ನಿಮ್ಮ ಆಘಾತ ಅರ್ಥವಾಗಿದೆ, ನಮ್ಮ ನೋವು ವ್ಯರ್ಥವಾಗದು: ಫ್ರಾನ್ಸ್ ಅಧ್ಯಕ್ಷ!

ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಸರಣಿ ಭಯೋತ್ಪಾದಕ ದಾಳಿಗಳ ಕುರತು ಮಾತನಾಡಿರುವ ಇಮ್ಯಾನುಯೆಲ್ ಮ್ಯಾಕ್ರೋನ್, ಈ ಬಾರಿ ಸಮತೋಲನದ ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ. ಕತಾರ್ ಮೂಲದ ಮಾಧ್ಯುಮವೊಂದಕ್ಕೆ ಸಂದರ್ಶನ ನೀಡಿರುವ ಇಮ್ಯಾನುಯೆಲ್ ಮ್ಯಾಕ್ರೋನ್, ಪ್ರವಾದಿ ಮೊಹಮ್ಮೊದ್‌ ಅವರ ವ್ಯಂಗ್ಯಚಿತ್ರ ಪ್ರಕಟದಿಂದಾಗಿ ಮುಸ್ಲಿಂ ಜಗತ್ತಿನಲ್ಲಾಗಿರುವ ಆಘಾತವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಹೇಳಿದ್ದಾರೆ. ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ತ ಪ್ರಕಟಣೆಯಿಂದ ಮುಸ್ಲಿಂ ಸಹೋದರರು ಆಘಾತದಲ್ಲಿದ್ದಾರೆ. ಆದರೆ ಈ ಕಾರಣಕ್ಕೆ ಹಿಂಸೆಯನ್ನು ಮಾತ್ರ ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಮ್ಯಾಕ್ರೋನ್ ಸ್ಪಷ್ಟಪಡಿಸಿದ್ದಾರೆ. ನಮ್ಮ ರಾಷ್ಟ್ರದ ಜನರ ಹಕ್ಕು ಮತ್ತು ಸ್ವಾತಂತ್ರ್ಯ ಕಾಪಾಡುವುದು ನಮ್ಮ ಕರ್ತವ್ಯ. ನಮ್ಮ ಜನರ ಮೇಲಾಗುವ ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಮ್ಯಾಕ್ರೋನ್ ಸ್ಪಷ್ಟ ನುಡಿಗಳಲ್ಲಿ ಹೇಳಿದರು. ಶಾಲಾ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿ ಹತ್ಯೆಯನ್ನು ಖಂಡಿಸುವ ವೇಳೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ 'ಇಸ್ಲಾಮಿಕ್ ಭಯೋತ್ಪಾದನೆ' ಎಂಬ ಶಬ್ಧವನ್ನು ಬಳಿಸಿದ್ದರು. ಅಲ್ಲದೇ ಇತ್ತೀಚಿಗೆ ನೈಸ್ ನಗರದ ಚರ್ಚ್‌ನಲ್ಲಿ ನಡೆದ ಭೀಕರ ದಾಳಿಯನ್ನೂ ಫ್ರಾನ್ಸ್‌ನ ಹಲವು ಸಚಿವರ 'ಇಸ್ಲಾಮಿಕ್ ಭಯೋತ್ಪಾದನೆ' ಎಂದೇ ವ್ಯಾಖ್ಯಾನಿಸಿದ್ದರು. ಇದು ಮುಸ್ಲಿಂ ರಾಷ್ಟ್ರಗಳಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದ್ದಲ್ಲದೇ, ಫ್ರಾನ್ಸ್ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿತ್ತು. ಸದ್ಯ ನೈಸ್ ಚರ್ಚ್ ದಾಳಿಕೋರನನ್ನು ಬಂಧಿಸಲಾಗಿದ್ದು, ಪೊಲೀಸರ ಗುಂಡೇಟಿನಿಂದ ತೀವ್ರವಾಗಿ ಗಾಐಗೊಂಡಿರುವ ಆತನ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ. ಅದಕ್ಕೂ ಮೊದಲೇ ಫ್ರಾನ್ಸ್ ನಾಯಕರು ಇಸ್ಲಾಂ ಮೇಲೆ ಆರೋಪ ಹೊರಿಸುತ್ತಿರುವುದು ಎಷ್ಟು ಸರಿ ಎಂದು ಹಲವು ಮುಸ್ಲಿಂ ರಾಷ್ಟ್ರಗಳು ಪ್ರಶ್ನಿಸಿವೆ. ಟರ್ಕಿ ಅಧ್ಯಕ್ಷ ಎರ್ಡೋಗಾನ್ ಅವರಂತೂ ತೀಕ್ಷ್ಣ ಪದಗಳನ್ನು ಬಳಿಸಿ ಮ್ಯಾಕ್ರೋನ್ ಅವರನ್ನು ಟೀಕಿಸಿದ್ದು, ಇತರ ಮುಸ್ಲಿಂ ರಾಷ್ಟ್ರಗಳ ನಾಯಕರೂ ಮ್ಯಾಕ್ರೋನ್ ಹೇಳಿಕೆಯನ್ನು ಖಂಡಿಸಿದ್ದಾರೆ.


from India & World News in Kannada | VK Polls https://ift.tt/35UUTsL

ಛಠ್ ಪೂಜೆವರೆಗೆ ಉಚಿತ ಧಾನ್ಯ: ಬಡ ತಾಯಂದಿರು ಹಬ್ಬ ಆಚರಿಸುವ ಚಿಂತೆ ಬಿಡಿ ಎಂದ ಪ್ರಧಾನಿ!

ಚಪ್ರಾ: ದೀಪಾವಳಿ ಮತ್ತು ಛಠ್ ಪೂಜೆಯವರೆಗೆ ಕೇಂದ್ರ ಸರ್ಕಾರ ಉಚಿತ ಧಾನ್ಯಗಳನ್ನು ನೀಡುತ್ತಿದ್ದು, ನಮ್ಮ ಸಹೋದರಿಯರು ಹಬ್ಬಗಳನ್ನು ಹೇಗೆ ಆಚರಿಸುವುದು ಎಂದು ಚಿಂತೆಪಡಬೇಕಿಲ್ಲ ಎಂದು ಹೇಳಿದ್ದಾರೆ. ದೀಪಾವಳಿ ಮತ್ತು ಛಠ್ ಪೂಜೆಯವರೆಗೆ ದೆಶಾದ್ಯಂತ ಬಡವರಿಗೆ ಉಚಿತವಾಗಿ ಧಾನ್ಯಗಳನ್ನು ನೀಡುವ ನಿರ್ಣಯ ಕೈಗೊಂಡಿದ್ದೇವೆ. ಹೀಗಾಗಿ ಹಬ್ಬಗಳ ಕುರಿತು ಯಾರೂ ಚಿಂತಿಸಬೇಕಿಲ್ಲ ಎಂದು ಪ್ರಧಾನು ಹೇಳಿದರು. ಬಿಹಾರದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಪ್ರಾದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಹಾಘಟಬಂಧನ್ ಮೈತ್ರಿಕೂಟದ ವಿರುದ್ಧ ಹರಿಹಾಯ್ದರು. ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಇಬ್ಬರು ಯುವರಾಜರಿದ್ದಾರೆ. ಒಬ್ಬರು ಕುಟುಂಬ ರಾಜಕಾರಣದ ಪರಂಪರೆಯಿಂದ ಬಂದಿದ್ದರೆ, ಮತ್ತೊಬ್ಬರು ಜಂಗಲ್ ರಾಜ್ ಆಡಳಿತದ ಪರಂಪರೆಯಿಂದ ಬಂದಿದ್ದಾರೆ ಎಂದು ಪರೋಕ್ಷವಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮೋದಿ ಚುಚ್ಚಿದರು. ಎನ್‌ಡಿಎ ಮೈತ್ರಿಕೂಟದಿಂದ ಮಾತ್ರ ಬಿಹಾರ ಅಭಿವೃದ್ಧಿ ಸಾಧ್ಯ. ಒಂದು ವೇಳೆ ಮಹಾಘಟಬಂಧನ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಮತ್ತೆ ಜಂಗಲ್ ರಾಜ್ ಆಡಳಿತ ಜಾರಿಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಮೊದಲ ಹಂತದ ಮತದಾನದಿಂದ ಬಿಹಾರದಲ್ಲಿ ಮತ್ತೆ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ನಮಗೆ ಬಿಹಾರದ ಜನತೆಯ ಆಶೀರ್ವಾದ ದೊರೆಯಲಿದೆ ಎಂದು ಮೋದಿ ಈ ವೇಳೆ ಭರವಸೆ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/3oKZNBr

ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಹೆಸರಿಡಿ: ಮಿಥುನ್‌ ರೈ ಟ್ವೀಟ್‌

ಮಂಗಳೂರು: ಅಂತಾರಾಷ್ಟ್ರೀಯ ಅಧಿಕೃತವಾಗಿ ಅದಾನಿ ಸಂಸ್ಥೆಗೆ ಹಸ್ತಾಂತರಗೊಂಡಿದ್ದು, ಈ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ನಾಮಕರಣ ಮಾಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅದಾನಿ ಸಂಸ್ಥೆ ಮುಖ್ಯಸ್ಥರಿಗೆ ಟ್ವೀಟ್‌ ಮಾಡಿದ್ದಾರೆ. ಅದಾನಿ ಸಂಸ್ಥೆಯ ಮುಖ್ಯಸ್ಥ ಗೌತಮ್‌ ಅದಾನಿ ಅವರಿಗೆ ಟ್ವೀಟ್‌ ಮಾಡಿದ ಮಿಥುನ್‌ ರೈ ಅವರು ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಏರ್‌ ಪೋರ್ಟ್‌ ಎಂದು ಬಿಂಬಿಸಲಾಗುತ್ತಿದ್ದು, ಅದರ ಬದಲು ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಹೆಸರನ್ನು ಇಡಬೇಕು ಎಂದು ಆಗ್ರಹಿಸಿದ್ದಾರೆ. ನಿರ್ಣಯವಾಗಿತ್ತು: ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಬೇಕೆಂದು ಈ ,ಹಿಂದೆ ಬಜಪೆ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿಯಲ್ಲೂ ನಿರ್ಣಯವಾಗಿ ಕಡತ ರಾಜ್ಯ ಸರಕಾರಕ್ಕೆ ಕಳುಹಿಸಲಾಗಿತ್ತು. ನಾನಾ ಸಂಘ ಸಂಸ್ಥೆಗಳು ಕೂಡ ಕೋಟಿ ಚೆನ್ನಯ ಹೆಸರಿಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶುಕ್ರವಾರ (ಅಕ್ಟೋಬರ್‌ 30) ಮಧ್ಯ ರಾತ್ರಿ ಅಧಿಕೃತವಾಗಿ ಅದಾನಿ ಸಂಸ್ಥೆಗೆ ಹಸ್ತಾಂತರವಾಗಿದೆ. ಈ ಮೂಲಕ ಇನ್ನು ಮುಂದೆ ಈ ನಿಲ್ದಾಣದ ನಿರ್ವಹಣೆ ಮತ್ತು ಅಭಿವೃದ್ಧಿಯ ಹೊಣೆ ಅದಾನಿ ಏರ್‌ಪೋರ್ಟ್‌ನದ್ದಾಗಿದೆ.


from India & World News in Kannada | VK Polls https://ift.tt/2TGqmJR

ಎಸ್‌ಆರ್‌ಎಚ್‌ ವಿರುದ್ಧ ಆರ್‌ಸಿಬಿ ಸೋಲಿಗೆ ಕಾರಣ ತಿಳಿಸಿದ ಡಿವಿಲಿಯರ್ಸ್!

ಶಾರ್ಜಾ: ವಿರುದ್ಧದ ಪಂದ್ಯದಲ್ಲಿ ನಾನು ಮತ್ತು ಜೋಶ್‌ ಫಿಲಿಪ್ ಔಟ್‌ ಆಗಿದ್ದು ಟರ್ನಿಂಗ್‌ ಪಾಯಿಂಟ್‌ ಎಂದು ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್‌ ಹೇಳಿದರು. ಶನಿವಾರ ರಾತ್ರಿ ಶಾರ್ಜಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಿಗೆ ಏಳು ವಿಕೆಟ್‌ಗಳ ನಷ್ಟಕ್ಕೆ 120 ರನ್‌ಗಳನ್ನು ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್‌, ವೃದ್ದಿಮಾನ್‌ ಸಹಾ (39) ಹಾಗೂ ಜೇಸನ್ ಹೋಲ್ಡರ್‌(26) ಜವಾಬ್ದಾರಿಯುತ ಬ್ಯಾಟಿಂಗ್‌ ಸಹಾಯದಿಂದ ಐದು ವಿಕೆಟ್‌ಗಳ ಗೆಲುವು ಸಾಧಿಸಿತು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ , " ಹೌದು, ನಾವು ಆರಂಭದಲ್ಲಿ 160 ಮೊತ್ತದ ಬಗ್ಗೆ ಮಾತನಾಡುತ್ತಿದ್ದೆವು, ಅದು ಸ್ವಲ್ಪ ಹೆಚ್ಚು ಎಂದು ನಾನು ಭಾವಿಸುತ್ತೇನೆ. ಆದರೆ, ಪಂದ್ಯದ ಕೊನೆಯಲ್ಲಿ ನಾವು 140 ರನ್‌ಗಳು ಉತ್ತಮ ಸ್ಕೋರ್ ಎಂದು ಮಾತನಾಡಿಕೊಂಡೆವು. ನಮ್ಮ ವಿರುದ್ಧ ಅಸಾಧಾರಣವಾಗಿ ಬೌಲಿಂಗ್‌ ಮಾಡಿದ ಎಸ್‌ಆರ್‌ಎಚ್‌ ಬೌಲರ್‌ಗಳಿಗೆ ಗೆಲುವಿನ ಶ್ರೇಯ ಸಲ್ಲುತ್ತದೆ. ಅವರು ಹೆಚ್ಚು ಬೌಂಡರಿಗಳನ್ನು ನೀಡಲಿಲ್ಲ," ಎಂದು ಹೇಳಿದರು. "ಪವರ್‌ಪ್ಲೇನಲ್ಲಿ ಸನ್‌ರೈಸರ್ಸ್ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್‌ ಮಾಡಿದ್ದಾರೆ. ಅವರು ಹೆಚ್ಚು ತಪ್ಪುಗಳನ್ನು ಮಾಡಲಿಲ್ಲ. ಪವರ್‌ಪ್ಲೇ ಮುಗಿದ ಬಳಿಕ ರಶೀದ್‌ ಖಾನ್‌ ಬೌಲಿಂಗ್‌ಗೆ ಆಡುವುದು ತುಂಬಾ ಕಷ್ಟವಿತ್ತು ಹಾಗೂ ಅವರು ಹೆಚ್ಚು ಕೆಟ್ಟ ಎಸೆತಗಳನ್ನು ಹಾಕಲಿಲ್ಲ. ಅವರು ನಮ್ಮ ಮೇಲೆ ಹೆಚ್ಚಿನ ಒತ್ತಡವನ್ನು ಹೇರಿದರು," ಎಂದು ತಿಳಿಸಿದರು. ''ನಾನು ಹಾಗೂ ಜೋಶ್‌ ಫಿಲಿಪ್‌ ಔಟ್‌ ಆಗಿದ್ದು, ಪಂದ್ಯದಲ್ಲಿ ಟರ್ನಿಂಗ್ ಪಾಯಿಂಟ್‌ ಆಯಿತು. ಇದರಿಂದ ನಮಗೆ 20 ರಿಂದ 30 ರನ್‌ಗಳು ಕಡಿಮೆಯಾಯಿತು. ನಾವು ಗಳಿಸಿದ್ದ ಮೊತ್ತ ದಿನದ ಕೊನೆಯಲ್ಲಿ ಸಾಕಾಗಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ ಮೈದಾನ ಸ್ವಲ್ಪ ತೇವವಾಗಿದ್ದರಿಂದ ಪರಿಸ್ಥಿತಿ ವಿಭಿನ್ನವಾಗಿತ್ತು. ಹಾಗಾಗಿ 140 ರನ್‌ಗಳನ್ನು ಗಳಿಸಿದ್ದರೂ ಸ್ವಲ್ಪ ಕಡಿಮೆ ಎನಿಸುತ್ತಿತ್ತು," ಎಂದು ಹೇಳಿದರು. ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್‌ ತಂಡ 12 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಮತ್ತೊಂದೆಡೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿಯೇ ಉಳಿಯಿತು. ಸೋಮವಾರ(ನ.2) ಅಬುಧಾಬಿಯ ಶೇಖ್‌ ಝಾಯೆದ್‌ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್‌ ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಸಲಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Gf8tyq

ಬಿಹಾರದ ನಾಲ್ಕು ಕಡೆಗಳಲ್ಲಿ ಮೋದಿ ಪ್ರಚಾರ: ವಿಪಕ್ಷಗಳ ಮೇಲೆ ಮಾಡಲಿದ್ದಾರಾ ಪ್ರಹಾರ?

ಹೊಸದಿಲ್ಲಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಇಂದು(ನ.01) ರಾಜ್ಯದ ನಾಲ್ಕು ಕಡೆಗಳಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚಪ್ರಾ, ಸಮಸ್ತಿಪುರ್, ಪೂರ್ವ ಚಂಪಾರಣ್ ಹಾಗೂ ಪಶ್ಚಿಮ ಚಂಪಾರಣ್ ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕುರಿತು ಖುದ್ದು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಪ್ರಧಾನಿ ಮೋದಿ, ಬಿಹಾರದ ಜನತೆಯ ಆಶೀರ್ವಾದ ಪಡೆಯಲು ಬರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈಗಾಗಲೇ ಬಿಹಾರದಲ್ಲಿ ಎನ್‌ಡಿಎ ಪರ ಹಲವು ಸುತ್ತಿನ ಪ್ರಚಾರ ನಡೆಸಿರುವ ಪ್ರಧಾನಿ ಮೋದಿ, ತಮ್ಮ ಪ್ರಚಾರ ಭಾಷಣಗಳಲ್ಲಿ ವಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಮಜಹಾಘಟಬಂಧನ್ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಆರ್‌ಜೆಡಿ ಮತ್ತು ಅದರ ನಾಯಕ ತೇಜಸ್ವಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಪ್ರಧಾನಿ, ತೇಜಸ್ವಿ ಅವರನ್ನು 'ಜಂಗಲ್ ರಾಜ್‌ ಕಾ ಯುವರಾಜ್' ಎಂದು ಕರೆಯುವ ಮೂಲಕ ತೀವ್ರವಾಗಹಿ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಒಂದೇ ದಿನದಲ್ಲಿ ನಾಲ್ಕು ಕಡೆ ಚುನಾವಣಾ ಪ್ರಚಾರ ನಡೆಸಲಿರುವ ಪ್ರಧಾನಿ ಮೋದಿ, ಮತ್ತೆ ಮಹಾಘಟಬಂಧನ್ ಮೈತ್ರಿಕೂಟವನ್ನು ತರಾಟೆಗೆ ತೆಗೆದುಜಕೊಳ್ಳಲಿರುವುದು ಖಚಿತವಾಗಿದ್ದು, ಬಿಹಾರ ವಿಧಾನಸಭೆ ಚುನಾವಣೆ ಅಖಾಡ ಮತ್ತಷ್ಟು ರಂಗೇರುವುದು ನಿಶ್ಚಿತ.


from India & World News in Kannada | VK Polls https://ift.tt/3jMn2qX

ಕನ್ನಡದಲ್ಲೇ ಟ್ವೀಟ್ ಮಾಡಿ ರಾಜ್ಯೋತ್ಸವದ ಶುಭ ಕೋರಿದ ಪ್ರಧಾನಿ ಮೋದಿ!

ಹೊಸದಿಲ್ಲಿ: ದಿನಾಚರಣೆ ಅಂಗವಾಗಿ ನಾಡಿನ ಜನತೆಗೆ ಶುಭ ಕೋರಿರುವ , ಈ ಕುರಿತು ಕನ್ನಡದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. 'ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ'. ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಪ್ರಗತಿಗೆ ತಮ್ಮ ಸರ್ಕಾರ ಸದಾ ಬದ್ಧವಾಗಿದ್ದು, ರಾಜ್ಯ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಲಿದೆ ಎಂದು ಪ್ರಧಾನಿ ಮೋದಿ ಈ ವೇಳೆ ಭರವಸೆ ನೀಡಿದ್ದಾರೆ. ದೇಶದ ಪ್ರಗತಿಯಲ್ಲಿ ಕನ್ನಡಿಗರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ನವ ಭಾರತವನ್ನು ಕಟ್ಟುವಲ್ಲಿ ಕರ್ನಾಟಕ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ನಾಡಿನ ಸಮಸ್ತೆ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಲು ಆನಂದಾಗುತ್ತಿದ್ದು, ಈ ಬಾರಿಯ ರಾಜ್ಯೋತ್ಸವಕ್ಕೆ ಕರ್ನಾಟಕದಲ್ಲಿ ಹೊಸ ಚೈತನ್ಯದ ಅಲೆಯನ್ನು ಹೊತ್ತು ತರಲಿ ಎಂದು ಪ್ರಧಾನಿ ಹಾರೈಸಿದ್ದಾರೆ.


from India & World News in Kannada | VK Polls https://ift.tt/320cGhf

ಕನ್ನಡ ರಾಜ್ಯೋತ್ಸವ: ಭುವನೇಶ್ವರಿ ಭಾವಚಿತ್ರಕ್ಕೆ ಮುಖ್ಯಮಂತ್ರಿ ಬಿಎಸ್‌ವೈ ಪುಷ್ಪ ನಮನ

ಬೆಂಗಳೂರು: 65ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡಿನ ಜನತೆಗೆ ಶುಭ ಕೋರಿರುವ ಮುಖ್ಯಮಂತ್ರಿ , ರಾಜ್ಯೋತ್ಸವ ನಾಡಿಗೆ ಹೊಸ ಪಥವನ್ನು ನಿರ್ದೇಶಿಸಲಿ ಎಂದು ಹಾರೈಸಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ತಾಯಿ ಭುವನೇಶ್ವರಿ ಭಾವವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಿಎಸ್ ಯಡಿಯೂರಪ್ಪ, ಸಮಸ್ತ ನಾಡಿನ ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರುವುದಾಗಿ ಹೇಳಿದರು. ಕೊರೊನಾ ಕಾಲದ ರಾಜ್ಯೋತ್ಸವ ಆಚರಣೆ ಸರಳವಾಗಿದ್ದು, ರಾಜ್ಯವನ್ನು ಆದಷ್ಟು ಬೇಗ ಈ ವೈರಾಣುವಿನಿಂದ ಮುಕ್ತ ಮಾಡುವಂತೆ ತಾಯಿ ಭುವನೇಶ್ವರಿಯಲ್ಲಿ ಕೇಳಿಕೊಂಡಿದ್ದಾಗಿ ಬಿಎಸ್‌ವೈ ತಿಳಿಸಿದರು. ಇದೇ ವೇಳೆ ಸರಳ ರಾಜ್ಯೋತ್ಸವಕ್ಕೆ ಕರೆ ನೀಡಿದ ಬಿಎಸ್‌ವೈ, ಯಾರೂ ಕೊರೊನಾ ಮಾರ್ಗಸೂಚಿಗಳನ್ನು ಮರೆಯದಂತೆ ಕಳಕಳಿಯ ಮನವಿ ಮಾಡಿದರು. ಸಿದ್ದರಾಮಯ್ಯ: ಇನ್ನು 65ನೇ ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿರುವ ಮಾಜಿ ಮುಖ್ಯಮಂತ್ರಿ , ಈ ಬಾರಿಯ ಕನ್ನಡ ರಾಜ್ಯೋತ್ಸವ ನಾಡಿನ ಜನತೆಯಲ್ಲಿ ಹೊಸ ಚೈತನ್ಯ ತುಬಲಿ ಎಂದು ಹಾರೈಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ,'ಕನ್ನಡ ರಾಜ್ಯೋತ್ಸವ ಎಂದರೆ ನಮ್ಮ ಜನ,ಭಾಷೆ, ಸಂಸ್ಕೃತಿ, ನೆಲ, ಜಲ ಎಲ್ಲವನ್ನೂ ಒಳಗೊಂಡ ಕನ್ನಡತನವನ್ನು ಉಳಿಸಿ-ಬೆಳೆಸಲು ದುಡಿದ-ಮಡಿದ ಹಿರಿಯ ಮಹಾಪುರುಷರಿಗೆ ತಲೆಬಾಗುವ ದಿನ. ಆ ಪುಣ್ಯ ಪುರುಷರನ್ನು ಒಡಲಾಳದ ಕೃತಜ್ಞತೆಯಿಂದ ಸ್ಮರಿಸೋಣ'. ಎಂದು ಕರೆ ನೀಡಿದರು.


from India & World News in Kannada | VK Polls https://ift.tt/35Nt59Q

ಐಪಿಎಲ್‌ ಟೂರ್ನಿಯಲ್ಲಿ ಬೆಂಗಳೂರು ಹುಡುಗನಾಗಿ ಆಡುತ್ತೇನೆಂದ ವಿರಾಟ್‌ ಕೊಹ್ಲಿ!

