ರೋಹಿತ್‌-ದ್ರಾವಿಡ್‌ಗೆ ಎದುರಾಗಿರುವ ಕಠಿಣ ಸವಾಲು ಬಹಿರಂಗಪಡಿಸಿದ ಕರೀಮ್‌!

ಹೊಸದಿಲ್ಲಿ: ವೆಸ್ಟ್ ಇಂಡೀಸ್‌ ವಿರುದ್ಧ ಓಡಿಐ ಸರಣಿಯಲ್ಲಿ ಈಗಾಗಲೇ ಸೆಟ್ಲ್‌ ಆಗಿರುವ ತಂಡವನ್ನು ಮುನ್ನಡೆಸುವುದು ನೂತನ ನಾಯಕ ಹಾಗೂ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ಗೆ ತುಂಬಾ ಕಠಿಣವಾಗಲಿದೆ ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಓಡಿಐ ಸರಣಿ ಆರಂಭಕ್ಕೂ ಮೊದಲೇ ಟೀಮ್‌ ಇಂಡಿಯಾಗೆ ಕೋವಿಡ್‌-19 ದೊಡ್ಡ ಹೊಡೆತ ನೀಡಿದೆ. ಶಿಖರ್‌ ಧವನ್, ಶ್ರೇಯಸ್‌ ಅಯ್ಯರ್ ಹಾಗೂ ಋತುರಾಜ್ ಗಾಯಕ್ವಾಡ್‌ಗೆ ಕೋವಿಡ್‌-19 ಪಾಸಿಟಿವ್‌ ಬಂದಿದೆ. ಮತ್ತೊಂದೆಡೆ ಮೊದಲನೇ ಓಡಿಐ ಪಂದ್ಯಕ್ಕೆ ಕೆ.ಎಲ್‌ ರಾಹುಲ್ ಅಲಭ್ಯರಾಗಿದ್ದಾರೆ. ಹಾಗಾಗಿ ಆರಂಭಿಕ ಒಡಿಐಗೆ ತಂಡದಲ್ಲಿ ಹಲವು ಬದಲಾವಣೆಯಾಗಲಿದೆ. ಟೀಮ್‌ ಇಂಡಿಯಾದಲ್ಲಿನ ಬೆಳವಣಿಗೆಗಳ ಬಗ್ಗೆ ಇಂಡಿಯಾ ನ್ಯೂಸ್‌ ಜೊತೆ ಚರ್ಚೆ ನಡೆಸಿದ ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ಸಬಾ ಕರೀಮ್‌, ವಿರುದ್ಧದ ಓಡಿಐ ಸರಣಿಯಲ್ಲಿ ಪ್ಲೇಯಿಂಗ್‌ ಇಲೆವೆನ್‌ ಆಯ್ಕೆ ಮಾಡುವುದು ರೋಹಿತ್ ಶರ್ಮಾ ಮತ್ತು ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ಗೆ ತಲೆ ನೋವಾಗಲಿದೆ ಎಂದು ಹೇಳಿದರು. "ಇಶಾನ್‌ ಕಿಶನ್‌ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಬೇಕಾ? ಅಥವಾ ಕೆ.ಎಲ್‌ ರಾಹುಲ್ ಬರುವವರೆಗೂ ಬೇರೆ ಯಾರಿಗಾದರೂ ಅವಕಾಶ ನೀಡಬೇಕಾ? ಎಂಬ ಬಗ್ಗೆ ರೋಹಿತ್‌ ಶರ್ಮಾ ಯೋಚಿಸಬೇಕಾಗಿದೆ. ಆದ್ದರಿಂದ ಇಲ್ಲಿ ಸಾಕಷ್ಟು ಬದಲಾವಣೆಗಳನ್ನು ನೀವಿಲ್ಲಿ ನೋಡಬಹುದು. ಸೆಟ್‌ ಆಗಿರುವ ಆಟಗಾರರೊಂದಿಗೆ ಆಡುವುದು ರೋಹಿತ್‌ ಶರ್ಮಾ ಮತ್ತು ರಾಹುಲ್‌ ದ್ರಾವಿಡ್‌ಗೆ ತುಂಬಾ ಕಠಿಣ," ಎಂದು ಕರೀಮ್ ಅಭಿಪ್ರಾಯ ವ್ಯಕ್ತಪಡಿಸಿದರು. ವೆಸ್ಟ್‌ ಇಂಡೀಸ್‌ ವಿರುದ್ದದ ಸರಣಿಯಲ್ಲಿ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹಾಗೂ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಸಾಕಷ್ಟು ಸವಾಲು ಎದುರಾಗಲಿದೆ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ. "ಎರಡನೇ ಸಂಗತಿ ಏನೆಂದರೆ ವೆಸ್ಟ್‌ ಇಂಡೀಸ್‌ ತಂಡ ಸಂಪೂರ್ಣ ಯುವ ಆಟಗಾರರೊಂದಿಗೆ ಕಣಕ್ಕೆ ಇಳಿಯುತ್ತಿದೆ. ಅವರು ಯುವ ಆಟಗಾರರ ಮೇಲೆ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಅದರಂತೆ ಈ ಎಲ್ಲಾ ಆಟಗಾರರು ಮುಕ್ತ ಮನಸಿನಿಂದ ಆಡುತ್ತಾರೆ. ಈ ಕಾರಣದಿಂದಾಗಿ ಈ ಸರಣಿಯು ರೋಹಿತ್‌ ಶರ್ಮಾ ಮತ್ತು ರಾಹುಲ್‌ ದ್ರಾವಿಡ್‌ಗೆ ಸವಾಲುದಾಯಕವಾಗಿದೆ," ಎಂದರು. ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಭರ್ಜರಿ ಗೆಲುವು ಪಡೆಯುವ ಮೂಲಕ ಕೈರೊನ್ ಪೊಲಾರ್ಡ್ ನಾಯಕತ್ವ ವೆಸ್ಟ್‌ ಇಂಡೀಸ್‌ ಸೀಮಿತ ಓವರ್‌ಗಳ ತಂಡ ಭಾರತ ಪ್ರವಾಸ ಮಾಡಿದೆ. ಹಾಗಾಗಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪ್ರವಾಸಿಗರನ್ನು ಹಗುರವಾಗಿ ಪರಿಗಣಿಸಬಾರದು. ರಾಹುಲ್‌ ದ್ರಾವಿಡ್ ಬುದ್ದಿವಂತರು: ರಾಜ್‌ಕುಮಾರ್ ಶರ್ಮಾ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಹುದ್ದೆ ಅಲಂಕರಿಸಿದ ದಿನದಿಂದ ಇಲ್ಲಿಯವರೆಗೂ ಎದುರಿಸಿರುವ ಸವಾಲುಗಳನ್ನು ವಿರಾಟ್‌ ಕೊಹ್ಲಿಯ ಬಾಲ್ಯದ ಕೋಚ್‌ ರಾಜ್‌ಕುಮಾರ್‌ ಶರ್ಮಾ ವಿವರಿಸಿದ್ದಾರೆ. "ರಾಹುಲ್‌ ದ್ರಾವಿಡ್ ಹೆಡ್‌ ಕೋಚ್‌ ಆಗಿ ಭಾರತ ತಂಡಕ್ಕೆ ಸೇರ್ಪಡೆಯಾದ ಬಳಿಕ ಅವರ ಎದುರು ಅನಿರೀಕ್ಷಿತವಾಗಿ ಕಠಿಣ ಸಂಗತಿಗಳು ಎದುರಾಗಿವೆ. ಆದರೆ ದ್ರಾವಿಡ್‌ ತುಂಬಾ ಬುದ್ದಿವಂತರಾಗಿದ್ದಾರೆ ಹಾಗೂ ಕಠಿಣ ಸಂಗತಿಗಳಿಗೆ ಹೇಗೆ ಕೌಂಟರ್‌ ನೋಡಬೇಕೆಂದು ಅವರಿಗೆ ತುಂಬಾ ಚೆನ್ನಾಗಿ ತಿಳಿದಿದೆ," ಎಂದು ಅವರು ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/7k0NRc5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...