ಇಸ್ಲಾಮಾಬಾದ್: ಪಾಕಿಸ್ತಾನದ ಸುದ್ದಿ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ಚರ್ಚೆ ಹೈ ಡ್ರಾಮಾಗೆ ಸಾಕ್ಷಿಯಾಗಿದೆ. ಹೌದು, ಚರ್ಚೆಯಲ್ಲಿ ಭಾಗವಹಿಸಿದ್ದವರಿಬ್ಬರು ಪರಸ್ಪರ ಹೊಡೆದಾಡಿಕೊಳ್ಳುವ ಮೂಲಕ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕ ಮಸ್ರೂರ್ ಅಲಿ ಸಿಯಾಲ್ ಮತ್ತು ಕರಾಚಿ ಪ್ರೆಸ್ ಕ್ಲಬ್ ಅಧ್ಯಕ್ಷ ಇಮ್ತಿಯಾಜ್ ಖಾನ್ ಲೈವ್ ಚೆರ್ಚೆಯಲ್ಲಿ ನಡೆಯುತ್ತಿರುವಾಗಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪರಸ್ಪರ ಹೊಡೆದಾಡಿಕೊಂಡ ಬಳಿಕ ಮಸ್ರೂರ್ ಅಲಿ ಸಿಯಾಲ್ ಏನು ನಡೆದೆಯಿಲ್ಲ ಎಂಬಂತೆ ಚರ್ಚೆ ಕಾರ್ಯಕ್ರಮಕ್ಕೆ ಮರಳಿದರೆ, ಇಮ್ತಿಯಾಜ್ ಖಾನ್ ಕಾರ್ಯಕ್ರಮ ಬಿಟ್ಟು ಹೊರ ನಡೆದಿದ್ದಾರೆ.
from India & World News in Kannada | VK Polls http://bit.ly/2X1RDKG