ಶಾರ್ಜಾ: ವಿರುದ್ಧ ಐದು ವಿಕೆಟ್‌ಗಳ ಸೋಲು ಅನುಭವಿಸಿದ ಬಳಿಕ ಮಾತನಾಡಿದ ತಂಡದ ನಾಯಕ , ನಾವು ಎದುರಾಳಿಗೆ ಯೋಗ್ಯ ಗುರಿ ನೀಡುವಲ್ಲಿ ವಿಫಲರಾಗಿದ್ದೇವೆ ಎಂದು ಹೇಳಿದರು. ಶನಿವಾರ ರಾತ್ರಿ ಶಾರ್ಜಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು 120 ರನ್‌ಗಳನ್ನು ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ 14.1 ಓವರ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು 121 ರನ್‌ಗಳನ್ನು ಗಳಿಸಿ ಗೆಲುವು ಪಡೆಯಿತು. ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್‌ 12 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿತು. 14 ಅಂಕಗಳೊಂದಿಗೆ ಆರ್‌ಸಿಬಿ ಎರಡನೇ ಸ್ಥಾನದಲ್ಲಿಯೇ ಮುಂದುವರಿಯಿತು. 121 ರನ್‌ಗಳ ಗುರಿ ಹಿಂಬಾಲಿಸಿದ ಎಸ್‌ಆರ್‌ಎಚ್‌ ಆರಂಭ ಉತ್ತಮವಾಗಿರಲಿಲ್ಲ. ಎರಡನೇ ಓವರ್‌ನಲ್ಲಿಯೇ ನಾಯಕ ಡೇವಿಡ್‌ ವಾರ್ನರ್‌(8) ವಾಷಿಂಗ್ಟನ್‌ ಸುಂದರ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ಜತೆಯಾದ ಮನೀಶ್ ಪಾಂಡೆ ಹಾಗೂ ವೃದ್ದಿಮಾನ್‌ ಸಹಾ ಜೋಡಿ ಪವರ್‌ಪ್ಲೇ ಮುಕ್ತಾಯಕ್ಕೆ 58 ರನ್‌ಗಳನ್ನು ಗಳಿಸಿತು. ಏಳನೇ ಓವರ್‌ನಲ್ಲಿ ಯುಜ್ವೇಂದ್ರ ಚಹಲ್‌ಗೆ ನಾಯಕ ವಿರಾಟ್‌ ಕೊಹ್ಲಿ ಚೆಂಡು ನೀಡಿದ್ದು ನಿರಾಸೆ ಮೂಡಿಸಿಲ್ಲ. ಚಹಲ್‌, ಮನೀಶ್‌ ಪಾಂಡೆ(26) ಅವರನ್ನು ಔಟ್‌ ಮಾಡಿದರು. ಇದರ ಬೆನ್ನಲ್ಲೆ ಆರ್‌ಸಿಬಿ ವೃದ್ದಿಮಾನ್‌ ಸಹಾ (39) ಹಾಗೂ ಕೇನ್‌ ವಿಲಿಯಮ್ಸನ್‌(8) ಅವರ ವಿಕೆಟ್‌ಗಳು ಉರುಳಿದವು. ಆ ಮೂಲಕ 13ನೇ ಓವರ್‌ನಲ್ಲಿ ಎಸ್‌ಆರ್‌ಎಚ್‌ 4 ವಿಕಟ್‌ಗಳನ್ನು ಕಳೆದುಕೊಂಡು 87 ರನ್‌ಗಳನ್ನು ಗಳಿಸಿತು. ನಂತರ ಜೇಸನ್‌ ಹೋಲ್ಡರ್‌ ಅಜೇಯ 26 ರನ್‌ಗಳನ್ನು ಗಳಿಸಿ ತಂಡಕ್ಕೆ ಇನ್ನೂ 35 ಎಸೆತಗಳು ಬಾಕಿ ಇರುವಾಗಲೇ ಐದು ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್‌ ಜತೆ ಮಾತನಾಡಿದ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ, " ಇದು ನಮಗೆ ಸಾಕಾಗಲಿಲ್ಲ. 140 ರನ್‌ಗಳನ್ನು ಕಲೆ ಹಾಕಿದ್ದರೆ, ನಮ್ಮ ಪಾಲಿಗೆ ಇದು ಉತ್ತಮ ಪಂದ್ಯವಾಗುತ್ತಿತ್ತು. ಆದರೆ, ಸಂಗತಿಗಳು ನಮ್ಮ ಪರವಾಗಿರಲಿಲ್ಲ. ಹವಾಮಾನವು ಆಹ್ಲಾದಕರವಾಯಿತು ಎಂದು ನಾವು ಭಾವಿಸಿದ್ದೇವೆ ಮತ್ತು ಅದೇ ರೀತಿ ಹೆಚ್ಚು ಮಂಜು ಕೂಡ ಇರಲಿಲ್ಲ. ಇನ್ನಿಂಗ್ಸ್‌ದಾದ್ಯಂತ ನಾವು ಬ್ಯಾಟ್‌ನೊಂದಿಗೆ ಸಾಕಷ್ಟು ಧೈರ್ಯಶಾಲಿಗಳಾಗಿರಲಿಲ್ಲ ಎಂದು ಭಾವಿಸುತ್ತೇನೆ," ಎಂದರು. "ಅವರಿಗೆ ಪಂದ್ಯ ಗೆಲ್ಲಲೇಬೇಕಾದ ಪರಿಸ್ಥಿತಿ ಇತ್ತು. ಹಾಗಾಗಿ, ಅವರು ಸರಿಯಾದ ಸ್ಥಳಗಳಲ್ಲಿ ಬೌಲಿಂಗ್‌ ಮಾಡಿದರು. ಮುಂದಿನ ಪಂದ್ಯದಲ್ಲಿ 14 ಅಂಕಗಳನ್ನು ಹೊಂದಿರುವ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ. ಐಪಿಎಲ್‌ ವಿಷಯ ಬಂದಾಗ ನಾನು ಯಾವಾಗಲೂ ಬೆಂಗಳೂರು ಹುಡುಗ ಎಂದು ಭಾವಿಸಿ ಆಡುತ್ತೇನೆ. ಹಾಗಾಗಿ ಡೆಲ್ಲಿ ಕಡೆಗೆ ಎಂದಿಗೂ ತಿರುಗುವುದಿಲ್ಲ," ಎಂದು ತಿಳಿಸಿದರು. ಸೋಮವಾರ(ನ.2) ಅಬುಧಾಬಿಯ ಶೇಖ್‌ ಝಾಯೆದ್‌ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಲೀಗ್‌ನ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3kZIoCV

ವಿವಾಹಕ್ಕಾಗಿಯೇ ಮತಾಂತರ ಸಲ್ಲದು, ಇಂತಹ ಮತಾಂತರ ಅಮಾನ್ಯ: ಅಲಹಾಬಾದ್‌ ಹೈಕೋರ್ಟ್‌

ಅಲಹಾಬಾದ್‌: ಕೇವಲ ವಿವಾಹದ ಉದ್ದೇಶಕ್ಕಾಗಿ ಮತಾಂತರವಾಗುವುದನ್ನು ಒಪ್ಪಲು ಸಾಧ್ಯವೇ ಇಲ್ಲಎಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ. ''ಮದುವೆಯಾಗುವ ಏಕೈಕ ಉದ್ದೇಶದಿಂದ ಮತಾಂತರವಾಗುವುದು ಸಮ್ಮತಾರ್ಹವಲ್ಲ. ಇಂತಹ ಅಮಾನ್ಯ ಎನಿಸಿಕೊಳ್ಳುತ್ತದೆ,'' ಎಂದು ನ್ಯಾಯಮೂರ್ತಿ ಎಂ.ಸಿ.ತ್ರಿಪಾಠಿ ಹೇಳಿದ್ದಾರೆ. ಪ್ರಿಯಾಂಶಿ ಎಂಬ ಹಿಂದೂ ಯುವತಿ ವಿವಾಹಕ್ಕಾಗಿಯೇ ಮತಾಂತರಗೊಂಡು ಸಮ್ರೀನ್‌ ಆಗಿದ್ದಳು. ಬಳಿಕ ತನ್ನ ಕುಟುಂಬಸ್ಥರನ್ನು ವಿರೋಧಿಸುತ್ತ ಪತಿಯೊಂದಿಗೆ ಜೀವನ ನಡೆಸುತ್ತಿದ್ದಳು. ಈ ನಡುವೆ ಪಾಲಕರು ತಿಳಿವಳಿಕೆ ಹೇಳಲು ಯತ್ನಿಸಿದ್ದನ್ನು ವಿರೋಧಿಸಿ ಆಕೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತಮಗೆ ಕಿರುಕುಳ ನೀಡದಂತೆ ತಂದೆಗೆ ಸೂಚನೆ ನೀಡಬೇಕು, ರಕ್ಷಣೆ ನೀಡಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ''ದಾಖಲೆಗಳ ಪ್ರಕಾರ 2020ರ ಜೂನ್‌ 29ರಂದು ಅರ್ಜಿದಾರರು ಮತಾಂತರಗೊಂಡಿದ್ದಾರೆ. ಬಳಿಕ ಒಂದೇ ತಿಂಗಳಲ್ಲಿಅಂದರೆ ಜುಲೈ 31ರಂದು ವಿವಾಹವಾಗಿದ್ದಾರೆ. ಇದರಿಂದಾಗಿ ಕೇವಲ ವಿವಾಹಕ್ಕಾಗಿ ಮತಾಂತರಗೊಂಡಿರುವುದು ಸ್ಪಷ್ಟವಾಗುತ್ತದೆ. 2014ರಲ್ಲಿನೂರ್‌ ಜಹಾನ್‌ ಬೇಗಂ ಪ್ರಕರಣದಲ್ಲಿಯೇ ಹೈಕೋರ್ಟ್‌ ಇಂತಹ ಒಪ್ಪಲಾಗದು ಎಂದು ಸ್ಪಷ್ಟಪಡಿಸಿದೆ. ಹಾಗಾಗಿ ವಿವಾಹಕ್ಕಾಗಿಯೇ ನಡೆದ ಮತಾಂತರ ಮಾನ್ಯವಾಗುವುದಿಲ್ಲ,'' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ ನ್ಯಾಯಪೀಠವು, ಪ್ರಿಯಾಂಶಿ ಅವರ ಅರ್ಜಿಯನ್ನು ತಿರಸ್ಕರಿಸಿತು. ಧರ್ಮದ ಮೇಲೆ ನಂಬಿಕೆ ಬೇಡವೇ? ಅಂಜಲಿ ಮಿಶ್ರಾ ಎಂಬಾಕೆ 2014ರಲ್ಲಿ ಮತಾಂತರಗೊಂಡು ನೂರ್‌ ಜಹಾನ್‌ ಎಂಬ ಹೆಸರು ಬದಲಿಸಿಕೊಂಡು ಮುಸ್ಲಿಂ ಯುವಕನ್ನು ಮದುವೆಯಾಗಿದ್ದಳು. ನಂತರ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಲಹಾಬಾದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯ ಪ್ರಕಾಶ್‌ ಕೇಸರ್‌ವಾನಿ ಅವರು, '' ಧರ್ಮದ ಮೇಲೆ ನಂಬಿಕೆ ಅಥವಾ ಅದರ ಜ್ಞಾನವೇ ಇಲ್ಲದ ಯುವತಿ/ಮಹಿಳೆಯನ್ನು ಮದುವೆಯಾಗಬಾರದು ಎಂದು ಪವಿತ್ರ ಗ್ರಂಥ ಕುರಾನ್‌ನಲ್ಲಿಯೇ ಹೇಳಲಾಗಿದೆ. ಹಾಗಿದ್ದ ಮೇಲೆ ಕೇವಲ ವಿವಾಹದ ಸಲುವಾಗಿ ಇಸ್ಲಾಂ ಧರ್ಮದ ಮೇಲೆ ಹೇಗೆ ನಂಬಿಕೆ ಬಂದಿದೆ? ಧರ್ಮದ ಬಗ್ಗೆ ಮತ್ತು ಆಚರಣೆಗಳ ಬಗ್ಗೆ ನೈಜ ಶ್ರದ್ಧೆ, ಭಕ್ತಿ ಬೇಕಿಲ್ಲವೇ?,'' ಎಂದು ಖಡಕ್‌ ಪ್ರಶ್ನೆ ಇರಿಸಿತ್ತು. ಇದೇ ಸಂಬಂಧ ಸಲ್ಲಿಕೆಯಾಗಿದ್ದ ಒಂದೇ ಮಾದರಿಯ ಒಟ್ಟು ಐದು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಮತಾಂತರ ನಿರ್ಬಂಧಕ್ಕೆ ಶಿಫಾರಸು 2009ರಲ್ಲಿ ಅಂದಿನ ಹರಿಯಾಣ ಡಿಸಿಎಂ ಚಂದ್ರಮೋಹನ್‌ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಚಾಂದ್‌ ಮೊಹಮ್‌ ಆಗುವ ಮೂಲಕ ಅನುರಾಧ ಬಾಲಿ ಅಲಿಯಾಸ್‌ ಫಿಜಾ (ಮತಾಂತರ ಬಳಿಕ) ಎಂಬಾಕೆಯನ್ನು ವಿವಾಹವಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಷ್ಟ್ರೀಯ ಕಾನೂನು ಮಂಡಳಿ , ಹಿಂದೂ ವಿವಾಹ ಕಾಯಿದೆಯಲ್ಲಿ ತಿದ್ದುಪಡಿ ತಂದು ವಿವಾಹಕ್ಕಾಗಿಯೇ ಅನ್ಯಧರ್ಮಗಳಿಗೆ ಮತಾಂತರವಾಗುವುದನ್ನು ತಡೆಯಬೇಕಿದೆ ಎಂದು ಸರಕಾರಕ್ಕೆ ಶಿಫಾರಸು ಮಾಡಿತ್ತು. ''ಹಿಂದೂ ಪುರುಷರು ಮರುವಿವಾಹಕ್ಕೆಇಂಥ ಅಡ್ಡದಾರಿ ಹಿಡಿಯಕೂಡದು. ಅದೇ ರೀತಿ ಇಸ್ಲಾಂ ಧರ್ಮದಲ್ಲಿ ಮರುವಿವಾಹ ಪದ್ಧತಿ ದುರುಪಯೋಗವನ್ನು ಯಾರೂ ಕೂಡ ಮಾಡಬಾರದು,'' ಎಂದು ಮಂಡಳಿ ಹೇಳಿತ್ತು. ಉತ್ತರಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ 2019ರ ಕರಡು ಪ್ರತಿಯನ್ನು ಸಿದ್ಧಪಡಿಸಿದ್ದ ರಾಜ್ಯ ಕಾನೂನು ಮಂಡಳಿ 268 ಪುಟಗಳ ವಿಸ್ತೃತ ವರಿಯಲ್ಲಿ, ವಿವಾಹದ ಕಾರಣಕ್ಕಾಗಿ ಯಾವುದೇ ರೀತಿಯ ಮತಾಂತರ ನಡೆದರೆ ಅದನ್ನು ಅಮಾನ್ಯ ಎಂದು ಪರಿಗಣಿಸುವಂತೆ ಕಾನೂನು ರೂಪಿಸಲು ಯೋಗಿ ಆದಿತ್ಯನಾಥ್‌ ಸರಕಾರಕ್ಕೆ ಕಳೆದ ವರ್ಷವೇ ಶಿಫಾರಸು ಮಾಡಿದೆ. ಬಲವಂತದ ಮತಾಂತರ, ಮೋಸದಿಂದ ಮತಾಂತರಗಳು ಹೆಚ್ಚುತ್ತಿರುವುದನ್ನು ತಡೆಯಲು ಈ ಕ್ರಮ ಅನಿವಾರ್ಯ ಎಂದು ಮಂಡಳಿ ಮುಖ್ಯಸ್ಥ ಎ.ಎನ್‌.ಮಿತ್ತಲ್‌ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಪತ್ರ ಕೂಡ ಬರೆದಿದ್ದರು.


from India & World News in Kannada | VK Polls https://ift.tt/381bbTY

ಹೊಸ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ: 91% ದಾಟಿದ ಚೇತರಿಕೆ ಪ್ರಮಾಣ

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವ ಪ್ರಮಾಣ ಶೇ.91.34ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬೆಳಗ್ಗೆ ಬಿಡುಗಡೆ ಮಾಡಿದ ಮಾಹಿತಿಯಂತೆ, ಒಟ್ಟು 74,32,829 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 5,82,649ಕ್ಕೆ ಇಳಿಕೆಯಾಗಿದೆ. ಅಲ್ಲದೇ ಸೋಂಕಿನ ಮರಣ ಪ್ರಮಾಣವು ಶೇ.1.49ಕ್ಕೆ ಇಳಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 48,648 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 81.37 ಲಕ್ಷ ತಲುಪಿದೆ. ಇದೇ ಅವಧಿಯಲ್ಲಿ 551 ಸಾವುಗಳು ವರದಿಯಾಗಿದ್ದು, ಮೃತರ ಸಂಖ್ಯೆ 1,21,641ಕ್ಕೆ ಏರಿಕೆಯಾಗಿದೆ. ''ಅಧಿಕ ತಪಾಸಣೆ, ಸೋಂಕಿತರ ಸಂಪರ್ಕ ಪತ್ತೆ ಹಾಗೂ ಸಕಾಲಿಕ ಚಿಕಿತ್ಸೆಯಿಂದಾಗಿ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ದೇಶದಲ್ಲಿಪ್ರತಿ 10 ಲಕ್ಷ ಜನಸಂಖ್ಯೆಗೆ ಸಾವಿನ ಪ್ರಮಾಣ 88 ಇದೆ. ದೇಶದ 23 ರಾಜ್ಯಗಳಲ್ಲಿ ಮರಣ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ,'' ಎಂದು ಸಚಿವಾಲಯ ತಿಳಿಸಿದೆ. ಗೃಹ ಕಾರ್ಯದರ್ಶಿ ಸಭೆ: ದೇಶಾದ್ಯಂತ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆ ಕಾಣುತ್ತಿದ್ದರೂ ರಾಷ್ಟ್ರ ರಾಜಧಾನಿಯಲ್ಲಿ ಮಾತ್ರ ಕೋವಿಡ್‌-19 ಸಾಂಕ್ರಾಮಿಕ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಖುದ್ದು ಕೇಂದ್ರ ಗೃಹ ಕಾರ್ಯದರ್ಶಿಯ ಅಜಯ್‌ಕುಮಾರ್‌ ಭಲ್ಲಾ ಅವರೇ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಸೋಮವಾರ ಭಲ್ಲಾಅವರು ಪರಿಶೀಲನಾ ಸಭೆ ನಡೆಸಲಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ದಿಲ್ಲಿ ಸರಕಾರದ ಉನ್ನತ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಲಿದ್ದಾರೆ. ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪ್ರಸ್ತುತ ಕೊರೊನಾ ಸೋಂಕಿನ ಸ್ಥಿತಿಗತಿಗಳ ಬಗ್ಗೆ ವಿಸ್ತೃತ ಸಮಾಲೋಚನೆ ಮೂಲಕ ಮಾಹಿತಿಯನ್ನು ಭಲ್ಲಾ ಸಂಗ್ರಹಿಸುತ್ತಿದ್ದಾರೆ. ಕಳೆದ ಶುಕ್ರವಾರ ಏಕಾಏಕಿ ಕೊರೊನಾ ಪ್ರಕರಣಗಳ ತೀವ್ರ ಏರಿಕೆ ಕಂಡ ದಿಲ್ಲಿಯಲ್ಲಿ, ಒಂದೇ ದಿನ 5,891 ಹೊಸ ಸೋಂಕಿತರು ವರದಿಯಾಗಿದ್ದವು. ಜತೆಗೆ ಸತತ ಮೂರು ದಿನಗಳಿಂದ ನಿತ್ಯ 5 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಹೊಸ ಸೋಂಕಿತರು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಕೊರೊನಾ ಅಬ್ಬರದ 2ನೇ ಅಲೆ ಏಳುತ್ತಿರುವ ಸಂಶಯ ಹೊಂದಿದೆ. ಇದುವರೆಗೂ ದಿಲ್ಲಿಯಲ್ಲಿ ಕೊರೊನಾಗೆ 6500ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹಾಗಾಗಿ ಗೃಹ ಕಾರ್ಯದರ್ಶಿ ಭಲ್ಲಾ ಖುದ್ದು ಪರಿಶೀಲನೆ ಮತ್ತು ವಸ್ತುಸ್ಥಿತಿ ಅಧ್ಯಯನಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮರಣ ಪ್ರಮಾಣ ಎಲ್ಲಿ ಜಾಸ್ತಿ?
  • ಮಹಾರಾಷ್ಟ್ರ 36.04%
  • ಕರ್ನಾಟಕ 9.16%
  • ತಮಿಳುನಾಡು 9.12%
  • ಉತ್ತರ ಪ್ರದೇಶ 5.76%
  • ಪಶ್ಚಿಮ ಬಂಗಾಳ 5.58%
ಮನೆಯಲ್ಲೇ ಅಧಿಕ ವೇಗ ಕೊರೊನಾ ಸೋಂಕು ಮನೆಯಲ್ಲಿ ಈ ಹಿಂದೆ ಅಂದಾಜಿಸಿದ್ದಕ್ಕಿಂತಲೂ ವೇಗವಾಗಿ ಪ್ರಸರಣ ಹೊಂದುತ್ತದೆ ಎಂದು ಅಮೆರಿಕದ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಮನೆಯಲ್ಲಿ ಯಾರಿಗಾದರೂ ಒಬ್ಬ ವ್ಯಕ್ತಿಗೆ ಸೋಂಕು ತಗಲಿರುವುದು ದೃಢಪಟ್ಟ ತಕ್ಷಣ ಮನೆಮಂದಿಗೆಲ್ಲಸೋಂಕಿನ ಲಕ್ಷಣ ಕಾಣಿಸಿಕೊಳ್ಳುತ್ತದೆ. ಅವರಲ್ಲಿ ಹೆಚ್ಚಿನ ಜನರಿಗೆ ಏಳು ದಿನ ಸೋಂಕಿನ ಲಕ್ಷಣ ಲಕ್ಷಣಗಳಿರುತ್ತವೆ ಎನ್ನುವುದನ್ನೂ ಅಧ್ಯಯನ ಕಂಡುಕೊಂಡಿದೆ. ಹೋಮ್‌ ಐಸೋಲೇಷನ್‌ ಸಂದರ್ಭದಲ್ಲಿ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿರುವುದೇ ಕುಟುಂಬ ಸದಸ್ಯರಿಗೆಲ್ಲ ಸೋಂಕು ತಗಲಲು ಕಾರಣವಾಗಿದೆ. ಆದ್ದರಿಂದ ಸೋಂಕು ತಡೆಯಲು ಸರಿಯಾದ ಮುನ್ನೆಚ್ಚರಿಕೆಯೊಂದೇ ಉಪಾಯ ಎಂದೂ ತಜ್ಞರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3mJaRgm

ತಮಿಳುನಾಡಿನಲ್ಲಿ ಕಾಲೇಜು, ಥಿಯೇಟರ್‌ ಓಪನ್‌: ನ.10 ಹೊಸ ಮಾರ್ಗಸೂಚಿ ಜಾರಿ

ಚೆನ್ನೈ: ಕೊರೊನಾ ಹಾವಳಿ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಮತ್ತಷ್ಟು 'ಅನ್‌ಲಾಕ್‌'ಗೆ ಅವಕಾಶ ಮಾಡಿಕೊಟ್ಟಿದೆ. ನವೆಂಬರ್‌ 10ರಿಂದ ಹೊಸ ಮಾರ್ಗಸೂಚಿಗಳು ರಾಜ್ಯದಲ್ಲಿ ಜಾರಿಯಾಗಲಿವೆ. ಕೊರೋನಾ ಸುರಕ್ಷತಾ ಕ್ರಮಗಳೊಂದಿಗೆ ಶಾಲಾ ಕಾಲೇಜುಗಳು, ಚಿತ್ರ ಮಂದಿರಗಳು, ಧಾರ್ಮಿಕ ಕೇಂದ್ರಗಳು, ಜಿಮ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಜತೆಗೆ ಸಭೆ ಸಮಾರಂಭಗಳಿಗೂ ಷರತ್ತುಬದ್ಧ ಅನುಮತಿ ನೀಡಲಾಗಿದೆ. ನಗರ ಸ್ಥಳೀಯ ರೈಲು ಸಂಚಾರ, ಮನರಂಜನಾ ಪಾರ್ಕ್ಗಳು, ಮೃಗಾಲಯ ಗಳಿಗೂ ಅವಕಾಶ ನೀಡುವುದಾಗಿ ಸರಕಾರ ಹೇಳಿದೆ. ನ.16ರಿಂದ 9ನೇ ತರಗತಿ ಮೇಲ್ಪಟ್ಟ ತರಗತಿಗಳು ಹಾಗೂ ಕಾಲೇಜುಗಳನ್ನು ನಡೆಯಸಬಹುದಾಗಿದೆ. ನ.10ರಿಂದ ಚಿತ್ರ ಮಂದಿರಗಳನ್ನು ತೆರೆಯಬಹುದಾಗಿದೆ. ಆದರೆ, ಚಿತ್ರ ಮಂದಿರಗಳಲ್ಲಿ ಶೇ. 50ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ನ.16ರಿಂದಲೇ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಆದರೆ ಜಿಮ್‌ಗಳಲ್ಲಿ 60 ವರ್ಷಕ್ಕೂ ಹೆಚ್ಚಿನ ವಯಸ್ಸಿನವರಿಗೆ ಪ್ರವೇಶವಿಲ್ಲ. ಮದುವೆ ಸಮಾರಂಭಗಳಿಗೆ ಗರಿಷ್ಠ 100 ಅತಿಥಿಗಳ ಮಿತಿ ಹೇರಲಾಗಿದೆ. ಸಗಟು ಮಾರುಕಟ್ಟೆಗಳು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ವ್ಯಾಪಾರಕ್ಕೂ ನ.16ರಿಂದ ಅವಕಾಶ ದೊರೆಯಲಿದೆ.


from India & World News in Kannada | VK Polls https://ift.tt/2TJIxyd

ರಾಜ್ಯದಲ್ಲಿ ಕೊರೊನಾ ಕೇಸ್‌ ಇಳಿಕೆ, 50 ಸಾವಿರದತ್ತ ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಲೇ ಸಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 50 ಸಾವಿರದತ್ತ ಇಳಿಯುತ್ತಿದೆ. ಶನಿವಾರ 1,01,556 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಕೇವಲ 3,014 ಆಗಿದ್ದು, ಪಾಸಿಟಿವಿ ದರ ಶೇ.3ಕ್ಕಿಂತ ಕೆಳಗಿಳಿದಿದೆ. ಶನಿವಾರ ಪರೀಕ್ಷೆಗೊಳಪಡಿಸಿದ ಸ್ಯಾಂಪಲ್‌ಗಳಲ್ಲಿ ಶೇ. 2.96 ಜನರಲ್ಲಿ ಮಾತ್ರ ಸೋಂಕು ಇರುವುದು ಖಚಿತವಾಗಿದೆ. ಇದರೊಂದಿಗೆ ರಾಜ್ಯದ ಸೋಂಕಿತರ ಸಂಖ್ಯೆ 8,23,412ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ 1,621 ಜನರಲ್ಲಿ ಸೋಂಕು ದೃಢಪಟ್ಟಿದ್ದರೆ, ಹಾಸನದಲ್ಲಿ 173, ಮೈಸೂರಿನಲ್ಲಿ 161, ವಿಜಯಪುರದಲ್ಲಿ 122 ಜನರಲ್ಲಿ ಹೊಸದಾಗಿ ಕೋವಿಡ್‌ ಸೋಂಕು ಇರುವುದು ವರದಿಯಾಗಿದೆ. ಉಳಿದ ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಕೊರೊನಾ ಪ್ರಕರಣಗಳು ಖಚಿತವಾಗಿವೆ. ಇದೇ ವೇಳೆ 28 ಜನರು ಕೋವಿಡ್‌ನಿಂದ ಅಸುನೀಗಿದ್ದಾರೆ. ಬೆಂಗಳೂರಿನಲ್ಲಿ ಗರಿಷ್ಠ 17 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾದಿಂದ ಅಸುನೀಗಿದವರ ಸಂಖ್ಯೆ 11,168ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 7,468 ಸೋಂಕಿತರು ಚೇತರಿಸಿಕೊಂಡಿದ್ದು, ರಾಜ್ಯದಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 7,57,208ಕ್ಕೆ ಏರಿಕೆಯಾಗಿದೆ. ಸದ್ಯ 55,017 ಸೋಂಕಿತರಷ್ಟೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇವರಲ್ಲಿ 956 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿವರಗಳು ಕೆಳಗಿನ ಪಟ್ಟಿಯಲ್ಲಿದೆ.


from India & World News in Kannada | VK Polls https://ift.tt/35Quaxx

RCB vs SRH IPL Score: ಟಾಸ್‌ ಸೋತ ಆರ್‌ಸಿಬಿ ಬ್ಯಾಟಿಂಗ್‌, 2 ಬದಲಾವಣೆ ತಂದ ಕೊಹ್ಲಿ!

