ಭಾರತ ವಿರುದ್ಧ ಎರಡನೇ ಟಿ20 ಪಂದ್ಯಕ್ಕೂ ಮೊದಲೇ ಶ್ರೀಲಂಕಕ್ಕೆ ಆಘಾತ!

ಕೊಲಂಬೊ: ಭಾರತ ವಿರುದ್ಧ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿರುವ ತಂಡಕ್ಕೆ ಇದೀಗ ಎರಡನೇ ಪಂದ್ಯಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಸೇರಿದಂತೆ ಮೂವರು ಆಟಗಾರರು ಗಾಯಕ್ಕೆ ತುತ್ತಾಗಿದ್ದು, ಇಂದು(ಮಂಗಳವಾರ) ನಡೆಯುವ ಎರಡನೇ ಪಂದ್ಯದಿಂದ ಹೊರ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಭಾರತ ವಿರುದ್ಧ 1-2 ಅಂತರದಲ್ಲಿ ಓಡಿಐ ಸರಣಿಯಲ್ಲಿ ಸೋಲು ಅನುಭವಿಸಿದ್ದ ಶ್ರೀಲಂಕಾ ತಂಡ, ಕಳೆದ ಭಾನುವಾರ ಮೊದಲನೇ ಟಿ20 ಪಂದ್ಯದಲ್ಲಿಯೂ 38 ರನ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 0-1 ಹಿನ್ನಡೆಯನ್ನು ಅನುಭವಿಸಿದೆ. ಇದೀಗ ಆಟಗಾರರ ಗಾಯದಿಂದಾಗಿ ಎರಡನೇ ಪಂದ್ಯಕ್ಕೂ ಮುನ್ನ ಆತಿಥೇಯರಿಗೆ ಭಾರಿ ಹಿನ್ನಡೆಯಾಗಿದೆ. ಇದಕ್ಕೂ ಮುನ್ನ ಭುನುಕ ರಾಜಪಕ್ಸ ಅವರು ಬೆರಳು ಗಾಯದಿಂದಾಗಿ ಟಿ20 ಸರಣಿಯಿಂದ ಹೊರ ನಡೆದಿದ್ದರು. ಇವರು ಮೂರನೇ ಓಡಿಐ ಪಂದ್ಯದಲ್ಲಿ 65 ರನ್‌ ಗಳಿಸಿದ್ದರು. ಇವರ ಅರ್ಧ ಶತಕದ ನೆರವಿನಿಂದ ಶ್ರೀಲಂಕಾ ಮೂರನೇ ಓಡಿಐ ಪಂದ್ಯದಲ್ಲಿ ಗೆಲುವು ಪಡೆದಿತ್ತು. ಆದರೆ, ಗಾಯದಿಂದಾಗಿ ಅವರು ಮೊದಲನೇ ಟಿ20 ಪಂದ್ಯಕ್ಕೆ ಕಣಕ್ಕೆ ಇಳಿದಿರಲಿಲ್ಲ. ಆದರೆ, ಸ್ಕ್ಯಾನ್ ವರದಿಯಿಂದ ಅವರ ಬೆರಳಿಗೆ ಗಂಭೀರ ಗಾಯವಾಗಿರುವುದು ತಿಳಿದುಬಂದಿದೆ. ಈಗಾಗಲೇ ಗೆಲುವಿಗಾಗಿ ಪರಿತಪಿಸುತ್ತಿರುವ ಶ್ರೀಲಂಕಾ ತಂಡಕ್ಕೆ ಮೂವರು ಆಟಗಾರರ ಗಾಯದ ಸಮಸ್ಯೆ ಭಾರಿ ಹೊಡೆತವನ್ನು ನೀಡಿದೆ. ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ಇನ್ನುಳಿದ ಪಂದ್ಯಗಳಿಗೆ ಮೀಸಲು ಆಟಗಾರರಿಗೆ ಅವಕಾಶ ನೀಡಲಿದ್ದು, ಈ ಆಟಗಾರರು ಕೋವಿಡ್‌-19 ಮಾರ್ಗಸೂಚಿಗಳಿಗೆ ಒಳಗಾಗಿದ್ದಾರೆ. ಈಗಾಗಲೇ ಶ್ರೀಲಂಕಾ ತಂಡದಲ್ಲಿ ಮಂಡಳಿ ಹಾಗೂ ಆಟಗಾರರ ನಡುವೆ ಗುತ್ತಿಗೆ ಸಮಸ್ಯೆ ಬಗೆಹರಿಯದೆ ಉಳಿದಿದ್ದರೆ, ಇದೀಗ ಗಾಯದ ಸಮಸ್ಯೆ ಬಲವಾಗಿ ಕಾಡುತ್ತಿದೆ. ಇದೀಗ ಟಿ20 ಸರಣಿಯನ್ನು ಉಳಿಸಿಕೊಳ್ಳಬೇಕಾದರೆ ಆತಿಥೇಯರು ಇಂದಿನ(ಮಂಗಳವಾರ) ಪಂದ್ಯದಲ್ಲಿ ಗೆಲುವು ಪಡೆಯಬೇಕಾದ ಅನಿವಾರ್ಯತೆ ಇದೆ. ಮೊದಲನೇ ಪಂದ್ಯದಲ್ಲಿ ಭಾರತ ತಂಡವನ್ನು 164 ರನ್‌ಗಳಿಗೆ ನಿಯಂತ್ರಿಸಿದ್ದ ಶ್ರೀಲಂಕಾ ತಂಡ, ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಕಾರಣ ಭಾರಿ ಅಂತರದಲ್ಲಿ ಸೋಲು ಅನುಭವಿಸಿತ್ತು. ಅಂದಹಾಗೆ ಮೊದಲನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ಪರ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದು ಚರಿತಾ ಅಸಲಂಕಾ ಮಾತ್ರ. ಅವರು ಎದುರಿಸಿದ್ದ 26 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ 44 ರನ್‌ ಗಳಿಸಿದ್ದರು. ಆದರೆ, ಅವರಿಗೆ ಮತ್ತೊಂದು ತುದಿಯಲ್ಲಿ ಯಾರೂ ಸರಿಯಾಗಿ ಸಾಥ್‌ ನೀಡಿರಲಿಲ್ಲ. ಫಾರ್ಮ್‌ನಲ್ಲಿರುವ ಅಸಲಂಕಾ ಗಾಯಕ್ಕೆ ತುತ್ತಾಗಿರುವುದು ಸಿಂಹಳೀಯರಿಗೆ ಬೇಸರ ಉಂಟು ಮಾಡಿದೆ. ಪಂದ್ಯದ ವಿವರ ಎರಡನೇ ಟಿ20 ಪಂದ್ಯ ಮುಖಾಮುಖಿ: ದಿನಾಂಕ, ಸಮಯ: ಜು. 27, ಮಂಗಳವಾರ, ರಾತ್ರಿ 8: 00 ಗಂಟೆಗೆ ಸ್ಥಳ: ಆರ್‌ ಪ್ರೇಮದಾಸ ಕ್ರೀಡಾಂಗಣ, ಕೊಲಂಬೊ ನೇರ ಪ್ರಸಾರ: ಸೋನಿ ನೆಟ್‌ವರ್ಕ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3BKSOij

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...