ಕೊಡಗು: ಯೋಧ ಮತ್ತು ಕುಟುಂಬದವರ ಮೇಲೆ ಮಹಿಳೆಯರೆನ್ನದೆ ಗೂಂಡಾಗಳಿಂದ ಹಲ್ಲೆ!

ಮಡಿಕೇರಿ: ಕಾರು ಅಪಘಾತ ನೆಪ ಮಾಡಿ ಯೋಧ ಮತ್ತು ಆತನ ಕುಟುಂಬದ ಮೇಲೆ ಗೂಂಡಾಗಳು ಹಲ್ಲೆ ನಡೆಸಿದ ಘಟನೆ ಮಡಿಕೇರಿ ಸಮೀಪದ ಬೋಯಿಕೇರಿ ಬಳಿ ಭಾನುವಾರ ರಾತ್ರಿ ನಡೆದಿದೆ. ರಜೆಯಲ್ಲಿ ಊರಿಗೆ ಬಂದಿದ್ದ ಗಾಳಿಬೀಡು ಮೂಲದ ಯೋಧ ಸಂತೋಷ್‌ ಕುಶಾಲನಗರದಲ್ಲಿನ ಬಂಧುಗಳ ಮನೆಗೆ ಭೇಟಿ ನೀಡಿ ಮಡಿಕೇರಿಗೆ ಮರಳುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಕಾರು ಅಪಘಾತವನ್ನು ನೆಪ ಮಾಡಿಕೊಂಡು ಕೆಲವರು 20ಕ್ಕೂ ಹೆಚ್ಚು ಗೂಂಡಾಗಳನ್ನು ಸ್ಥಳಕ್ಕೆ ಕರೆಯಿಸಿ ಯೋಧ ಸಂತೋಷ್‌, ಪತ್ನಿ ಯೋಗಿತಾ, ತಂದೆ ಪೊನ್ನಪ್ಪ, ತಾಯಿ ರಾಧಾ ಹಾಗೂ ಸಹೋದರ ಅಶೋಕ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಯೋಗಿತಾ ಅವರ ತಾಳಿ ಸೇರಿದಂತೆ ಚಿನ್ನಾಭರಣವನ್ನೂ ದೋಚಲಾಗಿದೆ ಎಂದು ದೂರು ನೀಡಲಾಗಿದೆ. ಗಾಯಾಳುಗಳನ್ನು ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಸೋಮವಾರ ಆಸ್ಪತ್ರೆಗೆ ಪ್ರತ್ಯೇಕವಾಗಿ ಭೇಟಿ ನೀಡಿದ್ದ ಎಂಎಲ್‌ಸಿ ಸುನಿಲ್‌ ಸುಬ್ರಹ್ಮಣಿ ಮತ್ತು ವೀಣಾ ಅಚ್ಚಯ್ಯ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.


from India & World News in Kannada | VK Polls https://ift.tt/2UQqeeR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...