ಶಾರ್ಜಾ: ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಇದೆಯಾದರೂ, ಪ್ಲೇ ಆಫ್ಸ್‌ ಸ್ಥಾನ ಖಚಿತ ಪಡಿಸಿಕೊಳ್ಳಲು ಇನ್ನೊಂದು ಗೆಲುವು ದಾಖಲಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾಡು ಇಲ್ಲವೆ ಮಡಿ ಹೋರಾಟ ನಡೆಸುತ್ತಿರುವ ವಿರುದ್ಧ ತನ್ನ 13ನೇ ಲೀಗ್‌ ಪಂದ್ಯವನ್ನು ಆಡಲಿದೆ. ಇಲ್ಲಿನ ಇತಿಹಾಸ ಪ್ರಸಿದ್ಧ ಶಾರ್ಜಾ ಕ್ರೀಡಾಂಗಣ ಇದೀಗ ಮಂದಗತಿ ತಾಳುತ್ತಿದ್ದು, ಟಾಸ್‌ ಗೆದ್ದ ತಂಡ ರನ್‌ಚೇಸ್‌ ಆಯ್ಕೆ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಅಂತೆಯೇ ಟಾಸ್ ಗೆದ್ದ ಡೇವಿಡ್‌ ವಾರ್ನರ್‌ ಚಾಲೆಂಜರ್ಸ್‌ ಪಡೆಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ತಂಡದಲ್ಲಿ 2 ಬದಲಾವಣೆಪ್ಲೇ ಆಫ್ಸ್‌ ಅರ್ಹತೆ ಸಲುವಾಗಿ ಪೈಪೋಟಿ ನಡೆಸುತ್ತಿರುವ ಆರ್‌ಸಿಬಿ 2 ಬದಲಾವಣೆ ತಂದುಕೊಂಡಿದೆ. ವೇಗಿ ಡೇಲ್‌ ಸ್ಟೇನ್‌ ಬದಲಿಗೆ ಇಸುರು ಉದಾನ ಮತ್ತು ಆಲ್‌ರೌಂಡರ್‌ ಶಿವಂ ದುಬೇ ಬದಲಿಗೆ ನವದೀಪ್‌ ಸೈನಿ ಅವರನ್ನು 11ರ ಬಳಗಕ್ಕೆ ಕರೆತಂದಿದೆ. ಮತ್ತೊಂದೆಡೆ ವಿಜಯ್‌ ಶಂಕರ್‌ ಗಾಯದ ಸಮಸ್ಯೆ ಎದುರಿಸಿರುವ ಕಾರಣ ಅವರ ಸ್ಥಾನದಲ್ಲಿ ಸ್ಪಿನ್ನಿಂಗ್‌ ಆಲ್‌ರೌಂಡರ್‌ ಅಭಿಷೇಕ್‌ ಶರ್ಮಾ ಅವರನ್ನು ಸನ್‌ರೈಸರ್ಸ್‌ ಕಣಕ್ಕಿಳಿಸಿದೆ. ಇತ್ತಂಡಗಳ ಪ್ಲೇಯಿಂಗ್‌ ಇಲೆವೆನ್ ಆರ್‌ಸಿಬಿ XI: ಜಾಶ್ ಫಿಲಿಪ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ'ವಿಲಿಯರ್ಸ್ (ವಿಕೆಟ್‌ಕೀಪರ್‌), ಗುರುಕೀರತ್ ಸಿಂಗ್ ಮಾನ್, ವಾಷಿಂಗ್ಟನ್ ಸುಂದರ್, ಕ್ರಿಸ್ ಮಾರಿಸ್, ಇಸುರು ಉದಾನ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಯುಜ್ವೇಂದ್ರ ಚಹಲ್. ಎಸ್‌ಆರ್‌ಎಚ್ XI: ಡೇವಿಡ್ ವಾರ್ನರ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್‌), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಶಹಬಾಝ್ ನದೀಮ್, ಸಂದೀಪ್ ಶರ್ಮಾ, ಟಿ ನಟರಾಜನ್. ತಂಡಗಳ ವಿವರ ಸನ್‌ರೈಸರ್ಸ್‌ ಹೈದರಾಬಾದ್: ಡೇವಿಡ್‌ ವಾರ್ನರ್‌ (ನಾಯಕ), ವೃದ್ಧಿಮಾನ್‌ ಸಹಾ, ಮನೀಶ್‌ ಪಾಂಡೆ, ಕೇನ್‌ ವಿಲಿಯಮ್ಸನ್, ವಿಜಯ್ ಶಂಕರ್‌, ಜೇಸನ್‌ ಹೋಲ್ಡರ್‌, ಅಬ್ದುಲ್‌ ಸಮದ್, ರಶೀದ್‌ ಖಾನ್, ಶಹಬಾಝ್ ನದೀಮ್, ಸಂದೀಪ್‌ ಶರ್ಮಾ, ಟಿ ನಟರಾಜನ್, ಖಲೀಲ್‌ ಅಹ್ಮದ್, ಶ್ರೀವತ್ಸ ಗೋಸ್ವಾಮಿ, ಜಾನಿ ವೈರ್‌ಸ್ಟೋವ್, ಸಿದ್ಧಾರ್ಥ್ ಕೌಲದ, ಮೊಹಮ್ಮದ್ ನಬಿ, ಬಾವನಕ ಸಂದೀಪ್, ಬಿಲ್ಲಿ ಸ್ಟ್ಯಾನ್‌ಲೇಕ್, ಫೇಬಿಯೆನ್ ಆಲೆನ್, ವಿರಾಟ್ ಸಿಂಗ್, ಬಸಿಲ್ ಥಂಪಿ, ಸಂಜಯ್ ಯಾದವ್, ಅಭಿಷೇಕ್ ಶರ್ಮಾ, ಪ್ರಿಯಮ್ ಗರ್ಗ್, ಪೃಥ್ವಿ ರಾಜ್‌ ಯಾರಾ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು: ಜಾಶ್ ಫಿಲಿಪ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ'ವಿಲಿಯರ್ಸ್ (ವಿಕೆಟ್‌ಕೀಪರ್‌), ಶಿವಂ ದುಬೇ, ಕ್ರಿಸ್ ಮಾರಿಸ್, ಗುರುಕೀರತ್ ಸಿಂಗ್ ಮಾನ್, ವಾಷಿಂಗ್ಟನ್ ಸುಂದರ್, ಡೇಲ್ ಸ್ಟೇನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್, ಪಾರ್ಥಿವ್ ಪಟೇಲ್, ಆರೊನ್ ಫಿಂಚ್, ನವದೀಪ್ ಸೈನಿ, ಆಡಮ್ ಝಾಂಪ, ಇಸುರು ಉದಾನ, ಉಮೇಶ್ ಯಾದವ್, ಮೊಯೀನ್ ಅಲಿ, ಪವನ್ ನೇಗಿ, ಪವನ್ ದೇಶಪಾಂಡೆ, ಶಹಬಾಜ್ ಅಹ್ಮದ್.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Je34ZB

ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋದ ಕಮಲ್‌ನಾಥ್‌

ಹೊಸದಿಲ್ಲಿ: ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಮೊರೆ ಹೋಗಿದ್ದಾರೆ. ಕಮಲ್‌ನಾಥ್‌ ಅವರ ಹೇಳಿಕೆ ಸಂಬಂಧ, ಆಯೋಗ ಅವರನ್ನು ಮಧ್ಯ ಪ್ರದೇಶ ಉಪಚುನಾವಣೆಯ ತಾರಾ ಪ್ರಚಾರಕರ ಪಟ್ಟಿಯಿಂದ ತೆಗೆದು ಹಾಕಿತ್ತು. 73 ವರ್ಷದ ಕಮಲ್‌ನಾಥ್‌ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ್ದಾರೆ ಎಂದು ಹೇಳಿ ಅವರನ್ನು ಕಾಂಗ್ರೆಸ್‌ನ ತಾರಾ ಪ್ರಚಾರಕರ ಪಟ್ಟಿಯಿಂದ ತೆಗೆದು ಹಾಕಿತ್ತು. ಒಂದೊಮ್ಮೆ ಕಮಲ್‌ನಾಥ್‌ ಹೀಗಿದ್ದೂ ಪ್ರಚಾರಕ್ಕೆ ಇಳಿದಲ್ಲಿ, ಅವರ ಪ್ರಯಾಣದ ವೆಚ್ಚ, ಉಳಿದುಕೊಳ್ಳುವ ವೆಚ್ಚ ಸೇರಿದಂತೆ ಎಲ್ಲವೂ ಅಭ್ಯರ್ಥಿಯ ಖಾತೆಗೆ ಜಮೆಯಾಗಲಿದೆ. ತಾರಾ ಪ್ರಚಾರಕರ ಎಲ್ಲಾ ಖರ್ಚುಗಳೂ ಪಕ್ಷದ ಖಾತೆಗೆ ಹೋಗುತ್ತವೆ. ತಾರಾ ಪ್ರಚಾರಕರಲ್ಲದಿದ್ದಲ್ಲಿ ಈ ಸೌಲಭ್ಯ ಇರುವುದಿಲ್ಲ. ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿರುವ ಕಮಲ್‌ನಾಥ್‌, "ಒಬ್ಬ ವ್ಯಕ್ತಿಯನ್ನು ಸ್ಟಾರ್ ಪ್ರಚಾರಕರಾಗಿ ನಾಮ ನಿರ್ದೇಶನ ಮಾಡುವುದು ಪಕ್ಷದ ಹಕ್ಕು ಮತ್ತು ಪಕ್ಷದ ನಿರ್ಧಾರ. ಇದಕ್ಕೆ ಚುನಾವಣಾ ಆಯೋಗವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಈ ನಿರ್ಧಾರವು ಅಭಿವ್ಯಕ್ತಿ ಮತ್ತು ಚಲನವಲನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ,” ಎಂದು ಅವರು ವಾದಿಸಿದ್ದಾರೆ. ಈ ಹಿಂದೆ ಬಿಜೆಪಿ ಅಭ್ಯರ್ಥಿಯನ್ನು ಐಟಂ ಎಂದು ಕರೆದಿದ್ದಕ್ಕೆ ಕಮಲ್‌ನಾಥ್‌ ಅವರಿಗೆ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್ ಓರ್ವ 'ಮುಂಬಯಿನ ಸಿನಿಮಾಗಳಲ್ಲಿ ನಟಿಸಬೇಕಾದ ನೌಟಂಕಿ ಕಲಾಕಾರ' ಎಂದು ಕಮಲ್‌ನಾಥ್‌ ಜರೆದಿದ್ದರು. ಇದಾದ ಬಳಿಕ ಚುನಾವಣಾ ಆಯೋಗ ಅವರನ್ನು ತಾರಾ ಪ್ರಚಾರಕರ ಪಟ್ಟಿಯಿಂದ ತೆಗೆದು ಹಾಕಿತ್ತು. ನವೆಂಬರ್‌ 3 ರಂದು ಮಧ್ಯ ಪ್ರದೇಶದ 28 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಜ್ಯೋತಿರಾದಿತ್ಯ ಸಿಂದಿಯಾ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ವೇಳೆ ಅವರ ಜೊತೆ ಪಕ್ಷ ಬಿಟ್ಟಿದ್ದ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳೇ ಇದರಲ್ಲಿ ಹೆಚ್ಚಿನದಾಗಿವೆ. ಬಿಜೆಪಿ ಅಧಿಕಾರದಲ್ಲಿ ಉಳಿಯಲು ಇದರಲ್ಲಿ ಕನಿಷ್ಠ 8 ಕ್ಷೇತ್ರಗಳಲ್ಲಿ ಜಯ ಸಾಧಿಸಲೇಬೇಕಾಗಿದೆ. ಒಂದೊಮ್ಮೆ ಕಾಂಗ್ರೆಸ್‌ ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದಲ್ಲಿ ಮತ್ತೆ ಅಧಿಕಾರಕ್ಕೇರಲಿದೆ.


from India & World News in Kannada | VK Polls https://ift.tt/2TTh6lL

ಉಚಿತ ಕೊರೊನಾ ಲಸಿಕೆ ಘೋಷಣೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಅಲ್ಲ: ಆಯೋಗ ಸ್ಪಷ್ಟನೆ

ಹೊಸದಿಲ್ಲಿ: ಉಚಿತವಾಗಿ ಘೋಷಣೆ ಮಾಡಿರುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಅಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಬೆನ್ನಲ್ಲೇ ಪ್ರಣಾಳಿಕೆ ಬಿಡುಗಡೆ ಮಾಡಿದ ಪಕ್ಷಗಳು ಉಚಿತವಾಗಿ ಕೊರೊನಾ ಲಸಿಕೆ ನೀಡುವ ಭರವಸೆ ನೀಡಿತ್ತು. ಬಿಜೆಪಿಯ ಈ ನಡೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು. ಬಿಜೆಪಿಯು ಮಹಾಮಾರಿಯನ್ನು ಚುನಾವಣೆ ವಸ್ತುವನ್ನಾಗಿ ಮಾಡಿ ಲಾಭ ಮಾಡಿಕೊಳ್ಳಲು ಮುಂದಾಗಿವೆ ಎಂದು ಪ್ರತಿಪಕ್ಷಗಳು ಕಿಡಿಕಾರಿದ್ದವು. ಬಿಜೆಪಿಯ ಈ ನಡೆಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸಾಕೇತ್‌ ಗೋಖಲೆ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರನ್ನೂ ಕೈಗೆತ್ತಿಕೊಂಡ ಚುನಾವಣೆ ಆಯೋಗ ವಿಚಾರಣೆ ನಡೆಸಿದೆ, ಬಿಜೆಪಿ ನೀಡಿದ್ದ ಭರವಸೆಯು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.


from India & World News in Kannada | VK Polls https://ift.tt/2HQckTu

ಸರ್ದಾರ್ ಪಟೇಲರು, ಇಂದಿರಾಗಾಂಧಿ ಅವರ ಸ್ಫೂರ್ತಿ, ಮಾರ್ಗದರ್ಶನ ಅಗತ್ಯ: ಡಿಕೆ ಶಿವಕುಮಾರ್

ಬೆಂಗಳೂರು: 'ದೇಶದ ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ಪಟೇಲರು ಹಾಗೂ ಮಾಜಿ ಪ್ರಧಾನಿ ಅವರು ಕೊಟ್ಟಿರುವ ಸ್ಫೂರ್ತಿ ಹಾಗೂ ಮಾರ್ಗದರ್ಶನ ನಮಗೆ ಅಗತ್ಯವಾಗಿದೆ. ಪ್ರತಿಯೊಬ್ಬರು ಅವರ ಒಂದು ಅಂಶವನ್ನಾದರೂ ರೂಢಿಸಿಕೊಳ್ಳಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭ ಭಾಯಿ ಪಟೇಲರ ಜನ್ಮದಿನ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶನಿವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಪಕ್ಷದ ಕಚೇರಿಯಲ್ಲಿ ಇಬ್ಬರು ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇಂದು ನಾವು ದೇಶ ಕಂಡ ಇಬ್ಬರು ಮಹಾನ್ ನಾಯಕರನ್ನು ನೆನೆಸಿಕೊಳ್ಳುತ್ತಿದ್ದೇವೆ. ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ಪಟೇಲರ ಜನ್ಮ ದಿನ, ಜತೆಗೆ ಕಿಸಾನ್ ಅಧಿಕಾರ್ ದಿವಸ, ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದ್ದೇವೆ. ನಮ್ಮ ಸರಕಾರ ಇದ್ದಾಗ ವಾಲ್ಮೀಕಿ ಅವರನ್ನು ಸ್ಮರಿಸಲು ಈ ಜಯಂತಿ ಆಚರಿಸಲು ಆರಂಭಿಸಿದ್ದೆವು. ಈ ಕಾರ್ಯಕ್ರಮವನ್ನು ದೊಡ್ಡದಾಗಿ ಮಾಡಬೇಕಿತ್ತು. ಆದರೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾವು ಇಂದು ಸಾಂಕೇತಿಕವಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು. ಈ ನಾಯಕರು ಕೊಟ್ಟಿರುವ ಸ್ಫೂರ್ತಿ ಹಾಗೂ ಮಾರ್ಗದರ್ಶನ ನಮಗೆ ಅಗತ್ಯವಾಗಿದೆ. ನಾವು ಪ್ರತಿಯೊಬ್ಬರು ಅವರ ಒಂದು ಅಂಶವನ್ನಾದರೂ ರೂಢಿಸಿಕೊಳ್ಳಬೇಕು. ಸರ್ದಾರ್ ಪಟೇಲರು ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತೆಗೆದುಕೊಂಡಿರುವ ನಿರ್ಧಾರ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ್ದಾಗಿತ್ತು. ದೇಶವನ್ನು ಒಗ್ಗೂಡಿಸಲು ಅವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಅವರನ್ನು ಉಕ್ಕಿನ ಮನುಷ್ಯ ಅಂತಾ ಕರೆಯುತ್ತೇವೆ ಎಂದು ಡಿಕೆಶಿ ತಿಳಿಸಿದರು. ಇನ್ನು ನಾಲ್ಕು ದಶಕಗಳ ಹಿಂದೆ ಅನೇಕ ನಾವು ಇಂದಿರಾಗಾಂಧಿ ಅವರನ್ನು ಕಣ್ಣಾರೆ ಕಂಡಿದ್ದೆವು. ಅವರು ಕೊಟ್ಟ ಅನೇಕ ಕಾರ್ಯಕ್ರಮದಿಂದ ದೇಶ ಬಡಲಾಗಿದ್ದನ್ನು ನೋಡಿದ್ದೇವೆ. ದೇಶ ಕಂಡ ಅಪ್ರತಿಮ ಪ್ರಧಾನಿ ಎಂದರೆ ಇಂದಿರಾ ಗಾಂಧಿ ಎಂದು ಜನ ಹೇಳುತ್ತಾರೆ. ಅವರನ್ನು ದುರ್ಗಾದೇವಿ ಎಂದು ಅಟಲ್ ಬಿಹಾರಿ ವಾಜಪೇಯಿ ಅವರೇ ಹೇಳಿದ್ದಾರೆ. ಅವರು ಇಂದು ಇಲ್ಲದಿರಬಹುದು, ಈ ದೇಶದ ಐಕ್ಯತೆ, ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ದೇಶದ ಮಹತ್ವದ ಬದಲಾವಣೆಯಲ್ಲಿ ಅವರಿದ್ದಾರೆ. ಅವರ ಕಾರ್ಯಕ್ರಮದಿಂದ ಜನರ ಜೀವನದಲ್ಲಿ ಆದ ಪ್ರಗತಿಯಲ್ಲಿ ಇಂದಿರಾಗಾಂಧಿ ಅವರು ಜೀವಂತವಾಗಿದ್ದಾರೆ ಎಂದರು. ಬ್ಯಾಂಕುಗಳ ರಾಷ್ಟ್ರೀಕರಣ ಆಗದಿದ್ದರೆ, ದೇಶ ಆರ್ಥಿಕವಾಗಿ ಇಷ್ಟು ಪ್ರಬಲವಾಗಿ ಬೆಳೆಯಲು ಸಾಧ್ಯವಿಲ್ಲ. ಭೂ ಸುಧಾರಣಾ ಕಾಯ್ದೆ ಮೂಲಕ ದೇಶದಲ್ಲಿ ಬಡವರಿಗೆ ಭೂಮಿ ಕೊಟ್ಟರು. ದೇಶ ಅನೇಕ ಯುದ್ಧಗಳನ್ನು ಎದುರಿಸಿದ ಸಮಯದಲ್ಲಿ, ಬಾಂಗ್ಲಾ ರಕ್ಷಣೆ ಸಮಯದಲ್ಲಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಅವರ ಪ್ರತಿ ತೀರ್ಮಾನ ಐಕ್ಯತೆ ಹಾಗೂ ರಾಜಕೀಯ ಬದ್ಧತೆ ಇತ್ತು ಎಂದು ಡಿಕೆಶಿ ಸ್ಮರಿಸಿದರು. ಚಿಕ್ಕಮಗಳೂರಿನಲ್ಲಿ ಚುನಾವಣೆ ಸಂದರ್ಭದಲ್ಲಿ ನಾವು ವಿದ್ಯಾರ್ಥಿ ನಾಯಕರಾಗಿದ್ದೆವು. ಆಗ ಅವರ ಸರಳತೆ ನೋಡಿದ್ದೆವು. ಕಾರ್ಯಕರ್ತರ ಮನೆಯಲ್ಲೇ ಮಲಗುತ್ತಿದ್ದರು. ನಾವೆಲ್ಲಾ ಯೂತ್‌ ಕಾಂಗ್ರೆಸ್ ನಲ್ಲಿ ಇದ್ದಾಗ ಹೊಸದಿಲ್ಲಿ ಸಮಾವೇಶಕ್ಕೆ ರೈಲಿನ ಮೂಲಕ ಹೊರಟೆವು. ರೈಲು ಪ್ರಯಾಣ ಆರಂಭವಾದ ಕೆಲವೇ ಹೊತ್ತಲ್ಲಿ ಇಂದಿರಾಗಾಂಧಿ ಅವರ ಹತ್ಯೆ ಬಗ್ಗೆ ಸುದ್ದಿ ಬಂತು. ಆ ಸಂದರ್ಭದಲ್ಲಿ ನಾನು ನಮ್ಮೂರಿನಲ್ಲಿ ಚಿತ್ರಮಂದಿರ ತೆರೆಯಲು ಅರ್ಜಿ ಹಾಕಿದ್ದೆ. ಆಗ ಜಿಲ್ಲಾಧಿಕಾರಿಗಳು ಏನು ಹೆಸರಿಡುತ್ತೀರ ಎಂದು ಕೇಳಿದರು ಆಗ ನಾನು ಇಂದಿರಾ ಗಾಂಧಿ ಅಂತಾ ಹೆಸರಿಡುತ್ತೇನೆ ಎಂದಿದ್ದೆ. ಆಗ ಅವರು ಇಂದಿರಾ ಚಿತ್ರಮಂದಿರ ಎಂದು ಬರೆದು ಕೊಟ್ಟರು ಎಂದು ಡಿಕೆಶಿ ನೆನಪಿನಂಗಳಕ್ಕೆ ಜಾರಿದರು. ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಮಾಧ್ಯಮ ವಿಭಾಗ ಮುಖ್ಯಸ್ಥ ಬಿ.ಎಲ್ ಶಂಕರ್, ಮತ್ತಿತರ ನಾಯಕರು ಇದ್ದರು.


from India & World News in Kannada | VK Polls https://ift.tt/2HTZYd5

ಪಂಜಾಬ್‌ ಹಾದಿ ತುಳಿದ ರಾಜಸ್ಥಾನ, ಕೇಂದ್ರ ಕೃಷಿ ಕಾಯಿದೆ ವಿರುದ್ಧ ಮಸೂದೆ ಮಂಡನೆ

ಜೈಪುರ: ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ಸರಕಾರ ಮೂರು ಮಸೂದೆಗಳನ್ನು ಶನಿವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಈ ಹಿಂದೆ ಕೂಡ ಇದೇ ರೀತಿ ಮಸೂದೆ ಮಂಡಿಸಿ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡಿತ್ತು. ಅಶೋಕ್ ಗೆಹ್ಲೋಟ್ ಸರಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿರುವ ಶಾಂತಿ ಧಾರಿವಾಲ್ ಅವರು, ಅಗತ್ಯ ಸರಕುಗಳ (ವಿಶೇಷ ನಿಬಂಧನೆಗಳು ಮತ್ತು ರಾಜಸ್ಥಾನ ತಿದ್ದುಪಡಿ) ಮಸೂದೆ 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ (ರಾಜಸ್ಥಾನ ತಿದ್ದುಪಡಿ) ಮಸೂದೆ 2020 ಮತ್ತು ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ಸೌಲಭ್ಯ ಮತ್ತು ರಾಜಸ್ಥಾನ ತಿದ್ದುಪಡಿ) ಮಸೂದೆ 2020ನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದರು. ವಿಧಾನಸಭೆ ಅಧಿವೇಶನದ ಮೊದಲ ದಿನದಂದು ಅವರು ಪ್ರಕ್ರಿಯೆ ಸಂಹಿತೆ (ರಾಜಸ್ಥಾನ ತಿದ್ದುಪಡಿ) ಮಸೂದೆ 2020 ಅನ್ನೂ ಮಂಡಿಸಿದರು. ನಂತರ ಅಧಿವೇಶನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಕೇಂದ್ರ ಕೃಷಿ ಮಸೂದೆಗಳ ವಿರುದ್ಧ ಪಂಜಾಬ್‌ ವಿಧಾನಸಭೆಯೂ ಕೆಲವು ದಿನಗಳ ಹಿಂದೆ ಮೂರು ಮಸೂದೆಗಳಿಗೆ ಅನುಮೋದನೆ ನೀಡಿತ್ತು. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ.


from India & World News in Kannada | VK Polls https://ift.tt/31Za5Ee

ಕ್ರಿಸ್‌ ಗೇಲ್‌ 99ಕ್ಕೆ ಔಟಾಗುತ್ತಿದ್ದಂತೆ ವೈರಲ್‌ ಆಯ್ತು ಜೋಫ್ರ ಆರ್ಚರ್‌ ಹಳೆಯ ಟ್ವೀಟ್‌ !

ಅಬುಧಾಬಿ: ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಉಂಟಾಗುವ ಹಲವು ಸನ್ನಿವೇಶಗಳಿಗೆ ಕಳೆದ ವರ್ಷ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ವೇಳೆ ಮಾಡಿದ್ದ ಟ್ವೀಟ್‌ಗಳಿಗೆ ಅಭಿಮಾನಿಗಳು ತಾಳೆ ಹಾಕುತ್ತಿದ್ದಾರೆ. ಶುಕ್ರವಾರ ಶೇಖ್‌ ಝಾಯೆದ್‌ ಕ್ರೀಡಾಂಗಣದಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್‌ ತಂಡದ ಕ್ರಿಸ್‌ ಗೇಲ್ ಅವರನ್ನು 99 ರನ್‌ಗಳಿಗೆ ಆರ್ಚರ್‌ ಕ್ಲೀನ್ ಬೌಲ್ಡ್ ಮಾಡಿದ ಬಳಿಕ, ಆಲ್‌ರೌಂಡರ್‌ ಅವರ ಹಳೆಯ ಟ್ವೀಟ್‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 63 ಎಸೆತಗಳಲ್ಲಿ ಆರು ಸಿಕ್ಸರ್‌ಗಳು ಹಾಗೂ ಎಂಟು ಬೌಂಡರಿಗಳೊಂದಿಗೆ ಈ ಮೊತ್ತವನ್ನು ಕಲೆ ಹಾಕಿದ್ದರು. ಕಿಂಗ್ಸ್ ಇಲೆವೆನ್‌ ಪಂಜಾಬ್ ಇನಿಂಗ್ಸ್‌ನಲ್ಲಿ ಕ್ರಿಸ್ ಗೇಲ್‌ 92 ರನ್‌ಗಳಿಸಿದ್ದಾಗ ಜೋಫ್ರ ಆರ್ಚರ್‌ ಕೊನೆಯ ಓವರ್‌ ಬೌಲಿಂಗ್‌ ಮಾಡಲು ಬಂದರು. ಮೊದಲನೇ ಎಸೆತದಲ್ಲಿ ಗೇಲ್‌ ಸಿಂಗಲ್ ತೆಗೆದುಕೊಂಡರು. ನಂತರ ಎರಡನೇ ಎಸೆತದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಒಂದು ರನ್ ಗಳಿಸಿ ಗೇಲ್‌ಗೆ ಸ್ಟ್ರೈಕ್ ನೀಡಿದರು. ಮೂರನೇ ಎಸೆತದಲ್ಲಿ ಗೇಲ್‌ ಸಿಕ್ಸರ್‌ ಸಿಡಿಸಿದರು. ಆ ಮೂಲಕ ಪ್ರಸಕ್ತ ಆವೃತ್ತಿಯ ಐಪಿಎಲ್‌ ಮೊದಲ ಶತಕದ ಸನಿಹವಿದ್ದರು. ಆದರೆ, ಆರ್ಚರ್‌ ಅವರ ನಾಲ್ಕನೇ ಎಸೆತದಲ್ಲಿ ಚೆಂಡನ್ನು ಪ್ಯಾಡ್‌ ಮೇಲೆ ಹಾಕಿಕೊಂಡು ಬೌಲ್ಡ್ ಆದರು. 99 ರನ್‌ಗಳಿಗೆ ಕ್ರಿಸ್‌ ಗೇಲ್‌ ಕ್ಲೀನ್‌ ಬೌಲ್ಡ್‌ ಆಗುತ್ತಿದ್ದಂತೆ, ಜೋಫ್ರ ಆರ್ಚರ್‌ ಅವರ ಹಳೆಯ ಟ್ವೀಟ್‌ ವೈರಲ್‌ ಆಯಿತು. 2013ರಲ್ಲಿ ಪೋಸ್ಟ್ ಮಾಡಲಾದ ಟ್ವೀಟ್‌ನಲ್ಲಿ, ಬಾರ್ಬಡೋಸ್ ಮೂಲದ ಆಲ್ರೌಂಡರ್ ಅವರು ಶತಕ ಗಳಿಸುವ ಮುನ್ನ ಯಾರನ್ನಾದರೂ ಔಟ್‌ ಮಾಡುವ ಬಗ್ಗೆ ಹಂಬಲ ಹೊಂದಿದ್ದರು ಎಂಬುದು ಆ ಟ್ವೀಟ್‌ ಅರ್ಥವಾಗಿತ್ತು. "ನಾನು ಬೌಲಿಂಗ್‌ ಮಾಡಿದರೆ, ಅವರನ್ನು 100 ರನ್‌ಗಳನ್ನು ಗಳಿಸಲು ಬಿಡುವುದಿಲ್ಲ ಎಂಬುದು ನನಗೆ ಗೊತ್ತು" ಎಂದು ಅವರು ಹಿಂದೆ ಟ್ವೀಟ್‌ ಮಾಡಿದ್ದರು. ಈ ಟ್ವೀಟ್ ಅನ್ನು ಅಭಿಮಾನಿಗಳು ಮತ್ತೊಮ್ಮೆ ಶೇರ್‌ ಮಾಡುವ ಮೂಲಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇದು ತುಂಬಾ ವೈರಲ್‌ ಆಗಿದೆ. 184 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್‌ ರಾಯಲ್ಸ್‌ ಏಳು ವಿಕೆಟ್‌ಗಳಿಂದ ಜಯ ಸಾಧಿಸಿತು. ಈ ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್‌ 26 ಎಸೆತಗಳಲ್ಲಿ 50 ರನ್‌ಗಳನ್ನು ಗಳಿಸಿದ್ದರು. ಸ್ಟೀವನ್‌ ಸ್ಮಿತ್‌ ಹಾಗೂ ಜೋಸ್ ಬಟ್ಲರ್‌ ಜೋಡಿ 41 ರನ್‌ಗಳ ಜತೆಯಾಟದೊಂದಿಗೆ ರಾಜಸ್ಥಾನ್ ರಾಯಲ್ಸ್‌ಗೆ ಜಯ ತಂದುಕೊಟ್ಟಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/320pswb

ಕನಸಿನ ಯೋಜನೆ: ದೇಶದ ಮೊಟ್ಟ ಮೊದಲ ಸೀಪ್ಲೇನ್‍ಗೆ ಪ್ರಧಾನಿ ಮೋದಿ ಚಾಲನೆ, ತಿಳಿಯಲೇ ಬೇಕಿದೆ ಇದರ ವಿಶೇಷತೆ!

