ಇರಾನ್ ಮೇಲೆ ಅಮೆರಿಕ ಸೈಬರ್ ದಾಳಿ: ಡ್ರೋನ್ ಹೊಡೆದುರುಳಿಸಿದ್ದಕ್ಕೆ ಪ್ರತೀಕಾರ

ವಾಷಿಂಗ್ಟನ್: ಇರಾನಿನ ಕ್ಷಿಪಣಿ ನಿಯಂತ್ರಣಾ ವ್ಯವಸ್ಥೆ ಹಾಗೂ ಗುಪ್ತಚರ ಜಾಲದ ಮೇಲೆ ಅಮೆರಿಕ ನಡೆಸಿದೆ. ತನ್ನ ಕಣ್ಗಾವಲು ಡ್ರೋನ್ ಅನ್ನು ಹೊಡೆದುರುಳಿಸಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಿದೆ ಎಂದು ಅಮೆರಿಕದ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ಅಮೆರಿಕದ ಕಣ್ಗಾವಲು ಡ್ರೋನ್‌ ಅನ್ನು ಇರಾನ್ ಕಳೆದ ವಾರ ಕ್ಷಿಪಣಿ ದಾಳಿ ಮೂಲಕ ಹೊಡೆದುರುಳಿಸಿತ್ತು. ಇದಕ್ಕೆ ಮಿಲಿಟರಿ ಪ್ರತೀಕಾರದ ಬೆದರಿಕೆ ಹಾಕಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ಬಳಿಕ ಪ್ರತೀಕಾರ ಕ್ರಮ ಇರಾನ್ ಕೃತ್ಯಕ್ಕೆ 'ಸರಿಸಮವಾಗಿ' ಇರುವುದಿಲ್ಲ; ಆದರೆ ಇನ್ನಷ್ಟು ದಿಗ್ಬಂಧನಗಳನ್ನು ಹೇರಲಾಗುವುದು ಎಂದು ಘೋಷಿಸಿದ್ದರು. ಆದರೆ ಇರಾನ್ ಮೇಲೆ ಸೈಬರ್ ದಾಳಿ ನಡೆಸುವಂತೆ ಅಮೆರಿಕದ ಸೈಬರ್ ಕಮಾಂಡ್‌ಗೆ ಅಧ್ಯಕ್ಷ ಟ್ರಂಪ್ ರಹಸ್ಯವಾಗಿ ಅನುಮತಿ ನೀಡಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಈ ಸೈಬರ್ ದಾಳಿಯಿಂದಾಗಿ ಇರಾನ್‌ನ ಕ್ಷಿಪಣಿ ನಿಯಂತ್ರಣಾ ವ್ಯವಸ್ಥೆಯ ಕಂಪ್ಯೂಟರ್‌ಗಳು ಹಾನಿಗೀಡಾಗಿವೆ ಎಂದು ವರದಿ ತಿಳಿಸಿದೆ. ಹೊರ್ಮುಜ್ ಜಲಸಂಧಿಯಲ್ಲಿ ಇತ್ತೀಚೆಗೆ ಅಮೆರಿಕದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ದಾಳಿ ನಡೆಸಿತ್ತು. ಈ ದಾಳಿಗೆ ತನ್ನ ನೌಕೆಗಳ ಚಲನವಲನದ ಮೇಲೆ ಕಣ್ಣಿಟ್ಟ ಇರಾನ್‌ನ ಬೇಹುಗಾರ ಗುಂಪುಗಳೇ ಕಾರಣ ಎಂದು ಅಮೆರಿಕ ಹೇಳಿತ್ತು. ಆ ಘಟನೆಯ ಬೆನ್ನಿಗೇ ಪ್ರತೀಕಾರದ ದಾಳಿಗೆ ಸಜ್ಜಾಗಿದ್ದ ಅಮೆರಿಕ ಕೊನೇ ಕ್ಷಣದಲ್ಲಿ ಹಿಂತೆಗೆಯಿತು. ಅಮೆರಿಕದ ರಕ್ಷಣಾ ಇಲಾಖೆ ಈ ವರದಿಗಳನ್ನು ದೃಢೀಕರಿಸಲು ನಿರಾಕರಿಸಿದೆ. 'ಇದೊಂದು ಧೋರಣಾತ್ಮಕ ನೀತಿಯಾಗಿದ್ದು, ಮಾಹಿತಿ ಬಹಿರಂಗಪಡಿಸುವುದರಿಂದ ಕಾರ್ಯಾಚರಣೆಯ ಭದ್ರತೆಗೆ ಅಡ್ಡಿಯಾಗುತ್ತದೆ. ಸೈಬರ್‌ ದಾಳಿ ಕಾರ್ಯಾಚರಣೆ, ಬೇಹುಗಾರಿಕೆ ಅಥವಾ ಯೋಜನೆ ಕುರಿತು ನಾವು ಯಾವುದೇ ಚರ್ಚೆ ಮಾಡುವುದಿಲ್ಲ' ಎಂದು ರಕ್ಷಣಾ ಇಲಾಖೆ ವಕ್ತಾರೆ ಹೀಥರ್ ಬಾಬ್ ಸುದ್ದಿಸಂಸ್ಥೆಗೆ ತಿಳಿಸಿದರು.


from India & World News in Kannada | VK Polls http://bit.ly/2xbUHVm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...