಗೆ ನೀಡಲಾಯಿತು. ಹೀಗಿದ್ದರೂ ಸುಧಾಕರ್ ಎಲ್ಲವನ್ನೂ ನಿಭಾಯಿಸುತ್ತಿರುವುದು ಶ್ರೀರಾಮುಲು ಅಸಮಾಧಾನಕ್ಕೆ ಕಾರಣವಾಗಿದೆ. ಈ ಎಲ್ಲದರ ನಡುವೆ ಸುರೇಶ್ ಅವರಿಗೆ ಮಾಧ್ಯಮಗಳಿಗೆ ಮಾಹಿತಿ ನೀಡುವ ಹೊಣೆಗಾರಿಕೆ ನೀಡಲಾಯಿತು.
ಸುಧಾಕರ್ ಹಾಗೂ ಶ್ರೀರಾಮುಲು ನಡುವಿನ ಶೀತಲ ಸಮರ ಒಂದು ಕಡೆಯಾದರೆ ಇದೀಗ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಸುಧಾಕರ್ ನಡುವಿನ ಮತ್ತೊಂದು ಸುತ್ತಿನ ಶೀತಲ ಸಮರ ಆರಂಭವಾಗಿದೆ. ಸುಧಾಕರ್ ಪತ್ನಿ, ಪುತ್ರಿ ಹಾಗೂ ತಂದೆಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಧಾಕರ್ ಅವರು 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದರು. ಅವರ ಕೊರೊನಾ ತಪಾಸಣೆ ನೆಗೆಟಿವ್ ಬಂದಿದೆ. ಇವರ ಅನುಪಸ್ಥಿತಿಯಲ್ಲಿ ಕೊರೊನಾ ನಿರ್ವಹಣೆ ಹೊಣೆಗಾರಿಕೆಯನ್ನು ಸಚಿವ ಆರ್. ಅಶೋಕ್‌ಗೆ ನೀಡಲಾಯಿತು. ಅಶೋಕ್ ಕೂಡ ಹುಮ್ಮಸ್ಸಿನಿಂದಲೇ ಕೆಲಸ ಆರಂಭಿಸಿದರು. ಸರಣಿ ಪತ್ರಿಕಾಗೋಷ್ಠಿಗಳನ್ನು ನಡೆಸುವ ಮೂಲಕ ಹಾಗೂ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಸಿಗೆ ಸಂಖ್ಯೆಗಳ ಹೆಚ್ಚಳ, ಖಾಸಗಿ ಆಸ್ಪತ್ರೆಗಳ ಜೊತೆಗೆ ಮಾತುಕತೆ ಎಲ್ಲವನ್ನು ನಿಭಾಯಿಸಿದರು. ಆದರೆ ಇದೀಗ ಮತ್ತೆ ಸುಧಾಕರ್ ಎಂಟ್ರಿಯಾಗಿದೆ. ಆದರೆ ಕೊರೊನಾ ಉಸ್ತುವಾರಿ ನನಗೇ ನೀಡಲಾಗಿದೆ ಎನ್ನುತ್ತಿದ್ದಾರಂತೆ ಅಶೋಕ್.
ಕೊರೊನಾ ಸಂಕಷ್ಟಕ್ಕೆ ಹೋಟೆಲ್ ಮಾರಾಟಕ್ಕಿಟ್ಟ ಮಾಲೀಕರು, ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಒಟ್ಟಿನಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕು ನಿರ್ವಹಣೆಯ ಉಸ್ತುವಾರಿ ಯಾರು ಎಂಬವುದೇ ಗೊಂದಲದಿಂದ ಕೂಡಿದೆ. ಶ್ರೀರಾಮುಲು, ಸುಧಾಕರ್, ಆರ್. ಅಶೋಕ್, ಸುರೇಶ್ ಕುಮಾರ್ ಹೀಗೆ ಎಲ್ಲರೂ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾರೆ. ತಮ್ಮದೇ ಮಾಹಿತಿಗಳನ್ನು ನೀಡುತ್ತಾ ಬಂದಿದ್ದಾರೆ. ಇವರ ನಡುವಿನ ತಿಕ್ಕಾಟ ಜನರಲ್ಲೂ ಗೊಂದಲ ಮೂಡಿಸುವಂತೆ ಮಾಡಿದೆ. ವಿರೋಧ ಪಕ್ಷಗಳು ಈ ಬಗ್ಗೆ ಧ್ವನಿ ಎತ್ತಲು ಆರಂಭಿಸಿದೆ. ಸಚಿವರ ನಡುವಿನ ಶೀತಲ ಸಮರಗಳಿಂದ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಹಾಗೂ ನಿರ್ವಹಣೆಯಲ್ಲೂ ತೊಂದರೆ ಉಂಟಾಗುತ್ತಿದೆ. ಸದ್ಯ ಕೋವಿಡ್ ಉಸ್ತುವಾರಿ ಯಾರು ಎಂಬುವುದನ್ನು ಸಿಎಂ ಬಿಎಸ್‌ವೈ ಸ್ಪಷ್ಟಪಡಿಸಬೇಕು.
ಸಚಿವರ ನಡುವಿನ ಶೀತರ ಸಮರ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅಧಿಕಾರಿಗಳಿಗೂ ಸಂಕಟ ತಪ್ಪಿದ್ದಲ್ಲ. ಇಲಾಖೆಗಳ ನಡುವಿನ ಸಮನ್ವಯತೆ ಇಂತಹ ಸಂದರ್ಭದಲ್ಲಿ ಅತ್ಯಗತ್ಯ. ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ, ಸಾರಿಗೆ ಇಲಾಖೆ ಹೀಗೆ ಎಲ್ಲವೂ ಪರಸ್ಪರ ಸಮನ್ವಯತೆಯಿಂದ ಸಾಗಬೇಕಾಗಿದೆ. ಆದರೆ ಸಚಿವರ ನಡುವಿನ ಮುಸುಕಿನ ಗುದ್ದಾಟದಿಂದ ಅಧಿಕಾರಿಗಳಿಗೆ ತಮ್ಮ ಕಾರ್ಯ ನಿರ್ವಹಣೆ ಮಾಡಲು ಸಮಸ್ಯೆ ಆಗುತ್ತಿದೆ ಎಂಬ ಮಾಹಿತಿಯೂ ಇದೆ. ಈ ನಿಟ್ಟಿನಲ್ಲಿ ಸಿಎಂ ಬಿಎಸ್‌ವೈ ಈ ಸಮಸ್ಯೆಯನ್ನು ಸರಿಪಡಿಸಬೇಕಾಗಿದೆ. ಸಚಿವರು ಇಂತಹ ಸಂದರ್ಭದಲ್ಲಿ ವೈಯಕ್ತಿಕ ಇಗೋಗಳನ್ನು ದೂರವಿಟ್ಟು ತಮ್ಮ ಜಾವಾಬ್ದಾರಿಯನ್ನು ನಿರ್ವಹಣೆ ಮಾಡಬೇಕಾಗಿದೆ.
 ಸಂಗಮೇಶ ಟಿ. ಚೂರಿ ವಿಜಯಪುರ ಮಾರ್ಚ್ 2ನೇ ವಾರದಲ್ಲಿ ಕೊರೊನಾ ಮಾರಿ ದೇಶವ್ಯಾಪಿ ಹೆಚ್ಚಾಗಿದ್ದೇ ತಡ. ಕೇಂದ್ರ ಸರಕಾರ ದೇಶಾದ್ಯಂತ ಲಾಕ್‌ಡೌನ್ ಹೇರಿತು. ಈ ನೆಪದಲ್ಲಿ ಇತರೇ ಸರಕಾರಿ ನೌಕರರು ಹಾಗೂ ಸಾರ್ವಜನಿಕರು ಮನೆ ಬಿಟ್ಟು ಹೊರಬರಲಿಲ್ಲ. ಎಲ್ಲರೂ ಮನೆಯಲ್ಲಿರಿ, ಆರಾಮಾಗಿರಿ ಎಂಬ ಸರಕಾರದ ಮಂತ್ರ ಪಠಿಸುತ್ತ ಪ್ರತಿಯೊಬ್ಬರೂ ವಿಶ್ರಾಂತಿಗೆ ಜಾರಿದರು. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರ ಕೊರೊನಾ ವಿರುದ್ಧ ಸಮರವನ್ನೇ ಸಾರಿದರು. ಕಳೆದ 3 ತಿಂಗಳಿನಿಂದ ಇಲ್ಲಿಯವರೆಗೆ ವೈದ್ಯರು, ಪುರುಷ ಮತ್ತು ಮಹಿಳಾ ಆರೋಗ್ಯ ಸಹಾಯಕರು, ಟೆಕ್ನಿಶಿಯನ್ಸ್, ಆಶಾಗಳು ಒಂದೇ ಒಂದು ದಿನವೂ ರಜೆ ಮಾಡದೇ ಸಾರ್ವಜನಿಕರ ಅಮೂಲ್ಯ ಜೀವನ ಉಳಿಸಿಕೊಳ್ಳುವುದಕ್ಕೆ ತಮ್ಮ ಜೀವನ ಮುಡಿಪಾಗಿಟ್ಟು ಶ್ರಮಿಸುತ್ತಿದ್ದಾರೆ.ಡಾ| ಬಿ. ಸಿ. ರಾಯ್ ಅವರ ಜನ್ಮದಿನವಾದ ಜುಲೈ 1ರಂದು ದೇಶದಲ್ಲಿ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ವೈದ್ಯರ ದಿನಾಚರಣೆಯ ವೇಳೆ ವೈದ್ಯರನ್ನು ಸನ್ಮಾನಿಸುವ ಮೂಲಕ ಅವರನ್ನು ಗೌರವಿಸಲಾಗುತ್ತದೆ.
