ಹೊಸದಿಲ್ಲಿ: ಪ್ರವಾಸಿ ವಿರುಯದ್ಧ ನವೆಂಬರ್‌ನಲ್ಲಿ ನಡೆಯಲಿರುವ ಟಿ20 ಮತ್ತು ಟೆಸ್ಟ್ ಸರಣಿಗಳ ಸಲುವಾಗಿ ಭಾರತ ತಂಡವನ್ನು ಆಯ್ಕೆ ಸಮಿತಿ ಶುಕ್ರವಾರ ಪ್ರಕಟ ಮಾಡಿದ್ದು, ಕೇರಳದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಟಿ20 ತಂಡದಲ್ಲಿ ಸ್ಥಾನ ಲಭ್ಯವಾಗಿದೆ. ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಗೋವಾ ಎದುರು ದ್ವಿಶತಕ ಬಾರಿಸಿ ಅಬ್ಬರಿಸಿದ್ದ ಸಂಜು ಅವರನ್ನು ಭಾರತ ತಂಡದಲ್ಲಿ ಆಡಿಸುತ್ತಿಲ್ಲ ಏಕೆ ಎಂದು ಭಾರಿ ಚರ್ಚೆಯೇ ನಡೆದಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಶತಕ ಬಾರಿಸಿ ಮಿಂಚಿರುವ ಸಂಜು ಸ್ಯಾಮನ್ಸನ್, ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಬ್ಯಾಟ್ಸ್‌ಮನ್. ಹೀಗಾಗಿ ಕೊನೆಗೂ ಇದನ್ನು ಮನಗಂಡ ಟೀಮ್ ಇಂಡಿಯಾ ಆಯ್ಕೆ ಸಮಿತಿ ಸಂಜುಗೆ ಹೆಚ್ಚುವರಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಬಾಂಗ್ಲಾ ವಿರುದ್ಧದ ಸರಣಿಗೆ ಆಯ್ಕೆ ಮಾಡಿದೆ. ಈ ಬಗ್ಗೆ ಟ್ವಿಟರ್ ಮೂಲಕ ಸಂತಸ ಹೊರ ಹಾಕಿರುವ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ , "ಇದು ಒಳ್ಳೆಯ ಸುದ್ದಿ. ಸಂಜು ಸ್ಯಾಮನ್ಸನ್ ಭಾರತ ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ಶುಭಾಶಯಗಳು. ಉತ್ತಮ ತಂತ್ರಗಾರಿಕೆ ಜೊತೆಗೆ ಏಕಾಗ್ರತೆ ಸೇರಿದರೆ ಮತ್ತಷ್ಟು ಸಾಧನೆ ಮೂಡಿಬರಲಿದೆ. ತಡವಾಗಿಯಾದರೂ ಸಿಕ್ಕಿರುವ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಿ," ಎಂದು ಸ್ಯಾಮ್ಸನ್‌ನೆ ಸಲಹೆ ನೀಡಿದ್ದಾರೆ. ಗಂಭೀರ್‌ಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಗಬೇಕು ಎಂದು ಗಂಭೀರ್ ಈ ಹಿಂದೆ ಹಲವು ಬಾರಿ ತಮ್ಮ ಅಭಿಪ್ರಾಯ ಹೊರಹಾಕಿದ್ದರು. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತದ ಬಲಿಷ್ಠ ತಂಡ ರಚನೆಯ ಕಡೆಗೆ ಟೀಮ್ ಮ್ಯಾನೇಜ್ಮೆಂಟ್ ಪ್ರಯತ್ನಿಸುತ್ತಿದೆ. ಅದರಲ್ಲೂ ಧೋನಿ ಭವಿಷ್ಯ ಅತಂತ್ರವಾಗಿರುವ ಸಂದರ್ಭದಲ್ಲಿ ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಆಗಿದ್ದಾರೆ. ಆದರೆ, ಪಂತ್ ವೈಫಲ್ಯ ಆಯ್ಕೆದಾರರಿಗೆ ತಲೆನೋವಾಗಿದೆ. ಇದಕ್ಕೆ ಪರಿಹಾರವಾಗಿ ಸಂಜು ಸ್ಯಾಮನ್ಸನ್ ಅವರನ್ನು ತಂಡದಲ್ಲಿ ತರಲಾಗಿದೆ. ಭಾರತ ತಂಡ ಬಾಂಗ್ಲಾದೇಶ ವಿರಯದ್ಧ ನವೆಂಬರ್ 3ರಂದು ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯವನ್ನಾಡಲಿದೆ. ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, , ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಕೃಣಾಲ್ ಪಾಂಡ್ಯ, ಯುಜ್ವೇಂದ್ರ ಚಹಲ್, ರಾಹುಲ್ ಚಹರ್, ದೀಪರ್ ಚಹರ್, ಖಲೀಲ್ ಅಹ್ಮದ್, ಶಿವಂ ದುಬೇ, ಶಾರ್ದುಲ್ ಠಾಕೂರ್. ಟೆಸ್ಟ್ ಸರಣಿಗೆ ಭಾರತ ತಂಡವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಆರ್. ಅಶ್ವಿನ್, ಆರ್. ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶುಭಮನ್ ಗಿಲ್, ರಿಷಭ್ ಪಂತ್.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31Q6V2V