ದೇಶದಲ್ಲಿ ಕೊರೊನಾ 3ನೇ ಅಲೆ ಆರಂಭ..? ಕೇರಳದ ಪಾಲು ಶೇ.50 ರಷ್ಟು..!

: ದೇಶದಲ್ಲಿ ಶೀಘ್ರವೇ ಮೂರನೇ ಅಲೆ ಉಂಟಾಗಲಿದೆ ಎಂದು ತಜ್ಞರು ಎಚ್ಚರಿಸಿದ ಬೆನ್ನಲ್ಲೇ, ನಿತ್ಯ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಾಗಿದ್ದು, 24 ಗಂಟೆಯಲ್ಲಿ 43,654 ಹೊಸ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಇದರಲ್ಲಿ ಶೇ.50ರಷ್ಟು ಪ್ರಕರಣ ಕೇರಳದಲ್ಲಿಯೇ ವರದಿಯಾಗಿವೆ. ಮಂಗಳವಾರ 29,689 ಮಂದಿಗೆ ಸೋಂಕು ತಗುಲಿತ್ತು. ಈ ದಿಢೀರ್‌ ಏರಿಕೆಯಿಂದಾಗಿ ದೇಶದಲ್ಲಿ ಮೂರನೇ ಅಲೆ ಆರಂಭವಾಗಿದೆಯೇ ಎಂಬ ಭೀತಿ ಸೃಷ್ಟಿಯಾಗಿದೆ. ಒಂದೇ ದಿನದಲ್ಲಿ ಕೇರಳದಲ್ಲಿ 22,159 ಮಂದಿಗೆ ಸೋಂಕು ದೃಢಪಟ್ಟರೆ, ಮಹಾರಾಷ್ಟ್ರದಲ್ಲಿ 6,258, ಮಿಜೋರಾಂ 1,845, ತಮಿಳುನಾಡು 1,767 ಹಾಗೂ ಒಡಿಶಾದಲ್ಲಿ 1,629 ಜನಕ್ಕೆ ಸೋಂಕು ತಗುಲಿದೆ. ಒಟ್ಟು ಸೋಂಕಿತರಲ್ಲಿ ಈ ಐದು ರಾಜ್ಯಗಳಿಂದಲೇ ಶೇ.77ರಷ್ಟು ಪ್ರಕರಣ ವರದಿಯಾಗಿವೆ. ಇದೇ ಅವಧಿಯಲ್ಲಿ ದೇಶಾದ್ಯಂತ 640 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 254 ಮತ್ತು ಕೇರಳದಲ್ಲಿ 156 ಮಂದಿ ಬಲಿಯಾಗಿದ್ದಾರೆ. ದೇಶದ 12 ರಾಜ್ಯಗಳ 54 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕೆ ಏರಿಕೆಯಾಗಿರುವ ಕುರಿತು ಕೇಂದ್ರ ಸರಕಾರ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ನಿತ್ಯ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇನ್ನು ಕೇರಳದಲ್ಲಿಇತ್ತೀಚೆಗೆ ಬಕ್ರೀದ್‌ ಹಿನ್ನೆಲೆಯಲ್ಲಿ ಕೊರೊನಾ ನಿಯಮ ಸಡಿಲಗೊಳಿಸಿದ ಕಾರಣ ಸೋಂಕು ಹೆಚ್ಚಾಗಿದೆ ಎನ್ನಲಾಗುತ್ತಿದೆ. ಕೇರಳದಿಂದಲೇ ಮೂರನೇ ಅಲೆ ಆರಂಭವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 2ನೇ ಡೋಸ್‌ ಪಡೆದ 65% ಅರ್ಹ ಜನ: ದೇಶದಲ್ಲಿ ಶೇ.65.5ರಷ್ಟು ಅರ್ಹ ಫಲಾನುಭವಿಗಳು ಕೊರೊನಾ ನಿರೋಧಕ ಎರಡನೇ ಡೋಸ್‌ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವೆ ಭಾರತಿ ಪವಾರ್‌ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. 'ಜುಲೈ 25ರ ವೇಳೆಗೆ 34.04 ಕೋಟಿ ಮಂದಿ ಮೊದಲ ಡೋಸ್‌ ಪಡೆದಿದ್ದು, ಶೇ.65.5ರಷ್ಟು ಅರ್ಹರು ಈಗಾಗಲೇ ಎರಡನೇ ಡೋಸ್‌ ಪಡೆದಿದ್ದಾರೆ' ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/2V0QCCT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...