ಮಾವು ಇಳುವರಿಗೆ ಕಲ್ಲುಹಾಕಿದ ಮಳೆ; ಬೆಳೆಗಾರನಿಗೆ ಹುಳಿಯಾಗುವುದೇ ಮಾವು?; ಇಲ್ಲಿದೆ ಪರಿಹಾರ!

ಮಾಗಡಿ ಗ್ರಾಮಾಂತರ ರಾಮನಗರ: ಕಾಯಿ ಕಟ್ಟಲು ಸಿದ್ದವಾಗಿದ್ದ ಜಿಲ್ಲೆಯ ಮಾವಿನ ಹೂವುಗಳು ಅಕಾಲಿಕ ಮಳೆಯಿಂದ ಧರೆಗುರುಳಿವೆ. ಜಿಲ್ಲೆಯ 33487 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ಮಾವಿನ ಬೆಳೆಗೆ ಕಳೆದರೆರಡು ದಿನದ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಶೇ.38 ರಷ್ಟು ಇಳುವರಿ ಕುಸಿತದ ಆತಂಕ ಎದುರಾಗಿದೆ ಎಂದು ಕೃಷಿ ತಜ್ಞರು ಅಂದಾಜಿಸಿದ್ದಾರೆ. ಮುಂಗಾರು ಫಲಪ್ರದವಾಗಿತ್ತು ಈ ಬಾರಿ ಮುಂಗಾರು ಫಲಪ್ರದವಾಗಿದ್ದು, ಮಾವಿನ ಮರಗಳು ಮೈ ತುಂಬ ಹೂವು ಹೊದ್ದು ನಿಂತಿದ್ದವು. ಕೆಲವು ಕಡೆ ಪೀಚು ಗಾತ್ರದ ಕಾಯಿಗಳು ಅರಳಿವೆ. ಹೀಗಾಗಿ ಈ ಬಾರಿ ಉತ್ತಮ ಫಸಲು ಸಿಗುವ ನಿರೀಕ್ಷೆ ಬೆಳೆಗಾರರದ್ದು. ಆದರೆ, ಅಕಾಲಿಕ ಮಳೆಯಿಂದಾಗಿ ಹೂವಿನ ಜೊತೆಗೆ ಪೀಚು ಕಾಯಿಯೂ ಉದುರುವ ಆತಂಕ ಎದುರಾಗಿದೆ. ಈಗ ಬೇಡವಾಗಿತ್ತು ಈ ಬಾರಿ ನವೆಂಬರ್‌, ಡಿಸೆಂಬರ್‌ವರೆಗೆ ಸುರಿದ ಮಳೆಯೇ ಮಾವಿನ ಮರಗಳಿಗೆ ಸಾಕಿತ್ತು. ಉತ್ತಮ ಮಳೆಯಿಂದಾಗಿ ಸಾಕಷ್ಟು ಕಡೆ ಕಾಯಿ ಸಹ ಕಚ್ಚಿದ್ದವು. ಆದರೆ ಈಗ ಬೀಳುತ್ತಿರುವ ಮಳೆಯಿಂದ ಕಾಯಿ ಉದುರುವ ಸಾಧ್ಯತೆ ಹೆಚ್ಚು. ಮಳೆ ಹೀಗೆಯೇ ಇನ್ನೆರಡು ದಿನ ಮುಂದುವರಿದರೂ ಶೇ 80ರಷ್ಟು ಬೆಳೆ ಹಾಳಾಗುತ್ತದೆ. ಅದರಲ್ಲೂ ಬದಾಮಿ ತಳಿಯ ಹೆಚ್ಚು ಉಳಿಯುವುದಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು. ತೇವಾಂಶವೇ ಸಾಕಿತ್ತು! ಹಿಂದೆ ಎಂದೂ ಜನವರಿಯಲ್ಲಿ ಈ ರೀತಿ ಅಕಾಲಿಕ ಮಳೆ ಆಗಿರಲಿಲ್ಲ. ಜನವರಿ,ಫೆಬ್ರುವರಿಯಲ್ಲಿ ಬೀಳುವ ಇಬ್ಬನಿಯ ತೇವಾಂಶವೇ ಮರಗಳಿಗೆ ಸಾಕಿತ್ತು ಎನ್ನುವ ರೈತರು. ಇಲ್ಲಿದೆ ಪರಿಹಾರ ಅಕಾಲಿಕ ಮಳೆಯಿಂದಾಗಿ ಮಾವಿನ ಹೂ ತೆನೆ ಕಪ್ಪಾಗುವುದು ಹಾಗೂ ಬೂದಿ ರೋಗ ಬರುವ ಸಾಧ್ಯತೆ ಇದೆ. ಅದರ ನಿಯಂತ್ರಣಕ್ಕೆ ಬೆಳೆಗಾರರು ಹೆಕ್ಸಾಕೊನಾಜೋಲ್‌ 2 ಮಿ.ಲೀ. ಅಥವಾ ಥಯೋಫಿನೆಟ್‌ ಮಿಡೈಲ್‌ 1 ಗ್ರಾಂ ಅಥವಾ ಕಾರ್ಬನ್‌ಡಾಜಿಮ್‌ 1.5 ಗ್ರಾಂ ಅಥವಾ ಟ್ರೆತ್ರೖಸಕ್ಲೊಜೋಲ್‌ 0.25 ಗ್ರಾಂ ಈ ನಾಲ್ಕರಲ್ಲಿ ಒಂದು ರಾಸಾಯನಿಕ ಔಷಧವನ್ನು ಪ್ರತಿ ಒಂದು ಲೀಟರ್‌ ನೀರಿನಲ್ಲಿ ಬೆರೆಸಿ ಬೆಳೆಗೆ ಸಿಂಪಡಿಸಬೇಕು ಎನ್ನುತ್ತಾರೆ ಅಧಿಕಾರಿಗಳು. ಮಾವು ಹೂ ಬಿಟ್ಟಿರುವ ಕಾರಣ ಈ ಅವಧಿಯಲ್ಲಿ ಮಳೆಯ ಅವಶ್ಯಕತೆ ಇರಲಿಲ್ಲ. ತೇವಾಂಶ ಹೆಚ್ಚಾದಷ್ಟು ಹೂವು ಉದುರುವ ಜೊತೆಗೆ ಅದರಲ್ಲಿ ಬೂದಿ ರೋಗ ಹರಡುವ ಸಾಧ್ಯತೆ ಇದೆ. ಆಗ ರೈತರು ಅಗತ್ಯ ಔಷಧೋಪಚಾರ ಮಾಡಬೇಕಾಗುತ್ತದೆ. ಮುನೇಗೌಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ


from India & World News in Kannada | VK Polls https://ift.tt/3qQGcAi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...