ಕೆವಾಡಿಯಾ: ದೇಶದ ಮೊಟ್ಟ ಮೊದಲ ಸೀಪ್ಲೇನ್‍ ಅಥವಾ ಸಮುದ್ರದ ವಿಮಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜನ್ಮದಿನಾಚರಣೆ ಅಂಗವಾಗಿ ದೇಶದ ಈ ವಿನೂತನ ಯೋಜನೆ ಉದ್ಘಾಟಿಸಿ ಚಾಲನೆ ಕೊಟ್ಟರು. ಕೆವಾಡಿಯಾದ ನರ್ಮದಾ ಸರೋವರದ ತಟದಲ್ಲಿ ಪ್ರಧಾನಿ ಮೋದಿ ತಮ್ಮ ಕನಸಿನ ಯೋಜನೆಯನ್ನು ದೇಶದ ಜನರಿಗೆ ಅರ್ಪಿಸಿದರು. ಇನ್ನು ಗುಜರಾತ್‍ನ ಕೆವಾಡಿಯಾ ಕಾಲೋನಿಯಲ್ಲಿರುವ ಏಕತೆ ಪ್ರತಿಮೆ ಸ್ಥಳದಿಂದ ಅಹಮದಾಬಾದ್‍ನ ಸಬರಮತಿ ನಡುವೆ ಈ ಸೀಪ್ಲೇನ್‌ ಸಂಚರಿಸಲಿದೆ. ಅಹಮದಾಬಾದ್ ಮತ್ತು ಕೆವಾಡಿಯಾ ನಡುವೆ ಪ್ರಯಾಣಿಸಲು ನಾಲ್ಕು ಗಂಟೆ ಸಮಯ (205 ಕಿಮೀ) ತೆಗೆದುಕೊಳ್ಳುತ್ತದೆ. ಆದರೆ ಸೀಪ್ಲೇನ್ ಸುಮಾರು ಅರ್ಧ ಗಂಟೆಯಲ್ಲಿ ಪ್ರಯಾಣವನ್ನು ಪೂರ್ತಿಗೊಳಿಸಲಿದೆ. ಈ ಮೂಲಕ ಸೀಪ್ಲೇನ್‌ ಸೇವೆ ದೇಶದ ಪ್ರಾದೇಶಿಕ ಸಂಪರ್ಕದಲ್ಲಿ ಕ್ರಾಂತಿಯುಂಟುಮಾಡಲಿದೆ. ಜೊತೆಗೆ ಜನರ ಪ್ರಯಾಣ ಮತ್ತು ಪ್ರವಾಸೋದ್ಯಮದ ಉತ್ತೇಜನಕ್ಕೂ ಕಾರಣವಾಗಲಿದೆ. ಅಲ್ಲದೇ ಅಭಿವೃದ್ದಿ ಹಾಗೂ ದೇಶದ ಬದಲಾವಣೆಗೂ ಸಾಕ್ಷಿಯಾಗಲಿದೆ.

ಕೆವಾಡಿಯಾದ ನರ್ಮದಾ ಸರೋವರದ ತಟದಲ್ಲಿ ಪ್ರಧಾನಿ ಮೋದಿ ತಮ್ಮ ಕನಸಿನ ಯೋಜನೆಯಾದ ಸೀಪ್ಲೇನ್‌ ಯೋಜನೆಯನ್ನು ದೇಶದ ಜನರಿಗೆ ಅರ್ಪಿಸಿದರು. ದೇಶದ ಮೊಟ್ಟ ಮೊದಲ ಸೀಪ್ಲೇನ್‍ ಇದಾಗಿದ್ದು, ಅಹಮದಾಬಾದ್ ಮತ್ತು ಕೆವಾಡಿಯಾ ನಡುವೆ ಇದು ಸಂಪರ್ಕ ಸಾಧಿಸಲಿದೆ. ಸದ್ಯ ಈ ನಡುವೆ ರಸ್ತೆ ಪ್ರಯಾಣಕ್ಕೆ ನಾಲ್ಕು ಗಂಟೆ ಸಮಯ (205 ಕಿಮೀ) ಬೇಕಿದೆ. ಆದರೆ ಸೀಪ್ಲೇನ್‌ ಕೇವಲ ಅರ್ಧ ಗಂಟೆಯಲ್ಲಿ ತಲುಪಿಸುತ್ತದೆ. ಈ ಬಗ್ಗೆ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.


ಕನಸಿನ ಯೋಜನೆ: ದೇಶದ ಮೊಟ್ಟ ಮೊದಲ ಸೀಪ್ಲೇನ್‍ಗೆ ಪ್ರಧಾನಿ ಮೋದಿ ಚಾಲನೆ, ತಿಳಿಯಲೇ ಬೇಕಿದೆ ಇದರ ವಿಶೇಷತೆ!

ಕೆವಾಡಿಯಾ:

ದೇಶದ ಮೊಟ್ಟ ಮೊದಲ ಸೀಪ್ಲೇನ್‍ ಅಥವಾ ಸಮುದ್ರದ ವಿಮಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜನ್ಮದಿನಾಚರಣೆ ಅಂಗವಾಗಿ ದೇಶದ ಈ ವಿನೂತನ ಯೋಜನೆ ಉದ್ಘಾಟಿಸಿ ಚಾಲನೆ ಕೊಟ್ಟರು. ಕೆವಾಡಿಯಾದ ನರ್ಮದಾ ಸರೋವರದ ತಟದಲ್ಲಿ ಪ್ರಧಾನಿ ಮೋದಿ ತಮ್ಮ ಕನಸಿನ ಯೋಜನೆಯನ್ನು ದೇಶದ ಜನರಿಗೆ ಅರ್ಪಿಸಿದರು. ಇನ್ನು ಗುಜರಾತ್‍ನ ಕೆವಾಡಿಯಾ ಕಾಲೋನಿಯಲ್ಲಿರುವ ಏಕತೆ ಪ್ರತಿಮೆ ಸ್ಥಳದಿಂದ ಅಹಮದಾಬಾದ್‍ನ ಸಬರಮತಿ ನಡುವೆ ಈ ಸೀಪ್ಲೇನ್‌ ಸಂಚರಿಸಲಿದೆ. ಅಹಮದಾಬಾದ್ ಮತ್ತು ಕೆವಾಡಿಯಾ ನಡುವೆ ಪ್ರಯಾಣಿಸಲು ನಾಲ್ಕು ಗಂಟೆ ಸಮಯ (205 ಕಿಮೀ) ತೆಗೆದುಕೊಳ್ಳುತ್ತದೆ. ಆದರೆ ಸೀಪ್ಲೇನ್ ಸುಮಾರು ಅರ್ಧ ಗಂಟೆಯಲ್ಲಿ ಪ್ರಯಾಣವನ್ನು ಪೂರ್ತಿಗೊಳಿಸಲಿದೆ. ಈ ಮೂಲಕ ಸೀಪ್ಲೇನ್‌ ಸೇವೆ ದೇಶದ ಪ್ರಾದೇಶಿಕ ಸಂಪರ್ಕದಲ್ಲಿ ಕ್ರಾಂತಿಯುಂಟುಮಾಡಲಿದೆ. ಜೊತೆಗೆ ಜನರ ಪ್ರಯಾಣ ಮತ್ತು ಪ್ರವಾಸೋದ್ಯಮದ ಉತ್ತೇಜನಕ್ಕೂ ಕಾರಣವಾಗಲಿದೆ. ಅಲ್ಲದೇ ಅಭಿವೃದ್ದಿ ಹಾಗೂ ದೇಶದ ಬದಲಾವಣೆಗೂ ಸಾಕ್ಷಿಯಾಗಲಿದೆ.



ಸೀಪ್ಲೇನ್‌ನ ವಿಶೇಷತೆ ಏನು?
ಸೀಪ್ಲೇನ್‌ನ ವಿಶೇಷತೆ ಏನು?

ನೀರಿನ ಮೇಲೆ ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಲು ಸಾಧ್ಯವಿರುವ ಏರೋಪ್ಲೇನ್‍ಗೆ ಸೀಪ್ಲೇನ್ ಎಂದು ಕರೆಯುತ್ತಾರೆ. ಹೌದು, ಸೀಪ್ಲೇನ್‌ಗಳಿಗೆ ಹಣ ಖರ್ಚು ಮಾಡಿ ಏರ್‌ಪೋರ್ಟ್‌ಗಳು, ರನ್‌ವೇಗಳನ್ನು ನಿರ್ಮಿಸುವ ಅಗತ್ಯವಿಲ್ಲ. ನೀರಿನ ಮೇಲೆ ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಿನ್ನೀರು, ಡ್ಯಾಂ, ಸರೋವರದ ನೀರಿನಲ್ಲಿ ಸೀಪ್ಲೇನ್ ಸುಲಭವಾಗಿ ಲ್ಯಾಂಡಿಗ್‌ ಹಾಗೂ ಟೇಕಾಫ್‌ ಮಾಡುತ್ತದೆ. ಆದರೂ ಸಣ್ಣದೊಂಂದು ಲ್ಯಾಂಡಿಂಗ್‌ ವ್ಯವಸ್ಥೆಗಳನ್ನು ನೀರಿನಲ್ಲಿ ತಯಾರಿಸಲಾಗುತ್ತದೆ. ಇನ್ನು ಸೀಪ್ಲೇನ್‌ಗಳು ಲಘು ವಿಮಾನಗಳು ರೂಪದಲ್ಲಿ ಇರುತ್ತದೆ. ಇದರ ಆಕೃತಿ ಭೌಗೋಳಿಕತೆ / ಪ್ರದೇಶಗಳಿಗೆ ಹೊಂದುವ ರೀತಿಯಲ್ಲಿ ತಯಾರಿಸಲಾಗಿರುತ್ತದೆ. ಹೀಗಾಗಿ ನೀರಿನಲ್ಲಾಗುವ ಯಾವುದೇ ಕಠಿಣ ಪರಿಸ್ಥಿತಿಯನ್ನು ಇದು ಎದುರಿಸುವವ ಶಕ್ತಿಯನ್ನು ಹೊಂದಿರುತ್ತದೆ. 19 ಆಸನಗಳನ್ನು ಹೊಂದಿರುವ ಈ ವಿಮಾನದಲ್ಲಿ 12 ಪ್ರಯಾಣಿಕರು ಏಕಕಾಲದಲ್ಲಿ ಪ್ರಯಾಣ ಮಾಡಬಹುದಾಗಿದೆ. ಸದ್ಯ ಗುಜರಾತ್‌ನಲ್ಲಿ ಕೆನಡಾದ ಟ್ವಿನ್ ಒಟರ್ 300 ಎಂಬ ವಿಮಾನವನ್ನು ಬಳಸಲಾಗುತ್ತಿದ್ದು, ಅತ್ಯಂತ ಸುರಕ್ಷಿತ ತಿಹಾಸವನ್ನು ಈ ಟ್ವಿನ್ ಒಟರ್ 300 ವಿಮಾನಗಳು ಹೊಂದಿವೆ.

ಉತ್ತಮ ಆಡಳಿತದ ರಾಜ್ಯಗಳ ಪೈಕಿ ಕೇರಳ, ಗೋವಾ ಫಸ್ಟ್; ಉತ್ತರ ಪ್ರದೇಶ, ಬಿಹಾರ ಲಾಸ್ಟ್‌..!



ಟಿಕೆಟ್ ದರ ಹಾಗೂ ಸಮಯ!
ಟಿಕೆಟ್ ದರ ಹಾಗೂ ಸಮಯ!

ಟ್ವಿನ್ ಒಟ್ಟರ್ -300 ಬಹು ಉಪಯೋಗಿ ಹಾಗೂ ಅತ್ಯಂತ ಸುರಕ್ಷಿತ ವಿಮಾನಗಳ ಪೈಕಿ ಒಂದಾಗಿದೆ. ಇದರ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯಗಳು, ಪೇಲೋಡ್ ಸಾಮರ್ಥ್ಯ ಮತ್ತು ಅತ್ಯುತ್ತಮ ಬಾಹ್ಯ ಗೋಚರತೆಗೆ ಹೆಸರುವಾಸಿಯಾಗಿ ಇದ್ದರು ಕೂಡ ಟಿಕೆಟ್‌ ದರ ಸಾಮಾನ್ಯ ಜನರಿಗೆ ಪ್ರಯಾಣ ಮಾಡುವಂತಹ ರೀತಿಯಲ್ಲಿ ನಿಗದಿ‌ ಮಾಡಲಾಗಿದೆ. ಮೂಲಗಳ ಪ್ರಕಾರ ಒಂದು ಬಾರಿ ತೆರಳಲು ಕನಿಷ್ಠ 1,500 ರೂ. ನೀಡಬೇಕಿದೆ ಎಂದು ತಿಳಿದುಬಂದಿದೆ. ಉಡಾನ್‌ ಯೋಜನೆಯಡಿಯಲ್ಲಿ ಸೀಪ್ಲೇನ್‌ ಯೋಜನೆ ಜಾರಿಯಾಗಿದ್ದರಿಂದ ಕಡಿಮೆ ದರ ಫಿಕ್ಸ್‌ ಮಾಡಲಾಗಿದೆ. ಇನ್ನು ದಿನಕ್ಕೆ ಎರಡು ಸೀಪ್ಲೇನ್‍ ಕಾರ್ಯನಿರ್ವಹಿಸಲಿದೆ. ಪ್ರತಿದಿನ ವಿಮಾನ ಅಹಮದಾಬಾದ್‍ನಿಂದ ಕೆವಾಡಿಯಾಗೆ 4 ಬಾರಿ, ಮತ್ತು ಕೆವಾಡಿಯಾದಿಂದ ಅಹಮದಾಬಾದ್‍ಗೆ 4 ಬಾರಿ ಸಂಚಾರ ನಡೆಸಲಿದೆ. ಮುಂಜಾನೆ 10.15 ಈ ವಿಮಾನಗಳು ಹಾರಾಟ ಆರಂಭಿಸುತ್ತದೆ. ಇನ್ನು ಮುಂದೆ ಅಹಮದಾಬಾದ್‌ ಹಾಗೂ ಕೆವಾಡಿಯಾ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಡೌಟೇ ಇಲ್ಲ.

ಪುಲ್ವಾಮ ದಾಳಿ ಕೆಲವರಿಗೆ ನೋವು ತಂದಿರಲಿಲ್ಲ ಎನ್ನುವುದನ್ನು ದೇಶ ಮರೆಯುವುದಿಲ್ಲ: ವಿಪಕ್ಷಗಳ ವಿರುದ್ಧ ಮೋದಿ ಕಿಡಿ



ಪ್ರಧಾನಿ ಮೋದಿಯ ಕನಸಿನ ಯೋಜನೆ!
ಪ್ರಧಾನಿ ಮೋದಿಯ ಕನಸಿನ ಯೋಜನೆ!

ಕೇಂದ್ರ ಸರಕಾರದ ಉಡಾನ್ ಯೋಜನೆಯಡಿ ಇದನ್ನು ಆರಂಭಿಸಲಾಗಿದ್ದು, ಗುಜರಾತ್ ಸರ್ಕಾರದೊಂದಿಗೆ ಕೇಂದ್ರ ನಾಗರಿಕ ವಿಮಾನಯಾನ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೇ ಪ್ರಧಾನಿ ಮೋದಿಯವರ ಮೇಕ್‌ ಇನ್‌ ಇಂಡಿಯಾದ ಕನಸಿನ ಯೋಜನೆ ಕೂಡ ಹೌದು. ಇನ್ನು ಸಬರಮತಿ ಬಳಿಕ ಗುವಾಹಟಿ, ಅಂಡಮಾನ್ ನಿಕೋಬಾರ್, ಯಮುನಾ ಸೇರಿದಂತೆ ಉತ್ತರಾಖಂಡದ ಟಪ್ಪರ್ ಅಣೆಕಟ್ಟಿನ ವಿವಿಧ ಮಾರ್ಗಗಳಲ್ಲಿ ನಿಯಮಿತ ಸೇವೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ದ್ವೀಪಗಳಲ್ಲಿ ಇದರ ಅಗತ್ಯತೆ ಬಹಳಷ್ಟಿದೆ. ದೇಶದಲ್ಲಿ ಸ್ಪೈಸ್ ಜೆಟ್ ಸಂಸ್ಥೆ ಗುಜರಾತ್‌ನ ಸೀಪ್ಲೇನ್‌ ನ ಸೇವೆಯನ್ನು ನೀಡಲಿದೆ. ಕನಸಿನ ಯೋಜನೆ ಆಗಿದ್ದರಿಂದ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಸೀಪ್ಲೇನ್‌ನಲ್ಲಿ ಒಂದು ರೌಂಡ್‌ ಹೊಡೆದು ಬಂದು ಮಾಧ್ಯಮಗಳತ್ತ ಕೈ ಬೀಸಿದರು.





from India & World News in Kannada | VK Polls https://ift.tt/34HCeBq

DC vs MI IPL Score: ಟಾಸ್‌ ಗೆದ್ದ ಮುಂಬೈ ಬೌಲಿಂಗ್, ಡೆಲ್ಲಿ ಪರ ಕನ್ನಡಿಗ ಪ್ರವೀಣ್ ಪದಾರ್ಪಣೆ!

ದುಬೈ: ನಾಕ್‌ಔಟ್ಸ್‌ ಹಂತಕ್ಕೇರಲು ಇನ್ನೊಂದು ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ತಂಡಕ್ಕೆ ಇದೀಗ ಅಂಕಪಟ್ಟಿಯ ಅಗ್ರಸ್ಥಾನ ತಂಡದ ಕಠಿಣ ಸವಾಲು ಎದುರಾಗಿದೆ. ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನದ ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ನಾಯಕ ಕೈರೊನ್‌ ಪೊಲಾರ್ಡ್‌ ಕ್ಯಾಪಿಟಲ್ಸ್‌ ಪಡೆಯನ್ನು ಮೊದಲು ಬ್ಯಾಟ್‌ ಮಾಡುವಂತೆ ಆಹ್ವಾನಿಸಿದರು. ಟೂರ್ನಿಯಲ್ಲಿ ಈಗ ರನ್‌ ಚೇಸ್‌ ಮಾಡುವ ತಂಡಗಳಿಗೆ ಹೆಚ್ಚು ಯಶಸ್ಸು ಸಿಗುತ್ತಿರುವ ಕಾರಣ ಪೊಲಾರ್ಡ್‌ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಕನ್ನಡಿಗ ಪ್ರವೀಣ್‌ ದುಬೇ ಐಪಿಎಲ್‌ಗೆ ಪದಾರ್ಪಣೆಆರ್‌ಸಿಬಿ ತಂಡದಲ್ಲಿ ನೆಟ್‌ ಬೌಲರ್‌ ಆಗಿದ್ದ ಯುವ ಲೆಗ್‌ ಸ್ಪಿನ್ನರ್‌ ಪ್ರವೀಣ್‌ ದುಬೇ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನ ಅನುಭವಿ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ ಬದಲಿಗೆ ತೆಗೆದುಕೊಂಡಿತ್ತು. ಇದೀಗ ಈ ಯುವ ಲೆಗ್‌ ಸ್ಪಿನ್ನರ್‌ಗೆ ಐಪಿಎಲ್‌ಗೆ ಪದಾರ್ಪಣೆ ಮಾಡುವ ಅವಕಾಶವನ್ನೂ ನೀಡಿದ್ದು ಮುಂಬೈ ಎದುರು ಕಣಕ್ಕಿಳಿಸಿದೆ. ಅಷ್ಟೇ ಅಲ್ಲದೆ ಆಡುವ 11ರ ಬಳಗಕ್ಕೆ ಪೃಥ್ವಿ ಶಾ ಮತ್ತು ಹರ್ಷಲ್‌ ಪಟೇಲ್‌ ಅವರನ್ನು ಕರೆತಂದಿದೆ. ಮತ್ತೊಂದೆಡೆ ಮುಂಬೈ ತಂಡ ಜೇಮ್ಸ್‌ ಪ್ಯಾಟಿನ್ಸನ್‌ ಅವರನ್ನು ಕೈ ಬಿಟ್ಟು ಆಲ್‌ರೌಂಡರ್‌ ನೇಥನ್‌ ಕೌಲ್ಟರ್‌ ನೈಲ್‌ ಅವರನ್ನು ಆಡಿಸಿದೆ. DC vs MI Live ಸ್ಕೋರ್‌ ಕಾರ್ಡ್‌ ಇತ್ತಂಡಗಳ ಪ್ಲೇಯಿಂಗ್‌ ಇಲೆವೆನ್ ಡೆಲ್ಲಿ XI: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೆಟ್‌ ಕೀಪರ್‌), ಶಿಮ್ರಾನ್ ಹೆಟ್ಯರ್, ಮಾರ್ಕಸ್ ಸ್ಟೊಯಿನಿಸ್, ಹರ್ಷಲ್ ಪಟೇಲ್, ಪ್ರವೀಣ್ ದುಬೆ, ಕಗಿಸೊ ರಬಾಡ, ರವಿಚಂದ್ರನ್ ಅಶ್ವಿನ್, ಅನ್ರಿಕ್ ನಾರ್ಟ್ಜೆ ಮುಂಬೈ XI: ಕ್ವಿಂಟನ್ ಡಿ'ಕಾಕ್ (ವಿಕೆಟ್‌ಕೀಪರ್‌), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕ್ರುಣಾಲ್ ಪಾಂಡ್ಯ, ಕೈರೊನ್ ಪೊಲಾರ್ಡ್ (ನಾಯಕ), ಜಯಂತ್ ಯಾದವ್, ನೇಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ. ತಂಡಗಳ ವಿವರ ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ'ಕಾಕ್ (ವಿಕೆಟ್‌ಕೀಪರ್‌), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕ್ರುಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೈರೊನ್ ಪೊಲಾರ್ಡ್ (ನಾಯಕ), ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್‌ ಬುಮ್ರಾ, ಧವಳ್ ಕುಲ್ಕರ್ಣಿ, ಆದಿತ್ಯ ತಾರೆ, ರೋಹಿತ್ ಶರ್ಮಾ, ಮಿಚೆಲ್ ಮೆಕ್ಲೆನಗನ್, ಕ್ರಿಸ್ ಲಿನ್, ನೇಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಅನ್ಮೊಲ್‌ಪ್ರೀತ್ ಸಿಂಗ್, ಅನುಕುಲ್ ರಾಯ್, ಮೊಹ್ಸಿನ್ ಖಾನ್, ಶೆರ್ಫೇನ್ ರುದರ್‌ಫೋರ್ಡ್, ದಿಗ್ವಿಜಯ್ ದೇಶ್ಮುಖ್, ಪ್ರಿನ್ಸ್ ಬಲ್ವಂತ್ ರಾಯ್. ಡೆಲ್ಲಿ ಕ್ಯಾಪಿಟಲ್ಸ್‌: ಅಜಿಂಕ್ಯ ರಹಾನೆ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೆಟ್‌ಕೀಪರ್‌), ಶಿಮ್ರಾನ್ ಹೆಟ್ಮಾಯೆರ್, ಮಾರ್ಕಸ್ ಸ್ಟೊಯ್ನಿಸ್, ಆಕ್ಷರ್ ಪಟೇಲ್, ಕಗಿಸೊ ರಬಡಾ, ಆರ್‌ ಅಶ್ವಿನ್, ತುಷಾರ್ ದೇಶಪಾಂಡೆ, ಎನ್ರಿಕ್ ನಾರ್ಟ್ಜ್, ಹರ್ಷಲ್ ಪಟೇಲ್ , ಮೋಹಿತ್ ಶರ್ಮಾ, ಅಲೆಕ್ಸ್‌ ಕೇರಿ, ಅವೇಶ್ ಖಾನ್, ಪ್ರವೀಣ್ ದುಬೆ, ಸಂದೀಪ್ ಲಮಿಚಾನೆ, ಕೀಮೋ ಪಾಲ್, ಪೃಥ್ವಿ ಶಾ, ಡೇನಿಯಲ್ ಸ್ಯಾಮ್ಸ್, ಲಲಿತ್ ಯಾದವ್.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34J4DXS

7.0 ತೀವ್ರತೆಯ ಭೂಕಂಪಕ್ಕೆ ನಲುಗಿದ ಟರ್ಕಿ, ಗ್ರೀಸ್‌; 26 ಬಲಿ

ಮತ್ತು ಟರ್ಕಿಯಲ್ಲಿ ಸಂಭವಿಸಿದ 7.0 ತೀವ್ರತೆಯ ಹಾಗೂ 196 ನಂತರದ ಕಂಪನಗಳಲ್ಲಿ 26 ಜನರು ಅಸುನೀಗಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 196 ಕಂಪನಗಳಲ್ಲಿ 23ಕ್ಕೂ ಹೆಚ್ಚು ಕಂಪನಗಳು 4.0ಕ್ಕೂ ಹೆಚ್ಚು ತೀವ್ರವಾಗಿದ್ದವು. ಅಮೆರಿಕ ಜಿಯೋಲಾಜಿಕಲ್‌ ಸರ್ವೆ ಪ್ರಕಾರ ಭೂಕಂಪದ ಕೇಂದ್ರ ಗ್ರೀಕ್‌ನ ನಗರ ಕರ್ಲೊವಸಿಯಿಂದ 14 ಕಿಲೋ ಮೀಟರ್‌ ದೂರದಲ್ಲಿತ್ತು. ಭೂಕಂಪದಿಂದ ಟರ್ಕಿಯ ರೆಸಾರ್ಟ್‌ ಸಿಟಿ ಇಝ್ಮೈರ್‌ನಲ್ಲಿ ಭಾರಿ ಹಾನಿ ಉಂಟಾಗಿದ್ದು, ಕುಸಿದ ಅವಶೇಷಗಳಡಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಭೂಕಂಪದ ಸಣ್ಣ ಸುನಾಮಿಯೂ ಹುಟ್ಟಿಕೊಂಡಿದ್ದು ಇದರಿಂದ ಇಝ್ಮೈರ್‌ ಪ್ರಾಂತ್ಯದ ಸೆಫೆರಿಹಿಸಾರ್‌ ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಇಲ್ಲಿ ಒಬ್ಬರು ಪ್ರವಾಹದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್‌ ಅಧಾನೊಮ್‌ ಘೆಬ್ರೆಯೆಸುಸ್ ಹೇಳಿದ್ದಾರೆ. ಗ್ರೀಕ್‌ ಪ್ರಧಾನಿ ಕೈರಿಯಾಕೊಸ್‌ ಮಿಟ್ಸೊಟಕಿಸ್‌ ಅಧ್ಯಕ್ಷ ರೆಸಿಪ್‌ ತಯ್ಯಿಪ್‌ ಎರ್ಡೋಗನ್‌ ಅವರಿಗೆ ಕರೆ ಮಾಡಿದ್ದು, ನಿಧನರಾದವರಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ತಮ್ಮ ಬೆಂಬಲವನ್ನೂ ನೀಡಿದ್ದಾರೆ. ಈ ಹಿಂದೆ 1999ರಲ್ಲಿ ಟರ್ಕಿಯಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಲ್ಲಿ 17,000 ಜನರು ಸಾವನ್ನಪ್ಪಿದ್ದರು. ಇಸ್ತಾಂಬುಲ್‌ ನಗರವೊಂದರಲ್ಲೇ 1,000 ಜನರು ಅಸುನೀಗಿದ್ದರು. ಗ್ರೀಸ್‌ನಲ್ಲಿ ಜುಲೈ 2017ರಲ್ಲಿ ನಡೆದ ಭೂಕಂಪದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿಗೆ ಭೂಕಂಪ ಘಟಿಸಿದೆ.


from India & World News in Kannada | VK Polls https://ift.tt/3oDkRd7

ಆರ್‌ಸಿಬಿ ವಿರುದ್ದದ ಮ್ಯಾಚ್‌ಗೂ ಮುನ್ನ ಎಸ್‌ಆರ್‌ಎಚ್‌ಗೆ ಆಘಾತ.! ; ಗಾಯದಿಂದ ಮತ್ತೊಬ್ಬ ಆಲ್‌ರೌಂಡರ್ ನಿರ್ಗಮನ

ಶಾರ್ಜಾ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಮುನ್ನವೇ ತಂಡಕ್ಕೆ ಹಿನ್ನಡೆಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ಗಾಯಕ್ಕೆ ಒಳಗಾಗಿದ್ದ ಆಲ್‌ರೌಂಡರ್‌ ವಿಜಯ್‌ ಶಂಕರ್ ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೊದಲ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ವಿಜಯ್‌ ಶಂಕರ್ ಔಟ್ ಮಾಡಿದ್ದರು. ತಮ್ಮ ಎರಡನೇ ಓವರ್‌ನಲ್ಲಿ ಐದು ಎಸೆತಗಳ ಬಳಿಕ ಗಾಯಕ್ಕೆ ತುತ್ತಾಗಿದ್ದರು. ನಂತರ, ಇನ್ನುಳಿದ ಒಂದು ಎಸೆತವನ್ನು ನಾಯಕ ಡೇವಿಡ್‌ ವಾರ್ನರ್‌ ಬೌಲಿಂಗ್‌ ಮಾಡಿದ್ದರು. ಸ್ನಾಯು ಸೆಳೆತದ ಗಾಯದಿಂದಾಗಿ ವಿಜಯ್ ಶಂಕರ್ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಆವೃತ್ತಿಯಲ್ಲಿ ವಿಜಯ್ ಶಂಕರ್ ಆಡಿದ ಏಳು ಪಂದ್ಯಗಳಿಂದ 97 ರನ್‌ಗಳನ್ನು ಗಳಿಸಿದ್ದಾರೆ ಹಾಗೂ ನಾಲ್ಕು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಅರ್ಧಶತಕ ಬಾರಿಸಿದ್ದ ವಿಜಯ್ ಶಂಕರ್, ಪಂದ್ಯದ ಗೆಲುವಿನಲ್ಲಿ ಮನೀಶ್ ಪಾಂಡೆ ಅವರೊಂದಿಗೆ ಮಹತ್ತರ ಪಾತ್ರವನ್ನು ವಹಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಓಪನರ್ ಆಗಿ ಅಖಾಡಕ್ಕೆ ಬಂದ ವೃದ್ಧಿಮಾನ್ ಸಹಾ ಬ್ಯಾಟಿಂಗ್ ಮಾಡುವಾಗ ಗಾಯಗೊಂಡಿದ್ದರು. ಪಂದ್ಯದಲ್ಲಿ ಸಹಾ ಬದಲಿಗೆ ಶ್ರೀವಾಸ್ತವ ಗೋಸ್ವಾಮಿ ವಿಕೆಟ್‌ ಕೀಪಿಂಗ್‌ ಮಾಡಿದ್ದರು. ಆದರೆ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರು ವಿರುದ್ಧದ ಇಂದಿನ ಪಂದ್ಯದಲ್ಲಿ ಅವರು ಅಖಾಡಕ್ಕೆ ಇಳಿಯುತ್ತಾರೆ ಎಂದು ಸನ್‌ರೈಸರ್ಸ್ ಹೈದರಾಬಾದ್‌ ಟ್ವೀಟ್ ಮಾಡಿದೆ. ಈ ಋತುವಿನಲ್ಲಿ ಆರ್‌ಸಿಬಿ ವಿರುದ್ಧದ ಸನ್‌ರೈಸರ್ಸ್‌ನ ಮೊದಲ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಗಾಯಕ್ಕೆ ತುತ್ತಾಗಿ ನಂತರ ಟೂರ್ನಿಯಿಂದ ಹೊರ ನಡೆದಿದ್ದರು. ಇದಾದ 11 ದಿನಗಳಲ್ಲಿ ಭುವನೇಶ್ವರ್‌ ಕುಮಾರ್‌ ಕೂಡ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು ಹಾಗೂ ಪ್ರಸಕ್ತ ಋತುವಿನಿಂದ ನಿರ್ಗಮಿಸಿದ್ದರು. ಈ ಇಬ್ಬರ ಸ್ಥಾನಕ್ಕೆ ನೆಟ್ಸ್ ಬೌಲರ್ ಆಗಿದ್ದ ಪೃಥ್ವಿರಾಜ್ ಯರ್ರಾ ಹಾಗೂ ಜೇಸನ್‌ ಹೋಲ್ಡರ್ ಅವರನ್ನು ಆಯ್ಕೆ ಮಾಡಲಾಗಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31YJy9X

ಕೊರೊನಾ ನಿರ್ದೇಶನ ಉಲ್ಲಂಘನೆ: ಬೆಂಗಳೂರಿನ 7 ಪ್ರತಿಷ್ಠಿತ ಆಸ್ಪತ್ರೆಗಳಿಗೆ ಪರವಾನಗಿ ರದ್ದತಿ ಬಗ್ಗೆ ಶೋಕಾಸ್ ನೋಟಿಸ್!

