ಜನ ಸಾಮಾನ್ಯರ ಜೇಬಿನಿಂದ ತೆಗೆದು ಮೋದಿ ತನ್ನ ಸ್ನೇಹಿತರಿಗೆ ನೀಡುತ್ತಿದ್ದಾರೆ: ಪೆಟ್ರೋಲ್‌ ದರ ಏರಿಕೆಗೆ ರಾಹುಲ್‌ ಗಾಂಧಿ ಗರಂ

ಹೊಸದಿಲ್ಲಿ: ಹಾಗೂ ಡೀಸೆಲ್‌ ದರ ಸತತ ಹನ್ನೆರಡನೇ ದಿನವೂ ಏರಿಕೆಯಾಗಿದೆ. ಇದರ ವಿರುದ್ದ ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್‌ ನಾಯಕ, ವಯನಾಡ್‌ ಸಂಸದ ಟ್ವಿಟ್ಟರ್ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನ ಸಾಮಾನ್ಯರ ಜೇಬಿನಿಂದ ತೆಗೆದು ತನ್ನ ಸ್ನೇಹಿತರಿಗೆ ನೀಡುತ್ತಿದ್ದಾರೆ ಎಂದು ನರೇಂದ್ರ ಮೋದಿ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ. ಪೆಟ್ರೋಲ್‌ ಪಂಪ್‌ನಲ್ಲಿ ವಾಹನಗಳಿಗೆ ಇಂಧನ ತುಂಬಿಸುವಾಗ ವೇಗವಾಗಿ ಏರಿಕೆಯಾಗುತ್ತಿರುವ ಮೀಟರ್‌ ನೋಡುವಾಗ ನೆನಪಿಡಿ, ಕಚ್ಚಾ ತೈಲದ ಬೆಲೆ ಏರಿಕೆಯಾಗಿಲ್ಲ. ಇಳಿಕೆಯಾಗಿದೆ ಎನ್ನುವುದನ್ನು ಮರೆಯಬೇಡಿ. ಪೆಟ್ರೋಲ್‌ ದರ ಲೀಟರ್‌ಗೆ ನೂರು ರುಪಾಯಿ ಇದೆ. ನಿಮ್ಮ ಜೇಬನ್ನು ಖಾಲಿ ಮಾಡಿ ತನ್ನ ಸ್ನೇಹಿತರಿಗೆ ಸಹಾಯ ಮಾಡುವ ಮಹಾನ್‌ ಕಾರ್ಯವನ್ನು ಮೋದಿ ಸರ್ಕಾರ ಮಾಡುತ್ತಿದೆ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಅಲ್ಲದೇ ಟ್ವೀಟ್‌ನಲ್ಲಿ ಎನ್ನುವ ಹ್ಯಾಶ್‌ ಟ್ಯಾಗ್‌ ಅನ್ನೂ ಲಗತ್ತಿಸಿದ್ದಾರೆ. ಆ ಮೂಲಕ ತೈಲ ದರ ಏರಿಕೆ ಮಾಡುವ ಮೂಲಕ ಬಿಜೆಪಿ ಲೂಟಿ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದರ ಜತೆಗೆ ಕಾಂಗ್ರೆಸ್‌ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರ ಅವರ ಪತಿ ರಾಬರ್ಟ್‌ ವಾದ್ರ ಸೈಕಲ್‌ನಲ್ಲಿ ತೆರಳುವ ಮೂಲಕ ಪೆಟ್ರೋಲ್‌ ದರ ಏರಿಕೆಯನ್ನು ಖಂಡಿಸಿದ್ದಾರೆ. ದೆಹಲಿಯ ಖಾನ್‌ ಮಾರುಕಟ್ಟೆಯಿಂದ ತಮ್ಮ ಕಚೇರಿ ವರೆಗೆ ಸೈಕಲ್‌ನಲ್ಲಿ ತೆರಳುವ ಮೂಲಕ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ್ದಾರೆ. ದೇಶದ ಹಲವು ಕಡೆ ಪೆಟ್ರೋಲ್ ಶತಕ ಬಾರಿಸಿ ಮುನ್ನುಗುತ್ತಿದ್ದು, ಮೆಟ್ರೋ ನಗರಗಳಲ್ಲಿ ನೂರರ ಸನಿಹ ಇದೆ. ಇನ್ನೂ ಪೆಟ್ರೋಲ್‌ ದರ ಏರಿಕೆಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೇ ಈಗ ಉಂಟಾಗುತ್ತಿರುವ ತೈಲ ಬೆಲೆ ಏರಿಕೆಗೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದ್ದಾರೆ.


from India & World News in Kannada | VK Polls https://ift.tt/3pL2r9w

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...