130 ಮಹಿಳೆಯರನ್ನು ಕೊಂದ ಆರೋಪ ಹೊತ್ತಿದ್ದ ಕುಖ್ಯಾತ 'ದಿ ಡೇಟಿಂಗ್‌ ಗೇಮ್‌ ಕಿಲ್ಲರ್‌' ಸಾವು!

ವಾಷಿಂಗ್ಟನ್‌: ಸುಮಾರು 130 ಮಹಿಳೆಯರನ್ನು ಕೊಲೆಗೈದ ಆರೋಪ ಹೊತ್ತಿದ್ದ 'ದಿ ಡೇಟಿಂಗ್‌ ಗೇಮ್‌ ಕಿಲ್ಲರ್‌' ಎಂದೇ ಕುಖ್ಯಾತಿ ಪಡೆದಿದ್ದ (77) ಕೊನೆಯುಸಿರೆಳೆದಿದ್ದಾನೆ. ಹಲವು ಕೊಲೆ ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಈತ ಕ್ಯಾಲಿಫೋರ್ನಿಯಾದ ಸ್ಯಾನ್‌ ಜೋವಾಕ್ವಿನ್‌ ವ್ಯಾಲಿಯ ಆಸ್ಪತ್ರೆಯೊಂದರಲ್ಲಿ ಶನಿವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈತ ಒಟ್ಟು 130 ಕೊಲೆ ಮಾಡಿದ್ದಾನೆ ಎನ್ನುವುದು ಪೊಲೀಸರ ಆರೋಪ. ಆದರೆ, ಐದು ಕೊಲೆ ಪ್ರಕರಣಗಳಲ್ಲಿ ಮಾತ್ರ ಅಪರಾಧಿ ಎಂದು ಸಾಬೀತಾಗಿತ್ತು. ಕ್ಯಾಲಿಫೋರ್ನಿಯಾದಲ್ಲಿ 1977ರಿಂದ 1979ರ ಅವಧಿಯಲ್ಲಿ12 ವರ್ಷದ ಬಾಲಕಿ ಸೇರಿ ಐವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 2010ರಲ್ಲಿ ಅಲ್ಕಾಲಗೆ ಮರಣ ದಂಡನೆ ವಿಧಿಸಿತ್ತು. ಅಮೆರಿಕದಲ್ಲಿ 1978ರಲ್ಲಿ ನಡೆಯುತ್ತಿದ್ದ 'ದಿ ಡೇಟಿಂಗ್‌ ಗೇಮ್‌' ಶೋನಲ್ಲಿ ಈತ ಭಾಗವಹಿಸಿದ್ದ. ಇದಾದ ಬಳಿಕ ಸರಣಿ ಕೊಲೆಗಳಲ್ಲಿ ಅಲ್ಕಾಲ ವಿರುದ್ಧ ಪ್ರಕರಣ ದಾಖಲಾದ ಕಾರಣ ಈತ 'ದಿ ಡೇಟಿಂಗ್‌ ಗೇಮ್‌ ಕಿಲ್ಲರ್‌' ಎಂದೇ ಕುಖ್ಯಾತನಾದ. ಸ್ಯಾನ್‌ ಫ್ರಾನ್ಸಿಸ್ಕೋದ ಸ್ಯಾನ್‌ ಕ್ವೆಂಟಿನ್‌ ಜೈಲಿನಲ್ಲಿ ಹಲವು ವರ್ಷ ಕಳೆದ ಅಲ್ಕಾಲನನ್ನು ಬಳಿಕ ವೈದ್ಯಕೀಯ ಚಿಕಿತ್ಸೆಗಾಗಿ ಕಾರ್ಕೋರನ್‌ ಜೈಲಿಗೆ ಸ್ಥಳಾಂತರಿಸಲಾಗಿತ್ತು. 'ಡೇಟಿಂಗ್‌ ಗೇಮ್‌ ಕಿಲ್ಲರ್‌' ಎಂಬ ಸಿನಿಮಾ ಸಹ ಬಿಡುಗಡೆ ಮಾಡಲಾಗಿದೆ. ಸತ್ತವರ ಕಿವಿಯೋಲೆ ಬಿಚ್ಚುತ್ತಿದ್ದ ಅಲ್ಕಾಲನನ್ನು 'ಸೈಕೋ ಕಿಲ್ಲರ್‌' ಎಂದು ಸಹ ಕರೆಯಲಾಗುತ್ತದೆ. ಮಹಿಳೆಯರು ಹಾಗೂ ಹುಡುಗಿಯರನ್ನೇ ಗುರಿಯಾಗಿಸಿ ಕೊಲೆ ಮಾಡುತ್ತಿದ್ದ ಈತ ಅವರ ಕಿವಿಯೋಲೆ ಬಿಚ್ಚಿ, ಸಂಗ್ರಹಿಸುತ್ತಿದ್ದ. ಈತನ ಬಳಿ ಸಿಕ್ಕ ಕಿವಿಯೋಲೆಗಳು ಸಹ ಪೊಲೀಸರ ತನಿಖೆಗೆ ನೆರವಾಗಿವೆ. ಹಲವು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಸಹ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಬಂಧಿತನಾಗಿ, ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಹಳೆ ಚಾಳಿ ಮುಂದುವರಿಸುತ್ತಿದ್ದ.


from India & World News in Kannada | VK Polls https://ift.tt/3l7BDBw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...