ಬೆಂಗಳೂರು: ಕೊರೊನಾ ಚಿಕಿತ್ಸೆ ಸಂಬಂಧ ಸರಕಾರ ನೀಡಿರುವ ನಿರ್ದೇಶನಗಳನ್ನು ಗಾಳಿಗೆ ತೂರಿದ ಹಿನ್ನೆಲೆ ನಗರದ 7 ಖಾಸಗಿ ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ನೀಡಿದೆ. ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಪ್ರತಿ ವಿಭಾಗದಲ್ಲಿ 50% ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳು ಕಾಯ್ದಿರಿಸಬೇಕಿದೆ. ಆದರೆ ಈ ಏಳು ಆಸ್ಪತ್ರೆಗಳ ವಿರುದ್ಧ ನಿರ್ದೇಶನ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ಸಾರ್ವಜನಿಕರು ಕೂಡ ಆಸ್ಪತ್ರೆ ವಿರುದ್ಧ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಲಾಗಿದೆ. ಈ ಹಿನ್ನೆಲೆ ಬಿಬಿಎಂಪಿ 7 ಪ್ರತಿಷ್ಠಿತ ಆಸ್ಪತ್ರೆಗಳಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ. ಮುಂದಿನ 24 ಗಂಟೆಯಲ್ಲಿ ನೋಟಿಸ್‍ಗೆ ಉತ್ತರಿಸಬೇಕಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಲೈಸನ್ಸ್ ಯಾಕೆ ರದ್ದು ಮಾಡಬಾರದು ಎಂದು ಬಿಬಿಎಂಪಿ ಕೇಳಿದೆ. ಅಲ್ಲದೆ ಬಿಬಿಎಂಪಿ, ಆಸ್ಪತ್ರೆಗಳ ಓಪಿಡಿ ಕ್ಲೋಸ್ ಮಾಡಿ, ಒಳರೋಗಿಳನ್ನು ಶಿಫ್ಟ್ ಮಾಡುವ ಎಚ್ಚರಿಕೆಯನ್ನು ನೀಡಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸೆ.16 ರಂದು ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಹಕಾರ ನೀಡದ ಮತ್ತು ಸರ್ಕಾರಕ್ಕೆ ಶೇ.50 ರಷ್ಟು ಹಾಸಿಗೆ ನೀಡದ 36 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿತ್ತು. ನೋಟಿಸ್‍ನಲ್ಲಿ ಮುಂದಿನ ಮುಂದಿನ 48 ಗಂಟೆಗಳ ಒಳಗಾಗಿ ಸರ್ಕಾರದ ಆದೇಶದಂತೆ ಶೇ.50 ರಷ್ಟು ಹಾಸಿಗೆಗಳನ್ನು ಬಿಟ್ಟು ಕೊಡಬೇಕು. 24 ಗಂಟೆಗಳ ಒಳಗಾಗಿ ಪಾಲಿಕೆಯ ಶೋಕಾಸ್ ನೋಟಿಸ್‍ಗೆ ಉತ್ತರ ನೀಡುವಂತೆ ಸೂಚಿಸಲಾಗಿತ್ತು.


from India & World News in Kannada | VK Polls https://ift.tt/3mFrRo0

ಉತ್ತಮ ಆಡಳಿತದ ರಾಜ್ಯಗಳ ಪೈಕಿ ಕೇರಳ, ಗೋವಾ ಫಸ್ಟ್; ಉತ್ತರ ಪ್ರದೇಶ, ಬಿಹಾರ ಲಾಸ್ಟ್‌..!

ಬೆಂಗಳೂರು: ದೇಶದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ರಾಜ್ಯಗಳ ಪಟ್ಟಿ ಹೊರಬಿದ್ದಿದ್ದು ಮೊದಲ ಸ್ಥಾನವನ್ನು ಮತ್ತು ಪಡೆದುಕೊಂಡಿದೆ. ಉತ್ತಮ ಆಡಳಿತ ನೀಡುತ್ತಿರುವ ದೊಡ್ಡ ರಾಜ್ಯಗಳ ಪೈಕಿ ಕೇರಳ ಮೊದಲ ಸ್ಥಾನ ಪಡೆದುಕೊಂಡರೆ, ಸಣ್ಣ ರಾಜ್ಯಗಳ ಪೈಕಿ ಗೋವಾ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸಾರ್ವಜನಿಕ ವ್ಯವಹಾರಗಳ ಕೇಂದ್ರ(ಪಿಎಸಿ)ವು ಈ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ದೊಡ್ಡ ರಾಜ್ಯಗಳು, ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಂದು ಮೂರು ವಿಭಾಗಗಳನ್ನು ಗುರುತಿಸಲಾಗಿದೆ. ಆ ಪೈಕಿ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ಅಗ್ರಸ್ಥಾನವನ್ನು ಪಡೆದುಕೊಂಡರೆ, , ಮತ್ತು ಒಡಿಶಾ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡು ಅಭಿವೃದ್ಧಿಯಲ್ಲಿ ಹಿಂದುಳಿದ ರಾಜ್ಯಗಳ ಪಟ್ಟಿಗೆ ಸೇರಿದೆ. ಸಾರ್ವಜನಿಕ ವ್ಯವಹಾರಗಳ ಕೇಂದ್ರವು ತನ್ನ ವಾರ್ಷಿಕ ವರದಿಯಲ್ಲಿ ಉತ್ತಮ ಆಡಳಿತ ನೀಡುವ ರಾಜ್ಯಗಳ ಪಟ್ಟಿಯನ್ನು ಆಯ್ಕೆ ಮಾಡಿರುವುದರ ಕುರಿತು ತಿಳಿಸಿದ್ದು, ರಾಜ್ಯಗಳ ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಗಳು ನೀಡುವ ಆಡಳಿತದ ಕಾರ್ಯಕ್ಷಮತೆಯನ್ನು ಆಧರಿಸಿ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿ ರಂಗನ್ ತಿಳಿಸಿದ್ದಾರೆ. ಪಿಎಸಿ ಶ್ರೇಯಾಂಕದ ಪ್ರಕಾರ ಉತ್ತಮ ಆಡಳಿತ ನೀಡುವ ಮೊದಲ ನಾಲ್ಕು ರಾಜ್ಯಗಳಾದ ಕೇರಳ(1.308), ತಮಿಳುನಾಡು(0.912), ಆಂಧ್ರಪ್ರದೇಶ(0.531) ಮತ್ತು ಕರ್ನಾಟಕ(0.468) ಅಂಕವನ್ನು ಪಡೆದು ಟಾಪ್‌ ಫೋರ್ ಸ್ಥಾನದಲ್ಲಿವೆ. ವಿಶೇಷ ಅಂದರೆ ಮೊದಲ ನಾಲ್ಕು ಸ್ಥಾನ ಪಡೆದ ಎಲ್ಲಾ ರಾಜ್ಯಗಳು ದಕ್ಷಿಣ ಭಾರತದ ರಾಜ್ಯಗಳಾಗಿವೆ. ಇನ್ನು ಅತೀ ಕಡಿಮೆ ಅಂಕ ಗಳಿಸಿ ಉತ್ತಮ ಆಡಳಿತ ನೀಡುವ ರಾಜ್ಯಗಳ ಪೈಕಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಉತ್ತರ ಪ್ರದೇಶ, ಒಡಿಶಾ ಮತ್ತು ಬಿಹಾರ ರಾಜ್ಯಗಳು ಕ್ರಮವಾಗಿ 1.461, -1.201 ಮತ್ತು -1.158 ಅಂಕಗಳಿಗೆ ತೃಪ್ತಿಪಟ್ಟುಕೊಂಡಿವೆ. ಇನ್ನು ಸಣ್ಣ ರಾಜ್ಯಗಳ ಪೈಕಿ ಗೋವಾ (1.745), ಮೇಘಾಲಯ (0.797) ಹಾಗೂ ಹಿಮಾಚಲಪ್ರದೇಶ (0.725) ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡರೆ, ಮಣಿಪುರ (-0.363), ದೆಹಲಿ (-0.289) ಹಾಗೂ ಉತ್ತರಾಖಂಡ (-0.277) ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.


from India & World News in Kannada | VK Polls https://ift.tt/2TEGb3z

'ಈ ಆಟಗಾರನಿಂದ ರಾಜಸ್ಥಾನ್‌ ರಾಯಲ್ಸ್‌ಗೆ ನೂರಾನೆ ಬಲ' : ಸಂಜು ಹೇಳಿದ್ದು ಯಾರ ಬಗ್ಗೆ?

ಅಬುಧಾಬಿ: ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ 7 ವಿಕೆಟ್‌ಗಳ ಜಯದಲ್ಲಿ ಆಲ್‌ರೌಂಡರ್‌ ಪ್ರದರ್ಶನ ತೋರಿದ ಅವರನ್ನು ರಾಜಸ್ಥಾನ್ ರಾಯಲ್ಸ್‌ ಬ್ಯಾಟ್ಸ್‌ಮನ್‌ ಶ್ಲಾಘಿಸಿದರು. ಇಲ್ಲಿನ ಶೇಖ್‌ ಜಾಹೇದ್‌ ಕ್ರೀಡಾಂಗಣದಲ್ಲಿ 186 ರನ್‌ಗಳ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್‌ ರಾಯಲ್ಸ್‌ಗೆ ಬೆನ್‌ ಸ್ಟೋಕ್ಸ್ ಕೇವಲ 26 ಎಸೆತಗಳಲ್ಲಿ ಆರು ಬೌಂಡರಿಗಳು ಹಾಗೂ ಮೂರು ಸಿಕ್ಸರ್‌ಗಳ ನೆರವಿನೊಂದಿಗೆ 50 ರನ್ ಗಳಿಸಿ ಭರ್ಜರಿ ಆರಂಭ ನೀಡಿದರು. ಅಂತಿಮವಾಗಿ ಇಂಗ್ಲೆಂಡ್‌ ಆಟಗಾರನ ಆಲ್‌ರೌಂಡರ್‌ ಪ್ರದರ್ಶನದಿಂದ ರಾಜಸ್ಥಾನ್‌ ರಾಯಲ್ಸ್‌ ಗೆಲುವಿನ ನಗೆ ಬೀರಿತು. "ಬೆನ್‌ ಸ್ಟೋಕ್ಸ್ ತಂಡಕ್ಕೆ ಅದ್ಭುತ ಆರಂಭ ನೀಡಿದ ಫಲವಾಗಿ ಇನ್ನೂ ಎರಡು ಓವರ್‌ಗಳು ಬಾಕಿ ಇರುವಂತೆ ಗೆಲುವು ಸಾಧಿಸಲು ಸಾಧ್ಯವಾಯಿತು. ಅವರು ಔಟ್‌ ಆದಾಗ ನಮಗೆ ಇನ್ನೂ ಒಂದು ಅಥವಾ ಎರಡು ಸಿಕ್ಸರ್‌ಗಳು ಶಾರ್ಟ್ ಆಗಿದ್ದವು. ಟೂರ್ನಿಯ ಸರಿಯಾದ ಸಮಯದಲ್ಲಿ ಇಂತಹ ಆಟಗಾರನನ್ನು ಹೊಂದಿರುವುದು ತುಂಬಾ ನಿರ್ಣಾಯಕ ಹಾಗೂ ಮುಂದೆ ಪ್ಲೇಆಫ್ಸ್‌ಗೆ ತಲುಪುತ್ತೇವೆಂಬ ನಂಬಿಕೆ ಇದೆ," ಎಂದು ಸಂಜು, ಆರ್ಚರ್‌ಗೆ ಹೇಳಿರುವ ವಿಡಿಯೋವನ್ನು ಐಪಿಎಲ್‌ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. "ಈ ಪಂದ್ಯ ನಮಗೆ ತುಂಬಾ ಮುಖ್ಯವಾಗಿತ್ತು, ಹಾಗಾಗಿ ದೊಡ್ಡ ಅಂತರದಲ್ಲಿ ಗೆಲ್ಲುವುದು ಅಗತ್ಯವಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳು ಸರಿಯಾದ ಸಮಯದಲ್ಲಿ ಲಯಕ್ಕೆ ಬಂದಿದ್ದು ವಿಶೇಷವಾಗಿತ್ತು," ಎಂದು ಹೇಳಿದರು. ಕಿಂಗ್ಸ್ ಇಲೆವೆನ್‌ ಪಂಜಾಬ್‌ ಪರ ಕ್ರಿಸ್‌ ಗೇಲ್ 63 ಎಸೆತಗಳಲ್ಲಿ 99 ರನ್‌ಗಳಿದರು ಹಾಗೂ ಟಿ20 ಕ್ರಿಕೆಟ್‌ನಲ್ಲಿ 1000 ಸಿಕ್ಸರ್‌ ದಾಖಲೆ ಮಾಡಿದರು. ಯೂನಿವರ್ಸ್ ಬಾಸ್‌ ಒಂದೇ ಒಂದು ರನ್‌ನಿಂದ ಶತಕ ವಂಚಿತರಾದರು. ಜೋಫ್ರ ಆರ್ಚರ್‌ ಬೌಲಿಂಗ್ ‌ಅವರು ಕ್ಲೀನ್ ಬೌಲ್ಡ್‌ ಆದರು. ಇದರಿಂದ ಬೇಸರಕ್ಕೆ ಒಳಗಾದ ವಿಂಡೀಸ್‌ ಬ್ಯಾಟ್ಸ್‌ಮನ್‌ ಬ್ಯಾಟ್‌ ಬಿಸಾಡಿದರು. ನಂತರ, ಆರ್ಚರ್‌ಗೆ ಕೈಕೊಟ್ಟು ಶ್ಲಾಘಿಸಿದರು. ಈ ಬಗ್ಗೆ ಮಾತನಾಡಿದ ಜೋಫ್ರ ಆರ್ಚರ್‌," ಕ್ರಿಸ್‌ ಗೇಲ್‌ ಅವರನ್ನು ನಿಯಂತ್ರಿಸಲು ನನ್ನ ಕೈಲಾದಷ್ಟು ಪ್ರಯತ್ನ ನಡೆಸಿದೆ. ಮೂರನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಿದ ಅವರು, ನಂತರದ ಎಸೆತದಲ್ಲಿ ಬೌಲ್ಡ್‌ ಆದರು," ಎಂದು ತಿಳಿಸಿದರು. ಗೆಲುವಿನೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದೆ. ನಾಳೆ(ಭಾನುವಾರ) ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37YOGii

ಪುಲ್ವಾಮ ದಾಳಿ ಕೆಲವರಿಗೆ ನೋವು ತಂದಿರಲಿಲ್ಲ ಎನ್ನುವುದನ್ನು ದೇಶ ಮರೆಯುವುದಿಲ್ಲ: ವಿಪಕ್ಷಗಳ ವಿರುದ್ಧ ಮೋದಿ ಕಿಡಿ

ಕೆವಾಡಿಯಾ: ಪುಲ್ವಾಮಾ ಉಗ್ರರ ದಾಳಿ ವೇಳೆ ಯೋಧರ ಬಲಿದಾನ ಕೆಲವರಿಗೆ ದುಃಖ ತಂದಿರಲಿಲ್ಲ ಎಂಬ ವಿಚಾರವನ್ನು ಈ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ವಿಪಕ್ಷಗಳಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ. ಶನಿವಾರ ಗುಜರಾತ್ ನ ಕೆವಾಡಿಯಾದಲ್ಲಿ ನರ್ಮದಾ ನದಿ ತೀರದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜಯಂತಿ ಹಿನ್ನೆಲೆ ರಾಷ್ಟ್ರೀಯ ಏಕತಾ ದಿನದ ಪರೇಡ್ ವೀಕ್ಷಣೆ ಬಳಿಕ ಪ್ರಧಾನಿ ಮೋದಿ ಮಾತನಾಡಿದರು. ಪುಲ್ವಾಮಾ ದಾಳಿಯ ಬಗ್ಗೆ ರಾಜಕೀಯ ಮಾಡುವ ವಿಪಕ್ಷಗಳ ವಿರುದ್ಧ ಕಿಡಿಕಾರಿದ ಪ್ರಧಾನಿ ರಾಷ್ಟ್ರದ ಹಿತದೃಷ್ಟಿಯಿಂದ ಹಾಗೆ ಮಾಡದಂತೆ ವಿನಂತಿಸಿದರು. ಮಾತು ಮುಂದುವರಿಸಿದ ಪ್ರಧಾನಿ ಮೋದಿ, "ರಾಜಕೀಯ ಪಕ್ಷಗಳು ಹಾಗೂ ನಾಯಕರು ಇಂತಹ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ನಾನು ಆಗ್ರಹಿಸುತ್ತೇನೆ. ಏಕೆಂದರೆ ದೇಶದ ವಿರೋಧಿಗಳು ಇವರನ್ನು ಬಳಿಸಿಕೊಂಡು ದೇಶಕ್ಕೆ ಹಾನಿ ಮಾಡುತ್ತಾರೆ" ಎಂದು ವಿಪಕ್ಷಗಳಿಗೆ ಎಚ್ಚರಿಕೆ ನೀಡಿದರು. ಅಲ್ಲದೇ ಪಾಕಿಸ್ತಾನದ ಸಂಸತ್‌ ಮೂಲಕ ಇದೀಗ ಸತ್ಯ ಹೊರಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು ಭಯೋತ್ಪಾದನೆ ಹಾಗೂ ಶಾಂತಿ ಬಗ್ಗೆ ಮಾತನಾಡಿದ ಮೋದಿ, ಶಾಂತಿ ಎಂದರೆ ಒಗ್ಗಟ್ಟು ಹಾಗೂ ಸಾಮರಸ್ಯ ಎಂದರೆ ಮಾನವೀಯತೆಯಾಗಿದೆ. ಹಿಂಸೆ ಹಾಗೂ ಭಯೋತ್ಪಾದನೆಯಿಂದ ಶಾಂತಿ ಹಾಗೂ ನೆಮ್ಮದಿ ಇರುವುದಿಲ್ಲ ಎಂದು ತಿಳಿಸಿದರು. ಅಲ್ಲದೆ ಎಲ್ಲಾ ದೇಶಗಳು ಈಗ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಬೇಕಿದೆ. ಭಾರತ ಯಾವಾಗಲೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಸಂಸದ ಅವರ ಸಂಸತ್ತಿನಲ್ಲಿ ಇಮ್ರಾನ್‌ ಖಾನ್‌ ಸರಕಾರ ಮಾಡಿಸಿದ ಕೃತ್ಯ ಎಂದು ಘೋಷಿಸುವ ಮೂಲಕ ರಾಕ್ಷಿಸ ಪ್ರವೃತ್ತಿ ಮೆರೆದಿದ್ದರು. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ವಾಕ್ಸಮರಕ್ಕೂ ಕಾರಣವಾಗಿತ್ತು. ಏಕತಾ ರ‍್ಯಾಲಿಯಲ್ಲಿ ಭಾಗಿ! ಇನ್ನು ಇದಕ್ಕೂ ಮೊದಲು ಭಾರತದ ಮಾಜಿ ಗೃಹ ಮಂತ್ರಿ ಹಾಗೂ ಉಕ್ಕಿನ ಮನುಷ್ಯ ಜನ್ಮ ದಿನದ ಹಿನ್ನೆಲೆ ಆಯೋಜನಾಗಿದ್ದ ರಾಷ್ಟ್ರೀಯ ಏಕತಾ ದಿನದ ಪರೇಡ್ ವೀಕ್ಷಿಸಿದರು. ಪರೇಡ್‌ನಲ್ಲಿ ಸೇನೆಯ ವಿವಿಧ ವಿಭಾಗಗಳಿಂದ ಯುದ್ಧ ಸಲಕರಣೆಗಳ ಪ್ರದರ್ಶನ ನಡೆಯಿತು. ಮೈನವಿರೇಳಿಸುವ ರೀತಿಯ ಸಾಹಸಗಳು ಕಂಡುಬಂದವು.


from India & World News in Kannada | VK Polls https://ift.tt/2HUjfdR

'ಈತನಿಗೆ 41 ವರ್ಷ ವಯಸ್ಸಾಗಿದೆ ಎಂದು ಯಾರೂ ಹೇಳಲ್ಲ' : ಸಹ ಆಟಗಾರನನ್ನು ಶ್ಲಾಘಿಸಿದ ರಾಹುಲ್‌

ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ ಕ್ರಿಸ್‌ ಗೇಲ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡದ ನಾಯಕ ಶ್ಲಾಘಿಸಿದ್ದಾರೆ. ಶೇಖ್‌ ಝಾಹೇದ್‌ ಕ್ರೀಡಾಂಗಣದಲ್ಲಿ ಅವರ 99 ರನ್‌ಗಳ ನೆರವಿನಿಂದ , ನಿಗದಿತ 20 ಓವರ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು 185 ರನ್‌ಗಳನ್ನು ದಾಖಲಿಸಿದೆ. ಬಳಿಕ 186 ರನ್‌ಗಳ ಗುರಿ ಹಿಂಬಾಲಿಸಿದ ರಾಜಸ್ಥಾನ್‌ ರಾಯಲ್ಸ್ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಆ ಮೂಲಕ ಪ್ಲೇಆಫ್ಸ್‌ ಹಾದಿ ಜೀವಂತವಾಗಿರಿಸಿಕೊಂಡಿತು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಜಾಬ್‌ ನಾಯಕ ರಾಹುಲ್‌, "ಕ್ರಿಸ್‌ ಗೇಲ್‌ ಅವರಿಂದ ಮತ್ತೊಂದು ಅತ್ಯುತ್ತಮ ಇನಿಂಗ್ಸ್ ಮೂಡಿ ಬಂದಿದೆ. ಮುಂದಿನ ಪಂದ್ಯದಲ್ಲಿಯೂ ಅವರು ಖಂಡಿತಾ ಉತ್ತಮ ಬ್ಯಾಟಿಂಗ್ ಮಾಡಿ ತಂಡಕ್ಕೆ ಜಯ ತಂದುಕೊಡಲಿದ್ದಾರೆ," ಎಂದು ಹೇಳಿದರು. "ನಾವು ಅಂದುಕೊಂಡಿದ್ದಕ್ಕಿಂತ 10 ರಿಂದ 15 ರನ್‌ಗಳನ್ನು ಜಾಸ್ತಿ ಗಳಿಸಿದ್ದೇವೆ. ಈ ಹಿಂದಿನ ಪಂದ್ಯಗಳನ್ನು ಆಧರಿಸಿ 160-170 ರನ್‌ಗಳು ಗೆಲುವಿನ ಮೊತ್ತ ಎಂದು ಭಾವಿಸಿದ್ದೆವು. ಮಂದೀಪ್‌ ಸಿಂಗ್‌ ಔಟ್‌ ಆದ ಬಳಿಕ, ಈ ಪಿಚ್‌ನಲ್ಲಿ ಬ್ಯಾಟಿಂಗ್‌ ಮಾಡುವುದು ಸುಲಭವಲ್ಲ ಎಂದು ನಾನು ಮತ್ತು ಗೇಲ್‌ ಮಾತನಾಡಿದ್ದೆವು. ಆದರೆ, ಇಷ್ಟು ಮೊತ್ತ ಗಳಿಸಿದ ಶ್ರೇಯ ಗೇಲ್‌ಗೆ ಸಲ್ಲುತ್ತದೆ. ಇಂತಹ ಕಠಿಣ ವಿಕೆಟ್‌ನಲ್ಲಿ ಗೇಲ್‌ ಬಿಟ್ಟರೆ, ಬೇರೆ ಯಾವ ಆಟಗಾರ ಈ ರೀತಿ ಆಡಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ," ಎಂದು ರಾಹುಲ್‌ ಹೇಳಿದರು. "ಅವರನ್ನು(ಗೇಲ್) ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಹೊಂದಿರುವುದು ಹಾಗೂ ಬ್ಯಾಟಿಂಗ್‌ ಮಾಡುವುದನ್ನು ನಾವು ಇಷ್ಟಪಡುತ್ತೇವೆ. ಅವರಿಗೆ 41 ವರ್ಷ ವಯಸ್ಸಾಗಿದೆ ಎಂದು ಯಾರೂ ಹೇಳುವುದಿಲ್ಲ. ಇದು ನಮಗೆ ದೊಡ್ಡ ಸಂಕೇತವಾಗಿದೆ. ಮುಂದಿನ ಪಂದ್ಯದಲ್ಲಿಯೂ ಗೇಲ್‌ ಅವರಿಂದ ಅತ್ಯುತ್ತಮ ಇನಿಂಗ್ಸ್ ಮೂಡಿ ಬರಲಿದೆ ಹಾಗೂ ನಾವು ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುತ್ತೇವೆಂಬ ನಿರೀಕ್ಷೆ ಇದೆ," ಎಂದರು. ಪಂದ್ಯದ ಸೋಲಿನ ಹೊರತಾಗಿಯೂ ಕಿಂಗ್ಸ್ ಇಲೆವೆನ್‌ ಪಂಜಾಬ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು ಪ್ಲೇಆಫ್ಸ್ ರೇಸ್‌ನಲ್ಲಿದೆ. ಭಾನುವಾರ ಇದೇ ಅಂಗಳದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಸೆಣಸಲಿದೆ. ಗೆಲುವು ಸಾಧಿಸಿದ ರಾಜಸ್ಥಾನ್‌ ರಾಯಲ್ಸ್ ಖಾತೆಯಲ್ಲಿಯೂ 12 ಅಂಕಗಳಿವೆ, ಆದರೆ ರನ್‌ರೇಟ್‌ ಕಡಿಮೆ ಇರುವ ಕಾರಣ ಐದನೇ ಸ್ಥಾನದಲ್ಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3kKZDHT

ಐಪಿಎಲ್‌ 2020: ಸನ್‌ರೈಸರ್ಸ್‌ ವಿರುದ್ಧದ ಇಂದಿನ ಪಂದ್ಯಕ್ಕೆ ಆರ್‌ಸಿಬಿ ಅಂತಿಮ 11ರಲ್ಲಿ ಎರಡು ಬದಲಾವಣೆ ಸಾಧ್ಯತೆ!