ಕೊರೊನಾ ವೈರಾಣು ಭೀತಿ ಎಲ್ಲರನ್ನು ಆವರಿಸಿದೆ. ಹೀಗಾಗಿ ಅಪರಿಚಿತ ವ್ಯಕ್ತಿಗಳನ್ನು ಕಂಡರೆ ಮಾರುದ್ದ ಜಿಗಿಯುವವರೇ ಅಧಿಕವಾಗಿದ್ದಾರೆ. ಆದರೆ ವೈದ್ಯರು ಮಾತ್ರ ತಮ್ಮ ಹಿಂದಿರುವ ಕುಟುಂಬದ ಹಿತಾಸಕ್ತಿ ಕಡೆಗಣಿಸಿ, ತಮ್ಮ ಜೀವದ ಹಂಗು ತೊರೆದು, ಕೊರೊನಾ ರೋಗಿಗಳನ್ನು ಉಪಚರಿಸುತ್ತಿರುವುದು ನಿಜಕ್ಕೂ ಪುಣ್ಯದ ಕೆಲಸವಾಗಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಜಿಲ್ಲೆಯಾದ್ಯಂತ 105 ಸರಕಾರಿ ವೈದ್ಯರು, 35 ಗುತ್ತಿಗೆ ಆಧಾರದ ವೈದ್ಯರಿದ್ದಾರೆ. ಈ ಪೈಕಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 60 ವೈದ್ಯರು, ನಿತ್ಯ ಕೊರೊನಾ ರೋಗಿಗಳ ಮಧ್ಯೆ ಇದ್ದುಕೊಂಡೇ ಅವರನ್ನು ಉಪಚರಿಸುತ್ತಿರುವುದು ವಿಶೇಷ. ಈ ಆಸ್ಪತ್ರೆಯಲ್ಲಿ 100 ಸ್ಟಾಫ್ ನರ್ಸ್ ಗಳು, ಲ್ಯಾಬ್ ಟೆಕ್ನಿಶಿಯನ್‌ಗಳು ವೈದ್ಯರಿಗೆ ಸಾಥ್ ನೀಡುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುತ್ತಿದ್ದಾರೆ.
ಈ ವೈದ್ಯರೊಟ್ಟಿಗೆ ಡಿಎಚ್‌ಒ ಸೇರಿದಂತೆ 11ಜನ ನಾನಾ ಕಾರ್ಯಕ್ರಮಾಧಿಕಾರಿಗಳು, ತಮ್ಮ ಕುಟುಂಬಗಳ ಹಿತಾಸಕ್ತಿ ಬದಿಗೊತ್ತಿ, ಸಾರ್ವಜನಿಕ ಸೇವೆಯಲ್ಲಿ ಜನಾರ್ಧನನ್ನು ಕಾಣುತ್ತಿದ್ದಾರೆ. ಕಳೆದ 3 ತಿಂಗಳಿನಿಂದ ಕುಟುಂಬವನ್ನೇ ತೊರೆದು, ಖಾಸಗಿ ಇಲ್ಲವೇ ಸರಕಾರಿ ವಸತಿ ಗೃಹದಲ್ಲಿರುವ ಮೂಲಕ ಸದಾ ಕೊರೊನಾ ವಿರುದ್ಧ ವಿಶ್ರಮಿಸದೇ ದುಡಿಯುತ್ತಿದ್ದಾರೆ. ಇದರಿಂದಾಗಿ ಇತರೇ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ಕೊರೊನಾ ಕಾಟದ ಉಪಟಳಕ್ಕೆ ಕೊಂಚ ಬ್ರೇಕ್ ನೀಡಿದ್ದು ವಿಶೇಷ. ಇವರೊಟ್ಟಿಗೆ ಜಿಲ್ಲೆಯಾದ್ಯಂತ 279 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, 240 ಪುರುಷ ಆರೋಗ್ಯ ಸಹಾಯಕರು ವೈದ್ಯರಿಗೆ ಬೆನ್ನಿಗೆ ನಿಂತು ಸೇವೆ ಸಲ್ಲಿಸುತ್ತಿದ್ದಾರೆ.
ಇವರೆಲ್ಲಗಿಂತಲೂ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರಂತೂ ವೈದ್ಯರು, ಆರೋಗ್ಯ ಸಹಾಯಕರಿಗೇನೂ ಕಮ್ಮಿಯಿಲ್ಲ. ಜಿಲ್ಲೆಯಾದ್ಯಂತ 1800 ಆಶಾ ಕಾರ್ಯಕರ್ತರು ಪ್ರತಿ ಹಳ್ಳಿ, ಓಣಿಗಳಲ್ಲಿ ಸೋಂಕಿತರ ಆರೈಕೆ ಹಾಗೂ ಅವರ ಮೇಲೆ ನಿಗಾ ಇಟ್ಟು ಕೆಲಸ ಮಾಡುತ್ತಿದ್ದಾರೆ. ಪಾಸಿಟಿವ್ ರೋಗಿಗಳು ನೀಡುತ್ತಿರುವ ಕಿರುಕುಳ ಹಾಗೂ ಅವರ ವಕ್ರ ದೃಷ್ಟಿಕೋನ ಸಹಿಸಿಕೊಂಡು, ಕೊರೊನಾ ವಿರುದ್ಧ ಸಮರ ಸಾರಿದ್ದು ವಿಶೇಷ. ಸರಕಾರದ ಸೂಚನೆಯಂತೆ ಸರಕಾರಿ ವೈದ್ಯರಿಗೆ ಸಾಥ್ ನೀಡಲು ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆ ವೈದ್ಯರು ಮುಂದೆ ಬಂದಿದ್ದು ವಿಶೇಷ.
ಕಳೆದ 3.5 ತಿಂಗಳಿನಿಂದ ನಮ್ಮ ವೈದ್ಯರು, ದಾದಿಯರು, ಆರೋಗ್ಯ ಸಹಾಯಕರು, ಲ್ಯಾಬ್ ಟೆಕ್ನಿಶಿಯನ್ಸ್ ಹಾಗೂ ಆಶಾಗಳು ಕುಟುಂಬದ ಹಿತಾಸಕ್ತಿಯನ್ನೇ ಮರೆತು, ಕೊರೊನಾ ರೋಗಿಗಳನ್ನು ಉಪಚರಿಸುತ್ತಿದ್ದಾರೆ. ಪಾಸಿಟಿವ್ ವ್ಯಕ್ತಿ ಎಂದರೆ ಮಾರುದ್ದ ಸರಿಯುವ ಜನಸಾಮಾನ್ಯರ ಮಧ್ಯೆ ನಮ್ಮ ಸಿಬ್ಬಂದಿ ಜೀವದ ಹಂಗು ತೊರೆದು, ಕೆಲಸ ಮಾಡುತ್ತಿರುವುದು ಪ್ರಶಂಸನೀಯ. ವೈದ್ಯೋ ನಾರಾಯಣಃ ಹರಿಃ ಎಂಬುದು ಕೊರೊನಾ ಕಾಲ ಘಟ್ಟದಲ್ಲಿಸಾಬೀತಾದಂತಾಗಿದೆ.
ಡಾ. ಮಹೇಂದ್ರ ಕಾಪ್ಸೆ, ಡಿಎಚ್‌ಒ, ವಿಜಯಪುರ
ನಾನು ಸೇರಿದಂತೆ ನಮ್ಮೆಲ್ಲ ವೈದ್ಯರು ದಣಿವರಿಯದೇ ಕೊರೊನಾ ರೋಗಿಗಳನ್ನು ಉಪಚರಿಸುತ್ತಿದ್ದೇವೆ. ಅನಾರೋಗ್ಯಕ್ಕೆ ತುತ್ತಾದ ಕೆಲ ವೈದ್ಯರು ಹಾಗೂ ಸ್ಟಾಫ್ ನರ್ಸಗಳಷ್ಟೇ ರಜೆ ಪಡೆದಿದ್ದನ್ನು ಬಿಟ್ಟರೆ, ನಮ್ಮ ಆಸ್ಪತ್ರೆಯಲ್ಲಿ ಬಹುತೇಕರು ಒಂದೇ ದಿನವೂ ರಜೆ ಮಾಡದೇ ಕೆಲಸ ಮಾಡುತ್ತಿದ್ದಾರೆ. ಅದು ನಮ್ಮೆಲ್ಲರ ಕರ್ತವ್ಯವಾಗಿದೆ.
ಡಾ. ಶರಣಪ್ಪ ಕಟ್ಟಿ, ಜಿಲ್ಲಾಶಸ್ತ್ರಚಿಕಿತ್ಸಕ, ಜಿಲ್ಲಾಸ್ಪತ್ರೆ, ವಿಜಯಪುರ
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ನಾಯಕ ಮಸೂದ್‌ನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದುಹಾಕಿದ್ದಾರೆ. ಈತ ಜಮ್ಮು ಪ್ರಾಂತ್ಯದಿಂದ ಬಂದ ಹಾಗೂ ದೋಡಾ ಜಿಲ್ಲೆಯಲ್ಲಿದ್ದ ಏಕೈಕ ಟೆರರಿಸ್ಟ್ ಆಗಿದ್ದ. ದೋಡಾದಲ್ಲಿ ಒಂದು ರೇಪ್ ಪ್ರಕರಣದ ಬಳಿಕ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಈತ ನಂತರ ಹಿಜ್ಬುಲ್ ಸೇರಿ ಉಗ್ರವಾದದಲ್ಲಿ ಪಳಗಿ ಅವರ ನಾಯಕನಾಗಿದ್ದ. ಜಮ್ಮುವಿನಲ್ಲಿ ಭಯೋತ್ಪಾದನೆಯನ್ನು ಹಂತಹಂತವಾಗಿ ನಿವಾರಿಸುತ್ತ ಬಂದ ಪೊಲೀಸರ ಕ್ರಮದಿಂದ ಅನಿವಾರ‍್ಯವಾಗಿ ತನ್ನ ಕಾರಾರಯಚರಣೆಯನ್ನು ಕಾಶ್ಮೀರಕ್ಕೆ ಸ್ಥಳಾಂತರಿಸಿದ್ದ ಇವನ ನಿಗ್ರಹದಿಂದಾಗಿ, ಜಮ್ಮುವಿನಲ್ಲಿ ಉಗ್ರ ನೆಲೆಗಳು ಸಂಪೂರ್ಣ ನಾಶವಾದಂತೆ ಆಗಿದೆ.ನೂರಕ್ಕೂ ಹೆಚ್ಚು ಉಗ್ರರು ಹತ:ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಮಂದಿ ಉಗ್ರರನ್ನು ಭಾರತದ ಅರೆಸೇನಾಪಡೆ, ಯೋಧರು ಮತ್ತು ಪೊಲೀಸರು ಕಾರ್ಯಾಚರಣೆಗಳಲ್ಲಿಕೊಂದು ಹಾಕಿದ್ದಾರೆ. ಇದರಿಂದ ಭೀತವಾಗಿರುವ ಪಾಕಿಸ್ತಾನ, 'ಕಾಶ್ಮೀರದಲ್ಲಿಮುಗ್ಧರನ್ನು ಕೊಲ್ಲಲಾಗುತ್ತಿದೆ' ಎಂದು ಅಂತಾರಾಷ್ಟ್ರೀಯ ವಲಯದಲ್ಲಿ ಪ್ರಲಾಪ ಎಬ್ಬಿಸಿತ್ತು. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಹರೆಯನ್ನು ಬಿಗಿ ಮಾಡಿದ್ದ ಭಾರತದ ಗಡಿ ಭದ್ರತಾ ಪಡೆ, ಪಾಕ್ ಆಕ್ರಮಿತ ಕಾಶ್ಮೀರದ ತರಬೇತಿ ಕ್ಯಾಂಪ್‌ಗಳಿಂದ ಒಂದು ಸೊಳ್ಳೆಯೂ ಒಳಗೆ ನುಸುಳದಂತೆ ನೋಡಿಕೊಂಡಿತ್ತು. ಇದರಿಂದಲೂ ಉಗ್ರರು ಹತಾಶರಾಗಿದ್ದಾರೆ. ಈ ತಿಂಗಳಲ್ಲಿಯೇ ಉಗ್ರರ ಫಲವತ್ತಾದ ನೆಲವಾದ ದಕ್ಷಿಣ ಕಾಶ್ಮೀರದಲ್ಲಿ ನಲುವತ್ತು ಉಗ್ರರನ್ನು ಕೊಲ್ಲಲಾಗಿದೆ. ಇವರಲ್ಲಿ ಹೆಚ್ಚಿನವರು ಹಿಜ್ಬುಲ್ ಮುಜಾಹಿದೀನ್, ಜೈಶೆ ಮೊಹಮ್ಮದ್, ಲಷ್ಕರೆ ತಯ್ಬಾಗಳ ಕಮಾಂಡರ್‌ಗಳು.ಮಸೂದ್ ಹತ್ಯೆಯ ಬಳಿಕ ದೋಡಾ ಜಿಲ್ಲೆಯನ್ನು ಪೊಲೀಸರು 'ಉಗ್ರಮುಕ್ತ' ಎಂದು ಘೋಷಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಟ್ರಾಲ್ ಪ್ರದೇಶವನ್ನು ಭಯೋತ್ಪಾದಕ ಮುಕ್ತ ಎಂದು ಘೋಷಿಸಲಾಗಿತ್ತು. 1989ರ ಬಳಿಕ ಇದೇ ಮೊದಲ ಬಾರಿಗೆ ಈ ಪ್ರದೇಶ ಯಾವುದೇ ಭಯೋತ್ಪಾದನೆಯಿಂದ ಮುಕ್ತವಾಗಿದೆ. ಈ ಟ್ರಾಲ್ ಪ್ರದೇಶ, ಹಿಜ್ಬುಲ್ ಸಂಘಟನೆಯ ಪೋಸ್ಟರ್ ಬಾಯ್ ಆಗಿದ್ದ, ಕಾಶ್ಮೀರದಲ್ಲಿ ದೊಡ್ಡ ಸಂಖ್ಯೆಯ ಯುವಕರನ್ನು ಭಯೋತ್ಪಾದನೆಯತ್ತ ಆಕರ್ಷಿಸಿದ್ದ ಬುರ್ಹಾನ್ ವಾನಿಯ ತವರು ಆಗಿತ್ತು. 2016ರ ಜುಲೈಯಲ್ಲಿಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿಯ ಎನ್‌ಕೌಂಟರ್ ನಡೆಯಿತು. ಈ ಎನ್‌ಕೌಂಟರ್ ವಿರೋಧಿಸಿ ಪ್ರತ್ಯೇಕತಾವಾದಿಗಳು ನಡೆಸಿದ ಕಾಶ್ಮೀರ ಬಂದ್ ವೇಳೆ ಆರಂಭವಾದ ಹಿಂಸಾಚಾರ, ಕಫ್ರ್ಯೂ ಹೇರಿಕೆ ಸುಮಾರು 50 ದಿನ ನಡೆಯಿತು. ಅಸ್ತಿತ್ವ ಕಳೆದುಕೊಂಡಿದ್ದ ಪ್ರತ್ಯೇಕತಾವಾದಿಗಳು ವಾನಿಯ ಎನ್‌ಕೌಂಟರನ್ನೇ ನೆಪವಾಗಿಟ್ಟುಕೊಂಡು ಮತ್ತೆ ಚಿಗುರಲು ಯತ್ನಿಸಿದರು.
ಹಿಜ್ಬುಲ್ ಕಮಾಂಡರ್ ಹತ: ದೋಡಾ ಜಿಲ್ಲೆ ಭಯೋತ್ಪಾದನೆ ಮುಕ್ತ ಎಂದು ಘೋಷಣೆ!
ಕಳೆದ ಸೆಪ್ಟೆಂಬರ್‌ನಲ್ಲಿ ಕಾಶ್ಮೀರದಲ್ಲಿಆರ್ಟಿಕಲ್ 370ಯನ್ನು ರದ್ದುಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ, ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ಬಗ್ಗೆ ಇನ್ನಷ್ಟು ಕಠಿಣ ನಿಲುವನ್ನು ಕೇಂದ್ರ ಸರಕಾರ ತೆಗೆದುಕೊಂಡಿದೆ. ಮಾತುಕತೆಗೆ ಸಿದ್ಧ ಎಂದು ಮೊದಲು ಹೇಳಿದ್ದರೂ, ಉಗ್ರರ ಚಟುವಟಿಕೆ ಬಿಗಡಾಯಿಸಿದಂತೆ, ತಾನೂ ಬಿಗಿ ನಿಲುವನ್ನು ತಳೆಯಿತು. ಕಣಿವೆಯಲ್ಲಿಸಕ್ರಿಯವಾಗಿದ್ದ ಹಿಜ್ಬುಲ್ ಮುಜಾಹಿದೀನ್, ಲಷ್ಕರೆ ತಯ್ಬಾ ಮುಂತಾದ ಸಂಘಟನೆಗಳ ಭಯೋತ್ಪಾದಕರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲು ಆರಂಭಿಸಿತು. ಜಮ್ಮು ಕಾಶ್ಮೀರದಲ್ಲಿಅಭಿವೃದ್ಧಿ ಚಟುವಟಿಕೆ ಹಿಂದುಳಿದಿರುವುದೇ ಎಲ್ಲ ಸಮಸ್ಯೆಗಳಿಗೆ ಮೂಲ, ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ ಕೈಗೊಂಡರೆ, ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದರೆ ಈ ಸಮಸ್ಯೆ ಇರಲಾರದು ಎಂಬುದು ಕೇಂದ್ರದ ಅಭಿಪ್ರಾಯ. ಆದರೆ ಈ ನಿಟ್ಟಿನಲ್ಲಿಕೇಂದ್ರದ ಯಾವುದೇ ಕಾರ್ಯಚಟುವಟಿಕೆಗಳಿಗೆ ಸ್ಥಳೀಯ ಪಕ್ಷಗಳ ನಾಯಕರು, ಪ್ರತ್ಯೇಕತಾವಾದಿಗಳು ನಿರಂತರವಾಗಿ ತಡೆ ಹಾಕುತ್ತ, ಪ್ರತ್ಯೇಕತಾವಾದವನ್ನು ಪೋಷಿಸುತ್ತ ಬಂದಿದ್ದಾರೆ.
ಅಜರ್‌ಗೂ ರಕ್ಷಣೆ ನೀಡುತ್ತಿದೆ ಐಎಸ್‌ಐ!
ಈ ವರ್ಷ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಭಾರತ- ಪಾಕ್ ಗಡಿ ರೇಖೆಯಲ್ಲಿ ಎಲ್ಲ ಕಡೆ ಶಾಂತಿ ಉಲ್ಲಂಘನೆ, ಗುಂಡಿನ ಚಕಮಕಿ ಇತ್ಯಾದಿ ಘಟಿಸಿದ್ದವು. ಹೆಚ್ಚಾಗಿ ಉಗ್ರರನ್ನು ಒಳನುಸುಳಲು ಸಹಾಯವಾಗುವಂತೆ, ಸೈನ್ಯದ ಗಮನ ಬೇರೆ ಕಡೆ ಸೆಳೆಯಲು ಪಾಕ್ ಸೈನಿಕರು ಗುಂಡಿನ ದಾಳಿ ನಡೆಸುವುದು ಸಾಮಾನ್ಯ. ಮಾರ್ಚ್ನಲ್ಲೇ ಇಂಥ 1300 ಪ್ರಕರಣ ನಡೆದವು. ಕೊರೊನಾ ಕಾಯಿಲೆಯನ್ನು ತಡೆಯಲು ಭಾರತ ಸರಕಾರ ಹರಸಾಹಸ ಪಡುತ್ತಿರುವ ಹೊತ್ತಿನಲ್ಲಿ, ಎಲ್ಲರ ಗಮನ ಬೇರೆ ಕಡೆ ಇರುವಾಗ ದೊಡ್ಡ ಸಂಖ್ಯೆಯಲ್ಲಿ ಉಗ್ರರನ್ನು ಭಾರತದ ಒಳ ನುಸುಳಿಬೇಕು ಎಂಬುದು ಪಾಕಿಸ್ತಾನದ ಪ್ರಯತ್ನವಾಗಿತ್ತು. ಕೊರೊನಾ ಪೀಡಿತ ಉಗ್ರರನ್ನು ಕೂಡ ಒಳಕಳಿಸಿ, ಕಾಶ್ಮೀರ ಕಣೀವೆಯಲ್ಲಿ ಕಾಯಿಲೆ ಹೆಚ್ಚಿಸುವ ಯತ್ನವನ್ನು ಪಾಕ್ ನಡೆಸಿತು. ಆದರೆ ಭಾರತದ ಸೈನ್ಯ ಅದಕ್ಕೆ ಅವಕಾಶ ನೀಡಲೇ ಇಲ್ಲ.
31 ವರ್ಷ ಬಳಿಕ ತ್ರಾಲ್‌ನಲ್ಲಿ ಹಿಜ್ಬುಲ್ ಸಂಘಟನೆ ನಿರ್ನಾಮ!
