IND vs SL: 2ನೇ ಟಿ20 ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್‌ xi, ಮುಖಾಮುಖಿ ದಾಖಲೆ, ಪಿಚ್‌ ರಿಪೋರ್ಟ್‌ ಇಂತಿದೆ..

ಕೊಲಂಬೊ: ಭಾರತ ವಿರುದ್ಧ ಓಡಿಐ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಕಠಿಣ ಪೈಪೋಟಿ ನೀಡಿದ್ದ ತಂಡ, ಕಳೆದ ಭಾನುವಾರ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿತ್ತು. ಈ ಕಾರಣದಿಂದ 38 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿತ್ತು. ಈಗಾಗಲೇ 0-1 ಹಿನ್ನಡೆ ಅನುಭವಿಸಿರುವ ಶ್ರೀಲಂಕಾ ಟಿ20 ಸರಣಿ ಉಳಿಸಿಕೊಳ್ಳಬೇಕಾದರೆ, ಇಂದಿನ (ಮಂಗಳವಾರ) ಪಂದ್ಯದಲ್ಲಿ ಗೆಲುವು ಅನಿವಾರ್ಯ. ಕಳೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡಕ್ಕೆ ದುಷ್ಮಾಂಥ ಚಮೀರಾ, ಪೃಥ್ವಿ ಶಾ ಅವರನ್ನು ಗೋಲ್ಡನ್‌ ಡಕೌಟ್‌ ಮಾಡುವ ಮೂಲಕ ಶ್ರೀಲಂಕಕ್ಕೆ ಆರಂಭದಲ್ಲಿಯೇ ಮುನ್ನಡೆ ತಂದುಕೊಟ್ಟಿದ್ದರು. ಆದರೆ, ನಾಯಕ ಶಿಖರ್‌ ಧವನ್‌(46) ಹಾಗೂ ಸೂರ್ಯಕುಮಾರ್‌ ಯಾದವ್‌(50) 62 ರನ್‌ ಜೊತೆಯಾಟವಾಡುವ ಮೂಲಕ ಭಾರತವನ್ನು ಅಪಾಯದಿಂದ ಪಾರು ಮಾಡಿದ್ದರು. ಆ ಮೂಲಕ ಭಾರತ 164 ರನ್‌ ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಶ್ರೀಲಂಕಾ ತಂಡ, ಭುವನೇಶ್ವರ್ ಕುಮಾರ್‌ (22ಕ್ಕೆ 4) ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 126 ರನ್‌ಗಳಿಗೆ ಆಲೌಟ್‌ ಆಯಿತು. ಆ ಮೂಲಕ 38 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಆತಿಥೇಯರ ಪರ ಚರಿತಾ ಅಸಲಂಕಾ 44 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳ ಭಾರತದ ಬೌಲರ್‌ಗಳ ಎದುರು ಪುಟಿದೇಳಲೇ ಇಲ್ಲ. ಇಂದು(ಜುಲೈ 27) ಭಾರತ ಹಾಗೂ ಶ್ರೀಲಂಕಾ ತಂಡಗಳು ಕೊಲಂಬೊದ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಶಿಖರ್‌ ಧವನ್‌ ನಾಯಕತ್ವದ , ಇಂದಿನ ಪಂದ್ಯ ಗೆದ್ದುಕೊಂಡು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟಿ20 ಸರಣಿ ವಶಪಡಿಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಮತ್ತೊಂದೆಡೆ ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿರುವ ಶ್ರೀಲಂಕಾ ತಂಡ, ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಅಲ್ಲದೆ, ಚರಿತಾ ಅಸಲಂಕಾ ಸೇರಿದಂತೆ ಮೂವರು ಆಟಗಾರರು ಗಾಯಕ್ಕೆ ತುತ್ತಾಗಿದ್ದು, ಇಂದಿನ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆಂದು ವರದಿಗಳು ತಿಳಿಸಿವೆ. ಈಗಾಗಲೇ ಮೊದಲನೇ ಪಂದ್ಯ ಸೋತಿರುವ ಶ್ರೀಲಂಕಾ ತಂಡಕ್ಕೆ ಗಾಯದ ಸಮಸ್ಯೆ ಭಾರಿ ಹಿನ್ನಡೆಯನ್ನು ತಂದೊಡ್ಡಿದೆ. ಪಿಚ್‌ ವರದಿ: ಕಳೆದ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಇಲ್ಲಿನ ಆರ್‌ ಪ್ರೇಮದಾಸ ಕ್ರೀಡಾಂಗಣದ ಪಿಚ್‌ ನಿಧಾನಗತಿಯಿಂದ ಕೂಡಿದ್ದು, ಸ್ಪಿನ್ನರ್‌ಗಳಿಗೆ ನೆರವಾಗಿತ್ತು. ಆದರೆ, ಮೊದಲನೇ ಟಿ20 ಪಂದ್ಯದಲ್ಲಿ ಸ್ಪಿನ್ನರ್‌ಗಳ ಜೊತೆಗೆ ವೇಗಿಗಳಿಗೂ ಇಲ್ಲಿನ ವಿಕೆಟ್‌ ನೆರವಾಗಿತ್ತು. ಉರುಳಿದ್ದ ಒಟ್ಟು 15 ವಿಕೆಟ್‌ಗಳಲ್ಲಿ ವೇಗಿಗಳು 10 ವಿಕೆಟ್‌ ಕಬಳಿಸಿದ್ದರು. ಹಾಗಾಗಿ, ಇದೇ ಪರಿಸ್ಥಿತಿ ಎರಡನೇ ಪಂದ್ಯದಲ್ಲಿಯೂ ಮುಂದುವರಿಯುವ ಸಾಧ್ಯತೆ ಇದೆ. ಅಂದಹಾಗೆ, ಮಂಗಳವಾರ ಸಂಜೆ ಮಳೆ ಬೀಳುವ ಸಾಧ್ಯತೆ ಇದೆ. ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್‌ ಭಾರತ: ಶಿಖರ್ ಧವನ್‌ (ನಾಯಕ), ಪೃಥ್ವಿ ಶಾ, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ಇಶಾನ್‌ ಕಿಶನ್‌ (ವಿ.ಕೀ), ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ದೀಪಕ್‌ ಚಹರ್‌, ಭುವನೇಶ್ವರ್‌ ಕುಮಾರ್‌, ಯುಜ್ವೇಂದ್ರ ಚಹಲ್‌, ವರುಣ್‌ ಚಕ್ರವರ್ತಿ ಶ್ರೀಲಂಕಾ: ಆವಿಷ್ಕಾ ಫೆರ್ನಾಂಡೊ, ಮಿನೋದ್‌ ಭನುಕಾ (ವಿ.ಕೀ), ಧನಂಜಯ್‌ ಡಿ ಸಿಲ್ವಾ, ಚರಿತಾ ಅಸಲಂಕಾ, ವಾನಿಂದು ಹಸರಂಗ, ದಸೂನ್ ಶನಕ(ನಾಯಕ), ಚಮಿಕಾ ಕರುಣರತ್ನೆ, ಇಸುರು ಉದಾನ, ಲಹಿರು ಕುಮಾರ, ಅಕಿಲಾ ಧನಂಜಯ, ದುಷ್ಮಾಂಥ ಚಮೀರಾ ಮುಖಾಮುಖಿ ದಾಖಲೆ ಒಟ್ಟು ಆಡಿರುವ ಪಂದ್ಯಗಳು: 20 ಶ್ರೀಲಂಕಕ್ಕೆ ಗೆಲುವು: 5 ಭಾರತಕ್ಕೆ ಗೆಲುವು: 14 ಟೈ: 0 ಫಲಿತಾಂಶವಿಲ್ಲ: 1 ಪಂದ್ಯದ ವಿವರ ಎರಡನೇ ಟಿ20 ಪಂದ್ಯ ಮುಖಾಮುಖಿ: ದಿನಾಂಕ, ಸಮಯ: ಜು. 27, ಮಂಗಳವಾರ, ರಾತ್ರಿ 8: 00 ಗಂಟೆಗೆ ಸ್ಥಳ: ಆರ್‌ ಪ್ರೇಮದಾಸ ಕ್ರೀಡಾಂಗಣ, ಕೊಲಂಬೊ ನೇರ ಪ್ರಸಾರ: ಸೋನಿ ನೆಟ್‌ವರ್ಕ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3BMuZXy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...