ಹೊಗೆ ಗೂಡಾದ ದಿಲ್ಲಿಯಲ್ಲಿ 'ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ' ಘೋಷಣೆ

ಹೊಸದಿಲ್ಲಿ: ದೀಪಾವಳಿ ನಂತರ ದಿಲ್ಲಿ ಅಕ್ಷರಶಃ ಗೂಡಿನಂತಾಗಿದೆ. ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯುಗುಣಮಟ್ಟ ಸೂಚ್ಯಂಕ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ನೇಮಿಸಿರುವ ಸಮಿತಿಯೊಂದು ದಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಸಿಎಂ ಕೇಜ್ರಿವಾಲ್ ಕೂಡ ಶಾಲಾ ಮಕ್ಕಳು ಮತ್ತು ನಿವಾಸಿಗಳಿಗೆ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ಪರಿಸರ ಮಾಲಿನ್ಯ (ನಿಯಂತ್ರಣ ಮತ್ತು ತಡೆ) ಪ್ರಾಧಿಕಾರ (ಇಪಿಸಿಎ) ನವೆಂಬರ್ 5ರವರೆಗೆ ದೆಹಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ನಿರ್ಮಾಣ ಕಾರ್ಯಗಳನ್ನು ಮಾಡದಂತೆ ಆದೇಶಿಸಿದೆ. ಜತೆಗೆ ಚಳಿಗಾಲದಲ್ಲಿ ಪಟಾಕಿ ಸಿಡಿಸುವುದನ್ನು ಕೂಡ ಕಡ್ಡಾಯವಾಗಿ ನಿಷೇಧಿಸಿದೆ. ದೆಹೆಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯುಗುಣಮಟ್ಟವು ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ ಮಕ್ಕಲ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಇದನ್ನು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿಯಾಗಿ ಪರಿಗಣಿಸಬೇಕು. ವಾಯು ಮಾಲಿನ್ಯ ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಪಿಸಿಎ ಅಧ್ಯಕ್ಷ ಭೂರಿ ಲಾಲ್‌ ಅವರು ತಿಳಿಸಿದ್ದಾರೆ. ದೆಹಲಿ, ಹರಿಯಾಣ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೂ ಈ ಕುರಿತು ಪತ್ರ ಬರೆದಿದ್ದಾರೆ. ವಾಯು ಗುಣಮಟ್ಟ, ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ (SAFAR)ಪ್ರಕಾರ ಶುಕ್ರವಾರ ಬೆಳಗ್ಗೆ 11:30 ರ ವೇಳೆಗೆ () 480ಕ್ಕೆ ಕುಸಿದಿದೆ. ಅಂದ್ರೆ ತೀವ್ರ ಕಳಪೆ (ವೆರಿ ಪೂರ್‌) ಮಟ್ಟಕ್ಕೆ ಕುಸಿದಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಮಾಡಿರುವ ಅಪಾಯಕಾರಿ ಮಟ್ಟಕ್ಕಿಂತಲೂ ಹಲವು ಪಟ್ಟು ಹೆಚ್ಚಿದೆ. ದೆಹಲಿಯ ಹಲವಾರು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಕುಸಿದೆ. ಪೂಸಾ ಬಳಿ 480, ಲೂದಿ ರಸ್ತೆ 436, ವಿಮಾನನಿಲ್ದಾಣ ಟರ್ಮಿನಲ್‌ ಟಿ3 460, ನೋಯ್ಡಾ 668, ಮಥುರಾ ರಸ್ತೆ 413, ಆಯಾನಗರ್‌ 477, ದೆಹಲಿ ಐಐಟಿ 483, ಧೀರ್‌ಪುರ 553ರಷ್ಟಿದೆ. ಎಕ್ಯೂಐ ಎಂದರೇನು ? ಎಕ್ಯೂಐ ಎಂದರೆ ವಾಯು ಗುಣಮಟ್ಟವನ್ನು ಅಳೆಯುವ ಸೂಚಕ. ಇದು ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ವಾಯು ಮಾಲಿನ್ಯಗಳ ಬಗ್ಗೆ ಮಾನಿಟರ್ ಮಾಡುತ್ತದೆ. ಗಾಳಿಯಲ್ಲಿರುವ ಓಝೋನ್, ಸಣ್ಣ ಕಣಗಳಿಂದಾದ ವಸ್ತುಗಳು, ಸಾರಜನಕ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಮತ್ತು ಸಲ್ಫರ್ ಸಂಯುಕ್ತಗಳಂತ ಮಾಲಿನ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ವಾಯು ಗುಣಮಟ್ಟದ ಹಂತಗಳು ಉತ್ತಮ : 0-50 ತೃಪ್ತಿದಾಯಕ : 51-100 ಕಲುಷಿತ : 101-200 ಕಳಪೆ: 201-300 ತೀವ್ರ ಕಳಪೆ: 301-400 ಗಂಭೀರ: 401-500 ಗಂಭೀರ ತುರ್ತು ಪರಿಸ್ಥಿತಿ: 500ಕ್ಕಿಂತ ಹೆಚ್ಚು


from India & World News in Kannada | VK Polls https://ift.tt/36q9ITV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...