ಪ್ರತ್ಯೇಕ ಕಾಶ್ಮೀರಕ್ಕಾಗಿ ಭಯೋತ್ಪಾದನೆ ನಡೆಸುತ್ತಿರುವ ಸಂಘಟನೆಗಳಲ್ಲಿ ಹಿಜ್ಬುಲ್ ಮುಜಾಹಿದೀನ್ ಪ್ರಮುಖವಾದುದು. ಆದರೆ ಈ ಸಂಘಟನೆ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಕಾಶ್ಮೀರದಲ್ಲಿಇತ್ತೀಚೆಗೆ ನಡೆದ ಎನ್‌ಕೌಂಟರ್‌ಗಳಲ್ಲಿ ಈ ಸಂಘಟನೆಯ ಪ್ರಮುಖ ಕಮಾಂಡರ್‌ಗಳೆಲ್ಲ ಹತರಾಗಿದ್ದಾರೆ. ದೋಡಾದಲ್ಲಿ ಮಸೂದ್ ಸತ್ತಂತೆ, ಮೇ ತಿಂಗಳಲ್ಲಿಇನ್ನೊಬ್ಬ ಕಮಾಂಡರ್ ರಿಯಾಜ್ ನಾಯ್ಕೂನನ್ನು ಸಾಯಿಸಲಾಗಿತ್ತು. 2016ರಲ್ಲಿ ಬುರ್ಹಾನ್ ವಾನಿ ಸತ್ತಿದ್ದಾನೆ. 2008ರಿಂದ ಈಚೆಗೆ ಹಿಜ್ಬುಲ್ ಸಂಘಟನೆ ನಿರಂತರ ಇಳಿಮುಖದಲ್ಲಿದ್ದು, ಲಷ್ಕರೆ ಹಾಗೂ ಜೈಶೆಗಳು ಹೆಚ್ಚು ಕ್ರಿಯಾಶೀಲವಾಗಿವೆ. ಪಾಕಿಸ್ತಾನದಿಂದ ಬರುತ್ತಿದ್ದ ಹಣ ಹಾಗೂ ಆಯುಧಗಳೂ ಈಗ ಲಭ್ಯವಾಗುತ್ತಿಲ್ಲ. ಪ್ರತ್ಯೇಕತಾವಾದವನ್ನು ಬಹಿರಂಗವಾಗಿ ಪೋಷಿಸುತ್ತಿದ್ದ ಸ್ಥಳೀಯ ನಾಯಕರೂ ಈಗ ಮೌನವಾಗಿದ್ದಾರೆ. ಇನ್ನು ಜಾಗತಿಕ ಉಗ್ರ ಸಂಘಟನೆಗಳಾದ ಅಲ್ ಖೈದಾ, ಐಸಿಸ್ ಮುಂತಾದವುಗಳ ಜೊತೆಗೆ ಹಿಜ್ಬುಲ್‌ಗೆ ಹಿತಕರವಾದ ಸಂಬಂಧವಿಲ್ಲ.
ಒಂದು ಸಂಘಟನೆ ನಾಶವಾದರೂ ಅದರಲ್ಲಿ ಅಳಿದುಳಿದವರು ಇನ್ನೊಂದು ಸಂಘಟನೆ ಸೇರಿಕೊಂಡು ಚಟುವಟಿಕೆ ಮುಂದುವರಿಸುವುದು ಸಾಮಾನ್ಯ. ದೋಡಾದಲ್ಲಿ ಮಸೂದ್ ಜೊತೆಗೆ ಎನ್‌ಕೌಂಟರ್ ಸಂದರ್ಭದಲ್ಲಿ ಇತರ ಸಂಘಟನೆಗಳ ಇಬ್ಬರು ಉಗ್ರರೂ ಇದ್ದರು. ಹೀಗಾಗಿ, ಇವರು ಹೊಸ ಸಂಘಟನೆ ಸ್ಥಾಪಿಸಿರಬಹುದೇ ಎಂಬ ಆತಂಕವೂ ಹುಟ್ಟಿದೆ. ಕಳೆದ ಏಪ್ರಿಲ್‌ನಲ್ಲಿ ಸೇನಾಪಡೆಗಳು ಕುಪ್ವಾರಾದಲ್ಲಿ ಐವರು ಉಗ್ರರನ್ನು ಕೊಂದು ಹಾಕಿದಾಗ, ಅವರು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಎಂಬ ಸಂಘಟನೆಯ ಸದಸ್ಯರಾಗಿದ್ದುದು ಕಂಡು ಬಂದಿತ್ತು. ಇವರು ಇಂಟರ್‌ನೆಟ್ ಅನ್ನು ಚೆನ್ನಾಗಿ ಬಳಸಬಲ್ಲ ಹೊಸ ತಲೆಮಾರಿನ ಯುವಕರಾಗಿದ್ದರು.
ಈ ಮೊದಲು ಪಾಕಿಸ್ತಾನದ ಸೇನೆಗೆ ಚೀನಾ ಶಸ್ತಾಸ್ತ್ರಗಳನ್ನು ಪೂರೈಸುತ್ತಿತ್ತು. ಈಗ ಉಗ್ರ ಸಂಘಟನೆಗಳೂ ಚೀನದ ನೆರವು ಪಡೆಯುತ್ತಿರುವುದು ಕಂಡುಬಂದಿದೆ. ಉದಾಹರಣೆಗೆ, ಕಳೆದ ಆಗಸ್ಟ್‌ನಲ್ಲಿ ಪಾಕ್ ಗಡಿಯಾಚೆಯಿಂದ ಕೆಲವು ಡ್ರೋನ್‌ಗಳು ಗ್ರೆನೇಡ್‌ಗಳನ್ನು ಹೊತ್ತುಕೊಂಡು ಹಾರಿಬಂದಿದ್ದವು. ಗಡಿಯೊಳಗಿರುವ ಉಗ್ರರಿಗೆ ಇದನ್ನು ತಲುಪಿಸುವ ಉದ್ದೇಶದಿಂದ ಇವನ್ನು ಹಾರಿಸಲಾಗಿತ್ತು- ಇವು ಚೀನಾ ತಯಾರಿಸಿದ ಡ್ರೋನ್‌ಗಳಾಗಿದ್ದವು. ಆಗಸ್ಟ್‌ನಲ್ಲಿ ಸೇನೆಯ ವಿರುದ್ಧ ದಾಳಿಗೆ ಉಗ್ರರು ಬಳಸಿದ ಗ್ರೆನೇಡ್‌ಗಳೂ ಚೀನಾ ನಿರ್ಮಿತವಾಗಿದ್ದವು.
2020- 100 (ಇದುವರೆಗೆ)
2019- 160
2018- 235
2017- 218
2016- 165
2015- 113
2014- 110
2013- 100
ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕುವುದು ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿ ಕಾಡುತ್ತಿದೆ. ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಪರಿಹಾರ ಎಂಬ ಅಭಿಪ್ರಾಯಗಳು ಹಾಗೂ ಒತ್ತಡಗಳು ಹಲವು ಕಡೆಗಳಿಂದ ವ್ಯಕ್ತವಾಗುತ್ತಿದೆ. ಆದರೆ ಆರ್ಥಿಕ ಸುಧಾರಣೆ ದೃಷ್ಟಿಯಿಂದ ಲಾಕ್‌ಡೌನ್ ಮಾಡದೆ ಸೋಂಕು ನಿಯಂತ್ರಣ ಮಾಡಲು ಸರ್ಕಾರ ಕೆಲವೊಂದು ಮಹತ್ವದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸೋಂಕು ಮಿತಿ ಮೀರಿ ಹರಡುತ್ತಿದೆ. ಸೋಮವಾರ ಒಂದೇ ದಿನದಲ್ಲಿ 1,105 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿಗೆ ತುತ್ತಾಗಿ 19 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,295 ಕ್ಕೆ ತಲುಪಿದೆ. ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಸೋಂಕಿತರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಬಹುದು ಎಂಬ ಅಭಿಪ್ರಾಯಗಳು ತಜ್ಞರಿಂದ ವ್ಯಕ್ತವಾಗುತ್ತಿದೆ. ಈ ಸಂದಿಗ್ದ ಪರಿಸ್ಥಿತಿಯನ್ನು ಹೇಗೆ ಎದುರಿಸುವುದು ಎಂಬುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಆ ಕಾರಣಕ್ಕಾಗಿ ಲಾಕ್‌ಡೌನ್ ಮಾತ್ರ ಪರಿಹಾರ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ರಾಜ್ಯದಲ್ಲಿ ಸೋಂಕನ್ನು ನಿಯಂತ್ರಣ ಮಾಡಲು ಲಾಕ್‌ಡೌನ್ ಒಂದೇ ಪರಿಹಾರ ಎಂದು ಕೆಲವು ಮಾಧ್ಯಮಗಳು, ತಜ್ಞರು, ರಾಜಕೀಯ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ತೀವ್ರ ಗತಿಯಲ್ಲಿ ಏರಿಕೆ ಕಾಣುತ್ತಿರುವ ಸೋಂಕನ್ನು ನಿಯಂತ್ರಣಕ್ಕೆ ತರಬೇಕಾದರೆ ಸಂಪೂರ್ಣ ಲಾಕ್‌ಡೌನ್ ಮಾಡಲೇ ಬೇಕು ಎಂಬ ಒತ್ತಡ ಜಾಸ್ತಿಯಾಗುತ್ತಿದೆ. ಈ ಕಾರಣಕ್ಕಾಗಿಯೇ ಭಾನುವಾರದ ಲಾಕ್‌ಡೌನ್ ಹಾಗೂ ರಾತ್ರಿ 8 ಗಂಟೆಯ ನಂತರದ ಕರ್ಫ್ಯೂವನ್ನು ಸರ್ಕಾರ ಜಾರಿಗೊಳಿಸಿದೆ. ಆದರೆ ಲಾಕ್‌ಡೌನ್‌ನಿಂದ ಕೊರೊನಾ ನಿಯಂತ್ರಣ ಸಾಧ್ಯವೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಯಾರಿದಂಲೂ ಇಲ್ಲ. ಕಳೆದ ಎರಡು ತಿಂಗಳ ಲಾಕ್‌ಡೌನ್ ಬಳಿಕ ಕೊರೊನಾ ಸೋಂಕು ವಿಪರೀತವಾಗಿ ಏರಿಕೆ ಕಂಡಿದೆ. ಹೀಗಿದ್ದರೂ ಮತ್ತೆ ಲಾಕ್‌ಡೌನ್ ಪರಿಹಾರ ನೀಡಬಹುದಾ ಎಂಬ ಪ್ರಶ್ನೆಯೂ ಕಾಡುತ್ತಿದೆ.ಲಾಕ್‌ಡೌನ್‌ನಿಂದಾಗಿ ಆರ್ಥಿಕ ನಷ್ಟ ಉಂಟಾಗಿದೆ. ದಿನಕೂಲಿ ನೌಕರಿಂದ ಹಿಡಿದು ಉದ್ಯಮಿಗಳಿಗೆ ಭಾರೀ ಆರ್ಥಿಕ ಸಮಸ್ಯೆ ಉಂಟಾಗಿದೆ. ಇದು ಚೇತರಿಕೆ ಕಂಡುಕೊಳ್ಳಲು ಇನ್ನು ಒಂದು ವರ್ಷಗಳ ಕಾಲಾವಕಾಶದ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಲಾಕ್‌ಡೌನ್ ಒತ್ತಡ ಸರಿಯಲ್ಲ.
ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಗೊಳಿಸಲದೆ ಸೋಂಕು ನಿಯಂತ್ರಣ ಮಾಡುವುದು ಸರ್ಕಾರದ ಮುಂದಿರುವ ಆದ್ಯತೆ ಎಂದು ಮೂಲಗಳು ತಿಳಿಸುತ್ತಿವೆ. ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡುವ ನಿರ್ಧಾರವನ್ನು ಸದ್ಯ ಸರ್ಕಾರ ಕೈಗೊಳ್ಳುವ ಸಾಧ್ಯತೆ ಇಲ್ಲ. ಬದಲಾಗಿ ಸೋಂಕು ಹೆಚ್ಚಾದರೆ ಅದನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುವುದಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಸೋಂಕಿಗೆ ಚಿಕಿತ್ಸೆ ನೀಡಲು ಏನೆಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂಬುವುದರ ಕುರಿತಾಗಿ ಚಿಂತನೆ ನಡೆಸುತ್ತಿದೆ.
ಲಾಕ್‌ಡೌನ್ ಇಲ್ಲದ ಪರಿಣಾಮ ಜನರು ಬೇಕಾಬಿಟ್ಟು ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರನ್ನು ನಿಯಂತ್ರಣ ಮಾಡುವುದು ಕೂಡಾ ಸರ್ಕಾರಕ್ಕೆ ಸವಾಲಾಗಿದೆ. ಈ ನಿಟ್ಟಿನಲ್ಲಿ ಕಾನೂನಿನ ಮೂಲಕ ಜನರಲ್ಲಿ ಭಯಮೂಡಿಸುವುದು ಹಾಗೂ ಜಾಗೃತಿ ಮೂಡಿಸುವುದು ಸರ್ಕಾರದ ಮುಂದಿರುವ ಸವಾಲಾಗಿದೆ. ಮಾಸ್ಕ್ ಧಾರಣೆ ಕಡ್ಡಾಯಗೊಳಿಸುವುದು, ಸಾಮಾಜಿಕ ಅಂತರ ಪಾಲನೆಯಾಗುವಂತೆ ನೋಡಿಕೊಳ್ಳುವುದಕ್ಕೆ ಗಮನ ನೀಡಲಾಗುತ್ತಿದೆ. ಮುಂದಿನ ಆರು ತಿಂಗಳುಗಳ ಕಾಲ ಮನೆಯಿಂದಲೇ ಕೆಲಸ ಮಾಡಲು ಕಂಪನಿಗಳಿಗೂ ಸೂಚನೆ ನೀಡಬಹುದು. ಅಲ್ಲದೆ ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚಿನ ಜನ ಓಡಾಟ ಇರದಂತೆ ಕೆಲವೊಂದು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಆದರೆ ಇದರ ಹೊರತಾಗಿ ಮತ್ತೆ ಲಾಕ್‌ಡೌನ್ ಮಾಡಿ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುವುದು ಸರ್ಕಾರಕ್ಕೆ ಬೇಕಿಲ್ಲ.
ಹೊಸದಿಲ್ಲಿ: ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಅವರು ಸಾರ್ವಕಾಲಿಕ ಐಪಿಎಲ್ ಇಲೆವೆನ್ ತಂಡವನ್ನು ಪ್ರಕಟಿಸಿದ್ದು, ಮಹೇಂದ್ರ ಸಿಂಗ್ ಧೋನಿ ಅವರನ್ನು ನಾಯಕರನ್ನಾಗಿ ಆರಿಸಿದ್ದಾರೆ. ಮೂರು ಬಾರಿ ಐಪಿಎಎಲ್ ಗೆದ್ದ ನಾಯಕ ರೋಹಿತ್ ಶರ್ಮಾ ಅವರಿಗಿಂತ ಕಳೆದ ಹಲವು ವರ್ಷಗಳಲ್ಲಿ ಯಶಸ್ವಿಯಾಗಿರುವ ಎಂ.ಎಸ್ ಧೋನಿಯೇ ನಾಯಕತ್ವದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಚೋಪ್ರಾ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಾರ್ವಕಾಲಿಕ ಐಪಿಎಲ್ ತಂಡವನ್ನು ಪ್ರಕಟಿಸಿರುವ ಆಕಾಶ್ ಚೋಪ್ರಾ, ಕೇವಲ ನಾಲ್ವರು ವಿದೆಶಿ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲೂ ಆರಂಭಿಕನಾಗಿ ಯಶಸ್ವಿಯಾಗಿರುವ ಡೇವಿಡ್ ವಾರ್ನರ್‌ಗೆ ಇನಿಂಗ್ಸ್ ಆರಂಭಿಸಲು ಅವಕಾಶ ಕಲ್ಪಿಸಿದ್ದು, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರನ್ನು ಕೈಬಿಟ್ಟಿದ್ದಾರೆ."ವಿಶ್ವದ ಎಲ್ಲಾ ಭಾಗಗಳಲ್ಲಿ ಸ್ಥಿರ ಪ್ರದರ್ಶನ ತೋರುವ ಡೇವಿಡ್ ವಾರ್ನರ್ ಅವರು, ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಕ್ರಿಸ್ ಗೇಲ್ ಕೂಡ ಸ್ಫೋಟಕ ಬ್ಯಾಟ್ಸ್‌ಮನ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ವಾರ್ನರ್‌ಗಿಂತ ಬೇರೊಬ್ಬ ಆಟಗಾರ ಇನಿಂಗ್ಸ್ ಆರಂಭಿಸಲು ಸೂಕ್ತವಲ್ಲ," ಎಂದು ಆಕಾಶ್ ಚೋಪ್ರಾ ಸಮರ್ಥಿಸಿಕೊಂಡರು."ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಜತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಡೆಕ್ಕಾನ್ ಚಾರ್ಜರ್ಸ್ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ರೋಹಿತ್, ಬಳಿಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದ ಮೇಲೆ ಸಾಕಷ್ಟು ಯಶಸ್ವಿ ಸಾಧಿಸಿದರು. ತಮ್ಮ ನಾಯಕತ್ವದಲ್ಲಿ ಮೂರು ಬಾರಿ ಮುಂಬೈಯನ್ನು ಚಾಂಪಿಯನ್ ಮಾಡಿರುವ ರೋಹಿತ್ ಶರ್ಮಾ ಆರಂಭಿಕನಾಗಿ ಬ್ಯಾಟಿಂಗ್ ಮಾಡಲು ಸೂಕ್ತ ಆಟಗಾರ," ಎಂದು ತಿಳಿಸಿದರು.
ತಮ್ಮ ಸಾರ್ವಕಾಲಿನ ಐಪಿಎಲ್ ತಂಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಮೂರನೇ ಸ್ಥಾನ ನೀಡಿದ್ದಾರೆ. "ತಂಡದ ಬ್ಯಾಟಿಂಗ್ ಮೂರನೇ ಕ್ರಮಾಂಕಕ್ಕೆ ಅನುಮಾನವೇ ಇಲ್ಲ. ಅವರ ತಂಡ ಇದುವರೆಗೂ ಪ್ರಶಸ್ತಿ ಗೆಲ್ಲದೆ ಇರಬಹುದು, ಆದರೆ ಆತ ಮಾತ್ರ 24 ಕ್ಯಾರೆಟ್ ಚಿನ್ನ. ಅವರ ಹೆಸರೇ ವಿರಾಟ್ ಕೊಹ್ಲಿ, ದಿ ರನ್ ಮಶೀನ್," ಎಂದು ಆಕಾಶ್ ಚೋಪ್ರಾ ಟೀಮ್ ಇಂಡಿಯಾ ನಾಯಕನನ್ನು ಬಣ್ಣಿಸಿದರು.
ಐಪಿಎಲ್‌ನಲ್ಲಿ ಸಚಿನ್ ವಿಕೆಟ್ ಪಡೆದು ವಿಶೇಷ ಉಡುಗೊರೆ ಸ್ವೀಕರಿಸಿದ್ದ ಪ್ರಜ್ಞಾನ್ ಓಜಾ!
ದೆಹಲಿ ಮಾಜಿ ಆರಂಭಿಕ ಬ್ಯಾಟ್ಸ್‌ಮನ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಹಾಗೂ ಆರ್‌ಸಿಬಿ ತಂಡದ ಅತ್ಯಂತ ಮೌಲ್ಯಯುತ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅವರಿಗೆ ಕ್ರಮವಾಗಿ 4 ಮತ್ತು 5 ನೇ ಕ್ರಮಾಂಕವನ್ನು ನೀಡಿದ್ದಾರೆ. "4ನೇ ಸ್ಥಾನಕ್ಕೆ ಮಿಸ್ಟರ್ ಐಪಿಎಲ್. ಸುರೇಶ್ ರೈನಾ ಎರಡು ವರ್ಷ ಹೊರತುಪಡಿಸಿ ಇನ್ನುಳಿದ ತಮ್ಮ ಎಲ್ಲಾ ಅವಧಿಯನ್ನೂ ಸಿಎಸ್‌ಕೆ ತಂಡದಲ್ಲಿಯೇ ಸವೆಸಿದ್ದಾರೆ. ವೇಗ ಮತ್ತು ಸ್ಪಿನ್‌ಗೆ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುವ ರೈನಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ," ಎಂದು ಹೇಳಿದರು.
"ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಅವರ ಹೆಸರು ತಂಡದಲ್ಲಿ ಇರುವ ಬಗ್ಗೆ ಯಾರಿಗೂ ಅನುಮಾನ ಬೇಡ. ಅವರಿಗೆ ತಂಡದ ನಾಯಕತ್ವವನ್ನು ನೀಡಲಾಗಿದೆ," ಎಂದು ಆಕಾಶ್ ಚೋಪ್ರಾ ಹೇಳಿದರು.
ಭಜ್ಜಿ ಕೊಟ್ಟ ಕಪಾಳಮೋಕ್ಷದ ಬಳಿಕ ನಡೆದ ಘಟನೆ ಬಗ್ಗೆ ಮೌನ ಮುರಿದ ಶ್ರೀಶಾಂತ್!