ಶಾರ್ಜಾ: ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ವಿರುದ್ಧ ಗೆದ್ದು ಪ್ಲೇಆಫ್ಸ್‌ಗೆ ಅರ್ಹತೆ ಖಾತ್ರಿಪಡಿಸಿಕೊಳ್ಳುವ ತುಡಿತದಲ್ಲಿದೆ. ಆದ್ದರಿಂದ ಕಳೆದ ಪಂದ್ಯಗಳಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಇಂದು ಕಣಕ್ಕೆ ಇಳಿಯಲಿದೆ. ಮತ್ತೊಂದೆಡೆ 14 ಅಂಕಗಳನ್ನು ಕಲೆ ಹಾಕಿ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿಗೆ ಪ್ಲೇಆಫ್ಸ್‌ ಸ್ಥಾನ ಸ್ಪಷ್ಟವಾಗಲು, ಇನ್ನುಳಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಸಾಧಿಸಬೇಕು. ಹಾಗಾಗಿ, ಕೊಹ್ಲಿ ಪಡೆ ಕಠಿಣ ತರಬೇತಿಯೊಂದಿಗೆ ಇಂದು ಕಣಕ್ಕೆ ಇಳಿಯಲಿದೆ. ಒಂದು ವೇಳೆ ಎರಡೂ ಪಂದ್ಯಗಳಲ್ಲಿ ಸೋತರೇ ಆರ್‌ಸಿಬಿಗೆ ಪ್ಲೇಆಫ್ಸ್‌ ಲೆಕ್ಕಾಚಾರಗಳು ತಲೆ ಕೆಳಗಾಗಲಿವೆ. ಮತ್ತೊಂದೆಡೆ ಎಸ್‌ಆರ್‌ಎಚ್‌ ತನ್ನ ಪಾಲಿನ ಉಳಿದ ಎರಡು ಲೀಗ್‌ ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದರೆ ಪ್ಲೇ ಆಫ್ಸ್‌ಗೆ ಕಾಲಿಡುವ ಉತ್ತಮ ಅವಕಾಶ ಹೊಂದಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು 88 ರನ್‌ಗಳ ಭರ್ಜರಿ ಜಯ ಹೈದರಾಬಾದ್ ತಂಡದ ನೆಟ್‌ ರನ್‌ರೇಟ್‌ ಉತ್ತಮವಾಗುವಂತೆ ಮಾಡಿದೆ. ಆರ್‌ಸಿಬಿ ಸಂಭಾವ್ಯ ಇಲೆವೆನ್ ಆರ್‌ಸಿಬಿ ಕೆಲ ಬದಲಾವಣೆ ತರುವ ಸಾಧ್ಯತೆ ಹೆಚ್ಚಿದೆ. ಕಳೆದ ಪಂದ್ಯದಲ್ಲಿ ದುಬಾರಿ ಎನಿಸಿದ ಡೇಲ್‌ ಸ್ಟೇನ್‌ ಅವರ ಬದಲಿಗೆ ಎಡಗೈ ವೇಗಿ ಇಸುರು ಉದಾನ ಅವರನ್ನು ಆಡಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಗಾಯದಿಂದ ಚೇತರಿಸಿರುವ ನವದೀಪ್‌ ಸೈನಿ ತಂಡ ಸೇರಿಕೊಳ್ಳಲಿದ್ದಾರೆ. ಆರ್‌ಸಿಬಿ XI: ಜಾಶ್ ಫಿಲಿಪ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ'ವಿಲಿಯರ್ಸ್ (ವಿಕೆಟ್‌ಕೀಪರ್‌), ಗುರುಕೀರತ್ ಸಿಂಗ್ ಮಾನ್ / ಶಿವಂ ದುಬೇ, ವಾಷಿಂಗ್ಟನ್ ಸುಂದರ್, ಕ್ರಿಸ್ ಮಾರಿಸ್, ನವದೀಪ್ ಸೈನಿ, ಇಸುರು ಉದಾನ, ಮೊಹಮ್ಮದ್ ಸಿರಾಜ್, ಮತ್ತು ಯುಜ್ವೇಂದ್ರ ಚಹಲ್. ಸನ್‌ರೈಸರ್ಸ್‌ ಸಂಭಾವ್ಯ ಇಲೆವೆನ್ ಜಾನಿ ಬೈರ್‌ಸ್ಟೋವ್‌ ಅವರನ್ನುಕೈಬಿಟ್ಟು ಕೇನ್‌ ವಿಲಿಯಮ್ಸನ್‌ ಅವರನ್ನು ಕರೆತಂದಿರುವ ಸನ್‌ರೈಸರ್ಸ್‌ ಪರ ವಾರ್ನರ್‌ ಮತ್ತು ವೃದ್ಧಿಮಾನ್‌ ಸಹ ಇನಿಂಗ್ಸ್‌ ಆರಂಭಿಸಲಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ತುತ್ತಾದ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಸಂಪೂರ್ಣ ಫಿಟ್‌ ಆಗದೇ ಇದ್ದರೆ ಅವರ ಸ್ಥಾನದಲ್ಲಿ ಅಭಿಷೇಕ್ ಶರ್ಮಾ ಆಡುವ ಸಾಧ್ಯತೆ ಇದೆ. ಎಸ್‌ಆರ್‌ಎಚ್‌ XI: ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್‌), ಡೇವಿಡ್ ವಾರ್ನರ್, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್ / ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಸಂದೀಪ್ ಶರ್ಮಾ, ಶಹಬಾಜ್ ನದೀಮ್, ಮತ್ತು ಟಿ ನಟರಾಜನ್. ಪಂದ್ಯದ ವಿವರ ಆರ್‌ಸಿಬಿ vs ಎಸ್‌ಆರ್‌ಎಚ್ ಪಂದ್ಯ: ಅಕ್ಟೋಬರ್‌ 31 (ಶನಿವಾರ) ಸಮಯ: ರಾತ್ರಿ 7.30ಕ್ಕೆ ಸ್ಥಳ: ಶಾರ್ಜಾ ಅಂತಾರಾಷ್ಟ್ರೀಯ ಕ್ರೀಡಾಂಗಣ, ಶಾರ್ಜಾ ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 1, ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ ಲೈವ್‌ ಸ್ಟ್ರೀಮಿಂಗ್‌: ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3mHAbUj

ಭಾರತದ ಉಕ್ಕಿನ ಮನುಷ್ಯನಿಗೆ 145ನೇ ಜನ್ಮದಿನ: ಪ್ರಧಾನಿ ಮೋದಿಯಿಂದ ಏಕತೆ ಪ್ರತಿಮೆಗೆ ಪುಷ್ಪಾರ್ಚನೆ

ಗುಜರಾತ್: ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭಾರತದ ಮಾಜಿ ಗೃಹ ಮಂತ್ರಿ ಅವರ 145ನೇ ಜನ್ಮದಿನ ಹಿನ್ನೆಲೆ ಅವರ ಪ್ರತಿಮೆಗೆ ಪುಷ್ಪಾರ್ಚನೆ ಹಾಗೂ ಜಲಾರ್ಚನೆ ಮಾಡಿದರು. ಇನ್ನು ಸರದಾರ್‌ ಅವರ ಕಾರ್ಯವನ್ನು ಟ್ವೀಟ್‌ ಮೂಲಕ ಕೊಂಡಾಡಿದ , ದೇಶದ ಏಕತೆ ಮತ್ತು ಅಖಂಡತೆಯ ಅಗ್ರಮಾನ್ಯ ಉಕ್ಕಿನ ಮನುಷ್ಯನಿಗೆ ಅವರ ಜನ್ಮ ಶತಾಬ್ಧಿ ಹಿನ್ನೆಲೆ ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇನೆ ಎಂದು ಟ್ವೀಟ್‌ ಮೂಲಕ ಗೌರವ ಸಲ್ಲಿಸಿದ್ದಾರೆ ತಿಳಿಸಿದ್ದಾರೆ. ಇದಲ್ಲದೆ ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ಜಲಾರ್ಚನೆ ಮತ್ತು ಪುಷ್ಪಾರ್ಚನೆಯನ್ನು ಪ್ರಧಾನಿ ಮೋದಿ ಮಾಡುವ ಮೂಲಕ ಗೌರವ ಸಲ್ಲಿಸಿದರು. ಇಂದು ದೇಶದಾದ್ಯಂತ ಉಕ್ಕಿನ ಮನುಷ್ಯ, ಸರದಾರ್‌ ವಲ್ಲಭಾಯ್‌ ಪಟೇಲ್‌ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಗೌರವ ಇನ್ನು ಪಟೇಲರ ಜನ್ಮ ದಿನ ಹಿನ್ನೆಲೆ ಗೃಹ ಸಚಿವ ಟ್ವೀಟ್‌ ಮೂಲಕ ಗೌರವ ಸಲ್ಲಿಸಿದ್ದು, ನಮ್ಮ ಪ್ರೇರಣಾ ಶಕ್ತಿ ಅವರಿಗೆ ಗೌರವ. ಅವರ ದೇಶ ಭಕ್ತಿ , ಕರ್ತವ್ಯ ನಿಷ್ಠ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ ಎಂದಿದ್ದಾರೆ. ಬಿಹಾರ ಸಿಎಂ ನಿತೀಶ್‌ ಕುಮಾರ್‌ ಕೂಡ ಸರದಾರ ವಲ್ಲಭಾಯ್‌ ಪಟೇಲ್‌ ಅವರಿಗೆ ಗೌರವ ಸಮರ್ಪಿಸಿದರು.


from India & World News in Kannada | VK Polls https://ift.tt/35OXyo7

ಐಪಿಎಲ್‌ 2020: ಬ್ಯಾಟ್‌ ಬಿಸಾಡಿ ಐಪಿಎಲ್‌ ನೀತಿ ಸಂಹಿತೆ ಉಲ್ಲಂಘಿಸಿದ ಕ್ರಿಸ್‌ ಗೇಲ್‌ಗೆ ದಂಡ!

ಅಬುಧಾಬಿ: ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ನೀತಿ ಸಂಹಿತೆ ಉಲ್ಲಂಘಿಸಿದ ಕಿಂಗ್ಸ್ ಇಲೆವೆನ್‌ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್‌ಗೆ‌ ಪಂದ್ಯದ ಸಂಭಾವನೆಯಲ್ಲಿ ಶೇ. 10 ರಷ್ಟು ದಂಡವನ್ನು ವಿಧಿಸಲಾಗಿದೆ. ಶೇಖ್‌ ಝಾಹೇದ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ 99 ರನ್‌ಗಳನ್ನು ಗಳಿಸಿ ಆಡುತ್ತಿದ್ದ ಅವರನ್ನು ರಾಜಸ್ಥಾನ್‌ ರಾಯಲ್ಸ್ ವೇಗಿ ಜೋಫ್ರ ಆರ್ಚರ್‌ ಕ್ಲೀನ್‌ ಬೌಲ್ಡ್ ಮಾಡಿದರು. ಕೇವಲ ಒಂದು ರನ್‌ನಿಂದ ಶತಕ ವಂಚಿತನಾಗಿದ್ದಕ್ಕೆ ಯೂನಿವರ್ಸ್‌ ಬಾಸ್‌ ಬ್ಯಾಟ್‌ ಬೀಸಾಡುವ ಮೂಲಕ ತಮ್ಮ ಬೇಸರವನ್ನು ಹೊರಹಾಕಿದ್ದರು. ನಂತರ ವೇಗಿ ಆರ್ಚರ್‌ ಅವರನ್ನು ಶ್ಲಾಘಿಸಿದರು. ಐಪಿಎಲ್‌ನ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.2 ಅನ್ನು ಕ್ರಿಸ್‌ ಗೇಲ್ ಒಪ್ಪಿಕೊಂಡರು ಮತ್ತು ಅನುಮೋದನೆಯನ್ನು ಸ್ವೀಕರಿಸಿದರು. "ನೀತಿ ಸಂಹಿತೆಯ ಹಂತ 1 ಉಲ್ಲಂಘನೆಯ ಬಗ್ಗೆ ಪಂದ್ಯದ ತೀರ್ಪುಗಾರರ ನಿರ್ಧಾರವು ಅಂತಿಮ" ಎಂದು ಐಪಿಎಲ್‌ ಹೇಳಿಕೆಯಲ್ಲಿ ತಿಳಿಸಿದೆ. ಪಂದ್ಯದ ಗೆಲುವಿನೊಂದಿಗೆ ರಾಜಸ್ಥಾನ್‌ ರಾಯಲ್ಸ್ ಪ್ಲೇಆಫ್ಸ್‌ ಹಾದಿಯನ್ನು ಜೀವಂತವಾಗಿರಿಸಿಕೊಂಡಿತು. ಸ್ಟೀವನ್ ಸ್ಮಿತ್‌ ಬಳಗ 12 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನವನ್ನು ಪಡೆದಿದೆ. ಭಾನುವಾರ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ‌ ಸೆಣಸಲಿದೆ. ಪಂದ್ಯದ ಸೋಲಿನ ಹೊರತಾಗಿಯೂ ಕಿಂಗ್ಸ್ ಇಲೆವೆನ್‌ ಪಂಜಾಬ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು ಪ್ಲೇಆಫ್ಸ್ ರೇಸ್‌ನಲ್ಲಿದೆ. ಭಾನುವಾರ ಇದೇ ಅಂಗಳದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಪಂಜಾಬ್‌ ಸೆಣಸಲಿದೆ. ಇನಿಂಗ್ಸ್‌ ನಂತರ ತಮ್ಮ ಬ್ಯಾಟಿಂಗ್‌ ಬಗ್ಗೆ ಮಾತನಾಡಿದ ಗೇಲ್, "99ರ ಗಡಿಯಲ್ಲಿ ಔಟಾಗುವುದು ಬಹಳ ಬೇಸರ ತರುತ್ತದೆ. ಆದರೆ ಕ್ರಿಕೆಟ್‌ನಲ್ಲಿ ಇದು ಸಹಜ. ಅದೊಂದು ಅತ್ಯುತ್ತಮ ಎಸೆತ. ನಿಜ ಹೇಳುವುದಾದರೆ ಇವೆಲ್ಲವೂ ಮಾನಸಿಕ ಸ್ಥಿತಿಯನ್ನು ಆಧರಿಸಿರುತ್ತದೆ. ನನ್ನ ಆಟವನ್ನು ನಾನು ಆನಂದಿಸುತ್ತಿದ್ದೇನೆ," ಎಂದು ಹೇಳಿದ್ದರು. ಪಂಜಾಬ್-ರಾಜಸ್ಥಾನ್ ಪಂದ್ಯದ ಸಂಕ್ಷಿಪ್ತ ಸ್ಕೋರ್‌ ಕಿಂಗ್ಸ್‌ ಇಲೆವೆನ್ ಪಂಜಾಬ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 185 (ಕೆಎಲ್ ರಾಹುಲ್ 46, ಕ್ರಿಸ್‌ ಗೇಲ್ 99, ನಿಕೋಲಸ್ ಪೂರನ್ 22; ಜೋಫ್ರ ಆರ್ಚರ್‌ 26ಕ್ಕೆ 2, ಬೆನ್‌ ಸ್ಟೋಕ್ಸ್‌ 32ಕ್ಕೆ 2). ರಾಜಸ್ಥಾನ್‌ ರಾಯಲ್ಸ್‌: 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 186 (ರಾಬಿನ್ ಉತ್ತಪ್ಪ 30, ಬೆನ್‌ ಸ್ಟೋಕ್ಸ್‌ 50, ಸಂಜು ಸ್ಯಾಮ್ಸನ್ 48, ಸ್ಟೀವ್‌ ಸ್ಮಿತ್‌ 31*, ಜೋಸ್‌ ಬಟ್ಲರ್‌ 22*; ಮುರುಗನ್ ಅಶ್ವಿನ್ 43ಕ್ಕೆ 1, ಕ್ರಿಸ್‌ ಜಾರ್ಡನ್ 44ಕ್ಕೆ 1). ಪಂದ್ಯಶ್ರೇಷ್ಠ: ಬೆನ್‌ ಸ್ಟೋಕ್ಸ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/381aVnJ

ಕೇವಲ ಮದುವೆಗಾಗಿ ಮತಾಂತರ ಆಗುವುದು ಸ್ವೀಕಾರಾರ್ಹವಲ್ಲ: ಅಲಹಾಬಾದ್ ಹೈಕೋರ್ಟ್‌ನ ಮಹತ್ವದ ಆದೇಶ

ಅಲಹಾಬಾದ್‌: ಮತಾಂತರಕ್ಕೆ ಸಂಬಂಧಪಟ್ಟಂತೆ ಅಲಹಾಬಾದ್ ಹೈಕೋರ್ಟ್‌ ಶುಕ್ರವಾರ ಮಹತ್ವದ ಆದೇಶವೊಂದನ್ನು ನೀಡಿದೆ. ಕೇವಲ ಮದುವೆಗಾಗಿ ಆಗುವುದು ಸ್ವೀಕಾರಾರ್ಹವಲ್ಲ ಎಂದು ಹೈ ಕೋರ್ಟ್ ಅಭಿಪ್ರಾಯಪಟ್ಟಿದೆ. ಪೊಲೀಸ್‌ ರಕ್ಷಣೆ ಕೋರಿ ವಿವಾಹಿತ ದಂಪತಿಯೊಂದು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ವೇಳೆ ಹೈ ಕೋರ್ಟ್‌ ಈ ರೀತಿ ಅಭಿಪ್ರಾಯವನ್ನುಪಟ್ಟಿದ್ದು, ಅವರ ಅರ್ಜಿಯನ್ನು ವಜಾಗೊಳಿಸಿದೆ. ಯುವತಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈ ಕೋರ್ಟ್‌ಗೆ ವಿವಾಹಿತ ಯುವತಿ ಮುಸ್ಲಿಂ ಹಾಗೂ ಯುವಕ ಹಿಂದೂ ಎಂದು ತಿಳಿದುಬಂದಿದೆ. ಅಲ್ಲದೆ ಯುವತಿ ಮದುವೆಗೆ ಒಂದು ತಿಂಗಳ ಹಿಂದೆ ಮತಾಂತರವಾಗಿರುವುದು ತಿಳಿದಿದೆ. ಹೀಗಾಗಿ ನ್ಯಾಯಮೂರ್ತಿ ಮಹೇಶ್‌ ಚಂದ್ರ ತ್ರಿಪಾಠಿ ಕೇವಲ ಮದುವೆಗಾಗಿ ಮತಾಂತರ ಆಗುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ವಿವಾಹದ ಉದ್ದೇಶಕ್ಕಾಗಿ ಮತಾಂತರ ಸ್ವೀಕಾರಾರ್ಹವಲ್ಲ ಎಂಬ 2014 ರ ಅಲಹಾಬಾದ್‌ ಕೋರ್ಟ್‌ನ ತೀರ್ಪುನ್ನು ಮತ್ತೆ ಉಲ್ಲೇಖಿಸಿದ ನ್ಯಾಯಮೂರ್ತಿ ತ್ರಿಪಾಠಿ, ಭಾರತದ ಸಂವಿಧಾನದ 226ನೇ ವಿಧಿ ಅನ್ವಯ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸಲ್ಲ ಎಂದು ಹೇಳಿ ಅರ್ಜಿಯನ್ನು ತಳ್ಳಿಹಾಕಿದರು. ಮದುವೆಯ ಉದ್ದೇಶಕ್ಕೆ ಮತಾಂತರ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಪುರಾವೆಗಳನ್ನು ನೀಡಿದ ಕೋರ್ಟ್‌, ಅರ್ಜಿದಾರ (ಮಹಿಳೆ) ಜೂನ್ 29, 2020 ರಂದು ತನ್ನ ಧರ್ಮವನ್ನು ಬದಲಿಸಿಕೊಂಡಿದ್ದಾರೆ. ಮತ್ತು ಜುಲೈ 31 ರಂದು ಅವರು ವಿವಾಹವಾಗಿದ್ದಾರೆ. ಇಲ್ಲಿ ಕೇವಲ ವಿವಾಹದ ಉದ್ದೇಶಕ್ಕಾಗಿ ಮತಾಂತರ ನಡೆದಿದೆ ಎಂಬುದನ್ನು ಸ್ಪಷ್ಟವಾಗಿದೆ ಕೋರ್ಟ್‌ ತಿಳಿಸಿತು. 2014ರಲ್ಲಿ ಏನಾಗಿತ್ತು? 2014ರಲ್ಲಿಯು ಇದೇ ರೀತಿಯ ಸನ್ನಿವೇಶ ಸೃಷ್ಟಿಯಾಗಿತ್ತು. ಹಿಂದೂ ಯುವತಿಯೊಬ್ಬರು ಇಸ್ಲಾಂಗೆ ಮತಾಂತರಗೊಂಡು ನಂತರ ಮದುವೆಯಾಗಿದ್ದರು. ಹೀಗೆ ಮದುವೆಯಾದ ದಂಪತಿ ರಕ್ಷಣೆ ಕೋರಿ ಕೋರ್ಟ್‌ನಲ್ಲಿ ರಿಟ್‌ ಸಲ್ಲಿಸಿದ್ದರು. ಆ ವೇಳೆ ನ್ಯಾಯಾಲಯವು ರಿಟ್ ಅರ್ಜಿಯನ್ನು ವಜಾಗೊಳಿಸಿ ಕೇವಲ ಮದುವೆಗಾಗಿ ಮತಾಂತರ ಆಗುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು ‌. ಅಲ್ಲದೇ ಮುಸ್ಲಿಂ ಹುಡುಗನ ಜೊತೆ ಸ್ನೇಹವಿದ್ದಿದ್ದರಿಂದ ಇಸ್ಲಾಂ ಧರ್ಮದ ಬಗ್ಗೆ ಯಾವುದೇ ಜ್ಞಾನವಿಲ್ಲದೆ ಹಾಗೂ ಧರ್ಮದ ನಂಬಿಕೆಯಿಲ್ಲದೆ ಕೇವಲ ಮದುವೆಗಾಗಿ ಧರ್ಮ ಬದಲಿಸುವುದು ಸಮಂಜಸವೇ ಎಂದು ಇದೆ ವೇಳೆ ಕೋರ್ಟ್‌ ಪ್ರಶ್ನಿಸಿತ್ತು.


from India & World News in Kannada | VK Polls https://ift.tt/3jQpqNG

ರಾಜ್ಯ ಸಾರಿಗೆ ಸಂಸ್ಥೆಗೆ ‘ಬ್ರೇಕ್‌ ಫೇಲ್‌’; ಕೆಎಸ್‌ಆರ್‌ಟಿಸಿ ಸೇರಿ 4 ಸಂಸ್ಥೆಗಳಿಗೆ 9 ತಿಂಗಳಲ್ಲಿ 1977 ಕೋಟಿ ನಷ್ಟ..!

ಕರ್ನಾಟಕ ಜನಸಾಮಾನ್ಯರ ಸಾರಿಗೆ ಅಂತಾನೇ ಫೇಮಸ್‌ ಆಗಿರೋ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ನಷ್ಟದ ಚಕ್ರವ್ಯೂಹದಲ್ಲಿ ಸಿಲುಕಿವೆ. ಕಳೆದ ಒಂಭತ್ತು ತಿಂಗಳಿಂದ ಪ್ರಯಾಣಿಕರ ಕೊರತೆಯಿಂದ ಲಾಭದ ಹಾದಿ ಹಿಡಿಯದ ಸಾರಿಗೆ ಸಂಸ್ಥೆ ಟಯರ್ ಪಂಚರ್ ಆಗೋ ಸ್ಥಿತಿಗೆ ತಿಲುಪಿದೆ. ಕೊರೊನಾ ಸೋಂಕು ವ್ಯಾಪಿಸಿದ ಬಳಿಕ ಕೆಎಸ್‌ಆರ್‌ಟಿಸಿಗೆ 500 ಕೋಟಿ ರೂ. ನಷ್ಟವಾಗಿದೆ. ಈ ಹಿಂದೆ ಕೆಎಸ್‌ಆರ್‌ಟಿಸಿಯು ಪ್ರತಿದಿನ ಓಡಿಸುತ್ತಿದ್ದ 8250 ಬಸ್‌ಗಳಲ್ಲಿ30 ಲಕ್ಷ ಮಂದಿ ಪ್ರಯಾಣಿಸಿ 9 ಕೋಟಿ ರೂ. ಆದಾಯ ಸಂಗ್ರಹವಾಗುತ್ತಿತ್ತು. ಸದ್ಯ 5200 ಬಸ್‌ಗಳನ್ನು ಓಡಿಸಲಾಗುತ್ತಿದ್ದು, 12-13 ಲಕ್ಷ ಜನರಷ್ಟೇ ಓಡಾಡುತ್ತಿದ್ದಾರೆ. ಹೀಗಾಗಿ, ಕೇವಲ 4.85 ಕೋಟಿ ರೂ. ಆದಾಯ ಬರುತ್ತಿದೆ. ಸಂಸ್ಥೆಯಲ್ಲಿ 37,655 ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡಿದೆ. ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ನಷ್ಟದಿಂದ ಪಾರಾಗಲು ಹಲವು ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದ್ದು, ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಕೆಎಸ್‌ಆರ್‌ಟಿಸಿ ಸಂಸ್ಥೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜ ನಗರ, ಹಾಸನ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಸರಾಸರಿ ವರ್ಷಕ್ಕೆ 134 ಕೋಟಿ ನಷ್ಟ: ಸಂಸ್ಥೆಗೆ ವಾರ್ಷಿಕ 3724.35 ಕೋಟಿ ರೂ. ಆದಾಯ ಬರುತ್ತಿದ್ದು, 3859.28 ಕೋಟಿ ರೂ. ವೆಚ್ಚವಾಗುತ್ತಿದೆ. ಹೀಗಾಗಿ, 2018-19ರಲ್ಲಿ134.93 ಕೋಟಿ ರೂ. ನಷ್ಟ ಉಂಟಾಗಿದೆ. 2019-20ರಲ್ಲಿ 500 ಕೋಟಿ ರೂ. ಆದಾಯ ಖೋತಾ ಆಗಿದೆ. ಬಸ್‌ಗಳ ಖರೀದಿಗಾಗಿ ಸಂಸ್ಥೆಯು 2019-20ರಲ್ಲಿ220 ಕೋಟಿ ರೂ. ಸಾಲ ಮಾಡಿದೆ.

ರಾಜ್ಯದಲ್ಲಿ ಸರಕಾರಿ ಬಸ್‌ ಸೇವೆ ಕಳೆದ ಹಲವು ವರ್ಷಗಳಿಂದ ನಷ್ಟ ಸುಳಿಯಲ್ಲಿಸಿಲುಕಿ ಒದ್ದಾಡುತ್ತಿದೆ. ಅದರಿಂದ ಹೊರಬರಲು ಹರಸಾಹಸ ನಡೆಸುತ್ತಿರುವಾಗಲೇ ಕೊರೊನಾ ತಲೆ ಎತ್ತಲಾಗದಷ್ಟು ಬಲವಾದ ಹೊಡೆತವನ್ನು ನೀಡಿದೆ. ಕೆಎಸ್ಸಾರ್ಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ಮತ್ತು ಬೆಂಗಳೂರಿನ ಬಿಎಂಟಿಸಿ ಭಾರಿ ಹೊಡೆತವನ್ನು ಅನುಭವಿಸಿದೆ. ಈಗಾಗಲೇ ಹೊಸ ನೇಮಕಾತಿಯನ್ನು ತಡೆ ಹಿಡಿಯಲಾಗಿದೆ. ಇರುವ ಉದ್ಯೋಗಿಗಳಿಗೂ ಆತಂಕ ಎದುರಾಗಿದೆ.


