ಪಿ. ಚಿದಂಬರಂಗೆ ಸದ್ಯಕ್ಕಿಲ್ಲ ತಿಹಾರ್‌ ಜೈಲಿನಿಂದ ಮುಕ್ತಿ: ಮಾಜಿ ಹಣಕಾಸು ಸಚಿವರಿಗೆ ಶಾಕ್‌ ನೀಡಿದ ಏಮ್ಸ್‌ ವರದಿ!

ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್‌ ಜೈಲಿನಲ್ಲಿರುವ ಕೇಂದ್ರ ಮಾಜಿ ಹಣಕಾಸು ಸಚಿವ ಚಿದಂಬರಂಗೆ ದಿಲ್ಲಿ ಹೈಕೋರ್ಟ್‌ ಶಾಕ್‌ ನೀಡಿದೆ. ಪಿ.ಚಿದಂಬರಂ ಆರೋಗ್ಯ ಚೆನ್ನಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಏಮ್ಸ್ ವರದಿಯನ್ನಾಧರಿಸಿ ದಿಲ್ಲಿ ಹೈಕೋರ್ಟ್‌ಗೆ ಸಾಲಿಸಿಟರ್ ಜನರಲ್‌ ಮಾಹಿತಿ ನೀಡಿದ ಹಿನ್ನೆಲೆ ಕೋರ್ಟ್‌ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ. ಚಿದಂಬರಂ ಆರೋಗ್ಯ ಸ್ಥಿತಿಯ ಬಗ್ಗೆ ವರದಿ ನೀಡಲು ದಿಲ್ಲಿ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆ ಏಮ್ಸ್ ಮೆಡಿಕಲ್‌ ಬೋರ್ಡ್‌ ನೀಡಿದ ವರದಿಯನ್ನು ಓದಿದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ, ಕಾಂಗ್ರೆಸ್‌ ನಾಯಕನಿಗೆ ಸ್ವಚ್ಛ ಪರಿಸರದ ಅವಶ್ಯಕತೆಯೂ ಇಲ್ಲ ಎಂದು ತಿಳಿಸಿದ್ದಾರೆ. ಆದರೆ, ಚಿದಂಬರಂ ಮಧ್ಯಂತರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಜಸ್ಟೀಸ್‌ ಸುರೇಶ್‌ ಕೈಟ್‌, 74 ವರ್ಷದ ಕಾಂಗ್ರೆಸ್‌ ನಾಯಕನಿಗೆ ತಿಹಾರ್‌ ಜೈಲಲ್ಲಿ ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣವನ್ನು ಕಲ್ಪಿಸುವಂತೆ ತಿಹಾರ್‌ ಜೈಲು ಸೂಪರಿಟೆಂಡೆಂಟ್‌ಗೆ ನಿರ್ದೇಶಿಸಿದ್ದಾರೆ. ಅಲ್ಲದೆ, ಮನೆಯಲ್ಲಿ ಬೇಯಿಸಿದ ಆಹಾರ, ಖನಿಜಯುಕ್ತ ನೀರು, ಸೊಳ್ಳೆ ಪರದೆ ಮತ್ತು ಸೊಳ್ಳೆ ನಿವಾರಕವನ್ನು ನೀಡುವಂತೆಯೂ ನಿರ್ದೇಶಿಸಿದ್ದಾರೆ. ಜತೆಗೆ, ಚಿದಂಬರಂ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ನಡೆಸುವಂತೆಯೂ ಸೂಚಿಸಿದ್ದಾರೆ. ಕೋರ್ಟ್ ಈ ನಿರ್ದೇಶನಗಳನ್ನು ನೀಡಿದ ಬಳಿಕ ಹೆಚ್ಚಿನ ನಿರ್ದೇಶನ ಅಗತ್ಯವಿಲ್ಲ ಎಂದು ಚಿದಂಬರಂ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಕೇಂದ್ರ ಮಾಜಿ ಹಣಕಾಸು ಸಚಿವ ನೀಡಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಕೋರ್ಟ್ ವಿಲೇವಾರಿ ಮಾಡಿದ್ದು, ಜೈಲಿನಲ್ಲೇ ಸ್ವಚ್ಛ ವಾತಾವರಣ ಕಲ್ಪಿಸುವಂತೆ ಜೈಲು ಆಡಳಿತಾಧಿಕಾರಿಗಳಿಗೆ ಸೂಚಿಸಿದೆ. ಇನ್ನೊಂದೆಡೆ, ನವೆಂಬರ್ 4 ರಂದು ಚಿದಂಬರಂ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಆಗಸ್ಟ್ 21ರಂದು ಬಂಧನವಾಗಿದ್ದ ಚಿದಂಬರಂಗೆ ನವೆಂಬರ್ 13 ರವರೆಗೆ ನ್ಯಾಯಾಲಯ ತಿಹಾರ್ ಜೈಲಿಗೆ ಕಳಿಸಿತ್ತು.


from India & World News in Kannada | VK Polls https://ift.tt/2q97N5o

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...