ಇನ್ನು ವೇಗದ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬುಮ್ರಾ ಹಾಗೂ ಲಸಿತ್ ಮಲಿಂಗಾ ಅವರಿಗೆ ಸ್ಥಾನ ಕಲ್ಪಿಸಲಾಗಿದ್ದು, ಸ್ಪಿನ್ ವಿಭಾಗದಲ್ಲಿ ಹರಭಜನ್ ಸಿಂಗ್, ಸುನೀಲ್ ನರೇನ್ ಅವರಿಗೆ ಅವಕಾಶ ನೀಡಲಾಗಿದೆ.
"ಬ್ಯಾಟಿಂಗ್7ನೇ ಕ್ರಮಾಂಕಕ್ಕೆ ಆಂಡ್ರೆ ರಸೆಲ್ ಆಡಿಸಬಹುದಿತ್ತು, ಆದರೆ ನಮ್ಮ ಬಳಿ ಹರಭಜನ್ ಸಿಂಗ್ ಇದ್ದಾರೆ, ಹರಭಜನ್ ಹಾಗೂ ಆರ್. ಅಶ್ವಿನ್ ನಡುವೆ ತೀವ್ರ ಪೈಪೋಟಿ ಇತ್ತು, ಅಂತಿಮವಾಗಿ ಭಜ್ಜಿ ಆಯ್ಕೆ ಮಾಡಲಾಯಿತು. ವೆಸ್ಟ್ ಇಂಡೀಸ್‌ನ ಸ್ಪಿನ್ನರ್ ಸುನೀಲ್ ನರೇನ್ ಅವರು ಹರಭಜನ್‌ಗೆ ಸಾಥ್ ನೀಡಲಿದ್ದಾರೆ. ಕಳೆದ ಹಲವು ವರ್ಷಗಳಿಂದ ಅವರ ಐಪಿಎಲ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ," ಎಂದು ಆಕಾಶ್ ಚೋಪ್ರಾ ಉಲ್ಲೇಖಿಸಿದರು.
ಕೊಹ್ಲಿ-ರೋಹಿತ್ ನಡುವೆ ಬೆಸ್ಟ್ ಕ್ಯಾಪ್ಟನ್ ಆಯ್ಕೆ ಮಾಡಿದ ಕನ್ನಡಿಗ ಕೃಷ್ಣಪ್ಪ ಗೌತಮ್!
ಡೇವಿಡ್ ವಾರ್ನರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಎಬಿ ಡಿವಿಲಿಯರ್ಸ್, ಎಂ.ಎಸ್ ಧೋನಿ(ನಾಯಕ, ವಿ.ಕೀ), ಹರಭಜನ್ ಸಿಂಗ್, ಸುನೀಲ್ ನರೇನ್, ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬುಮ್ರಾ, ಲಸಿತ್ ಮಲಿಂಗಾ.
ಮಿನಿ ಕರ್ನಾಟಕ ತಂಡವಾಗುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್! : ಕನ್ನಡದಲ್ಲೇ ಮಾತನಾಡುತ್ತೇವೆಂದ ಕೆ.ಗೌತಮ್
ವಿದ್ಯಾ ಶ್ರೀ ಬಿ. ಬಳ್ಳಾರಿಹೃದಯಾಘಾತದಿಂದ ಹಿರಿಯ ಸಾಹಿತಿ, ಗೀತಾ ನಾಗಭೂಷಣ ಅವರು ಭಾನುವಾರ ರಾತ್ರಿ (78) ನಿಧನರಾಗಿದ್ದಾರೆ. ಭಾನುವಾರ ಸಂಜೆ ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ. ಹಲವು ಮೊದಲುಗಳಿಗೆ ಸಾಕ್ಷಿಯಾಗಿದ್ದರು ಗೀತಾಗೀತಾ ನಾಗಭೂಷಣ ಕನ್ನಡ ಸಾಹಿತ್ಯದ ಪ್ರಸಿದ್ಧ ಬರಹಗಾರ್ತಿಯರಲ್ಲೊಬ್ಬರು. ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾಗಿರುವ ನಾಡೋಜ ಗೀತಾ ನಾಗಭೂಷಣ, ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳ ನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ದಾಟಿ ತಮ್ಮ ಎಡೆಬಿಡದ ಪರಿಶ್ರಮದಿಂದ ಬಿ.ಎ, ಬಿ.ಎಡ್, ಎಂ.ಎ ಪದವಿಗಳನ್ನು ಗಳಿಸಿ ಬಹುಕಾಲ ಅಧ್ಯಾಪನ ವೃತ್ತಿಯನ್ನೂ ನಡೆಸಿದವರು. ಜೊತೆಗೆ ತಮ್ಮ ಶಿಕ್ಷಕ ವೃತ್ತಿ, ಬರಹ ಪ್ರವೃತ್ತಿ ಮತ್ತು ನಡೆಗಳಿಂದ ಸಮಾಜಕ್ಕೆ ಬೆಳಕು ಕಾಣಿಸುವಲ್ಲಿ ನಿರಂತರ ಪ್ರಯತ್ನಶೀಲರಾದವರು. ಡಾ. ಗೀತಾ ನಾಗಭೂಷಣ ಅವರು ನಾಡೊಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಮಹಿಳಾ ಸಾಹಿತಿ ಕೂಡಾ . ಇವರ ಬದುಕು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆಯೂ ಇವರದೆ. ಹೀಗೆ ಹ್ಯಾಟ್ರಿಕ್ ಮಹಿಳಾ ಸಾಹಿತಿ ಎಂದು ಇವರು ಖ್ಯಾತರಾಗಿದ್ದರು. ಕೋಲ್ಕತಾದ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ 2011-2012 ಡಾ. ಗೀತಾ ನಾಗಭೂಷಣ ಅವರಿಗೆ ಲಭಿಸಿದೆ. ಇದು ಕನ್ನಡಕ್ಕೆ ಮೊಟ್ಟ ಮೊದಲ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿಯಾಗಿದೆ.ಡಾ. ಗೀತಾ ನಾಗಭೂಷಣ ಅವರು 1968ರ ವರ್ಷದಲ್ಲಿ ಪ್ರಕಟಗೊಂಡ ‘ತಾವರೆಯ ಹೂವು ಕಾದಂಬರಿಯಿಂದ ಮೊದಲ್ಗೊಂಡು ಇತ್ತೀಚಿನ ‘ಬದುಕು ’ ಕಾದಂಬರಿಯವರೆಗೆ ಇಪ್ಪತ್ತೇಳು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅವರ ‘ಬದುಕು’ ಕಾದಂಬರಿಗೆ 2004ರ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ಗೀತಾ ನಾಗಭೂಷಣರ 'ಹಸಿಮಾಂಸ ಮತ್ತು ಹದ್ದುಗಳು' ಎನ್ನುವ ಕಾದಂಬರಿಯು ಹೆಣ್ಣಿನ ಕೂಗು ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಒಟ್ಟು 27 ಸ್ವತಂತ್ರ ಕಾದಂಬರಿ, 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿ ಹೀಗೆ ಅವರ ಕನ್ನಡ ಸಾಹಿತ್ಯಕ್ಕೆ ಕೊಡುಗೆ ಹಲವಾರು.
ಡಾ. ಗೀತಾ ನಾಗಭೂಷಣರು ಗದಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಲ್ಲಿ ಡಾ. ಗೀತಾ ನಾಗಭೂಷಣರು ಹೇಳಿದ ಮಾತುಗಳು ಮಾರ್ಮಿಕವಾಗಿವೆ. “ವಚನಕಾರರು, ಹರಿದಾಸರು, ತತ್ವಪದಕಾರರು, ಜನಪದರು ಅಂದು ತಮ್ಮ ಸಾಹಿತ್ಯದಿಂದ ಸಾವಿರಾರು ವರ್ಷಗಳ ಉದ್ದಕ್ಕೂ ಮಾಡಿಕೊಂಡು ಬಂದ ಜನಜಾಗೃತಿ, ಶಾಂತಿ ಸೌಹಾರ್ದತೆ, ಪ್ರೀತಿ ವಾತ್ಸಲ್ಯ, ಕ್ರಾಂತಿ ಚಳುವಳಿಗಳ ಮೂಲಕ ಸುಧಾರಣೆ ಮತ್ತು ಜನಹಿತಕಾರ್ಯವನ್ನು ಇಂದಿನ ಸಾಹಿತಿಗಳೂ ಸಾಧಿಸಿ ತೋರಿಸಬೇಕಾಗಿದೆ. ಬರೀ ಶಬ್ದಾಡಂಬರದ ರಂಜನೀಯ ಸಾಹಿತ್ಯ ನಮಗೆ ಬೇಡ, ಸಾಹಿತ್ಯ ಒಂದು ಮಾನಸಿಕ ಸುಧಾರಣೆಯ ಸಾಧನ. ಅದು ಸಮಾಜದ ಅಭ್ಯುದಯಕ್ಕಾಗಿ ದುಡಿಯುವಂತಾಗಬೇಕು. ವಿಜ್ಞಾನಿಯ ತಲೆ, ಸಂತನ ಹೃದಯ ಈ ದೇಶಕ್ಕೆ ಬೇಕು. ಬುದ್ಧನ ಕರುಣೆ, ಬಸವನ ಛಲ, ಬಾಬಾ ಸಾಹೇಬರ ಸ್ವಾಭಿಮಾನ ಮತ್ತು ಗಾಂಧೀಜಿಯ ಅಹಿಂಸೆಯ ತುಡಿತ ಈ ಎಲ್ಲವನ್ನೂ ಹುರಿಗೊಳಿಸಿ ಹೊಸೆದ ಹಗ್ಗದಿಂದಲೇ ನಾವು ಸರ್ವರ ಅಭ್ಯುದಯ ಸಾಧಿಸಬಲ್ಲ ನಭೋಸ್ಪರ್ಶಿ ವ್ಯವಸ್ಥೆಗೆ ಏಣಿ ಕಟ್ಟಬೇಕಾಗಿದೆ.”
ಡಾ. ಗೀತಾ ನಾಗಭೂಷಣರು ಜೀವನವನ್ನು ಬಂದಂತೆ ಎದುರಿಸಿದವರು. ವೈಯಕ್ತಿಕ ಬದುಕಿನಲ್ಲಿ ಕಷ್ಟವೇ ಜಾಸ್ತಿ. ಸಾಮಾಜಿಕ ತಾರತಮ್ಯದಿಂದ ಅನುಭವಿಸಿದ ನೋವುಗಳು ಎಲ್ಲವೂ ಅವರ ಕೃತಿಗಳಲ್ಲಿ ಮೇಳೈಸಿವೆ.
