ರಾಯಪುರ: ಪತ್ನಿ ಹಾಗೂ ಮಕ್ಕಳ ಜತೆ ಶಾಪಿಂಗ್ ಮಾಡುತ್ತಿದ್ದ ಪೇದೆಯೊಬ್ಬರನ್ನು ಮಾವೋವಾದಿಗಳು ಹತ್ಯೆ ಮಾಡಿರುವ ಭೀಕರ ಘಟನೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಸಂಡೆ ವೇಕ್ಲಿ ಮಾರುಕಟ್ಟೆಯಲ್ಲಿ ನಡೆದಿದೆ. ಚೈತು ಕಡ್ತಿ ಎಂಬ ಪೇದೆಯನ್ನು ಹಿಂಬಾಲಿಸಿಕೊಂಡು ಬಂದ ನಾಲ್ಕೈದು ಮಾವೋವಾದಿಗಳ ತಂಡ, ಪತ್ನಿ ಹಾಗೂ ಮಕ್ಕಳ ಎದುರೇ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಭೀಕರ ಕೃತ್ಯದಿಂದ ಮಾರುಕಟ್ಟೆಯಲ್ಲಿ ನೆರೆದಿದ್ದ ಜನರು ಭಯಭೀತರಾಗಿದ್ದಾರೆ. ಮಾವೋವಾದಿಗಳು ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಧ್ಯತೆ ಇದ್ದು, ಒಬ್ಬೊಬ್ಬರಾಗಿ ತಿರುಗಾಡಬೇಡಿ ಎಂದು ಎಲ್ಲ ಪೊಲೀಸರಿಗೂ ಎಚ್ಚರಿಕೆ ನೀಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚಿಗಷ್ಟೆ ಮಿರ್ತುರ್ ಪೊಲೀಸ್ ಠಾಣೆಗೆ ನೇಮಕಗೊಂಡಿದ್ದ ಕಡ್ತಿ, ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಹೀಗಾಗಿ ಮಾವೋವಾದಿಗಳು ಕಡ್ತಿ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
from India & World News in Kannada | VK Polls http://bit.ly/2FqtDpW