ಮಂಗಳೂರು: ಗ್ರಾಮಾಂತರ ಪ್ರದೇಶಗಳಿಂದ ಮಂಗಳೂರು ನಗರ ವ್ಯಾಪ್ತಿಯೊಳಗೆ ತುರ್ತು ಸಂದರ್ಭದಲ್ಲಿ, ರೋಗಿಗಳನ್ನು ಹಾಗೂ ವಯೋವೃದ್ಧರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಬಂದು ಹೋಗುವಾಗ ಮತ್ತು ನಗರದೊಳಗೆ ಪ್ರಯಾಣಿಕರನ್ನು ಅವರು ಹೇಳಿರುವ ಸ್ಥಳಗಳಿಗೆ ತಲುಪಿಸುವಂತಹ ಆಟೋರಿಕ್ಷಾಗಳನ್ನು ಸುಲಭವಾಗಿ ಗುರುತಿಸುವ ಸಲುವಾಗಿ, ಈಗಾಗಲೇ ನಿರ್ಣಯಿಸಿರುವಂತೆ ಆಟೋರಿಕ್ಷಾ ಮುಂಬದಿ ಕವಚದ ಮೇಲೆ ಹಸಿರು ಬಣ್ಣದ ಪಟ್ಟಿ (ಬಜಾಜ್ ಗ್ರೀನ್) ಕಡ್ಡಾಯವಾಗಿ ಬಳಿದು ಪ್ರದರ್ಶಿಸಬೇಕೆಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ನಿರ್ದೇಶಿಸಿದೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ತಿಳಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಹನದ ಬಾಡಿ ಮೇಲೆ ಹಸಿರು ಪಟ್ಟಿ ಇದೆ. ಇದೇ ರೀತಿಯಲ್ಲಿ ಮಂಗಳೂರಿನ ಆಟೋ ರಿಕ್ಷಾದ ಮೇಲೆ ಇನ್ನು ಮುಂದೆ ಹಸಿರು ಪಟ್ಟಿ ಇರಲಿದೆ.
from India & World News in Kannada | VK Polls https://ift.tt/2N0nAyH