ವಿಂಡೀಸ್‌ನ ಆಂಡ್ರೆ ರಸೆಲ್ ವಿಶ್ವಕಪ್‌ನಿಂದ ಹೊರಕ್ಕೆ

ಲಂಡನ್: ಆಲ್ ರೌಂಡರ್ ಆಂಡ್ರೆ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಪ್ರಸಕ್ತ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಗಾಯಗೊಂಡಿರುವ ಆಂಡ್ರೆ ರಸೆಲ್ ಶನಿವಾರ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಜತೆಗೆ ವಿಶ್ರಾಂತಿ ಪಡೆಯುತ್ತಿದ್ದು, ಗುರುವಾರ ಭಾರತದ ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆಯಿತ್ತು. ಆದರೆ ಮೊಣಕಾಲಿನ ಗಾಯದ ಸಮಸ್ಯೆಯಿಂದ ರಸೆಲ್ ವಿಶ್ವಕಪ್‌ನಿಂದ ಹೊರಗುಳಿಯಬೇಕಾಗಿದೆ. ರಸೆಲ್ ಬದಲು ಸುನಿಲ್ ಅಂಬ್ರಿಸ್ ವೆಸ್ಟ್ ಇಂಡೀಸ್ ಪರ ಆಡುವ ಸಾಧ್ಯತೆಯಿದೆ. ರಸೆಲ್ ಈ ಟೂರ್ನಿಯಲ್ಲಿ ಗಾಯದ ಸಮಸ್ಯೆ ಎದುರಿಸಿದ್ದು, ಕೇವಲ ನಾಲ್ಕು ಪಂದ್ಯಗಳನ್ನಷ್ಟೇ ಆಡಿದ್ದಾರೆ. ಗುರುವಾರ ಭಾರತ ವಿರುದ್ಧದ ಪಂದ್ಯದ ವೇಳೆಗೆ ರಸೆಲ್ ಲಭ್ಯತೆ ಕುರಿತು ಸಂಶಯವಿದ್ದಾಗಲೇ, ರಸೆಲ್ ವಿಶ್ವಕಪ್ ಪ್ರಸಕ್ತ ಸಾಲಿನ ಟೂರ್ನಿಯಿಂದ ಹೊರಗುಳಿಯುವುದು ಖಚಿತವಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2X4Ytug

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...