ದೇಶದಲ್ಲಿ ದಿನದಿಂದ ದಿನಕ್ಕೆ ಮಾರಕ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲೂ ಸೋಂಕಿತರ ಪ್ರಮಾಣ ಏರುತ್ತಿರುವುದು ಆತಂಕ ಸೃಷ್ಟಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗಾಗಲೇ ಹೊಸ ಲಾಕ್‌ಡೌನ್ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಆದರೆ ಮಾರಕ ಕೊರೊನಾ ವೈರಸ್‌ನ್ನು ನಿರ್ಮೂಲನೆ ಮಾಡಲು ಕೇವಲ ಸರ್ಕಾರ ಮಾತ್ರವಲ್ಲದೇ ಸಮಾಜ ಕೂಡ ಅಷ್ಟೇ ಜವಾಬ್ದಾರಿಯಿಂದ ವರ್ತಿಸಬೇಕಿದೆ. ಈ ಮಧ್ಯೆ ಕರ್ನಾಟಕದ ನೆರೆಯ ರಾಜ್ಯಗಳಲ್ಲೂ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾವು ಮುಂಜಾಗ್ರತಾ ಕ್ರಮಗಳ ಮೊರೆ ಹೋಗಬೇಕಿರುವುದು ಅನಿವಾರ್ಯವಾಗಿದೆ. ಪಕ್ಕದ ತಮಿಳುನಾಡು, ಮಹಾರಷ್ಟ್ರಗಳಲ್ಲಿ ಸೋಂಕಿತರು ಹಾಗೂ ಸಾವಿನ ಪ್ರಮಾಣ ಭಾರೀ ಏರಿಕೆಯಾಗುತ್ತಿದ್ದು, ವೈರಸ್ ಹಾವಳಿ ತಗ್ಗಿದ್ದ ಕೇರಳದಲ್ಲೂ ಮತ್ತೆ ಸೋಂಕು ಕಾಣಿಸಿಕೊಂಡಿರುವುದು ನಿಜಕ್ಕೂ ಸಮಸ್ಯೆಯ ಗಂಭೀರತೆಯನ್ನು ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಅತ್ಯಂತ ಮುಂಜಾಗ್ರತೆ ವಹಿಸಬೇಕಿದ್ದು, ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳತ್ತ ಗಮನಹರಿಸುವುದಾದರೆ..ಇನ್ನು ನೆರೆಯ ತಮಿಳುನಾಡಿನ ಪರಿಸ್ಥಿತಿಯತ್ತ ಗಮನಹರಿಸಿದರೆ ಅಷ್ಟೇನೂ ಆಶಾದಾಯಕವಾಗಿಲ್ಲ. ರಾಜ್ಯದಲ್ಲಿ ಕೇವಲ 24 ಗಂಟೆಗಳಲ್ಲಿ 3,940 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಕದೇ ಕೇವಲ 24 ಗಂಟೆಗಳಲ್ಲಿ ಈ ಮಾರಕ ವೈರಾಣುವಿಗೆ ಬರೋಬ್ಬರಿ 54 ಜನ ಬಲಿಯಾಗಿದ್ದಾರೆ.
236 ಕೊರೊನಾ ಸಾವುಗಳನ್ನೇ ದಾಖಲಿಸದ ತಮಿಳುನಾಡು: ಅಸಲಿ ಸಂಖ್ಯೆ ಎಷ್ಟು?
ಪ್ರಸ್ತುತ ತಮಿಳುನಾಡಿನಲ್ಲಿ ಒಟ್ಟು 82,275 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದುವರೆಗೂ 1,079ಕ್ಕೆ ಏರಿಕೆಯಾಗಿದೆ. ರಾಜಧಾನಿ ಚೆನ್ನೈ ನಗರವೊಂದರಲ್ಲೇ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 1,992 ಹೊಸ ಪ್ರಕರಣಗಳು ದಾಖಲಾಗಿವೆ.
ಕೊರೊನಾ ವೈರಸ್ ಹಾವಳಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದ ನೆರೆಯ ಕೇರಳದಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೇರಳದಲ್ಲಿ 24 ಗಂಟೆ ಅವಧಿಯಲ್ಲಿ ಒಟ್ಟು 118 ಹೊಸ ಕೊರೊನಾ ಸೋಂಕು ಪ್ರಕರಣ ದಾಖಲಾಗಿದೆ.
ಕೊರೊನಾ ವೈರಸ್ ನಿಯಂತ್ರಣದಲ್ಲಿ ಇಡೀ ದೇಶದಲ್ಲೇ ಮುಂಚೂಣಿಯಲ್ಲಿದ್ದ ಕೇರಳದಲ್ಲಿ ಇದೀಗ ಮತ್ತೆ ಕೊರೊನಾ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ವಿಶ್ವಸಂಸ್ಥೆ ಕಾರ್ಯಕ್ರಮದಲ್ಲಿ ಕೇರಳ ಆರೋಗ್ಯ ಸಚಿವೆ ಶೈಲಜಾ ಟೀಚರ್ ಭಾಷಣ; ದೇವರ ನಾಡಿಗೆ ಮತ್ತೊಂದು ಗರಿ
ಈ ಕುರಿತು ಮಾತನಾಡಿರುವ ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ, ಕಳೆದ 10 ದಿನಗಳಿಂದ ರಾಜ್ಯದಲ್ಲಿ ನಿರಂತರಾವಗಿ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗುತ್ತಿವೆ ಎಂದು ತಿಳಸಿದ್ದಾರೆ.
ಇನ್ನು ದೇಶದಾದ್ಯಂತ ಮಾರಕ ಕೊರೊನಾ ವೈರಸ್ ಸೋಂಕು ಹರಡುತ್ತಿದ್ದು, ಕೇವಲ 24 ಗಂಟೆಗಳಲ್ಲಿ 19,459 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 5.48 ಲಕ್ಷಕ್ಕೇರಿದೆ.
ದೇಶದಲ್ಲಿ ಒಟ್ಟು 16,475 ಕೊರೊನಾ ವೈರಸ್ ಸಾವು ಸಂಭವಿಸಿದ್ದು, ಕೇವಲ 24 ಗಂಟೆಗಳಲ್ಲಿ 380 ಜನ ಈ ಮಾರಕ ವೈರಾಣುವಿಗೆ ಬಲಿಯಾಗಿದ್ದಾರೆ.
24 ಗಂಟೆಗಳಲ್ಲಿ 20 ಸಾವಿರ ಸಮೀಪಕ್ಕೆ ಕೊರೊನಾ ಪ್ರಕರಣ: ದೇಶದಲ್ಲಿ 5 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!
ಇದೇ ವೇಳೆ ದೇಶದಲ್ಲಿ ಸುಮಾರು 3.2 ಲಕ್ಷ ಜನ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದು, ಆದರೂ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಆತಂಕ ಮನೆ ಮಾಡಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಸಾಮಾಜಿಕ ಜವಾಬ್ದಾರಿ ಮೆರೆಯುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಅಳಿಲು ಸೇವೆ ಸಲ್ಲಿಸಬೇಕಾಗಿದೆ. ನೆರೆಯ ರಾಜ್ಯಗಳು ಮತ್ತು ದೇಶದ ಒಟ್ಟಾರೆ ಚಿತ್ರಣವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಮತ್ತು ನಮ್ಮವರ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ನಾವು ಹೊರಬೇಕಿದೆ.
ಕೊರೊನಾ ವೈರಸ್ ಬಗ್ಗೆ ಉದಾಸೀನ ಮನೋಭಾವನೆ ಖಂಡಿತ ಸಲ್ಲದು. ದಿನೇ ದಿನೇ ಹೆಚ್ಚುತ್ತಿರುವ ಸೋಂಕು ಪ್ರಕರಣಗಳೇ ನಮಗೆ ಎಚ್ಚರಿಕೆಯ ಕರೆಗಂಟೆಯಾಗಬೇಕು. ಸರ್ಕಾರದ ಹೊಸ ಲಾಕ್‌ಡೌನ್ ನಿಯಮಾವಳಿಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಜೊತೆಗೆ ಸ್ವಯಂಪ್ರೇರಿತವಾಗಿ ಲಾಕ್‌ಡೌನ್ ಹೇರಿಕೆ ಮಾಡಿಕೊಂಡರೆ ಖಂಡಿತವಾಗಿ ಈ ವೈರಾಣುವನ್ನು ಹಿಮ್ಮೆಟ್ಟಿಸಲು ಸಾಧ್ಯ.
ನಾವು ಅಂದುಕೊಂಡಂತಿಲ್ಲ ಬೆಂಗಳೂರು: ಕೊರೊನಾ ಮುಂಜಾಗ್ರತೆಯೊಂದೇ ಮಾರ್ಗ!
ತಜ್ಞರ ಅಭಿಪ್ರಾಯಗಳಿಗೆ ಗೌರವ ನೀಡಿ ನಮ್ಮ, ನಮ್ಮವರ, ರಾಜ್ಯದ ಹಾಗೂ ದೇಶದ ಆರೋಗ್ಯವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂಬುದನ್ನು ನಾವು ಮರೆಯಬಾರದು.