ರಾಜ್ಯ ಸಾರಿಗೆ ಸಂಸ್ಥೆಗೆ ‘ಬ್ರೇಕ್‌ ಫೇಲ್‌’; ಕೆಎಸ್‌ಆರ್‌ಟಿಸಿ ಸೇರಿ 4 ಸಂಸ್ಥೆಗಳಿಗೆ 9 ತಿಂಗಳಲ್ಲಿ 1977 ಕೋಟಿ ನಷ್ಟ..!

ಕರ್ನಾಟಕ ಜನಸಾಮಾನ್ಯರ ಸಾರಿಗೆ ಅಂತಾನೇ ಫೇಮಸ್‌ ಆಗಿರೋ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ನಷ್ಟದ ಚಕ್ರವ್ಯೂಹದಲ್ಲಿ ಸಿಲುಕಿವೆ. ಕಳೆದ ಒಂಭತ್ತು ತಿಂಗಳಿಂದ ಪ್ರಯಾಣಿಕರ ಕೊರತೆಯಿಂದ ಲಾಭದ ಹಾದಿ ಹಿಡಿಯದ ಸಾರಿಗೆ ಸಂಸ್ಥೆ ಟಯರ್ ಪಂಚರ್ ಆಗೋ ಸ್ಥಿತಿಗೆ ತಿಲುಪಿದೆ. ಕೊರೊನಾ ಸೋಂಕು ವ್ಯಾಪಿಸಿದ ಬಳಿಕ ಕೆಎಸ್‌ಆರ್‌ಟಿಸಿಗೆ 500 ಕೋಟಿ ರೂ. ನಷ್ಟವಾಗಿದೆ. ಈ ಹಿಂದೆ ಕೆಎಸ್‌ಆರ್‌ಟಿಸಿಯು ಪ್ರತಿದಿನ ಓಡಿಸುತ್ತಿದ್ದ 8250 ಬಸ್‌ಗಳಲ್ಲಿ30 ಲಕ್ಷ ಮಂದಿ ಪ್ರಯಾಣಿಸಿ 9 ಕೋಟಿ ರೂ. ಆದಾಯ ಸಂಗ್ರಹವಾಗುತ್ತಿತ್ತು. ಸದ್ಯ 5200 ಬಸ್‌ಗಳನ್ನು ಓಡಿಸಲಾಗುತ್ತಿದ್ದು, 12-13 ಲಕ್ಷ ಜನರಷ್ಟೇ ಓಡಾಡುತ್ತಿದ್ದಾರೆ. ಹೀಗಾಗಿ, ಕೇವಲ 4.85 ಕೋಟಿ ರೂ. ಆದಾಯ ಬರುತ್ತಿದೆ. ಸಂಸ್ಥೆಯಲ್ಲಿ 37,655 ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡಿದೆ. ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ನಷ್ಟದಿಂದ ಪಾರಾಗಲು ಹಲವು ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದ್ದು, ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಕೆಎಸ್‌ಆರ್‌ಟಿಸಿ ಸಂಸ್ಥೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜ ನಗರ, ಹಾಸನ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸರಾಸರಿ ವರ್ಷಕ್ಕೆ 134 ಕೋಟಿ ನಷ್ಟ:

ಸಂಸ್ಥೆಗೆ ವಾರ್ಷಿಕ 3724.35 ಕೋಟಿ ರೂ. ಆದಾಯ ಬರುತ್ತಿದ್ದು, 3859.28 ಕೋಟಿ ರೂ. ವೆಚ್ಚವಾಗುತ್ತಿದೆ. ಹೀಗಾಗಿ, 2018-19ರಲ್ಲಿ134.93 ಕೋಟಿ ರೂ. ನಷ್ಟ ಉಂಟಾಗಿದೆ. 2019-20ರಲ್ಲಿ 500 ಕೋಟಿ ರೂ. ಆದಾಯ ಖೋತಾ ಆಗಿದೆ. ಬಸ್‌ಗಳ ಖರೀದಿಗಾಗಿ ಸಂಸ್ಥೆಯು 2019-20ರಲ್ಲಿ220 ಕೋಟಿ ರೂ. ಸಾಲ ಮಾಡಿದೆ.



ಬಿಎಂಟಿಸಿಗೆ 600 ಕೋಟಿ ರೂ. ನಷ್ಟ..!
ಬಿಎಂಟಿಸಿಗೆ 600 ಕೋಟಿ ರೂ. ನಷ್ಟ..!

ಕೊರೊನಾ ಪೂರ್ವದಲ್ಲಿ ಬೆಂಗಳೂರಿನಲ್ಲಿ ನಿತ್ಯ 6185 ಬಿಎಂಟಿಸಿ ಬಸ್‌ಗಳು ಓಡಾಡುತ್ತಿದ್ದು, ದಿನಕ್ಕೆ 5 ಕೋಟಿ ರೂ. ಆದಾಯ ದೊರೆಯುತ್ತಿತ್ತು. ಈಗ 4700 ಬಸ್‌ಗಳು ಸಂಚರಿಸುತ್ತಿದ್ದರೂ ಕೇವಲ 1.80 ಕೋಟಿ ರೂ. ಆದಾಯ ಬರುತ್ತಿದೆ. ಇದರಿಂದಾಗಿ ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 600 ಕೋಟಿ ರೂ. ನಷ್ಟ ಅನುಭವಿಸಿದೆ. ಸಂಸ್ಥೆಯಲ್ಲಿ33465 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾರ್ಷಿಕ 2300 ಕೋಟಿ ರೂ. ಆದಾಯ ಬರುತ್ತಿದ್ದು, 2700 ಕೋಟಿ ರೂ. ಖರ್ಚಾಗುತ್ತಿದೆ. ಸರಾಸರಿ ವರ್ಷಕ್ಕೆ 400 ಕೋಟಿ ಲಾಸ್‌ ಆಗುತ್ತಿದ್ದು, ಹೀಗಾಗಿ, ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತಿದೆ. ಇನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಕಡಿಮೆ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಹೀಗಾಗಿ, ಟಿಕೆಟ್‌ನಿಂದ ಬರುತ್ತಿರುವ ಆದಾಯವು ಡೀಸೆಲ್‌ ವೆಚ್ಚಕ್ಕೆ ಸರಿ ಹೊಂದುತ್ತಿದೆ. ಆರು ತಿಂಗಳಲ್ಲಿ ಡೀಸೆಲ್‌ ದರವು ಶೇ. 20ರಷ್ಟು ಏರಿಕೆ ಆಗಿದೆ. ಖರ್ಚು-ವೆಚ್ಚಗಳನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ.



ಈಶಾನ್ಯ ಸಾರಿಗೆ ಆದಾಯ ಪಂಕ್ಚರ್‌..!
ಈಶಾನ್ಯ ಸಾರಿಗೆ ಆದಾಯ ಪಂಕ್ಚರ್‌..!

ಮೊದಲೇ ನಷ್ಟದಲ್ಲಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕೊರೊನಾ ಮತ್ತಷ್ಟು ಪೆಟ್ಟು ಕೊಟ್ಟಿದ್ದು, ಈ ವರ್ಷ ಸೆಪ್ಟಂಬರ್‌ ಅಂತ್ಯದವರೆಗೆ ಬರೋಬ್ಬರಿ 373 ಕೋಟಿ ರೂ. ನಷ್ಟ ಸಂಭವಿಸಿದೆ. ಎನ್‌ಇಕೆಆರ್‌ಟಿಸಿ 2018-19ನೇ ಸಾಲಿನಲ್ಲಿ 68 ಕೋಟಿ ರೂ., 19-20ನೇ ಸಾಲಿನಲ್ಲಿ 89 ಕೋಟಿ ರೂ. ನಷ್ಟ ಅನುಭವಿಸಿತ್ತು. ಎನ್‌ಇಕೆಆರ್‌ಟಿಸಿ ಎರಡು ವರ್ಷದಿಂದ ನಷ್ಟದಲ್ಲಿಯೇ ನಡೆಯುತ್ತಿದೆ. ಅದರಲ್ಲೂ ಈ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ373 ಕೋಟಿ ರೂ. ನಷ್ಟವಾಗಿದೆ. ಜತೆಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಶೇ.45ಕ್ಕೂ ಹೆಚ್ಚು ಹಳ್ಳಿ ರೂಟ್‌ಗಳಿವೆ. ಈ ರೂಟ್‌ಗಳಲ್ಲಿ ಒಂದು ಕಡೆ ಮಾತ್ರ ಆದಾಯ ಬರುತ್ತಿದ್ದು, ಇನ್ನೊಂದು ಕಡೆ ಆದಾಯವೇ ಇಲ್ಲ. ಜತೆಗೆ ಡೀಸೆಲ್‌ ದರ ಹೆಚ್ಚಳ, ಬಸ್‌ ಟಿಕೆಟ್‌ ದರ ಹೆಚ್ಚಳ ಮಾಡದಿರುವ ಕಾರಣಕ್ಕಾಗಿ ನಷ್ಟದಲ್ಲಿದೆ ಎನ್ನುತ್ತಾರೆ ಈಶಾನ್ಯ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕ ಕೊಟ್ರಪ್ಪ. ನಿಗಮದಲ್ಲಿ 4670 ಬಸ್‌ಗಳಿದ್ದು, ಸುಮಾರು 24000 ಉದ್ಯೋಗಿಗಳಿದ್ದಾರೆ.



ಚೇತರಿಕೆಗೆ ವಾಯುವ್ಯ ಸಾರಿಗೆ ಹರಸಾಹಸ..!
ಚೇತರಿಕೆಗೆ ವಾಯುವ್ಯ ಸಾರಿಗೆ ಹರಸಾಹಸ..!

ಇನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ 60% ಪ್ರಯಾಣಿಕರು ಸಮೂಹ ಸಾರಿಗೆಯಿಂದ ದೂರ ಉಳಿದಿದ್ದಾರೆ. ಕೊರೊನಾ ಪೂರ್ವದಲ್ಲಿ ದಿನಕ್ಕೆ 4664 ಬಸ್‌ಗಳು ಓಡಾಡುತ್ತಿದ್ದು, 16.50 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಇದರಿಂದ ದಿನಕ್ಕೆ 5.40 ಕೋಟಿ ರೂ.ನಂತೆ ವರ್ಷಕ್ಕೆ 1971 ಕೋಟಿ ರೂ. ಆದಾಯ ಬರುತ್ತಿತ್ತು. ಈಗ ದಿನಕ್ಕೆ ಸರಾಸರಿ 3175 ಬಸ್‌ಗಳು ಸಂಚರಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ 7 ಲಕ್ಷವಷ್ಟೇ ಇದೆ. ಆದಾಯ ಕೇವಲ 2.60 ಕೋಟಿ ರೂ. ಮಾತ್ರ. ಇದು ಸಂಸ್ಥೆಯ ಸಿಬ್ಬಂದಿ ವೇತನಕ್ಕಷ್ಟೇ ಸಾಗಾಗುತ್ತಿದೆ. ಡೀಸೆಲ್‌ ಮತ್ತು ಟಯರ್‌ ಹಾಗೂ ಇತರೆ ಖರ್ಚುಗಳಿಗೆ ಆರ್ಥಿಕ ಕೊರತೆಯಾಗಿದೆ ಎಂದು ಸಂಸ್ಥೆಯ ಮುಖ್ಯ ಸಾರಿಗೆ ವ್ಯವಸ್ಥಾಪಕ ನಿತಿನ್‌ ಹೆಗಡೆ ಹೇಳುತ್ತಾರೆ. ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ, ಹಾವೇರಿ ಜಿಲ್ಲೆಗಳಲ್ಲಿ 9 ಸಾರಿಗೆ ವಿಭಾಗಗಳನ್ನು ವಾಯುವ್ಯ ಸಾರಿಗೆ ಹೊಂದಿದ್ದು, ಒಟ್ಟು 4664 ಬಸ್‌ಗಳಿವೆ. 22,450 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.





from India & World News in Kannada | VK Polls https://ift.tt/3oLb9oQ

ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಶನಿವಾರ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ?

ಬೆಂಗಳೂರು: ಸಿಲಿಕಾನ್‌ ಸಿಟಿ ಸೇರಿ ದೇಶದ ಮಹಾನಗರಗಳಲ್ಲಿ ಶನಿವಾರವೂ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಎಲ್ಲಾ ನಗರಗಳಲ್ಲಿಯು ಇಂಧನ ದರ ಸ್ಥಿರವಾಗಿದೆ. ಕಳೆದ ಎರಡು ವಾರಗಳಿಂದ ಕೊಂಚ ಕೊಂಚವಾಗೇ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಳಿಕೆ ಕಾಣುತ್ತಿತ್ತು. ಹೀಗಾಗಿ ಮತ್ತಷ್ಟು ಇಳಿಯುವ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಕಳೆದ ಮೂರು ವಾರಗಳಿಂದ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಈ ಮಧ್ಯೆ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ದರ 80ರ ಗಡಿ ದಾಟಿದೆ. ಅದಾಗ್ಯೂ ಇದಕ್ಕೆ ಪ್ರಮುಖ ಕಾರಣ ಅಂತರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಇಂಧನ ದರ ಇಳಿಕೆಯಾಗದೆ ಇರುವುದು. ಹಾಗಾದರೆ ಅಕ್ಟೋಬರ್‌ 31ರ ಶನಿವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ. ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ. ಸಿಲಿಕಾನ್ ಸಿಟಿ ಬೆಂಗಳೂರು ಪೆಟ್ರೋಲ್: 83.69 ರೂ. ಡೀಸೆಲ್: 74.63 ರೂ. ರಾಷ್ಟ್ರ ರಾಜಧಾನಿ ನವದೆಹಲಿ ಪೆಟ್ರೋಲ್: 81.06 ರೂ. ಡೀಸೆಲ್: 70.46 ರೂ. ಮಹಾರಾಷ್ಟ್ರ ರಾಜಧಾನಿ ಮುಂಬಯಿ ಪೆಟ್ರೋಲ್: 87.74 ರೂ. ಡೀಸೆಲ್: 76.86 ರೂ. ತಮಿಳುನಾಡು ರಾಜಧಾನಿ ಚೆನ್ನೈ ಪೆಟ್ರೋಲ್:84.14 ರೂ. ಡೀಸೆಲ್: 75.95 ರೂ.


from India & World News in Kannada | VK Polls https://ift.tt/3mBHbls

ಗುಜರಾತ್‌ ಕಾಂಗ್ರೆಸ್‌ಅನ್ನು 25 ಕೋಟಿಗೆ ಖರೀದಿಸಬಹುದು: ಶಾಕಿಂಗ್‌ ಹೇಳಿಕೆ ನೀಡಿದ ಸಿಎಂ ವಿಜಯ ರೂಪಾನಿ!

ಸಿದ್ದರಾಮಯ್ಯ, ದೇವೇಗೌಡ್ರೇ ಪ್ರಚಾರಕ್ಕೆ ಹೋದ್ಮೇಲೆ ಸಿಎಂ ಆಗಿ ನಾನು ಹೋಗದಿದ್ರೆ ತಪ್ಪಾಗುತ್ತೆ; ಬಿಎಸ್‌ವೈ

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರೋ ಆರ್‌ ಆರ್‌ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಕೊನೇಕ್ಷಣದ ಕಸರತ್ತು ನಡೆಸುತ್ತಿವೆ. ಜೆಡಿಎಸ್‌ ವರಿಷ್ಠ ಎಚ್‌ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ, ಡಿಕೆಶಿವಕುಮಾರ್ ಸೇರಿದಂತೆ ಘಟಾನುಘಟಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಆದರೆ ಸಿಎಂ ಬಿಎಸ್‌ ಯಡಿಯೂರಪ್ಪ ಮಾತ್ರ ಚುನಾವಣಾ ಪ್ರಚಾರಕ್ಕೆ ತೆರಳಿರಲಿಲ್ಲ. ಆದ್ರೆ ಇದೀಗ ಕೂಡ ಕದನಕ್ಕೆ ಧುಮುಕಿ ಮತದಾರರನ್ನು ಓಲೈಸಲು ನಿರ್ಧರಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಬಿಎಸ್‌ವೈ, ನಾನು ಉಪಚುನಾವಣೆಯ ಪ್ರಚಾರಕ್ಕೆ ಹೋಗಬೇಕು ಅಂತಾ ಇರಲಿಲ್ಲ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ, ದೇವೇಗೌಡರು,ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಎಲ್ಲಾ ಪ್ರಚಾರಕ್ಕೆ ಹೋಗಿದ್ದಾರೆ. ಅವರೆಲ್ಲ ಪ್ರಚಾರಕ್ಕೆ ತೆರಳಿರೋವಾಗ ಸಿಎಂ ಆಗಿ ನಾನು ಹೋಗಿಲ್ಲ ಎಂದರೆ ತಪ್ಪಾಗುತ್ತದೆ. ಹಾಗಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಇದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಮುಗಿಯಬೇಕು. ಸದ್ಯ ಚುನಾವಣೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಚುನಾವಣೆ ಮುಗಿದ ನಂತರ ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ ಬಳಿಕ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಹೇಳಿದರು. ಇಂದು ಸಿಎಂ ಬಿಎಸ್‌ವೈ ಅವರು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಮತಯಾಚನೆ ನಡೆಸಲಿದ್ದಾರೆ. ಶಿರಾದಲ್ಲಿ ಪ್ರಚಾರ ನಡೆಸಿದ ಬಳಿಕ ಸಿಎಂ ರಾಜರಾಜೇಶ್ವರಿ ನಗರಕ್ಕೂ ಪ್ರಚಾರಕ್ಕೆ ತೆರಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.


from India & World News in Kannada | VK Polls https://ift.tt/37TQMjt

ಪಾಕ್ ಸಂಸತ್‌ನಲ್ಲಿ ವಿರೋಧ ಪಕ್ಷದ ಸಂಸದರಿಂದ ಮೋದಿ - ಮೋದಿ ಘೋಷಣೆ..?!

ಪಾಕಿಸ್ತಾನದ ಸಂಸತ್‌ನಲ್ಲಿ ಭಾರತದ ಪ್ರಧಾನಿ ಪರ ಕೂಗಲಾಯ್ತು ಎಂಬ ಸುದ್ದಿ ಹರಡುತ್ತಿದೆ. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರು, ಮೋದಿ ಪರ ಘೋಷಣೆ ಕೂಗಿದರು ಎಂದು ಹಲವಾರು ಸುದ್ದಿ ಸಂಸ್ಥೆಗಳು ಹಾಗೂ ಜನಪ್ರಿಯ ಟ್ವಿಟ್ಟರ್ ಬಳಕೆದಾರರು ವಾದಿಸಿದ್ದಾರೆ. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರೂ ಈ ಸಂಬಧ ಟ್ವೀಟ್ ಮಾಡಿದ್ದಾರೆ. ಪಾಕ್ ಸಂಸತ್‌ನಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅಲ್ಲಿನ ವಿರೋಧ ಪಕ್ಷಗಳು ಮೋದಿ ಮೋದಿ ಎಂದು ಘೋಷಣೆ ಕೂಗಿದರು ಎಂದು ವಾದಿಸಿದ್ದಾರೆ. ಶೋಭಾ ಕರಂದ್ಲಾಜೆ ಅವರು ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ಪಾಕ್ ವಿದೇಶಾಂಗ ಸಚಿವರ ಭಾಷಣಕ್ಕೆ ವಿರೋಧ ಪಕ್ಷಗಳು ಅಡ್ಡಿ ಮಾಡುತ್ತಿರುವ ದೃಶ್ಯ ನೋಡಬಹುದಾಗಿದೆ. ಪಾಕ್‌ನ ವಿದೇಶಾಂಗ ಸಚಿವರು ಫ್ರಾನ್ಸ್ ದೇಶದಲ್ಲಿ ವಿವಾದಕ್ಕೆ ಕಾರಣವಾಗಿರುವ ಪ್ರವಾದಿ ಮೊಹಮ್ಮದರ ಕಾರ್ಟೂನ್ ಹಾಗೂ ಎಫ್‌ಎಟಿಎಫ್‌ನಲ್ಲಿ ಈಗಲೂ ಬೂದು ಬಣ್ಣದ ಪಟ್ಟಿಯಲ್ಲೇ ಇರುವ ಕುರಿತು ಮಾತನಾಡುತ್ತಿದ್ದರು. ಆದ್ರೆ, ಅವರ ಭಾಷಣಕ್ಕೆ ಅಡ್ಡಿಪಡಿಸಲಾಗಿತ್ತು. ಇದೇ ವಿಡಿಯೋ ಬಳಸಿಕೊಂಡು ಇಂಡಿಯಾ ಟಿವಿ ದೃಶ್ಯದ ತುಣುಕನ್ನು ಟ್ವೀಟ್ ಮಾಡಿರುವ ಆಂಕರ್ ದೀಪಕ್ ಚೌರಾಸಿಯಾ ಅವರು, ಶೀಘ್ರದಲ್ಲೇ ಕರಾಚಿ ಹಾಗೂ ಲಾಹೋರ್ ಭಾರತದ ಭಾಗವಾಗುತ್ತದೆ ಎಂದಿದ್ದಾರೆ. ಲೆಕ್ಕವಿಲ್ಲದಷ್ಟು ಪ್ರತಿಷ್ಠಿತ ಸುದ್ದಿ ಸಂಸ್ಥೆಗಳೂ ಕೂಡಾ ಪಾಕ್ ಸಂಸತ್‌ನಲ್ಲಿ ಮೋದಿ ಪರ ಘೋಷಣೆ ಕೇಳಿ ಬಂತು ಎಂದು ಸುದ್ದಿ ಪ್ರಕಟಿಸಿದ್ದವು. ಸತ್ಯಾಂಶವೇನು..? ಪಾಕ್‌ ಸಂಸತ್‌ನಲ್ಲಿ ವೋಟಿಂಗ್, ವೋಟಿಂಗ್ ಎಂದು ಘೋಷಣೆ ಕೂಗಲಾಗುತ್ತಿತ್ತು. ಪ್ರಧಾನಿ ಮೋದಿ ಪರ ಪಾಕ್ ಸಂಸತ್‌ನಲ್ಲಿ ಯಾವುದೇ ಘೋಷಣೆ ಕೂಗಲಿಲ್ಲ. ಪತ್ತೆ ಮಾಡಿದ್ದು ಹೇಗೆ..? ಈ ಸಂಬಂಧ ಸೂಕ್ತ ಕೀ ವರ್ಡ್‌ಗಳನ್ನು ಬಳಸಿ ಹುಡುಕಿದಾಗ ಶಾ ಮೆಹಮೂದ್ ಖುರೇಷಿ ಅವರ ಭಾಷಣ ಇರುವ ದೃಶ್ಯ ಸಿಕ್ಕಿತು. ಅಕ್ಟೋಬರ್ 26, 2020ರಂದು ಅವರು ಭಾಷಣ ಮಾಡಿದ್ದರು. ಪಾಕಿಸ್ತಾನದ ದುನಿಯಾ ನ್ಯೂಸ್ ತನ್ನ ಅಧಿಕೃತ ಯೂಟ್ಯೂಬ್ ಅಕೌಂಟ್‌ನಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಿತ್ತು. ಈ ವಿಡಿಯೋದಲ್ಲಿ ವಿರೋಧ ಪಕ್ಷಗಳು ವೋಟಿಂಗ್, ವೋಟಿಂಗ್ ಎಂದು ಕೂಗೋದು ಸ್ಪಷ್ಟವಾಗಿ ಕೇಳುತ್ತದೆ. ಈ ವೇಳೆ ಸಿಟ್ಟಾಗುವ ಖುರೇಷಿ ಅವರು, ಮೋದಿ ಅವರ ರೀತಿ ವಿರೋಧ ಪಕ್ಷಗಳು ಆಡುತ್ತಿವೆ ಎನ್ನುತ್ತಾರೆ. ಪಾಕ್‌ ಸಂಸತ್‌ನಲ್ಲಿ ಮೋದಿ ಪರ ಘೋಷಣೆ ಕೂಗಲಾಯ್ತು ಎಂಬ ಇಂಡಿಯಾ ಟಿವಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಪತ್ರಕರ್ತ ಆದಿತ್ಯ ರಾಜ್ ಕೌಲ್ ಅವರು, ಪಾಕ್ ಸಂಸತ್‌ನಲ್ಲಿ ವೋಟಿಂಗ್ ಎಂದು ಘೋಷಣೆ ಮಾಡುತ್ತಿದ್ದಾರೆ. ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಕ್ವಾಜಾ ಆಸಿಫ್ ಅವರು ಶಾ ಮೆಹಮೂದ್ ಖುರೇಷಿ ಅವರ ಭಾಷಣಕ್ಕೆ ಮುನ್ನ ಸದನದಲ್ಲಿ ಮತದಾನ ನಡೆಯಬೇಕೆಂದು ಆಗ್ರಹಿಸುತ್ತಿದ್ದಾರೆ. ಇದೇ ವಿಚಾರವಾಗಿ ಘೋಷಣೆ ಕೂಗಲಾಯ್ತು ಎಂದು ಆ ಸಂದರ್ಭವನ್ನು ವಿವರಿಸಿದ್ದಾರೆ. ಪಾಕಿಸ್ತಾನದ ಡಾನ್ ವೆಬ್‌ಸೈಟ್‌ನಲ್ಲೂ ಈ ಕುರಿತ ಸಮಗ್ರ ಮಾಹಿತಿ ಲಭ್ಯವಾಗಿದೆ. ಪಾಕ್ ಸಂಸತ್‌ನಲ್ಲಿ ವೋಟಿಂಗ್‌ಗಾಗಿ ಘೋಷಣೆ ಕೂಗಲಾಯ್ತು ಎಂದು ವಿವರಣೆ ನೀಡಲಾಗಿದೆ. ಟೈಮ್ಸ್‌ ಫ್ಯಾಕ್ಟ್‌ನ ಸಮಗ್ರ ಅಧ್ಯಯನದ ಬಳಿಕ ಹೇಳೋದಾದ್ರೆ, ಪಾಕ್ ಸಂಸತ್‌ನಲ್ಲಿ ವೋಟಿಂಗ್, ವೋಟಿಂಗ್ ಎಂದು ಘೋಷಣೆ ಹಾಕಿದ ವಿಡಿಯೋವನ್ನು ಮೋದಿ ಮೋದಿ ಎಂದು ಘೋಷಣೆ ಹಾಕಲಾಯ್ತು ಎಂದು ತಿರುಚಲಾಗಿದೆ.


