ಹೊಸದಿಲ್ಲಿ: ಈಗಾಗಲೇ ತಾತ್ವಿಕ ಒಪ್ಪಿಗೆ ಪಡೆದಿರುವ ಯೋಜನೆಗೆ ಸಂಪೂರ್ಣ ಒಪ್ಪಿಗೆ ನೀಡುವಂತೆ ಕರ್ನಾಟಕ ಸರಕಾರ ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಗೆ ಪತ್ರ ಬರೆದ ಬೆನ್ನಲ್ಲೆ ಕ್ಯಾತೆ ತೆಗೆದಿದೆ. ಹೌದು, ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ತಮಿಳುನಾಡು ಮುಖ್ಯಮಂತ್ರಿ ಎಡಪಾಡಿ ಪಳನಿಸ್ವಾಮಿ, ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬೇಡಿ. ಈ ಯೋಜನೆಯಿಂದ ತಮಿಳುನಾಡು ಪಾಲಿನ ನೀರಿಗೆ ಧಕ್ಕೆಯಾಗುತ್ತದೆ ಎಂದಿದ್ದಾರೆ. ಮೇಕೆದಾಟು ಜಲಾಶಯ ಯೋಜನೆಯ ತಾಂತ್ರಿಕ ಕಾರ್ಯ ವರದಿಗೆ ಅನುಮತಿ ನೀಡಬೇಕೆಂದು ಕೋರಿ ಕಾವೇರಿ ನೀರಾವರಿ ನಿಗಮ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದವಾಲಣೆ ಸಚಿವಾಲಕ್ಕೆ ಪತ್ರ ಬರೆದಿತ್ತು.
from India & World News in Kannada | VK Polls http://bit.ly/2YaWXYB