ಕೋವಿಶೀಲ್ಡ್ ಪಡೆದ ಭಾರತೀಯರಿಗೆ ಸಿಹಿ ಸುದ್ದಿ: ಲಸಿಕೆಯನ್ನು 'ಗ್ರೀನ್ ಪಾಸ್‌ಪೋರ್ಟ್' ಪಟ್ಟಿಗೆ ಸೇರಿಸಿದ 7 ಯುರೋಪಿಯನ್ ದೇಶಗಳು

ಹೊಸದಿಲ್ಲಿ: ಭಾರತದಲ್ಲಿ ಬಳಕೆಯಾಗುತ್ತಿರುವ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ತನ್ನ ' ಪಾಸ್‌ಪೋರ್ಟ್' ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಕೇಂದ್ರ ಸರಕಾರ ಒತ್ತಾಯಿಸಿದ ಮರುದಿನವೇ ಐರೋಪ್ಯ ಒಕ್ಕೂಟದ ಕೆಲವು ದೇಶಗಳು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಲಸಿಕೆಯನ್ನು '' ಪಟ್ಟಿಗೆ ಸೇರ್ಪಡೆಗೊಳಿಸಿವೆ. ಆಕ್ಸ್‌ಫರ್ಡ್-ಆಸ್ಟ್ರಾಜೆನಿಕಾದ ಲಸಿಕೆಯನ್ನು ಪಡೆದ ಪ್ರಮಾಣಪತ್ರ ಹೊಂದಿರುವವರಿಗೆ ತಮ್ಮ ದೇಶದೊಳಗೆ ಪ್ರವೇಶ ಕಲ್ಪಿಸುವ ಅವಕಾಶ ನೀಡಿದ್ದರೂ, ಅದರ ಭಾರತೀಯ ಆವೃತ್ತಿ ಕೋವಿಶೀಲ್ಡ್‌ಅನ್ನು ದೇಶಗಳು ಅಂಗೀಕರಿಸಿರಲಿಲ್ಲ. ಈಗ ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್‌ಲ್ಯಾಂಡ್, ಐರ್ಲೆಂಡ್ ಮತ್ತು ಸ್ಪೇನ್ ಹಾಗೂ ಸ್ವಿಟ್ಜರ್ಲೆಂಡ್ ಕೋವಿಶೀಲ್ಡ್ ಲಸಿಕೆಯನ್ನು ಪ್ರಯಾಣದ ಅನುಮೋದನೆಯ ಪಟ್ಟಿಯೊಳಗೆ ಸೇರಿಸಿವೆ. ತನ್ನ ಕೋವಿಶೀಲ್ಡ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ಲಸಿಕೆ ಪಾಸ್‌ಪೋರ್ಟ್ ಅಡಿ ಸೇರ್ಪಡೆ ಮಾಡುವ ಮೂಲಕ ಭಾರತೀಯ ಪ್ರಯಾಣಿಕರಿಗೂ ಅನುಮತಿ ನೀಡದೆ ಹೋದರೆ ಯುರೋಪ್ ನಾಗರಿಕರಿಗೆ ಕಡ್ಡಾಯ ಕ್ವಾರೆಂಟೈನ್ ನೀತಿಯನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿತ್ತು. ಫೈಜರ್, ಮಾಡೆರ್ನಾ, ಆಸ್ಟ್ರಾಜೆನಿಕಾ ಮತ್ತು ಜಾನ್ಸೆನ್ ಲಸಿಕೆಗಳಿಗೆ ಮಾತ್ರವೇ ಯುರೋಪಿಯನ್ ಔಷಧೀಯ ಸಂಸ್ಥೆ ಅನುಮೋದನೆ ನೀಡಿದೆ. ಈ ಲಸಿಕೆಗಳನ್ನು ಪಡೆದವರು ಮಾತ್ರ ಲಸಿಕೆ ಪಾಸ್‌ಪೋರ್ಟ್ ಪಡೆಯುತ್ತಾರೆ ಹಾಗೂ ಸಾಂಕ್ರಾಮಿಕದ ಸಂದರ್ಭದಲ್ಲಿ ಯುರೋಪ್‌ ಒಳಭಾಗದಲ್ಲಿ ಪ್ರಯಾಣಿಸಲು ಅವಕಾಶ ಪಡೆಯುತ್ತಾರೆ. ಯುರೋಪ್‌ನ ಹೊರಭಾಗದ ಪ್ರಯಾಣಿಕರು ಐರೋಪ್ಯ ಒಕ್ಕೂಟದ ಎಲ್ಲ ಸದಸ್ಯ ದೇಶಗಳಲ್ಲಿ ನಿರ್ಬಂಧ ರಹಿತ ಮುಕ್ತ ಸಂಚಾರಕ್ಕೆ ಈ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ.


from India & World News in Kannada | VK Polls https://ift.tt/3hlbZpD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...