from India & World News in Kannada | VK Polls https://ift.tt/34ForLA

ಜಸ್ಟ್‌ ಫನ್‌ಗಾಗಿ 16 ಕಾರ್‌ಗಳ ಗಾಜು ಪುಡಿ ಪುಡಿ.. ಒಂದಕ್ಕೆ ಬೆಂಕಿ..! ಮೂವರ ಬಂಧನ

ನಾಗ್ಪುರ: ಮನರಂಜನೆಗೋಸ್ಕರ ಜನ ಕುಣಿತಾರೆ, ಹಾಡ್ತಾರೆ ಮತ್ತೆ ತಮಗೆ ಇಷ್ಟಬಂದದ್ದನ್ನು ಮಾಡ್ತಾರೆ. ಆದರೆ, ನಾಗ್ಪುರದಲ್ಲಿ ಬರ್ತ್‌ಡೇ ಸೆಲೆಬ್ರೆಷನ್‌ಗೋಸ್ಕರ ಮೂರು ಜನ 16 ಕಾರುಗಳ ಗಾಜು ಹೊಡೆದು, ಜಖಂಗೊಳಿಸಿ, ಹಚ್ಚಿದ ವಿಚಿತ್ರ ಘಟನೆ ನಡೆದಿದೆ. ಗುರುವಾರ ಬೆಳ್ಳಂಬೆಳಗ್ಗೆ ಪಶ್ಚಿಮ ನಾಗ್ಪುರದಲ್ಲಿ ಈ ಘಟನೆ ನಡೆದಿದ್ದು, ಅಜನಿ ಮತ್ತು ಬೆಲ್ತರೋಡಿ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಹಿರಿಯ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿಜಯ್‌ ಅಕೋಟ್‌ ನೇತೃತ್ವದಲ್ಲಿ ಬೆಲ್ತರೋಡಿ ಪೊಲೀಸ್‌ ತಂಡ ಮೂವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಓರ್ವ ಆರೋಪಿ ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಾರ್ದಾದ ಹಿಂಗಾನ್‌ಘಾಟ್‌ನಲ್ಲಿ ಓರ್ವ ಆರೋಪಿ ತಪ್ಪಿಸಿಕೊಳ್ಳುವ ವೇಳೆ ಖಾಕಿ ಕೈಗೆ ಸಿಕ್ಕಿಬಿದ್ದಿದ್ದಾನೆ. ರಿತೇಶ್‌ ದಿಕಾಟೆ, ಚಿರಾಗ್‌ ತಲ್ಕೂರ್‌ ಮತ್ತು ಆವಿಶ್‌ ತಾಯ್ವಡೆ ಬಂಧಿತ ಆರೋಪಿಗಳು. ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುವ ವೇಳೆ ಮನರಂಜನೆಗೋಸ್ಕರ ಕಾರ್‌ಗಳ ಗಾಜು ಪುಡಿ ಪುಡಿ ಮಾಡಿದ್ದಾರೆ. ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ನರೇಂದ್ರ ನಗರ, ಬಾರ್ಕುಟೆ ಲೇಔಟ್‌, ರಾಮಕೃಷ್ಣ ಸೊಸೈಟಿ, ರಚನಾವಾಟಿಕ ಅಪಾರ್ಟ್‌ಮೆಂಟ್‌, ಮನೀಶ್‌ ನಗರ್‌ ಹಾಗೂ ವಾರ್ದಾ ರಸ್ತೆಯಲ್ಲಿ ವಾಹನಗಳನ್ನು ಜಖಂಗೊಳಿಸಿದ್ದಾರೆ. ಸಮೀರ್‌ ರಾವತ್‌ ಎಂಬುವವರಿಗೆ ಸೇರಿದ ಕಾರ್‌ಗೆ ಮೂವರು ಸೇರಿ ಬೆಂಕಿ ಹಚ್ಚಿದ್ದಾರೆ. ನರೇಂದ್ರ ನಗರದಲ್ಲಿ ವಾಸವಾಗಿರುವ ರಾವತ್‌ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ನನಗೆ ಯಾರೊಂದಿಗೂ ವೈರತ್ವವಿಲ್ಲ. ಆದರೆ, ಈ ಮೂವರು ನನ್ನ ಕಾರ್‌ಗೆ ಬೆಳಗ್ಗೆ 4.20ರ ಸುಮಾರಿಗೆ ಬೆಂಕಿ ಹಚ್ಚಿದ್ದಾರೆ. ಸಿಸಿಟಿವಿಯಲ್ಲಿಯೂ ದೃಶ್ಯಾವಳಿ ಸೆರೆಯಾಗಿದೆ ಎಂದು ರಾವತ್‌ ಹೇಳಿದ್ದಾರೆ. ಸಿಸಿಟಿವಿಯಲ್ಲಿ ಮೂವರು ಆರೋಪಿಗಳ ಮುಖ ಸ್ಪಷ್ಟವಾಗಿ ಗೋಚರಿಸುತ್ತಿದೆ. ತನಿಖೆ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಇನ್ಸ್‌ಪೆಕ್ಟರ್‌ ಅಕೋಟ್‌ ಹೇಳಿದ್ದಾರೆ. ಎಸ್‌ಐ ವಿಕಾಸ್‌ ಮಾನ್ಪಿಯಾ, ಪೊಲೀಸ್‌ ಪ್ರಶಾಂತ್‌ ಸೋನುಲ್ಕರ್‌, ನಿತೀನ್‌ ಭವಾನೆ, ಗೋಪಾಲ್‌ ದೇಶಮುಖ್‌, ಅವಿನಾಶ್‌ ಥಾಕ್ರೆ, ವಿಜಯ್‌ ಶ್ರೀಬಾಸ್‌ ಮತ್ತಿತರರು ಪೊಲೀಸರ ತಂಡದಲ್ಲಿದ್ದಾರೆ.


from India & World News in Kannada | VK Polls https://ift.tt/3e7WI9H

ವಿಜಯೇಂದ್ರ ಕಾಲಿಟ್ಟಲ್ಲಿ ಗೆಲುವು ನಿಶ್ಚಿತ! ಕೆ.ಸಿ ನಾರಾಯಣಗೌಡ ಭವಿಷ್ಯ

ತುಮಕೂರು: ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಲಿಟ್ಟಲ್ಲಿ ಗೆಲುವು ನಿಶ್ಚಿತ! ಹೀಗಂದವರು ಸಚಿವ ಕೆ.ಸಿ ನಾರಾಯಣಗೌಡ. ಶಿರಾ ಉಪಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ಅಭಿವೃದ್ಧಿ ಮಾಡುವುದಾಗಿ ಮಾತುಕೊಟ್ಟರೆ ಎಂದಿಗೂ ಮಾತು ತಪ್ಪುವುದಿಲ್ಲ. ಶಿರಾ ಕ್ಷೇತ್ರವನ್ನ ಮೂರನೆ ಶಿಕಾರಿಪುರವನ್ನಾಗಿ ಮಾಡುತ್ತಾರೆ ಎಂದರು. ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಪರ ಮದಲೂರಿನಲ್ಲಿ ನಡೆದ ಸಮಾವೇಶದಲ್ಲಿ ಸಚಿವರು ಮಾತನಾಡಿದರು. ಶಿರಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ಖಚಿತ. ಮಂಡ್ಯ ಜಿಲ್ಲೆಯಲ್ಲಿ ಯಡಿಯುರಪ್ಪ ಅವರ ಆಶೀರ್ವಾದಿಂದ ನನ್ನನ್ನು ಗೆಲ್ಲಿಸಿದ್ರು. ಮೂರು ಖಾತೆ ನೀಡಿ ಸಚಿವನನ್ನಾಗಿ ಮಾಡಿದ್ರು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಲ್ಲ ಅಂತಿದ್ರು. ಆದ್ರೆ ಈಗ ಯಡಿಯೂರಪ್ಪ ಅವರ ಕನಸು ನೆರವೇರಿದೆ ಎಂದು ಹಾಡಿಹೊಗಳಿದರು. ಕೆ.ಆರ್. ಪೇಟೆಯಲ್ಲಿ ಗೆಲ್ಲಿಸಿದ್ರೆ ಎರಡನೆ ಶಿಕಾರಿಪುರ ಮಾಡ್ತಿನಿ ಅಂತ ಯಡಿಯೂರಪ್ಪ ಭರವಸೆ ಕೊಟ್ಟಿದ್ರು. ಅದರಂತೆ ಈಗ ಕ್ಷೇತ್ರಕ್ಕೆ ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆಗ್ತಿದೆ. ವಿಜಯೇಂದ್ರ ಅವರು ಕೆ.ಆರ್. ಪೇಟೆ ಚುನಾವಣೆ ನೇತೃತ್ವ ವಹಿಸಿದ್ರು. ಅವರು ಕೊಟ್ಟ ಮಾತಿನಂತೆ ಈಗ ಅಭಿವೃದ್ಧಿ ಕೆಲಸ ಆಗ್ತಿದೆ. 150 ಹಾಸಿಗೆಯ ಹೈಟೆಕ್ ಆಸ್ಪತ್ರೆ ಬರ್ತಿದೆ. ವಿಜಯೇಂದ್ರ ಅವರು ಕಾಲಿಟ್ಟಲ್ಲಿ ಗೆಲುವು ನಿಶ್ಚಿತ. ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರನ್ನ ಗೆಲ್ಲಿಸಿಕೊಡಿ. ಕ್ಷೇತ್ರವನ್ನು ಮೂರನೆ ಶಿಕಾರಿಪುರ ಮಾಡ್ತಾರೆ. ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ತಾರೆ. ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ಹರಿದುಬರತ್ತೆ. ಇದಕ್ಕೆ ಉದಾಹರಣೆ ಕೆ.ಆರ್. ಪೇಟೆ ಕ್ಷೇತ್ರ. ಅದೇ ರೀತಿ ಶಿರಾ ಕ್ಷೇತ್ರ ಕೂಡ ಅಭಿವೃದ್ಧಿ ಆಗಲಿದೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರನ್ನು ಗೆಲ್ಲಿಸಿ ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದ್ರು.


from India & World News in Kannada | VK Polls https://ift.tt/2HNnB71

ಜಮ್ಮು ಕಾಶ್ಮೀರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ವೈಕೆ ಪೊರಾ ಬಳಿ ಕಾರಿನಲ್ಲಿ ಬರುತ್ತಿದ್ದ ಬಿಜೆಪಿ ಕಾರ್ಯಕರ್ತರಾದ ಫಿದಾ ಹುಸೇನ್ ಯಾಟೂ, ಉಮರ್ ರಷಿದ್ ಹಾಗೂ ರಮ್ಜಾನ್ ಹಜಮ್ ಎಂಬುವವರ ಮೇಲೆ ಭಯೋತ್ಪಾದಕರು ಗುಂಡಿಟ್ಟು ಕೊಲೆಗೈದಿರುವುದನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪಿಎಂ ಮೋದಿ, ಮೂವರು ಯುವ ಕಾರ್ಯಕರ್ತರ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಇವರು ಜಮ್ಮು ಕಾಶ್ಮೀರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದ ಯುವಕರು. ಮೃತರ ಕುಟುಂಬಸ್ಥರಿಗೆ ದುಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಮೃತ ಮೂವರು ಯುವಕರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿಗೆ ಮೂವರು ಯುವ ಬಿಜೆಪಿ ನಾಯಕರು ನಿನ್ನೆ ಬಲಿಯಾಗಿದ್ದರು. ಇಲ್ಲಿನ ಕುಲ್ಗಾಮ್ ಜಿಲ್ಲೆಯ ವೈಕೆ ಪೊರಾ ಬಳಿ ಕಾರಿನಲ್ಲಿ ಬರುತ್ತಿದ್ದ ಬಿಜೆಪಿ ನಾಯಕರಾದ ಫಿದಾ ಹುಸೇನ್ ಯಾಟೂ, ಉಮರ್ ರಷಿದ್ ಹಾಗೂ ರಮ್ಜಾನ್ ಹಜಮ್ ಎಂಬುವವರ ಮೇಲೆ ಭಯೋತ್ಪಾದಕರು ಗುಂಡಿನ ಮಳೆಗರೆದಿದ್ದಾರೆ. ಈ ಮೂವರೂ ಬಿಜೆಪಿ ನಾಯಕರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರು, ಮೂವರನ್ನೂ ಬಲಿ ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂವರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯೆಯೇ ಮೂವರೂ ನಾಯಕರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3oG0uvO

ಆರ್‌ಆರ್‌ ನಗರ: ಕುಸುಮಾ ಪರವಾಗಿ ಡಿಕೆಶಿ, ಸಿದ್ದರಾಮಯ್ಯ ರೋಡ್ ಶೋ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರುತ್ತಿದ್ದು ಅಂತಿಮ ಹಂತದ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ಶುಕ್ರವಾರ ಆರ್‌ ಆರ್‌ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್‌ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ರೋಡ್ ಶೋ ನಡೆಸಿದರು. ನವೆಂಬರ್ 3 ರಂದು ಉಪಚುನಾವಣೆ ನಡೆಯಲಿದ್ದು ಇನ್ನು ಕೇವಲ ಮೂರು ದಿನಗಳ ಬಾಕಿ ಉಳಿದಿವೆ. ಅಂತಿಮ ಹಂತದಲ್ಲಿ ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ಮುಖಂಡರು ತೊಡಗಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಜಂಟಿಯಾಗಿ ಪ್ರಚಾರ ಕಾರ್ಯ ಹಾಗೂ ರೋಡ್‌ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು. ಪಕ್ಷದ ನಾಯಕರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಐವಾನ್ ಡಿಸೋಜಾ, ಡಾ. ಅಜಯಸಿಂಗ್ ಹಾಗೂ ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆರ್‌ ಆರ್‌ ನಗರದಲ್ಲಿ ಕಾಂಗ್ರೆಸ್‌ ನಿಂದ ಕುಸುಮಾ ಎಚ್‌ ಕಣದಲ್ಲಿದ್ದರೆ ಬಿಜೆಪಿಯಿಂದ ಮುನಿರತ್ನ ಹಾಗೂ ಜೆಡಿಎಸ್‌ನಿಂದ ವಿ.ಕೃಷ್ಣಮೂರ್ತಿ ಕಣದಲ್ಲಿದ್ದಾರೆ. ಶಿರಾದಲ್ಲಿ ಬಿಎಸ್‌ವೈ ಪ್ರಚಾರ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಪರವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶುಕ್ರವಾರ ಪ್ರಚಾರ ನಡೆಸಲಿದ್ದಾರೆ. ಶಿರಾ ನಗರದಲ್ಲಿ ನಡೆಯಲಿರುವ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ. ಶಿರಾದಲ್ಲಿ ಕಾಂಗ್ರೆಸ್‌ನಿಂದ ಟಿ.ಬಿ ಜಯಚಂದ್ರ, ಬಿಜೆಪಿಯಿಂದ ಡಾ. ರಾಜೇಶ್ ಗೌಡ ಅಖಾಡಲ್ಲಿದ್ದಾರೆ. ನವೆಂಬರ್‌ 3 ರಂದು ಮತದಾನ ನಡೆಯಲಿದ್ದು ನವೆಂಬರ್ 10 ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.


from India & World News in Kannada | VK Polls https://ift.tt/2HJWxW3

ಟೂರ್ನಿಯಿಂದ ಹೊರ ನಡೆದಿದ್ದೇವೆಂಬ ಭಾವನೆ ಉಂಟಾಗುತ್ತಿಲ್ಲವೆಂದ ಗಾಯಕ್ವಾಡ್‌!

ದುಬೈ: ಡ್ರೆಸ್ಸಿಂಗ್‌ ಕೊಠಡಿಯ ವಾತಾವರಣ ಆರಾಮದಾಯಕವಾಗಿದ್ದು, ಟೂರ್ನಿಯಿಂದ ಹೊರಗುಳಿದಿದ್ದೇವೆಂಬ ಭಾವನೆ ನಮಗೆ ಉಂಟಾಗುತ್ತಿಲ್ಲವೆಂದು ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತಾ ನೈಟ್ ರೈಡರ್ಸ್, ನಿಗದಿತ 20 ಓವರ್‌ಗಳಿಗೆ ಐದು ವಿಕೆಟ್‌ ನಷ್ಟಕ್ಕೆ 172 ರನ್‌ಗಳನ್ನು ಗಳಿಸಿತು. ಬಳಿಕ ಗುರಿ ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್ 4 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವು ಸಾಧಿಸಿತು. ಈ ಪಂದ್ಯದ ಗೆಲುವಿನ ಹೊರತಾಗಿಯೂ ಸಿಎಸ್‌ಕೆ 10 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನ ಪಡೆಯಿತು. ಆದರೂ ಪ್ಲೇಆಫ್ಸ್‌ನಿಂದ ಹೊರಗುಳಿಯಿತು. ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್ ಪರ ಅತ್ಯುತ್ತಮ ಪ್ರದರ್ಶನ ತೋರಿದ ಋತುರಾಜ್‌ ಗಾಯಕ್ವಾಡ್‌ 53 ಎಸೆತಗಳಲ್ಲಿ 72 ರನ್‌ಗಳನ್ನು ಸಿಡಿಸಿದರು. ಕೊನೆಯ ಎರಡು ಓವರ್‌ಗಳಲ್ಲಿ ಮಿಂಚಿನ ಬ್ಯಾಟಿಂಗ್‌ ಪ್ರದರ್ಶಿಸಿದ ರವೀಂದ್ರ ಜಡೇಜಾ ಕೇವಲ 11 ಎಸೆತಗಳಲ್ಲಿ 31 ರನ್‌ಗಳನ್ನು ಗಳಿಸಿ ಸಿಎಸ್‌ಕೆ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. "ಇದೇ ಲಯವನ್ನು ಮುಂದುವರಿಸಿ, ತಂಡಕ್ಕಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಬಗ್ಗೆ ಗಮನಹರಿಸುತ್ತಿದ್ದೇನೆ. ಗೆಲುವಿನೊಂದಿಗೆ ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಮುಗಿಸಿ, ಮುಂದಿನ ವರ್ಷದಲ್ಲಿ ಇದೇ ಗೆಲುವಿನ ಕ್ಷಣವನ್ನು ಮುಂದುವರಿಸಲಾಗುವುದು," ಎಂದು ಸಹ ಆಟಗಾರ ಶೇನ್‌ ವಾಟ್ಸನ್‌ಗೆ ಗಾಯಕ್ವಾಡ್‌ ಹೇಳಿರುವ ವಿಡಿಯೋವನ್ನು ಐಪಿಎಲ್‌ಟಿ20.ಕಾಮ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. "ತಂಡದಲ್ಲಿನ ವಾತಾವರಣ ಆರಾಮದಾಯಕವಾಗಿದ್ದು, ನಾವು ಟೂರ್ನಿಯ ಪ್ಲೇಆಫ್ಸ್‌ನಿಂದ ಹೊರಗುಳಿದಿದ್ದೇವೆ ಎಂಬ ಭಾವನೆ ಉಂಟಾಗುತ್ತಿಲ್ಲ. ಮೊದಲ ಪಂದ್ಯದಲ್ಲಿ ವಾತಾವರಣ ಹೇಗಿತ್ತೊ ಇದೀಗ ಅದೇ ವಾತಾರಣವಿದೆ. ಇದು ತುಂಬಾ ಸಹಾಯವಾಗಿದೆ," ಎಂದು ಅವರು ಹೇಳಿದರು. ಶೇನ್‌ ವಾಟ್ಸನ್‌ ಜತೆ ಇನಿಂಗ್ಸ್ ಆರಂಭಿಸಿದ ಬಗ್ಗೆ ಪ್ರತಿಕ್ರಿಯಿಸಿ, "ಇವರೊಂದಿಗೆ ಬ್ಯಾಟಿಂಗ್‌ ಮಾಡುವುದು ನನ್ನ ಕನಸು," ಎಂದು ಹೇಳಿದರು. ಋತುರಾಜ್‌ ಗಾಯಕ್ವಾಡ್ ಅವರ ಬ್ಯಾಟಿಂಗ್‌ ಶ್ಲಾಘಿಸಿದ ಶೇನ್‌ ವಾಟ್ಸನ್‌, "ಋತುರಾಜ್ ಗಾಯಕ್ವಾಡ್‌ ನಂಬಲಾಗದಷ್ಟು ಚೆನ್ನಾಗಿ ಬ್ಯಾಟಿಂಗ್‌ ಮಾಡಿದರು. ಐಪಿಎಲ್ ನಂತಹ ದೊಡ್ಡ ವೇದಿಕೆಯಲ್ಲಿ ಪ್ಯಾಟ್‌ ಕಮಿನ್ಸ್, ಲಾಕಿ ಫರ್ಗೂಸನ್ ಹಾಗೂ ಸುನೀಲ್ ನರೇನ್‌ ಅವರಂಥ ವಿಶ್ವ ಶ್ರೇಷ್ಠ ಬೌಲರ್‌ಗಳನ್ನು ಎದುರಿಸಿರುವುದು ಯುವ ಆಟಗಾರನ ಪ್ರಭಾವಶಾಲಿಯಾಗಿದೆ," ಎಂದು ವ್ಯಾಟ್ಸನ್ ಹೇಳಿದ್ದಾರೆ. ಈ ಪಂದ್ಯದ ಗೆಲುವಿನ ಹೊರತಾಗಿಯೂ ಚೆನ್ನೈ ಸೂಪರ್‌ ಕಿಂಗ್ಸ್ 10 ಅಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿಯಿತು. ಭಾನುವಾರ ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಸಿಎಸ್‌ಕೆ ಪ್ರಸಕ್ತ ಆವೃತ್ತಿಯ ಕೊನೆಯ ಪಂದ್ಯವಾಡಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37R6JXG

ಮೀನಿನ ಬದಲು ಬಲೆಗೆ ಬೀಳುತ್ತಿವೆ ಜೆಲ್ಲಿಫಿಶ್‌; ಮೀನುಗಾರರು ಕಂಗಾಲು!

ಕುಂದಾಪುರ: ಕೋವಿಡ್‌ ಲಾಕ್‌ಡೌನ್‌ ಸಡಿಲಿಕೆ ಬಳಿಕ ಆರಂಭಗೊಂಡ ಮೀನುಗಾರಿಕೆ ಸುಧಾರಿತ ಹೆಜ್ಜೆ ಇಡುತ್ತಿರುವಾಗಲೆ ತಾಲೂಕಿನ ಗಂಗೊಳ್ಳಿ ಕಿರುಬಂದರು ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಜಲ್ಲಿಫಿಶ್‌ ಆತಂಕ ತಂದಿರಿಸಿದೆ. ಸಣ್ಣ ಪುಟ್ಟ ಮೀನುಗಳನ್ನು ನುಂಗಿ ಹಾಕುವ ಇವುಗಳು ಮೀನುಗಾರರ ಬಲೆಗೆ ದೊಡ್ಡ ಮಟ್ಟದಲ್ಲಿ ಬೀಳುತ್ತಿದೆ. ಪರಿಸ್ಥಿತಿ ಮುಂದುವರಿದ್ದಲ್ಲಿ ಮಗದೊಮ್ಮೆ ಮತ್ಸ್ಯಕ್ಷಾಮ ಎದುರಾಗಬಹುದೆಂಬ ಆತಂಕ ಮೀನುಗಾರರದ್ದು. ಚಂದ್ರನ ಮಲ ಎಂದು ಸ್ಥಳೀಯವಾಗಿ ಕರೆಯಲ್ಪಡುವ ಜಲ್ಲಿಫಿಶ್‌ ಕಡಲಾಮೆಗೆ ಆಹಾರ. ಸೆಪ್ಟಂಬರ್‌ ಅವಧಿಯಲ್ಲಿ ಹೆಚ್ಚಾಗಿ ಕಡಲಾಮೆಗಳು ಮೊಟ್ಟೆ ಇಡಲು ತೀರಕ್ಕೆ ಬರುವ ಹೊತ್ತು. ಈ ಸಂದರ್ಭ ಜಲ್ಲಿಫಿಶ್‌ ಅವುಗಳ ಬಾಯಿಗೆ ಸೇರುತ್ತದೆ. ಆದರೆ ಈ ಬಾರಿ ಕಡಲಾಮೆ ದಡಕ್ಕೆ ಬಂದು ಮೊಟ್ಟೆ ಇಟ್ಟಿರುವ ಸಂಗತಿ ಎಲ್ಲಿಯೂ ವರದಿಯಾಗಿಲ್ಲ. ಹೆಚ್ಚುತ್ತಿರುವ ಆಳಸಮುದ್ರ ಮೀನುಗಾರಿಕೆಯಿಂದ ಕಡಲಾಮೆಗಳು ತೀರಕ್ಕೆ ಬಂದು ಮೊಟ್ಟೆ ಇಡುವ ಪದ್ಧತಿಗೆ ಮತ್ತು ಆ ಮೂಲಕ ಜಲ್ಲಿಫಿಶ್‌ಗೆ ತಡೆಯೊಡ್ಡುವ ನೈಸರ್ಗಿಕ ವಿದ್ಯಮಾನಕ್ಕೆ ಬ್ರೇಕ್‌ ಬಿದ್ದಿದೆ. ಮೀನುಗಾರಿಕೆ ಇಲಾಖೆ, ತಜ್ಞರು ಗಮನಹರಿಸಬೇಕು ದಿನೇಶ್‌ ಸಾರಂಗ ಮೀನುಗಾರ ಜಾಗೃತಿ ಸೆಪ್ಟಂಬರ್‌ ತಿಂಗಳ ಅವಧಿಯಲ್ಲಿ ಕಡಲಾಮೆಗಳು ಸ್ವಾಭಾವಿಕವಾಗಿ ಮೊಟ್ಟೆ ಇಡಲು ದಡ ಸೇರುವ ವಿದ್ಯಮಾನ ಈ ಬಾರಿ ಕುಂಠಿತಗೊಂಡಿದೆ. ಇದರಿಂದ ಜಲ್ಲಿಫಿಶ್‌ಗಳು ಸ್ವಚ್ಚಂದವಾಗಿ ಓಡಾಡಲು ಅನುಕೂಲವಾಗಿದೆ. ವಿದ್ಯಮಾನ ಗಂಭೀರವಾದುದು. ಎಫ್‌ಎಸ್‌ಎಲ್‌ ಇಂಡಿಯಾ ದಶಕಗಳಿಂದ ಕರಾವಳಿಯಲ್ಲಿ ಕಡಲಾಮೆ ಮತ್ತು ಅದರ ಮೊಟ್ಟೆಗಳ ಸಂರಕ್ಷಣೆ ಕಾರ್ಯ ನಡೆಸಿಕೊಂಡು ಬಂದಿದೆ. ಇದಕ್ಕೆ ಪೂರಕವಾಗಿ ಸಹಕರಿಸುತ್ತಲೆ ಬಂದಿದ್ದಾರೆ. ವಿದ್ಯಮಾನದ ಬಗ್ಗೆ ಸಂಬಂಧಿತ ಇಲಾಖೆಗಳು ಗಮನಹರಿಸಬೇಕು. ಸಂಸ್ಥೆ ವತಿಯಿಂದ ಮುಂದಿನ ವಾರ ಜಾಗೃತಿ ಅಭಿಯಾನ ನಡೆಯಲಿದೆ ವೆಂಕಟೇಶ್‌ ಎಫ್‌ಎಸ್‌ಎಲ್‌ ಇಂಡಿಯಾ ಸಂಯೋಜಕ ಕುಂದಾಪುರ.


from India & World News in Kannada | VK Polls https://ift.tt/35NSTTm

ನಿಶ್ಚಿತಾರ್ಥಕ್ಕೆ ವಧು ಹುಡುಕಿಲ್ಲ, ಆಗಲೇ ಮಗುವಿನ ನಾಮಕರಣಕ್ಕೆ ತಯಾರಿ! ಕಾಂಗ್ರೆಸ್ 'ಸಿಎಂ' ಚರ್ಚೆಗೆ ನಳಿನ್ ವ್ಯಂಗ್ಯ

ಬೆಂಗಳೂರು: ಮದುವೆಯ ನಿಶ್ಚಿತಾರ್ಥಕ್ಕೆ ಇನ್ನೂ ವಧು ಹುಡುಕಿಲ್ಲ, ಆಗಲೇ ಮಗುವಿನ ನಾಮಕರಣಕ್ಕೆ ತಯಾರಿ ನಡೆಸಲಾಗುತ್ತಿದೆ. ಹೀಗಂತ ಉಪಮೆಯ ಮೂಲಕ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಚರ್ಚೆಗೆ ಟಾಂಗ್ ಕೊಟ್ಟಿದ್ದು ರಾಜ್ಯಾಧ್ಯಕ್ಷ . ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಚರ್ಚೆ ತೀವ್ರಗೊಳ್ಳುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಹಗ್ಗಜಗ್ಗಾಟ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ನಳಿನ್ ಕುಮಾರ್ ಕಟೀಲ್ ವ್ಯಂಗ್ಯದ ಮೂಲಕ ಟಾಂಗ್ ಕೊಟ್ಟಿದ್ದಾರೆ. ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷಕ್ಕೂ ಅಧಿಕ ಸಮಯವಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಈಗಲೇ ಮುಂದಿನ ಸಿಎಂ ಯಾರು ಎಂಬ ಚರ್ಚೆ ಆರಂಭಗೊಂಡಿದೆನಿಶ್ಚಿತಾರ್ಥಕ್ಕೆ ವಧು ಹುಡುಕಿಲ್ಲ. ಆಗಲೇ ಮಗುವಿನ ನಾಮಕರಣಕ್ಕೆ ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್‌ಗೆ ಅಧಿಕಾರ ದಕ್ಕಿಲ್ಲ. ಒಂದು ವೇಳೆ ಅಧಿಕಾರ ಹತ್ತಿರ ಬಂದರೆ ಕಾಂಗ್ರೆಸ್ ಪರಿಸ್ಥಿತಿ ಏನಾಗಬಹುದು? ಎಂದು ಪ್ರಶ್ನಿಸಿರುವ ನಳಿನ್ ಕುಮಾರ್‌ ಕಟೀಲ್ ಕಾಂಗ್ರೆಸ್ ಪಕ್ಷದ ನಾಟಕಗಳನ್ನು ಜನರು ಗಮನಿಸುತ್ತಿದ್ದಾರೆ ಎಂದು ಟ್ವೀಟ್‌ ಮೂಲಕ ಕಾಲೆಳೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿ ಯಾರು ಎಂಬ ಚರ್ಚೆ ತೀವ್ರಗೊಂಡಿದೆ. ಪಕ್ಷದಲ್ಲಿ ಎರಡು ಬಣಗಳು ಸೃಷ್ಟಿಯಾಗಿದ್ದು ಸಿದ್ದರಾಮಯ್ಯ ಪರವಾಗಿ ಒಂದು ಬಣ ವಾದ ಮಾಡುತ್ತಿದ್ದರೆ ಡಿಕೆ ಶಿವಕುಮಾರ್ ಪರವಾಗಿ ಮತ್ತೊಂದು ಬಣ ವಾದ ಮಾಡುತ್ತಿದೆ.


from India & World News in Kannada | VK Polls https://ift.tt/3mF2L8N

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...