ಬಿಬಿಎಂಪಿ ಕಾಯಿದೆ ರದ್ದು ಕೋರಿ ಸಲ್ಲಿಸಿದ್ದ ಪಿಐಎಲ್‌ ಫೆಬ್ರವರಿ 17ಕ್ಕೆ ವಿಚಾರಣೆ

ಬೆಂಗಳೂರು: ಬೃಹತ್‌ ಮಹಾನಗರ ಪಾಲಿಕೆ ಕಾಯಿದೆ- 2020 ರದ್ದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ನಲ್ಲಿ ಮಂಗಳವಾರ ವಿಚಾರಣೆಗೆ ಬಂದಿದ್ದು, ಫೆ.17ಕ್ಕೆ ಮುಂದೂಡಿಕೆಯಾಗಿದೆ. ಬೆಂಗಳೂರಿನ ಎಲ್‌.ಎಸ್‌. ಮಲ್ಲಿಕಾರ್ಜುನ್‌ ಬಿಬಿಎಂಪಿ ಕಾಯಿದೆಯ ಕೆಲವು ಸೆಕ್ಷನ್‌ಗಳು ಸಂವಿಧಾನ ಹಾಗೂ ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯಿದೆಗೆ ತದ್ವಿರುದ್ಧವಾಗಿವೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಪರಿಶೀಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಬಿಬಿಎಂಪಿ ಕಾಯಿದೆಯ ಕೆಲ ಸೆಕ್ಷನ್‌ಗಳ ಬಗ್ಗೆ ಆಕ್ಷೇಪ ಎತ್ತಲಾಗಿದೆ. ಆದರೆ, ಮನವಿಯಲ್ಲಿಇಡೀ ಕಾಯಿದೆಯ ರದ್ದು ಕೋರಲಾಗಿದೆ. ಕೆಲ ಸೆಕ್ಷನ್‌ಗಳಿಗಾಗಿ ಇಡೀ ಕಾಯಿದೆಯನ್ನೇ ಸಂಪೂರ್ಣ ರದ್ದುಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಅರ್ಜಿಯಲ್ಲಿನ ಮನವಿಯನ್ನು ಮಾರ್ಪಾಡು ಮಾಡಿ ಸಲ್ಲಿಸುವಂತೆ ಸೂಚಿಸಿತು. ಅದಕ್ಕೆ ಅರ್ಜಿದಾರ ಪರ ವಕೀಲ ಜಿ.ಆರ್‌. ಮೋಹನ್‌ ಒಪ್ಪಿದರು. ಇದರಿಂದ ಅರ್ಜಿ ಮಾರ್ಪಡಿಸಲು ಕಾಲಾವಕಾಶ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿತು. ಮೇಯರ್‌ ಹಾಗೂ ಉಪ ಮೇಯರ್‌ಗಳ ಮೀಸಲಿಗೆ ಸಂಬಂಧಿಸಿದ ಬಿಬಿಎಂಪಿ ಕಾಯಿದೆ-2020ರ ಸೆಕ್ಷನ್‌ 57/58, ಸಂವಿಧಾನದ ಪರಿಚ್ಛೇದ 243(ಟಿ)(ಯು)ಗೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ.


from India & World News in Kannada | VK Polls https://ift.tt/2NSrtpW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...