ಸಿಜೆಐ ವಿರುದ್ಧ ಮತ್ತೊಂದು ಟ್ವೀಟ್‌: ಪ್ರಶಾಂತ್‌ ಭೂಷಣ್‌ ಮೇಲೆ ಮತ್ತೆ ನ್ಯಾಯಾಂಗ ನಿಂದನೆ ಆರೋಪ!

ಹೊಸದಿಲ್ಲಿ: ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾದ ಅರವಿಂದ ಬೊಬ್ಡೆ ಅವರನ್ನು ಟೀಕಿಸಿದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಒಂದು ರೂಪಾಯಿ ದಂಡ ತೆರುವ ಶಿಕ್ಷೆಗೆ ಗುರಿಯಾಗಿದ್ದ ಹಿರಿಯ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಇದೀಗ ಮತ್ತೊಂದು ನ್ಯಾಯಾಂಗ ನಿಂದನೆಗೆ ಗುರಿಯಾಗುವ ಎಲ್ಲಾ ಸಾಧ್ಯತೆಗಳು ಇದೆ. ಈ ಬಾರಿಯು ದೇಶದ ಮುಖ್ಯನ್ಯಾಯಮೂರ್ತಿಗಳ ವಿರುದ್ಧ ಪ್ರಶಾಂತ್‌ ಭೂಷಣ್‌ ಟೀಕೆ ಮಾಡಿ ಟ್ವೀಟ್‌ ಮಾಡಿದ್ದಾರೆ. ಸಿಜೆಐ ಎಸ್ ಎ ಬೋಬ್ಡೆ ಅವರು ಖಾಸಗಿ ಕಾರ್ಯಕ್ರಮಕ್ಕೆ ಮಧ್ಯಪ್ರದೇಶ ಸರ್ಕಾರದ ಹೆಲಿಕಾಪ್ಟರ್ ಬಳಕೆ ಮಾಡಿದ ಬಗ್ಗೆ ಪ್ರಸ್ತಾಪಿಸಿ, ಅಲ್ಲಿನ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಸಂಬಂಧಿಸಿದ ಗಂಭೀರ ಪ್ರಕರಣವೊಂದರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಮುನ್ನ ಇಂತಹ ಅನುಕೂಲ ಪಡೆದಿರುವುದು ಸರಿಯೇ ಎಂಬ ಪ್ರಶ್ನೆ ಎತ್ತಿದ್ದಾರೆ. ಕನ್ಹಾ ನ್ಯಾಷನಲ್ ಪಾರ್ಕ್ ಭೇಟಿ ವೇಳೆ ಸಿಜೆಐ ಬೋಬ್ಡೆ ಅವರು ಮಧ್ಯಪ್ರದೇಶ ಸರ್ಕಾರದ ಹೆಲಿಕಾಪ್ಟರ್ ಬಳಸಿದ್ದಾರೆ. ಇದೊಂದು ಖಾಸಗಿ ಭೇಟಿಯಾಗಿದ್ದು, ಆ ಭೇಟಿಗೆ ತಮ್ಮ ಮುಂದೆ ವಿಚಾರಣೆ ಹಂತದಲ್ಲಿರುವ ಶಾಸಕರ ಅನರ್ಹ ಸಂಬಂಧದ ಪ್ರಮುಖ ಪ್ರಕರಣವೊಂದರ ಪ್ರತಿವಾದಿಯಾಗಿರುವ ಸರ್ಕಾರದ ಅನುಕೂಲ ಪಡೆದಿರುವುದು, ಅಂತಿಮವಾಗಿ ಪ್ರಕರಣದ ವಿಚಾರಣೆ ಮತ್ತು ತೀರ್ಪಿನ ಮೇಲೆ ಪ್ರಭಾವ ಬೀರುವುದಿಲ್ಲವೆ ಎಂದು ಭೂಷಣ್‌ ಪ್ರಶ್ನಿಸಿದ್ದಾರೆ. ಇನ್ನು ಖ್ಯಾತ ವಕೀಲ ಪ್ರಶಾಂತ್‌ ಭೂಷಣ್‌ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ದೂರು ದಾಖಲಿಸುವ ಕುರಿತು ಈಗಾಗಲೇ ಸುಪ್ರೀಂಕೋರ್ಟ್‌ ವಕೀಲ ಸುನೀಲ್‌ ಸಿಂಗ್‌ ಕೇಂದ್ರ ಸರಕಾರದ ಅಟರ್ನಿ ಜನರಲ್‌ ಕೆಕೆ ವೇಣುಗೋಪಾಲ್‌ಗೆ ಪತ್ರ ಬರೆದಿದ್ದು ಅನುಮತಿ ನೀಡುವಂತೆ ಕೋರಿದ್ದಾರೆ. ಒಂದು ವೇಳೆ ಅನುಮತಿ ಸಿಕ್ಕರೆ ಸುನೀಲ್‌ ಸಿಂಗ್‌ ಪ್ರಶಾಂತ್‌ ಭೂಷಣ್‌ ವಿರುದ್ಧ ದೂರು ದಾಖಲಿಸಲಿದ್ದಾರೆ. ಈ ಹಿಂದೆ ಕೂಡ ಸಿಜೆಐ ಅವರ ನೆಚ್ಚಿನ ಹಾರ್ಲೆ ಡೆವಿಡ್‌ ಸನ್‌ ಬೈಕ್‌ನಲ್ಲಿ ಕೂತು ಪೋಸ್‌ ನೀಡಿದ್ದ ವಿರುದ್ಧ ಪ್ರಶಾಂತ್‌ ಭೂಷಣ್‌ ಟ್ವೀಟ್‌ ಮಾಡಿ ವಿವಾದ ಮೇಲೆಳೆದುಕೊಂಡಿದ್ದರು. ಈ ಕೇಸನ್ನು ಸುಪ್ರೀಂಕೋರ್ಟ್‌ ಸ್ವಯಂ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಒಂದು ರೂ. ಶಿಕ್ಷೆ ಕೂಡ ನೀಡಿತ್ತು.


from India & World News in Kannada | VK Polls https://ift.tt/3dWVyO1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...