ಕಾಬೂಲ್: ಅಫ್ಘಾನಿಸ್ತಾನದ ನೆಲೆಯಲ್ಲಿ ಎರಡು ದಶಕಗಳ ಕಾಲ ಇದ್ದ ಅಮೆರಿಕದ ಪಡೆಗಳು, ಅಲ್ಲಿಂದ ಸಂಪೂರ್ಣ ನಿರ್ಗಮಿಸುತ್ತಿದ್ದಂತೆಯೇ ಚಟುವಟಿಕೆ ತೀವ್ರಗೊಂಡಿದ್ದು, ಅನೇಕ ಪ್ರದೇಶಗಳನ್ನು ಮರಳಿ ತನ್ನ ಹಿಡಿತಕ್ಕೆ ಪಡೆದುಕೊಂಡಿದೆ. ಇದರಿಂದ ಆಫ್ಘನ್ ನೆಲವು ಇತರೆ ದೇಶಗಳ ಮೇಲಿನ ಉಗ್ರ ಚಟುವಟಿಕೆಗಳಿಗೆ ಬಳಕೆಯಾಗುವ ಬಗ್ಗೆ ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಕಳವಳ ಉಂಟಾಗಿದೆ. ಈ ನಡುವೆ ತಾಲಿಬಾನ್ ಪ್ರತಿನಿಧಿಗಳ ನಿಯೋಗವೊಂದು ವಿದೇಶಾಂಗ ಸಚಿವ ಅವರನ್ನು ಭೇಟಿ ಮಾಡಿದೆ. ಉತ್ತರ ಚೀನಾದ ಟಿಯಾಂಜಿನ್ ನಗರಕ್ಕೆ ಎರಡು ದಿನಗಳ ಭೇಟಿಗೆ ತೆರಳಿರುವ ಈ ತಂಡ, ಶಾಂತಿ ಪ್ರಕ್ರಿಯೆ ಮತ್ತು ಭದ್ರತಾ ವಿಚಾರಗಳ ಬಗ್ಗೆ ಚರ್ಚೆ ನಡೆಸಿದವು ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. ಆಫ್ಘನ್ ನೆಲೆಯಿಂದ ಅಮೆರಿಕನ್ ಪಡೆಗಳು ಹಿಂದಕ್ಕೆ ಹೋಗುವ ಸೂಚನೆ ಸಿಕ್ಕಿದ ಹಿನ್ನೆಲೆಯಲ್ಲಿ ತಾಲಿಬಾನ್ ಉಗ್ರರನ್ನು ಸಂಪರ್ಕಿಸಿ ಅವರೊಂದಿಗೆ ಮಾತುಕತೆಗಳನ್ನು ನಡೆಸುವ ಪ್ರಯತ್ನವನ್ನು ಭಾರತ ಮಾಡಿತ್ತು. ಇದಕ್ಕಾಗಿಯೇ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಕತಾರ್ಗೆ ತೆರಳಿ ಅಲ್ಲಿ ತಾಲಿಬಾನ್ ಪ್ರತಿನಿಧಿಗಳ ಜತೆ ಸಭೆಗಳನ್ನು ನಡೆಸಿದ್ದರು. 'ಅಫ್ಘಾನಿಸ್ತಾನದ ಶಾಂತಿಯುತ ಪುನರುಜ್ಜೀವನ ಮತ್ತು ಮರು ನಿರ್ಮಾಣದ ಪ್ರಕ್ರಿಯೆಯಲ್ಲಿ ತಾಲಿಬಾನ್ ಪ್ರಮುಖ ಪಾತ್ರವಹಿಸುವ ಬಗ್ಗೆ ನಿರೀಕ್ಷೆಯಿದೆ. ಚೀನಾದ ರಾಷ್ಟ್ರೀಯ ಭದ್ರತೆಗೆ ನೇರ ಬೆದರಿಕೆಯಾಗಿರುವ ಪೂರ್ವ ಟರ್ಕಿಸ್ತಾನ್ ಇಸ್ಲಾಮಿಕ್ ಚಳವಳಿಯನ್ನು ತಾಲಿಬಾನ್ ಸಂಪೂರ್ಣವಾಗಿ ಹತ್ತಿಕ್ಕುವ ನಿರೀಕ್ಷೆಯಿದೆ' ಎಂದು ಈ ಭೇಟಿ ವೇಳೆ ವಾಂಗ್ ಯಿ ಹೇಳಿದರು ಎಂದು ವರದಿಯಾಗಿದೆ. ಚೀನಾ ವಿರುದ್ಧವಾಗಿ ಆಫ್ಘನ್ ನೆಲವನ್ನು ಬಳಸಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ನಿಯೋಗವು ಚೀನಾಕ್ಕೆ ಭರವಸೆ ನೀಡಿದೆ. ಆಫ್ಘನ್ನರಿಗೆ ತಮ್ಮ ನೆರವನ್ನು ಮುಂದುವರಿಸುವ ಬಗ್ಗೆ ಚೀನಾ ಕೂಡ ಭರವಸೆ ಕೊಟ್ಟಿದೆ. ಅಫ್ಘಾನಿಸ್ತಾನದ ವಿಚಾರಗಳಲ್ಲಿ ತಾನು ಮಧ್ಯಪ್ರವೇಶ ಮಾಡುವುದಿಲ್ಲ. ಆದರೆ ದೇಶದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಶಾಂತಿ ಮರುಸ್ಥಾಪನೆಗೆ ಸಹಾಯ ಮಾಡುವುದಾಗಿ ತಿಳಿಸಿದೆ ಎಂದು ತಾಲಿಬಾನ್ ವಕ್ತಾರ ಮೊಹಮ್ಮದ್ ನಯೀಮ್ ಹೇಳಿದ್ದಾರೆ.
from India & World News in Kannada | VK Polls https://ift.tt/2URgVvl