86ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ?: 22 ದಿನ ಬಾಕಿ, ಸಿದ್ಧತೆಗಳೇ ಆಗಿಲ್ಲ; ಅನುದಾನವೂ ಇಲ್ಲ!

ರಾಜು ನದಾಫ ಹಾವೇರಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ 22 ದಿನಗಳು ಬಾಕಿ ಇವೆ. ಆದರೆ ಒಂದೆಡೆ ಕೋವಿಡ್‌ ಸಂಕಷ್ಟ, ಇನ್ನೊಂದೆಡೆ ಸಮ್ಮೇಳನ ತಯಾರಿಗೆ ಸರಕಾರ ನಯಾಪೈಸೆ ಕೊಟ್ಟಿಲ್ಲ. ಸಿದ್ಧತೆಗಳೂ ಆಮೆಗತಿಯಲ್ಲಿ ಸಾಗಿವೆ. ಹಾಗಾಗಿ ಈಗಿನ ಪರಿಸ್ಥಿತಿ ಗಮನಿಸಿದರೆ ಘೋಷಿತ ದಿನಾಂಕದಂದು ಸಮ್ಮೇಳನ ನಡೆಯುವ ಯಾವುದೇ ಸಾಧ್ಯತೆ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ ಉಪಸ್ಥಿತಿಯಲ್ಲಿ ಎರಡು ಬಾರಿ ಪೂರ್ವಭಾವಿ ಸಿದ್ಧತಾ ಸಭೆಗಳು ನಡೆದಿವೆ. ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ನೇತೃತ್ವದಲ್ಲಿ ರಚಿಸಿದ 17 ಸಮಿತಿಗಳು ಸಹ ಪೂರ್ವ ಸಿದ್ಧತಾ ಸಭೆ ನಡೆಸಿವೆ. ಇದನ್ನು ಹೊರತುಪಡಿಸಿ ಮೂಲ ಸೌಕರ್ಯದ ಕಾಮಗಾರಿಗಳು ಇನ್ನೂ ಆಮೆಗತಿಯಲ್ಲೇ ಸಾಗಿವೆ. ನಿಗದಿತ ಫೆ.26ರಿಂದ 28ರವರೆಗಿನ ಮೂರು ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಸಾಹಿತ್ಯ ಪ್ರೇಮಿಗಳು ಭಾಗವಹಿಸುವ ಅಂದಾಜಿದೆ. ಸ್ಥಳೀಯರನ್ನು ಹೊರತುಪಡಿಸಿ ಪರ ಜಿಲ್ಲೆ, ರಾಜ್ಯ, ಹೊರ ರಾಜ್ಯದಿಂದ ಬರುವವರಿಗೆ ವಸತಿ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸುವುದು ಸುಲಭದ ಮಾತಲ್ಲ. ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ಆಗಮಿಸಿದ್ದ ವೇಳೆ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಸಮ್ಮೇಳನ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಜರುಗಲಿರುವ ಸಭೆಯಲ್ಲಿ ಅಂತಿಮ ನಿರ್ಣಯ ಪ್ರಕಟಗೊಳ್ಳಲಿದೆ ಎಂದು ಹೇಳಿದ್ದಾರೆ. ಸಮ್ಮೇಳನಾತಿಥ್ಯದ ಪ್ರಚಲಿತ ವಿದ್ಯಮಾನಗಳು ಸಮ್ಮೇಳನ ಅನುಮಾನ ಎನ್ನುವತ್ತಲೇ ಬೆರಳು ತೋರಿಸುವಂತಾಗಿದೆ. ಸರಕಾರಕ್ಕೆ ಜಿಲ್ಲಾಡಳಿತ ಸಲ್ಲಿಸಿರುವ 15 ಕೋಟಿ ರೂ. ಪ್ರಸ್ತಾವನೆಗೆ ಈವರೆಗೂ ಹಸಿರು ನಿಶಾನೆ ಸಿಕ್ಕಿಲ್ಲ. ಜಿಲ್ಲೆಯಲ್ಲಿ 3 ಸಚಿವರು, 3 ಶಾಸಕರು ಹಾಗೂ 3 ವಿಧಾನ ಪರಿಷತ್‌ ಸದಸ್ಯರಿದ್ದರೂ ಯಾರೊಬ್ಬರೂ ಚಕಾರ ಎತ್ತದಿರುವುದು ಸಮ್ಮೇಳನ ಮುಂದೂಡಿಕೆಯತ್ತ ಸಾಗುವಂತಾಗಿದೆ. ಮೂಲಗಳ ಪ್ರಕಾರ ಸಮ್ಮೇಳನ ಏಪ್ರಿಲ್‌ ಅಥವಾ ಮೇನಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಂಟಿ ಅಧಿವೇಶನ ಮುಗಿದ ತಕ್ಷಣ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಅಗತ್ಯ ಮತ್ತು ಸಮ್ಮೇಳನ ನಡೆಸಬೇಕೋ ಮುಂದೂಡುವುದು ಸೂಕ್ತವೋ ಎನ್ನುವ ನಿರ್ಧಾರ ಪ್ರಕಟವಾಗಲಿದೆ. ಕೋವಿಡ್‌ ಅಲೆ ಆಧರಿಸಿ ಸಾಧಕ-ಬಾಧಕ ಅವಲೋಕಿಸಿಯೇ ಸಮ್ಮೇಳನ ನಡೆಯಲಿದೆ. ಬಸವರಾಜ ಬೊಮ್ಮಾಯಿ, ಜಿಲ್ಲಾಉಸ್ತುವಾರಿ ಸಚಿವ ಸಮ್ಮೇಳನ ಮುಂದೂಡುವ ಕುರಿತು ನಿರ್ಣಯ ಕೈಗೊಳ್ಳಬೇಕಾಗಿರುವುದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸ್ವಾಗತ ಸಮಿತಿ. ಮೂಲ ಸೌಕರ್ಯ ಒದಗಿಸುವುದಕ್ಕೂ ಸಮ್ಮೇಳನಕ್ಕೆ ಅಗತ್ಯ ಅನುದಾನ ಬಿಡುಗಡೆಗೂ ಸಂಬಂಧ ಇಲ್ಲ. ಸಮ್ಮೇಳನ ಆಯೋಜನೆಗೆ ಸರಕಾರ ಅಗತ್ಯ ಅನುದಾನ ನೀಡುವ ವಿಶ್ವಾಸವಿದೆ. ಡಾ. ಮನು ಬಳಿಗಾರ, ರಾಜ್ಯಾಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು


from India & World News in Kannada | VK Polls https://ift.tt/3tDrPBo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...