ರಾಜ್ಯದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಬಹುತೇಕ ಸಮುದಾಯಕ್ಕೆ ಹರಡುವ ಹಂತದಲ್ಲಿದೆ. ರಾಜ್ಯದಲ್ಲಿ ಭಾನುವಾರ ಒಂದೇ ದಿನ 1267 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 13,190 ಕ್ಕೆ ತಲುಪಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಸ್ವರೂಪದಲ್ಲಿ ಏರಿಕೆ ಕಾಣುತ್ತಿರುವುದು ಆತಂಕ ಮೂಡಿಸಿದೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಸಜ್ಜಾಗಿದೆ ಎಂದು ಮುಖ್ಯಮಂತ್ರ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಸಂಪುಟದ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ದಿನದಿಂದ ದಿನಕ್ಕೆ ಹೊಸ ಆದೇಶಗಳು ಹೊರಬೀಳುತ್ತಿವೆ. ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಪ್ರತಿದಿನ ರಾತ್ರಿ 8 ರಿಂದ ಬೆಳಗ್ಗೆ 5 ರ ವರೆಗೆ ಕರ್ಫ್ಯೂ ಜಾರಿಗೆ ಬಂದಿದೆ. ಆದರೆ ಇದರಿಂದ ಕೊರೊನಾ ನಿಯಂತ್ರಣ ಸಾಧ್ಯನಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಸದ್ಯದ ಪರಿಸ್ಥಿತಿಗೆ ಜನರು ಕಾರಣ ಎಂದು ಸರ್ಕಾರ ಹೇಳುತ್ತಿದೆ. ಆದರೆ ಸರ್ಕಾರ ವೈಫಲ್ಯಗಳು ಸೋಂಕು ಹರಡಲು ಹೇಗೆ ಕಾರಣವಾಗಿದೆ ಎಂಬ ಚರ್ಚೆಯೂ ನಡೆಯಬೇಕಾಗಿದೆ.ಪ್ರಕರಣ ನಂ.1 :
ಬೆಂಗಳೂರಿನ 70 ವರ್ಷದ ನಿವಾಸಿಯೊಬ್ಬರಿಗೆ ಕೆಲ ದಿನಗಳ ಹಿಂದೆ ಸೋಂಕು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ತಪಾಸಣೆ ಮಾಡಿದಾಗ ಅವರಿಗೆ ಕೊರೊನಾ ದೃಢಪಡುತ್ತದೆ. ಈ ಹಿನ್ನೆಲೆಯಲ್ಲಿ ಅವರು ನಗರದ ವಿಕ್ಟೋರಿಯಾದಲ್ಲಿ ಚಿಕಿತ್ಸೆಗಾಗಿ ದಾಖಲಾಗುತ್ತಾರೆ. ಆದರೆ ಅವರ ಮನೆಯವರನ್ನು ತಪಾಸಣೆ ನಡೆಸುತ್ತೇವೆ ಎಂದು ಆಸ್ಪತ್ರೆಯ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಕೊನೆಗೂ ಯಾರೂ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಸೋಂಕಿತರ ಕುಟುಂಬಸ್ಥರು ಸ್ವತಃ ತಾವೇ ಖಾಸಗಿ ಆಸ್ಪತ್ರೆಗೆ ಹೋಗಿ ಸೋಂಕು ತಪಾಸಣೆಯನ್ನು ಮಾಡಬೇಕಾಯಿತು
ಪ್ರಕರಣ ನಂ 2:
ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವ್ಯಕ್ತಿಗಳಲ್ಲಿ ಗುಣಮುಖರಾಗಿ ಮನೆಗೆ ಹೋದ ಬಳಿಕವೂ ಸೋಂಕು ಕಾಣಿಸಿಕೊಂಡಿದೆ. ಗುಣಮುಖರಾದ ರೋಗಿಗಳನ್ನು ಹೊಸ ರೋಗಿಗಳ ಜೊತೆಗೆ ಪ್ರತ್ಯೇಕಿಸುವ ವ್ಯವಸ್ಥೆ ಆಸ್ಪತ್ರೆಯಲ್ಲಿ ಇಲ್ಲ. ಇದರಿಂದ ಕೊನೆಯ ಹಂತದಲ್ಲಿ ಮತ್ತೆ ಇತರ ರೋಗಿಗಳ ಸಂಪರ್ಕದ ಪರಿಣಾಮ ಗುಣಮುಖರಾದ ಸೋಂಕಿತರೂ ಮತ್ತೆ ಸೋಂಕಿಗೆ ತುತ್ತಾದ ಉದಾಹರಣೆಗಳು ಇವೆ.
ಪ್ರಕರಣ ನಂ 3:
ಕೆಲ ದಿನಗಳ ಹಿಂದೆ ಗಲ್ಫ್ ರಾಷ್ಟ್ರದಿಂದ ಇಬ್ಬರು ಮಂಗಳೂರಿಗೆ ಬಂದಿದ್ದರು. ಅವರಿಬ್ಬರನ್ನು ನಗರದ ಹೋಟೆಲ್ ಒಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಒಂದೇ ಕೋಣೆಯಲ್ಲಿ ಅವರಿಬ್ಬರು ಕ್ವಾರಂಟೈನ್‌ನಲ್ಲಿ ಇದ್ದರು. 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿ ಮುಕ್ತಾಯವಾಗುವ ಮುನ್ನ ನಡೆದ ಕೊರೊನಾ ತಪಾಸಣೆಯಲ್ಲಿ ಒಬ್ಬನಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೂಡಲೇ ಆತನನ್ನು ಕೋವಿಡ್ ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಆದರೆ ಆತನ ಜೊತೆಗಿದ್ದ ವ್ಯಕ್ತಿಯನ್ನು ಮನೆಗೆ ಕಲುಹಿಸಿಕೊಡಲಾಗಿದೆ. ಏಳು ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಆದರೆ ಸೋಂಕು ದೃಢಪಟ್ಟ ವ್ಯಕ್ತಿಯ ಜೊತೆಗೆ ಈ ವ್ಯಕ್ತಿಯೂ ಇದ್ದ ಕಾರಣಕ್ಕಾಗಿ ಇವರ ಮೇಲೆ ವಿಶೇಷ ನಿಗಾವಾಗಲಿ ಹಾಗೂ ಹೆಚ್ಚುವರಿಗೆ ಸಾಂಸ್ಥಿಕ ಕ್ವಾರಂಟೈನ್ ಆಗಲಿ ಮಾಡಿಲ್ಲ.
ಪ್ರಕರಣ ನಂ 4:
ಮಂಗಳೂರು ಮೂಲದ ಪ್ರೊಫೆಸರ್ ಒಬ್ಬರು ಕೊರೊನಾ ಹಾಟ್‌ಸ್ಟಾಪ್‌ನಿಂದ ಮಂಗಳೂರಿಗೆ ಜೂನ್ 3 ರಂದು ಮಂಗಳೂರಿಗೆ ಆಗಮಿಸುತ್ತಾರೆ. ಖಾಸಗಿ ವಾಹನದ ಮೂಲಕ ಮಂಗಳೂರಿಗೆ ಆಗಮಿಸಿದ ಅವರನ್ನು ತಮಿಳುನಾಡು ಹಾಗೂ ಕರ್ನಾಟಕ ಗಡಿಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು 15 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡುತ್ತಾರೆ. ಆದರೆ ಇವರು ಬಂದ ಬಳಿಕ ಜಿಲ್ಲೆಯ ಅಧಿಕಾರಿಗಳು ಆಗಲು ಆರೋಗ್ಯ ಸಿಬ್ಬಂದಿಯಾಗಲಿ ಯಾವುದೇ ಫೋನ್ ಕರೆ ಮಾಡಿಲ್ಲ. ಕ್ವಾರಂಟೈನ್‌ನಲ್ಲಿ ಇದ್ದಾರೋ ಇಲ್ಲವೋ ಎಂಬುವುದನ್ನು ಪರಿಶೀಲನೆ ನಡೆಸಿಲ್ಲ.
ಈ ಮೇಲಿನವು ಕೆಲವೊಂದು ಉದಾಹರಣೆಗಳುಮಾತ್ರ. ಇಂತಹಾ ಹಲವಾರು ತಪ್ಪುಗಳು ನಡೆಯುತ್ತಿವೆ. ಸೋಂಕಿತರ ಕ್ವಾರಂಟೈನ್, ಚಿಕಿತ್ಸಾ ವಿಧಾನಗಳಲ್ಲಿ ಹಲವಾರು ತಪ್ಪುಗಳು ಸೋಂಕು ಹೆಚ್ಚಳವಾಗಲು ಕಾರಣವಾಗುತ್ತಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆರಂಭದ ದಿನಗಳಲ್ಲಿ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತ್ತು. ಆದರೆ ದಿನಕಳೆದಂತೆ ಇವುಗಳು ಸಡಿಲಗೊಳ್ಳುತ್ತಾ ಬಂದವು. ಪ್ರಾಯೋಗಿಕವಲ್ಲದ ನಿರ್ಧಾರಗಳು ಹಾಗೂ ಪದೇ ಪದೇ ಬದಲಾಗುತ್ತಿರುವ ಆದೇಶಗಳು ಸರ್ಕಾರದ ಬಗ್ಗೆ ಜನರಲ್ಲೂ ಗೊಂದಲ ಮೂಡಲು ಕಾರಣವಾಗಿದೆ.
“ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಒಂದು ತಿಂಗಳ ಹಿಂದೆ ಸಂಪೂರ್ಣ ಕೈಎತ್ತಿ ಬಿಟ್ಟಿದೆ. ಯಾವುದೇ ಸಿದ್ಧತೆ ಇಲ್ಲದಿರುವುದು ಸದ್ಯದ ಬೆಳವಣಿಗೆಗಳನ್ನು ನೋಡಿದಾಗ ಸ್ಪಷ್ಟವಾಗುತ್ತದೆ” ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ. ರಾಜಕೀಯ ನಾಯಕರ ವೈಫಲ್ಯ ಹಾಗೂ ರಾಜಕೀಯ ನಾಯಕರ ನಡೆಗಳು ಸದ್ಯದ ಪರಿಸ್ಥಿತಿಗೆ ಕಾರಣವಾಗಿವೆ ಎಂದು ಅವರು ಆರೋಪಿಸುತ್ತಾರೆ.
ಕೊರೊನಾ ಸೋಂಕು ನಿಯಂತ್ರಣ ಮಾಡಲು ಕೇವಲ ವಿಶ್ವ ಆರೋಗ್ಯ ಸಂಸ್ಥೆಯ ಗೈಡ್ ಲೈನ್ ಪಾಲನೆ ಮಾತ್ರ ಸಾಲದು. ವಾಸ್ತವವಾಗಿ ಆಡಗುತ್ತಿರುವ ಅಡೆತಡೆಗಳತ್ತ ಸರ್ಕಾರ ಗಮನ ಹರಿಸಬೇಕಾಗಿದೆ. ತಜ್ಞರ ಸಭೆಯನ್ನು ಕರೆದು ವಾಸ್ತವ ಸಮಸ್ಯೆಳ ಕುರಿತಾಗಿ ಚರ್ಚೆ ನಡೆಸಬೇಕಾಗಿದೆ. ಪ್ರಾಯೋಗಿಕವಾಗಿ ನಮ್ಮಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸಿ ಅದನ್ನು ಸರಿಪಡಿಸಲು ಮುಂದಾಗಬೇಕಾಗಿದೆ. ಇತರ ರಾಜ್ಯಗಳು ಹಾಗೂ ದೇಶಗಳಲ್ಲಿ ನಡೆದ ತಪ್ಪು ಹೆಜ್ಜೆಗಳು, ನಿರ್ಧಾರಗಳು ನಮಗೆ ಪಾಠವಾಗಬೇಕಾಗಿದೆ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ವಾಸ್ತವವನ್ನು ಅರಿತು ಸರ್ಕಾರ ಹೆಜ್ಜೆ ಇಡಬೇಕಾಗಿದೆ.
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...