ಗೋಕಾಕ (): ಜೋಕಾಲಿ ಆಟದ ವಿಷಯವಾಗಿ ಮೂಡಿದ ವೈಷಮ್ಯದಲ್ಲಿ ಯುವಕನೋರ್ವನ ಮಾಡಿದ ಪ್ರಕರಣದ ಏಳು ಜನರಿಗೆ 12ನೇ ಅಧಿಕ ಹಾಗೂ ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಲ್ಲಿಕಾರ್ಜುನ ಬಾಳಪ್ಪ ಭಜಂತ್ರಿ ಅಲಿಯಾಸ್ ಬುಂಯಿ ಮಲಿಕ್ಯಾ (27), ಅರ್ಜುನ ಗಣಪತಿ ಚಿಕ್ಕೋರ್ಡೆ (24), ಕುಮಾರ ತಿಮ್ಮು ಸನದಿ (22), ಪ್ರಕಾಶ ಹನಮಂತ ಖಾನಪ್ಪನವರ ಅಲಿಯಾಸ್ ಕೆಟಾ ಪರಸು, ಶ್ರೀಧರ ಬಾಳಪ್ಪ ಕಬ್ಬೂರ (29), ವಿಜಯ ಜಗದೀಶ ಶೀಲವಂತ (21) ಹಾಗೂ ಪರಶುರಾಮ ರಾಮಸಿದ್ಧ ಶಿವನಪ್ಪಗೋಳ (19) ಶಿಕ್ಷೆಗೆ ಒಳಗಾದವರು. ಪ್ರಕರಣದ ಹಿನ್ನೆಲೆ: 2017ರ ಸೆಪ್ಟೆಂಬರ್ ತಿಂಗಳಲ್ಲಿ ನಗರದ ಸಿದ್ದೇಶ್ವರ ಗುಡಿಯ ಹತ್ತಿರ ಜೋಕಾಲಿ ಆಟದ ಸಲುವಾಗಿ ಜಗಳವಾಗಿತ್ತು. ಈ ವೇಳೆ ರೋಹಿತ್ ಪಾಟೀಲ ಎಂಬುವವರ ಕಣ್ಣಿಗೆ ಖಾರದ ಪುಡಿ ಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಅಲ್ಲದೆ ರಾಹುಲ್ ಎಂಟಗೌಡರ್ ಎಂಬುವವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ಬುಧವಾರ ತೀರ್ಪು ಪ್ರಕಟಿಸಿದೆ. ಸರಕಾರದ ಪರವಾಗಿ ರಾಜಮಹೇಂದ್ರ ಕಿರಣಗಿ ವಾದ ಮಂಡಿಸಿದ್ದರು.
from India & World News in Kannada | VK Polls https://ift.tt/3l5yYZe