
ಕರಾಚಿ: ಕಾರ್ಗಿಲ್ ಯುದ್ಧದಿಂದ ಪಾಕಿಸ್ತಾನ ಏನನ್ನೂ ಸಾಧಿಸಲಿಲ್ಲ, ಸೈನಿಕರ ಬಳಿ ಯುದ್ಧದ ವೇಳೆ ಶಸ್ತ್ರಾಸ್ತ್ರಗಳು ಕೂಡ ಇರಲಿಲ್ಲ ಎಂದು ಹೇಳಿದ್ದಾರೆ. ಕರಾಚಿಯಲ್ಲಿ ಕಳೆದ ಕೆಲವು ದಿನಗಳಿಂದ ಇಮ್ರಾನ್ ಖಾನ್ ಸರಕಾರದ ವಿರುದ್ಧ ನಡೆಯುತ್ತಿರುವ 11 ಪ್ರತಿಪಕ್ಷಗಳ ಪ್ರತಿಭಟನೆಯಲ್ಲಿ ಲಂಡನ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು. ಆರಂಭವಾಗಿದ್ದ ಸೇನೆಯಿಂದ ಅಲ್ಲ, ಬದಲಾಗಿ ಕೆಲವು ಜನರಲ್‌ಗಳಿಂದ ಯುದ್ಧ ನಡೆಯಿತು. ಇದರ ಫಲವಾಗಿ ನಮ್ಮ ಕೆಚ್ಚೆದೆಯ ಸೈನಿಕರ ಸಾವಿಗೆ ಈ ಯುದ್ಧ ಸಾಕ್ಷಿಯಾಯಿತು ಮತ್ತು ವಿಶ್ವದ ಮುಂದೆ ಪಾಕಿಸ್ತಾನ ಅವಮಾನಿತವಾಯಿತು ಎಂದು ತಿಳಿಸಿದರು. ಇನ್ನು ಅವರು(ಜನರಲ್‌ಗಳು) ಸೈನ್ಯವನ್ನು ಮಾತ್ರವಲ್ಲದೆ ದೇಶ ಮತ್ತು ಸಮುದಾಯವನ್ನು ಯುದ್ಧಕ್ಕೆ ತಳ್ಳಿದರು. ನಮ್ಮ ಕೆಚ್ಚೆದೆಯ ಸೈನಿಕರನ್ನು ಆಹಾರ ನೀಡದೆ ಶಿಖರಗಳಿಗೆ ಕಳುಹಿಸಿದ್ದರು ಎಂದಾಗ ಆ ಕ್ಷಣ ನನಗೆ ನೋವಾಗಿತ್ತು. ಅವರ ಬಳಿ ಶಸ್ತ್ರಾಸ್ತ್ರ ಕೂಡ ಇರಲಿಲ್ಲ. ಆದರೆ ಅವರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಜನರಲ್‌ಗಳ ಹಿತಾಸಕ್ತಿಯಿಂದಾಗಿ ದೇಶ ಅಥವಾ ಸಮುದಾಯ ಏನು ಇದರಿಂದ ಸಾಧಿಸಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. 1999ರಲ್ಲಿ ಪಾಕಿಸ್ತಾನ ಯುದ್ಧ ಘೋಷಿಸಿತ್ತು. ಆ ವೇಳೆ ಫರ್ವೇಜ್ ಮುಷರಫ್ ಅಂದಿನ ಪಾಕಿಸ್ತಾನ ಸೇನೆಯ ಜನರಲ್ ಆಗಿದ್ದರು. ಅವರೇ ಕಾರ್ಗಿಲ್ ಯುದ್ಧದ ಪಿತೂರಿಕಾರ ಎಂದು ಆರೋಪಿಸಲಾಗಿದೆ. ಈ ಯುದ್ಧದಲ್ಲಿ ಭಾರತ ಗೆದ್ದು ಕಾರ್ಗಿಲನ್ನು ವಶಪಡಿಸಿಕೊಂಡಿತ್ತು. ಪಾಕಿಸ್ತಾನದ ಭೂ ತಿನ್ನುವ ಆಸೆಯೂ ಅಂತ್ಯವಾಯಿತು. ಕಳೆದ ಕೆಲವು ವಾರಗಳಿಂದ ಪಾಕಿಸ್ತಾನದ ಕರಾಚಿಯಲ್ಲಿ ನವಾಜ್ ಶರೀಫ್ ನೇತೃತ್ವದಲ್ಲಿ ಪಾಕಿಸ್ತಾನದ ಸರ್ವ ವಿಪಕ್ಷಗಳು ಸೇರಿಕೊಂಡು ಪ್ರಧಾನಿ ಇಮ್ರಾನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ದ್ವೇಷ ಕಾರುತ್ತಿರುವ ಇಮ್ರಾನ್ ಖಾನ್ ಸರಕಾರ ನವಾಜ್ ಶರೀಫ್ ಅಳಿಯನನ್ನು ಬಂಧಿಸಿತ್ತು.
from India & World News in Kannada | VK Polls https://ift.tt/3jnKvi8