Tokyo Olympics: ತಾಯ್ ತ್ಸು-ಯಿಂಗ್ ವಿರುದ್ಧ ಪಿವಿ ಸಿಂಧೂಗೆ ಸೋಲು!

ಟೋಕಿಯೋ (ಜಪಾನ್‌): ಟೋಕಿಯೋ ಒಲಿಂಪಿಕ್ಸ್‌ ಮಹಿಳೆಯರ ಸಿಂಗಲ್ಸ್‌ ಸೆಮಿಫೈನಲ್‌ ಹಣಾಹಣಿಯಲ್ಲಿ ಭಾರತದ , ಚೈನೀಸ್‌ ತೈಪೆಯ ತಾಯ್‌ ತ್ಸು-ಯಿಂಗ್‌ ವಿರುದ್ಧ 2-0 ಅಂತರದಲ್ಲಿ ಸೋಲುವ ಮೂಲಕ ಫೈನಲ್‌ ತಲುಪುವಲ್ಲಿ ವಿಫಲರಾಗಿದ್ದಾರೆ. ಆ ಮೂಲಕ ಭಾರತದ ಆಟಗಾರ್ತಿಯ ಚಿನ್ನದ ಪದಕದ ಕನಸು ಭಗ್ನವಾಯಿತು. ಶನಿವಾರ ನಡೆದ ಪಂದ್ಯದ ಮೊದಲ ಗೇಮ್‌ನಲ್ಲಿ ಅತ್ಯುತ್ತಮ ಹೋರಾಟ ನಡೆಸಿದ್ದ ಪಿವಿ ಸಿಂಧೂ, ಎರಡನೇ ಗೇಮ್‌ನಲ್ಲಿ ನೀರಸ ಪ್ರದರ್ಶನ ತೋರಿದರು. ಇದರ ಪರಿಣಾಮ ತಾಯ್‌ ತ್ಸು-ಯಿಂಗ್‌ ವಿರುದ್ಧ 18-21 ಹಾಗೂ 11-21 ಅಂತರದ ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಕಳೆದ ಪಂದ್ಯಗಳ ಗೆಲುವಿನ ವಿಶ್ವಾಸದಲ್ಲಿ ಇಂದು ಕೋರ್ಟ್‌ಗೆ ಆಗಮಿಸಿದ್ದ ಪಿವಿ ಸಿಂಧೂ, ಮೊದಲ ಗೇಮ್‌ ಆರಂಭದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಅದರಂತೆ 5-2 ಮುನ್ನಡೆ ಗಳಿಸಿದ್ದರು. ನಂತರ ಮೊದಲ ಗೇಮ್‌ ವಿರಾಮದ ಹೊತ್ತಿಗೆ ಕೂಡ ಭಾರತೀಯ ಆಟಗಾರ್ತಿ 11-8 ಮುನ್ನಡೆ ಪಡೆಯುವ ಮೂಲಕ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಆದರೆ, ಅಂತಿಮ ಹಂತದಲ್ಲಿ ಆಕ್ರಮಣಕಾರಿ ಆಟವಾಡಿದ ತಾಯ್‌ ತ್ಸು-ಯಿಂಗ್‌, 21-18 ಅಂತರದಲ್ಲಿ ಪಿವಿ ಸಿಂಧೂಗೆ ಆಘಾತ ನೀಡಿದರು. ನಂತರ ಎರಡನೇ ಗೇಮ್‌ನಲ್ಲಿ ಕಣಕ್ಕೆ ಇಳಿದ ಪಿವಿ ಸಿಂಧೂ ಹಾಗೂ ತಾಯ್‌ ತ್ಸು-ಯಿಂಗ್‌ ಆರಂಭದಲ್ಲಿ ಸಮಬಲದ ಹೋರಾಟ ನಡೆಸಿದ್ದರು. ಆ ಮೂಲಕ 4-4 ಸಮಬಲ ಕಾಯ್ದುಕೊಂಡಿದ್ದರು. ಆದರೆ, ತಾನು ಮಾಡಿದ ತಪ್ಪುಗಳಿಂದ ಪಿವಿ ಸಿಂಧೂ, ಎರಡನೇ ಗೇಮ್‌ ವಿರಾಮದ ಹೊತ್ತಿಗೆ ಚೈನೀಸ್‌ ತೈಪೆ ಆಟಗಾರ್ತಿಯ ವಿರುದ್ಧ 7-11 ಅಂತರದಲ್ಲಿ ಹಿನ್ನಡೆ ಅನುಭವಿಸಿದರು. ವಿರಾಮದ ಬಳಿಕ ಕೋರ್ಟ್‌ಗೆ ಮರಳಿದ , ಆಡಿದ ಆರರಲ್ಲಿ ಐದು ಅಂಕಗಳನ್ನು ಕಲೆ ಹಾಕಿ 16-8 ಅಂತರದಲ್ಲಿ ಎಂಟು ಅಂಕಗಳ ಮುನ್ನಡೆ ಗಳಿಸಿದರು. ಆದರೆ, ಚೈನೀಸ್‌ ತೈಪೆ ಆಟಗಾರ್ತಿಯ ವಿರುದ್ಧ ಕಮ್‌ಬ್ಯಾಕ್‌ ಮಾಡುವಲ್ಲಿ ವಿಫಲರಾದ ಸಿಂಧೂ, ಅಂತಿಮವಾಗಿ 11 ಅಂಕಗಳಿಗೆ ಸೀಮಿತರಾದರು. ಅಂತಿಮವಾಗಿ 11-21 ಅಂತರದಲ್ಲಿ ಸಿಂಧೂ ಸೋಲು ಅನುಭವಿಸಿದರು. ಪಂದ್ಯದ ಸೋಲಿನೊಂದಿಗೆ ಪಿವಿ ಸಿಂಧೂ ಅವರ ಚೊಚ್ಚಲ ಚಿನ್ನದ ಪದಕದ ಕನಸು ಭಗ್ನವಾಯಿತು. ಇನ್ನು ಕಂಚಿನ ಪದಕದ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ, ಚೀನಾದ ಹಿ ಬಿಂಗ್ ಜಿಯಾವ್ ವಿರುದ್ಧ ಸೆಣಸಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3C3Dc9E

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...