ರವಿ ಡಿ. ಚನ್ನಣ್ಣನವರ್‌ ಸಹೋದರನೆಂದು ಹೇಳಿ ಭಕ್ತರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಅರ್ಚಕ!

ಬೆಂಗಳೂರು: ಆಂಜನೇಯ ದೇವಸ್ಥಾನದ ಆರ್ಚಕನೊಬ್ಬ ಬಣ್ಣ ಬಣ್ಣದ ಮಾತುಗಳಾಡಿ ಭಕ್ತರನ್ನು ನಂಬಿಸಿ ಆಶ್ರಯ ಯೋಜನೆಯಡಿ ನಿವೇಶನ, ಮನೆ ಕೊಡಿಸುವುದಾಗಿ ಹೇಳಿ ಲಕ್ಷ ಲಕ್ಷ ಹಣ ಕೀಳುತ್ತಿರುವುದು ಬೆಳಕಿಗೆ ಬಂದಿದೆ. ಉತ್ತರಹಳ್ಳಿಯ ಅರ್ಚಕ ಮಹಾಬಲ ಅಲಿಯಾಸ್‌ ಮಂಜನಾಥ್‌ ಆರೋಪಿ. ಈತ ಉತ್ತರಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದ. ಐಪಿಎಸ್‌ ಅಧಿಕಾರಿ ತನ್ನ ಸಹೋದರ. ಆತನ ಪ್ರಭಾವ ಬಳಸಿಕೊಂಡು ಸರಕಾರದಿಂದ ಮನೆ ಹಾಗೂ ನಿವೇಶನ ಮಾಡಿಸಿಕೊಡಲಾಗುವುದು ಎಂದು ಭಕ್ತರಿಗೆ ಪುಸಲಾಯಿಸಿ ಹಣ ಕೀಳುತ್ತಿದ್ದ ಎಂದು ತಿಳಿದುಬಂದಿದೆ. ವಂಚನೆಗೊಳಗಾದ ಬಾಲಾಜಿಕುಮಾರ್‌ ಎಂಬುವವರು ನೀಡಿದ ದೂರಿನ ಮೇರೆಗೆ ಅರ್ಚಕ ಮಂಜುನಾಥ್‌ ಸೇರಿದಂತೆ ನಾಲ್ವರ ವಿರುದ್ಧ ಸುಬ್ರಮಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‌ 420 ಅಡಿ ಪ್ರಕರಣ ದಾಖಲಾಗುತ್ತಿದ್ದಂತೆ, ಉತ್ತರಹಳ್ಳಿಯ ಬಾಡಿಗೆ ಮನೆಯನ್ನು ಖಾಲಿ ಮಾಡಿಕೊಂಡು ಅರ್ಚಕ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ. ಮಂಜುನಾಥ್‌ ಅಲಿಯಾಸ್‌ ಮಹಾಬಲ ಮೂಲತಃ ಚನ್ನಪಟ್ಟಣದವನಾಗಿದ್ದು, ನಗರದ ಉತ್ತರಹಳ್ಳಿ ಆಂಜನೇಯ ದೇವಾಲಯದಲ್ಲಿ ಅರ್ಚಕನಾಗಿದ್ದ. ದೇವರ ಮುಂದೆ ಕೂತು ಕಷ್ಟ ಹೇಳಿಕೊಳ್ಳುವ ಭಕ್ತರನ್ನೇ ಟಾರ್ಗೆಟ್‌ ಮಾಡುತ್ತಿದ್ದ ಮಂಜುನಾಥ್‌, ಉತ್ತರಹಳ್ಳಿ ಸುಬ್ರಹ್ಮಣ್ಯಪುರ ಸುತ್ತಮುತ್ತಲಿನ ಐವತ್ತಕ್ಕೂ ಹೆಚ್ಚು ಜನರಿಂದ ಈತ ತಲಾ ಐವತ್ತು ಸಾವಿರದಿಂದ ಒಂದೂವರೆ ಲಕ್ಷದವರೆಗೂ ಹಣ ಪಡೆದಿದ್ದಾನೆ ಎನ್ನಲಾಗಿದೆ. ಸಭೆ ಸಮಾರಂಭಗಳಲ್ಲಿ ರಾಜಕಾರಣಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ಅರ್ಚಕ ಮಂಜುನಾಥ್‌ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಪ್ರಭಾವಿಗಳ ಜತೆಯಲ್ಲಿರುವ ಫೋಟೊ ತೋರಿಸಿ ಆಶ್ರಯ ಯೋಜನೆಯಲ್ಲಿ ಮನೆ ಕೊಡಿಸುತ್ತೇನೆ ಎಂದು ಜನರನ್ನು ಮರಳು ಮಾಡುತ್ತಿದ್ದ. ಜತೆಗೆ ಜನರ ಮುಂದೆ ಸುಮ್ಮನೇ ಐಪಿಎಸ್‌ ಅಧಿಕಾರಿಗಳಿಗೆ ಹಾಗೂ ಮಂತ್ರಿಗಳಿಗೆ ಫೋನ್‌ ಮಾಡಿ ಮಾತನಾಡುವ ತರಹ ನಟಿಸಿ ನಂಬಿಕೆ ಹುಟ್ಟಿಸುತ್ತಿದ್ದ. ಈ ಬಗ್ಗೆ ಸಿಐಡಿ ಎಸ್ಪಿ ರವಿ ಡಿ. ಚನ್ನಣ್ಣನವರ ಅವರನ್ನು ಕೇಳಿದರೆ, ‘ಈ ಬಗ್ಗೆ ನನಗೆ ಗೊತ್ತೇ ಇಲ್ಲ. ನನ್ನ ಜೊತೆಗಿನ ಫೋಟೋ ನಾನು ಈ ಹಿಂದೆ ಮೈಸೂರು ಎಸ್ಪಿ ಆಗಿದ್ದಾಗ ನನ್ನ ಕಚೇರಿಯಲ್ಲಿ ತೆಗೆಸಿಕೊಂಡಿರುವಂತಹದ್ದು. ಕೂಡಲೇ ಆರೋಪಿಯನ್ನು ಬಂಧಿಸುವಂತೆ ಇನ್ಸ್‌ಪೆಕ್ಟರ್‌ಗೆ ತಿಳಿಸುತ್ತೇನೆ’ ಎಂದಿದ್ದಾರೆ. ಸದ್ಯ ಆರೋಪಿಯಿಂದ ಮೋಸ ಹೋಗಿರುವ ಉತ್ತರಹಳ್ಳಿ ಸುಬ್ರಹ್ಮಣ್ಯಪುರ ಪ್ರದೇಶದ ಜನ ಪೊಲೀಸ್‌ ಠಾಣೆಯಲ್ಲಿ ಒಬ್ಬೊಬ್ಬರಾಗಿ ಬಂದು ದೂರು ನೀಡುತ್ತಿದ್ದಾರೆ. ಪೊಲೀಸರು ಶೀಘ್ರವಾಗಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.


from India & World News in Kannada | VK Polls https://ift.tt/3zCYOrx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...